2 ಲಕ್ಷ ಭಾರತೀಯರ ಅಕೌಂಟ್ ಬ್ಯಾನ್, ಸಾಲಕ್ಕೆ ಇನ್ನಷ್ಟು ದಾಖಲೆ ಬೇಕು!

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್ ಭಾರತದಲ್ಲಿ ಕಳೆದ ಒಂದು ತಿಂಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ನ್ಯೂಡಿಟಿಯನ್ನು ಉತ್ತೇಜಿಸುತ್ತಿವೆ ಎಂಬ ಕಾರಣಕ್ಕೆ ಈ ಖಾತೆಗಳನ್ನು ನಿಷೇಧಿಸಲಾಗಿದೆ.

alternate

ಯಾವ ಬ್ಯಾಂಕ್‌ ವಿರುದ್ಧ ಕ್ರಮ ಕೈಗೊಂಡಿದೆ ರಿಸರ್ವ್ ಬ್ಯಾಂಕ್?
ಭಾರತೀಯ ರಿಸರ್ವ್ ಬ್ಯಾಂಕ್ ಮುಂಬೈನ ಸರ್ವೋದಯ ಕೋ-ಆಪರೇಟಿವ್ ಬ್ಯಾಂಕ್ ಮತ್ತು ಉತ್ತರ ಪ್ರದೇಶದ ಪ್ರತಾಪ್‌ಗಢದ ನ್ಯಾಷನಲ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ಗೆ ನಿರ್ಬಂಧಗಳನ್ನು ವಿಧಿಸಿದೆ. ಸರ್ವೋದಯ ಸಹಕಾರಿ ಬ್ಯಾಂಕ್‌ನ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಇದರಲ್ಲಿ ಗ್ರಾಹಕರು ತಮ್ಮ ಖಾತೆಯಿಂದ ಹಣ ವಿತ್‌ಡ್ರಾ ಮಾಡುವ ಮಿತಿಯನ್ನು 15,000 ರೂ.ಗೆ ಹೆಚ್ಚಿಸಲಾಗಿದೆ. ಅರ್ಹ ಠೇವಣಿದಾರರಿಗೆ ರೂ. 5 ಲಕ್ಷದವರೆಗಿನ ಡೆಪಾಸಿಟ್‌ಗೆ ವಿಮೆ ಕ್ಲೈಮ್ ಮಾಡುವ ಅವಕಾಶ ಇದೆ. ಬ್ಯಾಂಕಿಂಗ್ ರೆಗ್ಯುಲೇಷನ್ಸ್ ಆಕ್ಟ್, 1949 ರ ಸೆಕ್ಷನ್ 35 ಎ ಅಡಿಯಲ್ಲಿ ಬ್ಯಾಂಕ್‌ಗೆ ಈ ನಿರ್ಬಂಧಗಳನ್ನು ವಿಧಿಸಲಾಗಿದೆ.

ಆರ್ಥಿಕ ಪ್ರಗತಿಯನ್ನು ಈಗಲೇ ಸಂಭ್ರಮಿಸಬಾರದು ಎಂದ ಆರ್‌ಬಿಐ ಮಾಜಿ ಗವರ್ನರ್
ಆರ್‌ಬಿಐ ಮಾಜಿ ಗವರ್ನರ್ ಡಿ.ಸುಬ್ಬರಾವ್ ಅವರು ಭಾರತದ ಆರ್ಥಿಕ ಭವಿಷ್ಯದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ನಾವು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಈ ವಿಷಯದ ಬಗ್ಗೆ ತರಾತುರಿಯಲ್ಲಿ ಸಂಭ್ರಮಪಡುವ ಅಗತ್ಯವಿಲ್ಲ. 2029ರ ವೇಳೆಗೆ ದೇಶವನ್ನು ಈ ಗುರಿಯತ್ತ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ. ಇಲ್ಲಿ ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ ಆರ್ಥಿಕತೆಯ ಗಾತ್ರ ಮತ್ತು ಅಭಿವೃದ್ಧಿ ಎರಡು ವಿಭಿನ್ನ ವಿಷಯಗಳು ಎಂದು ಅವರು ಹೇಳಿದ್ದಾರೆ.

