-
ಬಿಲ್ಡರ್ ಫ್ಲೋರ್ಗಳಲ್ಲಿ, ಯಾವುದೇ ಮಾಸಿಕ ಮೇಂಟೆನೆನ್ಸ್ ಫೀ ಕೊಡಬೇಕಿರುವುದಿಲ್ಲ. ಮೇಂಟೆನೆನ್ಸ್ ಮಾಡುವುದು ಖರೀದಿದಾರರ ಜವಾಬ್ದಾರಿಯಾಗಿರುತ್ತದೆ. ಇಡೀ ಬಿಲ್ಡಿಂಗ್ನಲ್ಲಿ ಏನಾದರೂ ಮೇಂಟೆನೆನ್ಸ್ ಮಾಡಬೇಕು ಎಂದಾದರೆ, ಅದಕ್ಕೆ ಎಲ್ಲ ಫ್ಲೋರ್ ಮಾಲೀಕರೂ ಹಣ ಹಾಕಬೇಕಾಗುತ್ತದೆ.
-
ರತ್ನಾ ತನ್ನ ಗ್ರಾಮದಲ್ಲಿ ಇದ್ದ 30 ಲಕ್ಷ ರೂ. ಮೌಲ್ಯದ ಪ್ರಾಪರ್ಟಿಯನ್ನು ಮಾರಾಟ ಮಾಡಿ, ಆದಾಯ ತರುವ ಪ್ರಾಪರ್ಟಿಯಲ್ಲಿ ಹೂಡಿಕೆ ಮಾಡುವುದಕ್ಕೆ ಬಯಸಿದ್ದಾರೆ. ರಿಯಲ್ ಎಸ್ಟೇಟ್ನಲ್ಲಿ ಫ್ರಾಕ್ಷನಲ್ ಓನರ್ಶಿಪ್ ಆಧಾರದಲ್ಲಿ ಹೂಡಿಕೆ ಮಾಡಿ ಎಂದು ಸ್ನೇಹಿತರೊಬ್ಬರು ಸಲಹೆ ಮಾಡಿದ್ದಾರೆ. ಆದರೆ, ರತ್ನಾಗೆ ಇದರ ಬಗ್ಗೆ ತಿಳಿವಳಿಕೆ ಇಲ್ಲ. ಫ್ರಾಕ್ಷನಲ್ ಓನರ್ಶಿಪ್ ಎಂದರೆ ಏನು, ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಇದರಲ್ಲಿ ನೀವು ಎಷ್ಟು ರಿಟರ್ನ್ ಗಳಿಸಬಹುದು ಎಂದು ನೋಡೋಣ ಬನ್ನಿ.
-
ಗೃಹ ಸಾಲ ತೆಗೆದುಕೊಳ್ಳಕ್ಕೂ ಮೊದಲು ಮಹಿಳೆಯರ ಹೆಸರಿನಲ್ಲಿ ಸಾಲ ಪಡೆದರೆ ಏನಾದರೂ ರಿಯಾಯಿತಿ ಸಿಗುತ್ತದೆಯಾ? ಎಂದು ಸಹ ತಿಳಿದುಕೊಳ್ಳಬೇಕು. ಕೋ-ಬಾರೋವರ್ ಅಂದ್ರೆ ಜಂಟಿಯಾಗಿ ಸಾಲ ಪಡೆದವರ ಪೈಕಿ ಅಥವಾ ಸಾಲದ ಸಹ ಅರ್ಜಿದಾರರಾಗಿ ಒಬ್ಬರು ಮಹಿಳೆ ಇದ್ದರೆ ಆಗ ಕೂಡ ಕೆಲವು ಬ್ಯಾಂಕ್ ಗಳು ರಿಯಾಯಿತಿ ಕೊಡುತ್ತವೆ.
