ಈ ದುಬಾರಿ ದುನಿಯಾದಲ್ಲಿ ಒಂದು ಅತ್ಯುತ್ತಮ ಮತ್ತು ಆಕರ್ಷಕ ಪೋನ್ ನಮ್ಮ ಕೈಯಲ್ಲಿರಬೇಕು ಎಂದು ಭಾವಿಸುವುದು ತಪ್ಪಲ್ಲ.. ಆದರೆ ಅದಕ್ಕೆ ನೀಡುವಷ್ಟು ಹಣ ನಮ್ಮ ಬಳಿ ಇರಲ್ಲ

ಈ ದುಬಾರಿ ದುನಿಯಾದಲ್ಲಿ ಒಂದು ಅತ್ಯುತ್ತಮ ಮತ್ತು ಆಕರ್ಷಕ ಪೋನ್ ನಮ್ಮ ಕೈಯಲ್ಲಿರಬೇಕು ಎಂದು ಭಾವಿಸುವುದು ತಪ್ಪಲ್ಲ.. ಆದರೆ ಅದಕ್ಕೆ ನೀಡುವಷ್ಟು ಹಣ ನಮ್ಮ ಬಳಿ ಇರಲ್ಲ

ಹಳೆಯ ಮತ್ತು ಹೊಸ ಸ್ಮಾರ್ಟ್ ಫೋನ್ ಗಳ ಬೆಲೆಯನ್ನು ಹೋಲಿಕೆ ಮಾಡಿದರೆ ಅಜಗಜಾಂತರ ವ್ಯತ್ಯಾಸವಿರಲಿದೆ.

ಆದರೆ ಈ ಫೋನ್ ಗಳು ತೀರಾ ಹಳೆಯದಲ್ಲ ಅನ್ನೋದು ಉತ್ತಮ ವಿಚಾರ. ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ಬಳಸಲ್ಪಡುವ ಅಥವಾ ಹೊಸದಾಗಿ ಕಾಣುವ ಮೊಬೈಲ್ ಅನ್ನ ನೀವು ಖರೀದಿಸಬಹುದು.

5 ಜಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 22 ಫೋನಿನ ಬೆಲೆ 60 ಸಾವಿರದ 300 ರೂಪಾಯಿ. ಆದರೆ ಇದೆ ಮಾಡೆಲ್ ರೀಫರ್ಬಿಷ್ಡ್ ಮೊಬೈಲ್ ಬೆಲೆ  ಲೈನ್​ಲೈನ್​ನಲ್ಲಿ35 ಸಾವಿರ ರೂಪಾಯಿ

ನೀವು ಸೆಕೆಂಡ್ ಹ್ಯಾಂಡ್ ಸ್ಮಾರ್ಟ್ ಫೋನ್ ಖರೀದಿ ಮಾಡಬೇಕು ಅಂತಾದರೆ ಆಗ ನೀವು ಕೆಲವು ವಿಷಯಗಳನ್ನ ನೆನಪಿನಲ್ಲಿಟ್ಟುಕೊಳ್ಳಬೇಕು.

ಸ್ಥಳೀಯ ಮಾರಾಟಗಾರರು ಅಥವಾ ಒಎಲ್ಎಕ್ಸ್, ಫೇಸ್​ಬುಕ್ ಮಾರ್ಕೆಟ್ ಪ್ಲೇಸ್, ಕ್ವಿಕರ್​ನಂತಹ ಆನ್ ಲೈನ್ ವೇದಿಕೆಗಳ ಮೂಲಕ ನೀವು ಸೆಕೆಂಡ್ ಹ್ಯಾಂಡ್ ಫೋನ್​ ಖರೀದಿಸಬಹುದು.

ನೀವು ಖರೀದಿ ಮಾಡುವಾಗ ಸೆಕ್ಯುರಿಟಿ ಫ್ಯಾಕ್ಟರ್​ಗೆ ಗಮನ ಕೊಡಿ. ಫೋನ್ ಖರೀದಿಗೆ ಸಾಕ್ಷಿ ನೋಡಿ. ಮಾರಾಟಗಾರರಿಂದ ಅದರ ಬಿಲ್ ಕೇಳಿ ಪಡೆಯಿರಿ. ಸೂಕ್ತ ಬಿಲ್ ಇದ್ದರೆ ಆ ಫೋನ್ ಕಳ್ಳತನ ಮಾಡಿರೋದಲ್ಲ ಅನ್ನೋದು ಖಾತರಿ. 

ಆನ್​ಲೈನ್ ಬಿಲ್ ಆಗಿದ್ದರೆ ಎಲ್ಲಿಂದ ಖರೀದಿ ಮಾಡಿದ್ದಾರೆ  ಎಂದು ಖಾತರಿಪಡಿಸಿಕೊಳ್ಳಬೇಕು. ಅದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕು.

ಫೋನಿನ ಒರಿಜಿನಲ್ ಬಾಕ್ಸ್ ಕೇಳಿ ಪಡೆಯಬೇಕು. ಅದರ ಸೀರಿಯಲ್ ಸಂಖ್ಯೆ ಮತ್ತು ಫೋನಿನಲ್ಲಿರೋ ಐಎಂಎಐ ಸಂಖ್ಯೆಯನ್ನ ಬಿಲ್ ಹಾಗೂ ಬಾಕ್ಸ್ ಜೊತೆಗೆ ತಾಳೆ ಹಾಕಿ ನೋಡಿ. 

ಐಎಂಇಐ ಸಂಖ್ಯೆಯನ್ನು ಪರಿಶೀಲಿಸಿಕೊಳ್ಳಬೇಕು. ಸೆಕೆಂಡ್ ಹ್ಯಾಂಡ್ ಫೋನಿನ ಉಳಿದ ವಾರಂಟಿ ಅವಧಿಯನ್ನ ಅಥವಾ ಎಕ್ಸ್ ಪೈರಿ ದಿನಾಂಕವನ್ನು ಪರಿಶೀಲಿಸಿಕೊಳ್ಳಬೇಕು.

ಕೇವಲ ಮೊಬೈಲ್ ಮಾತ್ರವಲ್ಲ ಯಾವುದೇ ರೀತಿಯ ಸೆಕೆಂಡ್ ಹ್ಯಾಂಡ್ ವಸ್ತು ಖರೀದಿಸುವಾಗ  ಈ ತಂತ್ರಗಳನ್ನು ಅಳವಡಿಕೆ ಮಾಡಿಕೊಂಡರೆ  ನೀವು ಸೇಫ್ ಆಗುತ್ತೀರಿ