2 ಲಕ್ಷಕ್ಕೂ ಹೆಚ್ಚು ಭಾರತೀಯ ಖಾತೆಗಳನ್ನು ನಿಷೇಧಿಸಿದ ಎಕ್ಸ್‌
ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್ ಭಾರತದಲ್ಲಿ ಕಳೆದ ಒಂದು ತಿಂಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ನ್ಯೂಡಿಟಿಯನ್ನು ಉತ್ತೇಜಿಸುತ್ತಿವೆ ಎಂಬ ಕಾರಣಕ್ಕೆ ಈ ಖಾತೆಗಳನ್ನು ನಿಷೇಧಿಸಲಾಗಿದೆ. ಐಟಿ ನಿಯಮಗಳು 2021 ರ ಪ್ರಕಾರ ಪ್ರಕಟಿಸಲಾದ ಮಾಸಿಕ ವರದಿಯಲ್ಲಿ ಕಂಪನಿ ಈ ಮಾಹಿತಿ ನೀಡಿದೆ. ವರದಿಯ ಪ್ರಕಾರ, ಫೆಬ್ರವರಿ 26 ಮತ್ತು ಮಾರ್ಚ್ 25 ರ ಅವಧಿಯಲ್ಲಿ ಒಟ್ಟು 2,13,862 ಅಕೌಂಟ್‌ಗಳನ್ನು ಕ್ಲೋಸ್ ಮಾಡಿದೆ. ಇವುಗಳಲ್ಲಿ ದೇಶದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವ 1,235 ಖಾತೆಗಳೂ ಸೇರಿವೆ.

ಹಿರಿಯ ನಾಗರಿಕರಿಂದ ₹27000 ಕೋಟಿ ತೆರಿಗೆ ಸಂಗ್ರಹ
ಕಳೆದ ಹಣಕಾಸು ವರ್ಷದಲ್ಲಿ ಹಿರಿಯ ನಾಗರಿಕರಿಗೆ ಎಫ್‌ಡಿಯಿಂದ ಬಂದ ಬಡ್ಡಿಯ ಮೇಲೆ ಕೇಂದ್ರ ಸರ್ಕಾರ ವಿಧಿಸಿದ ತೆರಿಗೆಯಿಂದ 27,000 ಕೋಟಿ ರೂ. ಸಂಗ್ರಹವಾಗಿದೆ. ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ವರದಿಯಲ್ಲಿ ಇದು ಬೆಳಕಿಗೆ ಬಂದಿದೆ… ಕಳೆದ ಐದು ವರ್ಷಗಳಲ್ಲಿ ಒಟ್ಟು ಡೆಪಾಸಿಟ್ ಮೊತ್ತವು ಶೇ. 143 ರಷ್ಟು ಏರಿಕೆಯಾಗಿದ್ದು, ವಿತ್ತ ವರ್ಷ 2023-24ರ ಅಂತ್ಯದ ವೇಳೆಗೆ 34 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಐದು ವರ್ಷಗಳ ಹಿಂದೆ 14 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ವರದಿಯ ಪ್ರಕಾರ, ಎಫ್‌ಡಿ ಮೇಲೆ ಬಡ್ಡಿದರ ಹೆಚ್ಚಳ ಆಗಿದ್ದರಿಂದಾಗಿ, ಎಫ್‌ಡಿ ಬಗ್ಗೆ ಹಿರಿಯ ನಾಗರಿಕರು ಆಸಕ್ತಿ ತಾಳಿದ್ದಾರೆ. ಈ ಅವಧಿಯಲ್ಲಿ ಒಟ್ಟು ಎಫ್‌ಡಿ ಖಾತೆಗಳ ಸಂಖ್ಯೆ 81 ರಷ್ಟು ಏರಿಕೆಯಾಗಿ 7.4 ಕೋಟಿ ಆಗಿದೆ.

