ಹೂಡಿಕೆ ಮಾಡಲು ಹಲವಾರು ತಂತ್ರಗಳಿವೆ. ಲಾಂಗ್ ಟರ್ಮ್ ಇನ್ವೆಸ್ಟ್ ಮೆಂಟ್ ಮತ್ತು ಶಾರ್ಟ್ ಟರ್ಮ್ ಇನ್ವೆಸ್ಟ್ ಮೆಂಟ್ ಸಾಮಾನ್ಯವಾಗಿ ನಾವೆಲ್ಲ ಕೇಳಿರುತ್ತೇವೆ.

ಆದರೆ  ಇಲ್ಲಿ ಇನ್ನೊಂದು ಹೊಸ ಬಗೆಯ  ಹೂಡಿಕೆಯ ತಂತ್ರವನ್ನು ನಾವು ತಿಳಿಸುತ್ತೇವೆ. ಅದುವೆ ರಿಜನ್ ವೈಸ್ ಇನ್ವೆಸ್ಟಿಂಗ್! ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

ಅನೇಕ ಸಂದರ್ಭಗಳಲ್ಲಿ ನೀವು ಕಚೇರಿಗೆ ಹೋಗಲು ಅಥವಾ ಹೊರಗೆ ಸುತ್ತಾಡಲು ಹೋದಾಗ ವಿವಿಧ ಕಂಪನಿಗಳ ಫ್ಯಾಕ್ಟರಿಗಳನ್ನ ನೋಡಿರುತ್ತೀರಿ.

ಹೀಗಾಗಿ, ನಮ್ಮ ದೈನಂದಿನ ಬಳಕೆಯ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವ ಜೊತೆಗೆ ನಾವು ನೋಡುವ ಕಂಪೆನಿಗಳಲ್ಲೂ ಹೂಡಿಕೆ ಮಾಡಬಹುದು.

ಇನ್ನಷ್ಟು ಸರಳವಾಗಿ ಹೇಳಬೇಕೆಂದರ ನೀವು ಓಡಾಟ ಮಾಡುವ ಜಾಗದಲ್ಲಿಯೇ  ಈ ಕಂಪನಿಗಳ ಉತ್ಪಾದನಾ ಘಟಕ ಕಾಣಸಿಕ್ಕಾಗ ನಿಮಗೆ ಅವುಗಳ ಟರ್ನ್ ಓವರ್ ಲೆಕ್ಕಾಚಾರ ತಲೆಯಲ್ಲಿ ಬರಬಹುದು. 

ನೀವು ಕಂಪೆನಿಯ ಷೇರುಗಳನ್ನ ಖರೀದಿಸುತ್ತಾ ಇದ್ದೀರಾ ಅಂದರೆ ನೀವು ಆ ಕಂಪೆನಿಗೆ ಫಂಡಿಂಗ್ ಮಾಡುತ್ತಿದ್ದೀರಿ ಎಂದು ಅರ್ಥ.

ಕಂಪೆನಿಯ ಘಟಕ, ಔಟ್ ಲೆಟ್, ವೇರ್ ಹೌಸ್ ಮೊದಲಾವುಗಳು ನಮಗೆ ಕಾಣ ಸಿಗುತ್ತವೆ. ಹೀಗಾಗಿ ಅವು ಹೂಡಿಕೆಯ ವಿಶ್ವಾಸ ಹೆಚ್ಚಿಸುತ್ತವೆ.

ಬೆಂಗಳೂರಿನ  ಪೀಣ್ಯ ಮತ್ತು ಇತರ ಕೈಗಾರಿಕಾ ವಲಯದಲ್ಲಿಯೂ ನೀವು ಪ್ರಮುಖ ಕಂಪನಿಗಳ ಘಟಕ ಕಾಣಬಹುದು. ಇವುಗಳ ಆಧಾರಲ್ಲಿಯೂ ನೀವು ಹೂಡಿಕೆ ಪ್ಲಾನ್ ಮಾಡಿಕೊಳ್ಳಬಹುದು.

ನೀವು ನಗರದ ಹೊರಲಯ ದಾಟಿ ಪ್ರವಾಸಕ್ಕೆ ಹೋಗುವಾಗ ರಸ್ತೆಯ ಇಕ್ಕೆಲಗಳಲ್ಲಿ ಕಂಪನಿಗಳ ಘಟಕ ಗಮನಿಸಿದ್ದೀರಿ ಎಂದಾದರೆ ನಿಮಗೆ ಒಂದು ಐಡಿಯಾ ಸಿಗುತ್ತದೆ.

ದೆಹಲಿ, ಮುಂಬೈ, ಬೆಂಗಳೂರು, ಪುಣೆ ಹೀಗೆ ನಗರದಿಂದ ನಗರಕ್ಕೆ ಈ ಘಟಕಗಳು ವ್ಯತ್ಯಾಸ ಆಗಬಹುದು. ಅಲ್ಲೊಂದು ಕಂಪನಿ ದೊಡ್ಡದಿದ್ದರೆ ಇಲ್ಲೊಂದು ದೊಡ್ಡದಿರುತ್ತದೆ.

ಹೀಗಾಗಿ, ನಮ್ಮ ಸುತ್ತಮುತ್ತಲಿನಲ್ಲಿ ಘಟಕಗಳು ಅಥವಾ ಕಾರ್ಖಾನೆಗಳನ್ನು ಹೊಂದಿರುವ ಕಂಪೆನಿಗಳಲ್ಲಿ ಹೂಡಿಕೆ ಮಾಡುವುದಕ್ಕೂ ಮೊದಲು, ಅವುಗಳ ಫಂಡಮೆಂಟಲ್ ಗಳನ್ನ ಸರಿಯಾಗಿ ಮೌಲ್ಯಮಾಪನ ಮಾಡಿಕೊಳ್ಳಬೇಕು.