-
ರಿಯಲ್ ಎಸ್ಟೇಟ್ ಮ್ಯಾನೇಜ್ಮೆಂಟ್ ಕಂಪನಿ ಟ್ರೂಬೋರ್ಡ್ ಪಾರ್ಟರ್ನ್ಸ್ ಪ್ರಕಾರ ಫ್ರಾಕ್ಷನಲ್ ಓನರ್ಶಿಪ್ನ ಟ್ರೆಂಡ್ ತುಂಬಾ ವೇಗವಾಗಿ ಬೆಳೆಯುತ್ತಿದೆ. ಭಾರತದಲ್ಲಿ, ಫ್ರಾಕ್ಷನಲ್ ಓನರ್ಶಿಪ್ ಪ್ಲಾಟ್ಫಾರಂಗಳ ಎಯುಎಂ 2019 ರಲ್ಲಿ 1500 ಕೋಟಿ ರೂ. ಇತ್ತು. 2023 ರಲ್ಲಿ ಇದು 4 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ.
-
ಮನೆ ಖರೀದಿಗೆ ಎರಡನೇ ಪ್ರಮುಖ ಅಂಶ ಅಂದ್ರೆ ಬಡ್ಡಿ ದರ. ಬಹುತೇಕ ಮನೆಗಳನ್ನ ದೀರ್ಘಾವಧಿ ಸಾಲ ಮಾಡಿ ಖರೀದಿಸಲಾಗಿರತ್ತೆ. ಹಣದುಬ್ಬರ ನಿಯಂತ್ರಿಸೋಕೆ ರಿಸರ್ವ್ ಬ್ಯಾಂಕ್ ಮೇ 2022 ರಿಂದ ಫೆಬ್ರವರಿ 2023 ರವರೆಗೆ ರೆಪೋ ದರವನ್ನು ಶೇಕಡ 2.5 ರಷ್ಟು ಹೆಚ್ಚಳ ಮಾಡಿದೆ.. ಇದರಿಂದಾಗಿ ಶೇಕಡ 7 ಕ್ಕಿಂತ ಕಡಿಮೆ ಇದ್ದ ಬಡ್ಡಿ ದರಗಳು ಈಗ ಶೇಕಡ 8.5 ರಿಂದ 10 ರಷ್ಟಿವೆ. ಕಳೆದ ಐದು ಸಭೆಗಳಲ್ಲೂ ಆರ್ ಬಿ ಐ ತನ್ನ ದರಗಳನ್ನ ಯಥಾಸ್ಥಿತಿಯಲ್ಲಿ ಮುಂದುವರಿಸಿವೆ.
-
ನೀವು ನಿಮ್ಮ ಪ್ರಾಪರ್ಟಿ ವಿಲ್ ಅನ್ನು ಒಂದು ಸರಳ ಕಾಗದದ ಮೇಲೆಯೂ ಬರೆಯಬಹುದು. ಅದಕ್ಕೆ ಸ್ಟಾಂಪ್ ಪೇಪರ್ರೇ ಆಗಬೇಕು ಎಂದೇನಿಲ್ಲ. ಆದರೂ, ಹಲವರು ಈ ತಪ್ಪೊಂದನ್ನು ಮಾಡುತ್ತಾರೆ. ಇದರಿಂದ ನಿಮ್ಮ ವಿಲ್ ಅನೂರ್ಜಿತವೂ ಆಗಬಹುದು. ದಯಾಳ್ ಬಾಬು ಅವರ ಪ್ರಕರಣವನ್ನೇ ನೋಡಿ. ಅವರು ಕಳೆದ ವರ್ಷ ತನ್ನ ಕುಟುಂಬದ ವಿಲ್ ಮಾಡಿದರು. ತನ್ನ ಎಲ್ಲ ಭೂಮಿ ಮತ್ತು ಅಸೆಟ್ಗಳನ್ನು ತನ್ನ ಮಕ್ಕಳಿಗೆ ನೀಡಿದರು. ಅದಕ್ಕೆ ಅವರು ವಿಲ್ ಮಾಡಿದ್ದರು. ಆದರೆ, ಸಾಕ್ಷಿ ಸಹಿ ಹಾಕಿಸಿರಲಿಲ್ಲ.