ಸಾಲ ನೀಡುವಾಗ ಬ್ಯಾಂಕ್ ಎಲ್ಲ ಮಾಹಿತಿ ನೀಡುವುದು ಕಡ್ಡಾಯ: ಆರ್‌ಬಿಐ
ಅಕ್ಟೋಬರ್ 1 ರಿಂದ, ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ಬಡ್ಡಿ ಮತ್ತು ಇತರ ವೆಚ್ಚಗಳ ಜೊತೆಗೆ ಸಾಲ ಒಪ್ಪಂದದ ಬಗ್ಗೆ ಎಲ್ಲ ಮಾಹಿತಿಯನ್ನು ಒಳಗೊಂಡಿರುವ ‘Key Fact Statement’ ಕೆಎಫ್‌ಎಸ್ ಒದಗಿಸುವುದು ಕಡ್ಡಾಯವಾಗಿದೆ. ಪ್ರಸ್ತುತ, ವಾಣಿಜ್ಯ ಬ್ಯಾಂಕ್‌ಗಳು ವೈಯಕ್ತಿಕ ಸಾಲಗಾರರಿಗೆ ನೀಡುವ ಸಾಲ ಒಪ್ಪಂದಗಳು, ಆರ್‌ಬಿಐ ವ್ಯಾಪ್ತಿಯಲ್ಲಿ ಬರುವ ಸಂಸ್ಥೆಗಳ ಡಿಜಿಟಲ್ ಸಾಲಗಳು ಮತ್ತು ಸಣ್ಣ ಮೊತ್ತದ ಸಾಲಗಳ ಬಗ್ಗೆ ಎಲ್ಲ ಮಾಹಿತಿ ಒದಗಿಸುವುದು ಕಡ್ಡಾಯವಾಗಿದೆ. KFS ಸರಳ ಭಾಷೆಯಲ್ಲಿ ಸಾಲ ಒಪ್ಪಂದದ ಪ್ರಮುಖ ಸಂಗತಿಗಳ ವಿವರಣೆಯನ್ನು KFS ನೀಡುತ್ತದೆ. ಇದನ್ನು standardized format ನಲ್ಲಿ ಸಾಲಗಾರರಿಗೆ ಒದಗಿಸಲಾಗುತ್ತದೆ. ಇನ್ನಷ್ಟು ಪಾರದರ್ಶಕತೆ ತರಲು ಮತ್ತು ಆರ್‌ಬಿಐ ವ್ಯಾಪ್ತಿಯಲ್ಲಿ ಬರುವ ಹಣಕಾಸು ಸಂಸ್ಥೆಗಳ ಉತ್ಪನ್ನಗಳ ಬಗ್ಗೆ ಮಾಹಿತಿಯ ಕೊರತೆಯನ್ನು ನಿವಾರಿಸಲು ಇದನ್ನು ಮಾಡಲಾಗಿದೆ ಎಂದು ಸೆಂಟ್ರಲ್ ಬ್ಯಾಂಕ್ ಹೇಳಿದೆ.

