ವಿವಾಹ ಬಂಧನ ನಮಗೇಕೆ? ಎಂದುಕೊಂಡು ಸಿಂಗಲ್ ಆಗಿಯೇ ಉಳಿಯುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ ಎಂದು ಸಮೀಕ್ಷಾ ವರದಿಗಳು ಹೇಳುತ್ತಿವೆ.

ಹಾಗಿದ್ದರೆ ಏಕಾಂಗಿ ಮಹಿಳೆ ಅಥವಾ ಸಿಂಗಲ್ ವಿಮೆನ್ ಆರ್ಥಿಕ ಶಿಸ್ತು ಹೇಗಿರಬೇಕು? ಯಾವ ಬಗೆಯ ಹೂಡಿಕೆ ಅವರದ್ದಾಗಿರಬೇಕು?

ಏನೂ ಉಳಿತಾಯ ಮಾಡಬೇಕಿಲ್ಲ ಎಂದುಕೊಂಡು ಪ್ರತಿದಿನದ ಹಣ ಅಂದೇ ಖರ್ಚು ಮಾಡಿಕೊಂಡರೆ ಮುಂದೆ ಸಮಸ್ಯೆ ಎದುರಿಸಿಕೊಳ್ಳಬೇಕಾಗುತ್ತದೆ.

ಸಿಂಗಲ್ ವಿಮೆನ್  ಮೊದಲಿಗೆ, ತುರ್ತು ನಿಧಿ ಅಂದರೆ ಎಮರ್ಜನ್ಸಿ ಫಂಡ್ ನಿರ್ಮಾಣ ಮಾಡಿಕೊಂಡಿರಬೇಕು. 

ಈ ಹಣ ಅನಿರೀಕ್ಷಿತ ಚಿಕಿತ್ಸಾ ವೆಚ್ಚಗಳಿಗೆ ಸಹಾಯಕ್ಕೆ ಬರಬಹುದು ಅಥವಾ ಕೆಲಸ ಕಳೆದುಕೊಂಡರೆ ಸಹಾಯವಾಗಬಹುದು. 

ಲಿಕ್ವಿಡ್ ಮ್ಯೂಚುಯಲ್‌ ಫಂಡ್​ಗಳಲ್ಲೂ ಹೂಡಿಕೆ ಮಾಡಬಹುದು ಅಥವಾ ನಿಯಮಿತ ವೆಚ್ಚಗಳಿಂದ ಹೊರಗಿಡಲು ಪ್ರತ್ಯೇಕ ಖಾತೆ ಮಾಡಿಯೂ ಸೇವ್ ಮಾಡಿಕೊಂಡಿರಬಹುದು.

ಉಳಿತಾಯವನ್ನು ಕೂಡ ತಿಂಗಳ ಇತರ ವೆಚ್ಚಗಳಲ್ಲೊಂದು ಅಂತಾ ಪರಿಗಣಿಸಿ ಅದಕ್ಕೂ ಕಡ್ಡಾಯವಾಗಿ ಹಣ ಎತ್ತಿಡಬೇಕು.

ಮುಪ್ಪಿನ ಕಾಲದಲ್ಲೂ ತಮ್ಮನ್ನ ತಾವೇ  ನೋಡಿಕೊಳ್ಳಬೇಕಾಗಿರುವುದರಿಂದ  ಅದಕ್ಕಾಗಿ ಈಗಿನಿಂದಲೇ ಒಂದು ಹಣಕಾಸು ವ್ಯವಸ್ಥೆ ಸಿದ್ಧಮಾಡಿಕೊಳ್ಳಬೇಕು.

ಸ್ವಂತ ಉದ್ಯಮ ಆರಂಭಿಸೋದು ಅಥವಾ ವಿಶ್ವ ಪರ್ಯಟನೆ ಮಾಡುವಂತಹ ಗುರಿಗಳಿದ್ದರೆ ಅದರ ಸಾಧನೆಗೂ ಹಣ ಕೂಡಿಡಬೇಕು.

ಸಮಗ್ರ ಆರೋಗ್ಯ ವಿಮೆ ಪಡೆದುಕೊಂಡರೆ  ಸಕ್ಕರೆ ಕಾಯಿಲೆ ಅಥವಾ ಬೇರೆ ಆರೋಗ್ಯ ಸಮಸ್ಯೆ ಎದುರಾದರೆ ಧೃತಿಗೆಡಬೇಕಿಲ್ಲ.

ಗೃಹ ಸಾಲ ಬಾಕಿ ಇದ್ದರೆ ಟರ್ಮ್ ಲೈಫ್‌ ಇನ್ಶುರೆನ್ಸ್ ಪಡೆದುಕೊಳ್ಳುವುದು ಉತ್ತಮ ಆಗ ನಿಮ್ಮ ಅನುಪಸ್ಥಿತಿಯಲ್ಲಿ ಆ ಹೊರೆ ನಿಮ್ಮ ‌ತಂದೆ-ತಾಯಿ ಅಥವಾ ಇತರರ ಮೇಲೆ‌ ಬೀಳುವುದಿಲ್ಲ.

ಸಿಂಗಲ್ ವಿಮೆನ್ ಎಂತಾದರೆ ಒಂದಿಷ್ಟು ಮೊತ್ತವನ್ನು ದೀರ್ಘಾವಧಿ ಹೂಡಿಕೆಯಲ್ಲಿ ಇನ್ವೆಸ್ಟ್ ಮಾಡಿಕೊಳ್ಳುವುದು ಜಾಣತನ.