ಯಾವುದೋ ಕಾಲದಲ್ಲಿ ಅನಿವಾರ್ಯ ಕಾರಣಕ್ಕೆ ಕಟ್ಟು ಬಿದ್ದು ಬ್ಯಾಂಕ್ ಅಕೌಂಟ್ ಓಪನ್ ಮಾಡಿರುತ್ತೇವೆ. ನಂತರ ಅದನ್ನು ಮರೆತೇ ಬಿಟ್ಟಿರುತ್ತೇವೆ. 

ಸೇವಿಂಗ್ಸ್ ಅಕೌಂಟ್ ಅಥವಾ ಚಾಲ್ತಿ ಖಾತೆ 12 ತಿಂಗಳು ಯಾವುದೇ ಟ್ರಾನ್ಸಾಕ್ಷನ್ ಮಾಡದಿದ್ದರೆ  ಅದನ್ನು ಇನ್‌ಆಕ್ಟಿವ್ ಎಂದು ಪರಿಗಣಿಸಲಾಗುತ್ತದೆ.

ಡೆಪಾಸಿಟ್ ಅಥವಾ ವಿತ್‌ಡ್ರಾ , IMPS, ನೆಫ್ಟ್‌, RTGS, UPI ಟ್ರಾನ್ಸಾಕ್ಷನ್‌  ಮಾಡದಿದ್ದರೆ ಅದನ್ನು ಡಾರ್ಮಂಟ್ ಅಥವಾ ತಾತ್ಕಾಲಿಕ ಕ್ಲೋಸ್ಡ್ ಎಂದು ಪರಿಗಣಿಸಲಾಗುತ್ತದೆ.

ಅಕೌಂಟ್ ಡೋರ್ಮೆಂಟ್ ಆದಾಗ ಖಾತೆ ಹೊಂದಿರುವವರಿಗೆ ಯಾವುದೇ ಟ್ರಾನ್ಸಾಕ್ಷನ್ ಮಾಡೋಕೆ ಆಗಲ್ಲ. ಡೆಪಾಸಿಟ್ ಮತ್ತು ವಿತ್‌ಡ್ರಾ ಕೂಡಾ ಮಾಡಲು ಸಾಧ್ಯವಿಲ್ಲ.

ಹಾಗೆಂದ ಮಾತ್ರಕ್ಕೆ ಅಕೌಂಟ್‌ನಲ್ಲಿರೋ ಹಣ ಕಳೆದುಹೋಗುವುದಿಲ್ಲ.  ಆದರೆ ಖಾತೆಗೆ ನೀವು ಮರುಜೀವ ಕೊಡಬೇಕಾಗುತ್ತದೆ.

ಅಂತಹ ಸಂದರ್ಭದಲ್ಲಿ ಬ್ಯಾಂಕ್‌ ಇಂಟರೆಸ್ಟ್ ಕ್ರೆಡಿಟ್ ಮಾಡುವುದಿಲ್ಲ ಮತ್ತು ಟ್ರಾನ್ಸಾಕ್ಷನ್ ಚಾರ್ಜ್‌ ಅನ್ನೂ ಡಿಡಕ್ಷನ್ ಮಾಡುವುದಿಲ್ಲ. 

ಆದರೆ, ಫಿಕ್ಸೆಡ್ ಡೆಪಾಸಿಟ್‌ನಿಂದ ಅಕೌಂಟ್‌ಗೆ ಇಂಟರೆಸ್ಟ್‌ ಕ್ರೆಡಿಟ್ ಮಾಡಿದರೆ, ಅದನ್ನು ಗ್ರಾಹಕರು ಮಾಡಿದ ಟ್ರಾನ್ಸಾಕ್ಷನ್ ಎಂದು ಪರಿಗಣಿಸಲಾಗುತ್ತದೆ.

ಖಾತೆ ಬಳಸದೇ ಇರೋದಕ್ಕೆ ಕಾರಣ ಏನು ಅಂತ ಬ್ಯಾಂಕ್‌ ವಿಚಾರಣೆ ಮಾಡುತ್ತದೆ.  ಒಂದಷ್ಟು ಹಣವನ್ನು ಡೆಪಾಸಿಟ್ ಮಾಡಿ ಅಥವಾ ಹಣ ವಿತ್‌ಡ್ರಾ ಮಾಡಿ ಅಂತ ಅದು ಗ್ರಾಹಕರಿಗೆ ತಿಳಿಸಬೇಕು. 

ನಿಮ್ಮಿಂದ ಬ್ಯಾಂಕ್‌ಗೆ ಯಾವುದೇ ಪ್ರತಿಕ್ರಿಯೆ ಸಿಗದೇ ಎರಡು ವರ್ಷದ ನಂತರವೂ ಅಕೌಂಟ್ ಇನ್‌ಆಕ್ಟಿವ್ ಆಗಿಯೇ ಇದ್ದರೆ, ಆಗ ಅಕೌಂಟ್ ಡಾರ್ಮಂಟ್ ಆಗುತ್ತದೆ.

ಡೋರ್ಮೆಂಟ್ ಕಂಡಿಷನ್‌ನಿಂದ ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ಆಕ್ಟಿವೇಟ್ ಮಾಡಲು, ಬ್ಯಾಂಕ್‌ ಶಾಖೆಗೆ ಅಕೌಂಟ್ ಹೋಲ್ಡರ್ ಹೋಗಬೇಕಾಗುತ್ತದೆ.

ಕೆವೈಸಿ ಅಪ್‌ಡೇಟ್ ಬೇಕಾಗುತ್ತದೆ. ಅಲ್ಲದೆ, ವಿಳಾಸ ದಾಖಲೆ, ಐಡಿ ಪ್ರೂಫ್‌ ಮತ್ತು ಫೋಟೋಗಳನ್ನೂ ಕೊಡಬೇಕಾಗುತ್ತದೆ. ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿದ 2-3 ಕೆಲಸದ ದಿನಗಳೊಳಗೆ ಅಕೌಂಟ್ ಆಕ್ಟಿವ್ ಆಗುತ್ತದೆ.

2 ವರ್ಷಗಳವರೆಗೆ ಖಾತೆಯಲ್ಲಿ ಯಾವುದೇ ಟ್ರಾನ್ಸಾಕ್ಷನ್ ನಡೆಯದಿದ್ದರೆ ಅದನ್ನು ಡಾರ್ಮಂಟ್ ಅಥವಾ ಇನ್‌ಆಪರೇಟಿವ್ ಎಂದು ಪರಿಗಣಿಸಲಾಗುತ್ತದೆ.