ಈಗ ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿ ಆಪಲ್ ಬದಲಿಗೆ ಮೊದಲ ಸ್ಥಾನಕ್ಕೇರಿದ ಸ್ಯಾಮ್‌ಸಂಗ್‌ – ಐಫೋನ್ ರಫ್ತಿನಲ್ಲಿ 10% ಕುಸಿತ
ದುಬಾರಿ ಫೋನ್‌ಗಳನ್ನು ತಯಾರಿಸುವ ಆಪಲ್‌ನ ವಿಶ್ವದ ಟಾಪ್‌ ಸ್ಮಾರ್ಟ್‌ಫೋನ್ ಬ್ರಾಂಡ್ ಎಂಬ ಕಿರೀಟ ಕಳಚಿಬಿದ್ದಿದೆ. ಈಗ ಸ್ಯಾಮ್ಸಂಗ್ ನಂಬರ್ ಒನ್ ಬ್ರ್ಯಾಂಡ್ ಆಗಿದೆ. ಐಡಿಸಿ ವರದಿಯ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜನವರಿ-ಮಾರ್ಚ್‌ನಲ್ಲಿ ಐಫೋನ್ ರಫ್ತು 10% ರಷ್ಟು ಕುಸಿದಿದೆ. ಸ್ಯಾಮ್‌ಸಂಗ್‌ನ ಮಾರುಕಟ್ಟೆ ಪಾಲು 20.8% ಆಗಿದ್ದರೆ, ಆಪಲ್‌ನ ಮಾರುಕಟ್ಟೆ ಪಾಲು 17.3% ಕ್ಕೆ ಇಳಿದಿದೆ. ಸ್ಯಾಮ್‌ಸಂಗ್ ಇತ್ತೀಚೆಗೆ Galaxy S24 ಅನ್ನು ಬಿಡುಗಡೆ ಮಾಡಿದ ಕಾರಣ, ಕಂಪನಿಯ ಮಾರುಕಟ್ಟೆ ಪಾಲು ಹೆಚ್ಚಾಗಿದೆ. ಜನವರಿ-ಮಾರ್ಚ್‌ನಲ್ಲಿ ಈ ಫೋನ್‌ ಒಟ್ಟು 6 ಕೋಟಿ ಶಿಪ್‌ ಆಗಿದೆ. ಈ ಅವಧಿಯಲ್ಲಿ ಆ್ಯಪಲ್ ಶಿಪ್‌ಮೆಂಟ್‌ 5.54 ಕೋಟಿಯಿಂದ 5.01 ಕೋಟಿಗೆ ಕುಸಿದಿದೆ.

ದಾಖಲೆ ಕುಸಿತ ಕಂಡ ರೂಪಾಯಿ
ರೂಪಾಯಿ ತನ್ನ ಇತಿಹಾಸದಲ್ಲೇ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ರೂಪಾಯಿ ಮೌಲ್ಯ ಒಂಬತ್ತು ಪೈಸೆ ಕುಸಿದು 83.53 ರೂ.ಗೆ ತಲುಪಿದೆ. ಯುಎಸ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮೌಲ್ಯ ಇದಾಗಿದೆ. ಅಮೇರಿಕನ್ ಕರೆನ್ಸಿ ಬಲ ಹೆಚ್ಚಾಗಿರುವುದು ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ರೂಪಾಯಿ ಮಂಗಳವಾರ ದಾಖಲೆಯ ಕುಸಿತಕ್ಕೆ ಸಾಕ್ಷಿಯಾಯಿತು. ಇದರ ಪರಿಣಾಮ ವಿದೇಶಿ ವಸ್ತುಗಳ ಖರೀದಿ ದುಬಾರಿಯಾಗಲಿದ್ದು, ಆಮದು ಮಾಡಿಕೊಳ್ಳಲು ಸರ್ಕಾರ ಹೆಚ್ಚು ಖರ್ಚು ಮಾಡಬೇಕಾಗಿರುವುದರಿಂದ ವಿದೇಶಿ ವಿನಿಮಯ ಸಂಗ್ರಹದ ಮೇಲೂ ವ್ಯತಿರಿಕ್ತ ಪರಿಣಾಮಗಳನ್ನು ಕಾಣಬಹುದು.

Published: April 16, 2024, 14:13 IST

2 ಲಕ್ಷ ಭಾರತೀಯರ ಅಕೌಂಟ್ ಬ್ಯಾನ್, ಸಾಲಕ್ಕೆ ಇನ್ನಷ್ಟು ದಾಖಲೆ ಬೇಕು!