ಕೆಲವೊಮ್ಮೆ ನಮಗೆ ಗೊತ್ತಿಲ್ಲದೆ ನಮ್ಮ ಹೋಂ ಲೋನ್ ಬೇಡಿಕೆಯ ಅಪ್ಲಿಕೇಶನ್ ರಿಜಕ್ಟ್ ಆಗುತ್ತದೆ. ಅದಕ್ಕೆ ನಿಜವಾದ ಕಾರಣವೇ ಗೊತ್ತಿರುವುದಿಲ್ಲ.

ಅರ್ಜಿ ಸಲ್ಲಿಸುವುದಕ್ಕೂ ಮೊದಲು, ಅದಕ್ಕೆ ಬೇಕಿರುವ ಕಾಗದಪತ್ರದ ಬಗ್ಗೆ ತಿಳಿದುಕೊಳ್ಳಬೇಕು.  ಸಾಲದ ಅರ್ಜಿ ಯಾಕೆ ರಿಜಕ್ಟ್ ಆಗುತ್ತದೆ ಎನ್ನುವುದು ಗೊತ್ತಿರಬೇಕು.

ನೀವು ಒಂದು ಸಾಲಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಿಮಗೆ ಎದುರಾಗುವ ಮೊದಲ ಸಂಗತಿಯೇ ಸಾಲ ಅರ್ಜಿ ನಮೂನೆ. 

ಗ್ರಾಹಕರ ವೈಯಕ್ತಿಕ ಮತ್ತು ಹಣಕಾಸು ಮಾಹಿತಿಯಾದ ಹೆಸರು, ವಿಳಾಸ, ಆದಾಯ, ಉದ್ಯೋಗ ಇತಿಹಾಸ ಮತ್ತು ಸಾಲ ಮೊತ್ತ ಇದಕ್ಕೆ ಬೇಕಾಗುತ್ತದೆ.

ಇದನ್ನು ನೀವು ಗಮನವಿಟ್ಟು ಭರ್ತಿ ಮಾಡಬೇಕು. ಗುರುತು ಮತ್ತು ವಿಳಾಸದ ದಾಖಲೆಗೆ ನೀವು ಕೆಲವು ಕಾಗದಪತ್ರಗಳನ್ನು ಕೊಡಬೇಕಾಗುತ್ತದೆ.

ಸಾಲಕ್ಕೆ ಅನುಮೋದನೆ ನೀಡುವುದಕ್ಕೂ ಮೊದಲು, ಗ್ರಾಹಕರ ಆದಾಯ ಮತ್ತು ಮರುಪಾವತಿ ಸಾಮರ್ಥ್ಯವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. 

ಬ್ಯಾಂಕ್‌ಗಳು ಸ್ಯಾಲರಿ ಸ್ಲಿಪ್‌, ಬ್ಯಾಂಕ್ ಸ್ಟೇಟ್‌ಮೆಂಟ್, ಫಾರ್ಮ್‌ 16 ಅಥವಾ ಕಳೆದ 2-3 ವರ್ಷಗಳ ಆದಾಯ ತೆರಿಗೆ ರಿಟರ್ನ್‌ ಅನ್ನು ಕೇಳುತ್ತವೆ. 

ಬ್ಯಾಂಕ್‌ಗಳು ಅಥವಾ ಫೈನಾನ್ಷಿಯಲ್ ಇನ್‌ಸ್ಟಿಟ್ಯೂಶನ್‌ಗಳು ಸಾಮಾನ್ಯವಾಗಿ 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್ ಕೊಡಿ ಎಂದು ಕೇಳುತ್ತವೆ. 

ಸೇಲ್ ಡೀಡ್ ಅಥವಾ ನೋಂದಣಿ ಪತ್ರ ಆಧರಿಸಿ ಖರೀದಿ ಮಾಡಬೇಕಿರುವ ಪ್ರಾಪರ್ಟಿಯ ಮಾರ್ಕೆಟ್ ವ್ಯಾಲ್ಯೂ ಮತ್ತು ಮಾಲೀಕತ್ವವನ್ನು ಬ್ಯಾಂಕ್‌ ಪರಿಶೀಲನೆ ಮಾಡುತ್ತದೆ. 

ಪ್ರಾಪರ್ಟಿಯ ಮಾರ್ಕೆಟ್ ವ್ಯಾಲ್ಯೂ ಆಧರಿಸಿ ಸಾಲದ ಮೊತ್ತ ಇರುತ್ತದೆ. ಅಷ್ಟೇ ಅಲ್ಲ, ಪ್ರಾಪರ್ಟಿಯ ನಕ್ಷೆ, ಲ್ಯಾಂಡ್ ರೆಕಾರ್ಡ್‌ ಕಾಗದಪತ್ರಗಳನ್ನೂ ನೀವು ಕೊಡಬೇಕಾಗುತ್ತದೆ. 

ಸ್ಥಳೀಯ ಪ್ರಾಧಿಕಾರದಿಂದ ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ ಅಂದರೆ ಎನ್‌ಒಸಿ, ಕಂಪ್ಲೀಶನ್ ಸರ್ಟಿಫಿಕೇಟ್, ವಸತಿ ಪ್ರಮಾಣಪತ್ರ ಇತ್ಯಾದಿ ದಾಖಲೆಗಳನ್ನೂ ಬ್ಯಾಂಕ್ ಕೇಳಬಹುದು.

ಅಪಾಯಿಂಟ್‌ಮೆಂಟ್, ಕಾಂಟ್ರ್ಯಾಕ್ಟ್ ಅಥವಾ ಅನುಭವ ಪತ್ರವನ್ನು ಕೊಡಬೇಕಾಗುತ್ತದೆ. ಉದ್ಯೋಗ ಎಷ್ಟು ಸ್ಥಿರವಾಗಿದೆ, ಎಷ್ಟು ಕಾಲದಿಂದ ಕೆಲಸ ಮಾಡುತ್ತಿದ್ದೀರಿ ಎಂಬುದನ್ನು ಈ ಕಾಗದಪತ್ರಗಳು ಹೇಳುತ್ತವೆ. 

ಒಳ್ಳೆಯ ಕ್ರೆಡಿಟ್ ಸ್ಕೋರ್ ಇದ್ದರೆ ಸಾಲ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಆಕರ್ಷಕ ಬಡ್ಡಿ ದರದಲ್ಲಿ ನೀವು ಸಾಲ ಪಡೆಯಬಹುದು.