-
ಆಸ್ತಿ ಖರೀದಿ ಸಾಮಾನ್ಯವಾಗಿ ಒಂದು ಸವಾಲಿನ ಕೆಲಸ. ಅದರಲ್ಲೂ ನಿಮಗೆ ರಿಯಲ್ ಎಸ್ಟೇಟ್ ವಲಯದ ಸೂಕ್ಷ್ಮ ಸಂಗತಿಗಳು ತಿಳಿದಿಲ್ಲ ಎಂದಾದರೆ ಅದು ಇನ್ನಷ್ಟು ಸಂಕೀರ್ಣವಾಗುತ್ತದೆ. ಪ್ರಾಪರ್ಟಿ ಖರೀದಿ ಮಾಡುವಾಗ, ಅದರಲ್ಲೂ ಮನೆ ಖರೀದಿ ಮಾಡುವಾಗಲಂತೂ ಹಲವು ಸಂಗತಿಗಳನ್ನು ನೀವು ಗಮನದಲ್ಲಿರಿಸಿಕೊಳ್ಳಬೇಕು. ಈ ಪೈಕಿ ಅತ್ಯಂತ ಮಹತ್ವದ ಸಂಗತಿಯೆಂದರೆ, ಪ್ರಾಪರ್ಟಿಯ ಮಾಲೀಕತ್ವ ಯಾವ ರೀತಿಯದ್ದು ಎಂಬುದನ್ನು ನೋಡಿಕೊಳ್ಳಬೇಕು. ಸಾಮಾನ್ಯವಾಗಿ ಪ್ರಾಪರ್ಟಿಯಲ್ಲಿ ಫ್ರೀ ಹೋಲ್ಡ್ ಮತ್ತು ಲೀಸ್ ಹೋಲ್ಡ್ ಎಂಬ ಎರಡು ವಿಧದ ಮಾಲೀಕತ್ವವಿರುತ್ತದೆ. ಇದನ್ನು ಕ್ರಯ ಮತ್ತು ಭೋಗ್ಯ ಎಂದು ಕರೆಯಲಾಗುತ್ತದೆ.
-
ಎಲ್ ಐ ಸಿ ಹೌಸಿಂಗ್ ಫೈನ್ಯಾನ್ಸ್ ಒಂದು ಕೋಟಿ ರೂಪಾಯಿವರೆಗಿನ ಸಾಲಕ್ಕೆ ಶೇಕಡ 0.25 ರಷ್ಟು ಶುಲ್ಕ ವಿಧಿಸುತ್ತದೆ. ಇದು ಹದಿನೈದು ಸಾವಿರ ರೂಪಾಯಿಯಷ್ಟಾಗಬಹುದು. ಹಾಗೆಯೆ ಒಂದು ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ಸಾಲಕ್ಕೆ ಇಪ್ಪತ್ತು ಸಾವಿರ ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಪ್ರಾಸಸಿಂಗ್ ಫೀ ಅಲ್ಲದೆ ಜಿ ಎಸ್ ಟಿ ಸಹ ನೀಡಬೇಕಾಗುತ್ತದೆ.
-
ಬಹಳಷ್ಟು ಬಾರಿ, ರಿಯಲ್ ಎಸ್ಟೇಟ್ ಬ್ರೋಕರ್ಗಳು ನಿಮ್ಮ ಮನವೊಲಿಸಲು ಪ್ರಯತ್ನಿಸುತ್ತಾರೆ. ನೀವು ಫ್ಲಾಟ್ ಹುಡುಕುತ್ತಿರುವ ಪ್ರದೇಶದಲ್ಲಿ ತುಂಬಾ ಬೇಗ ಬೆಲೆ ಏರುತ್ತಿದೆ ಎಂದು ಹೇಳುತ್ತಾರೆ. ಇದರಿಂದ ನೀವು ಬೇಗ ಬೇಗ ಖರೀದಿ ಮಾಡಬೇಕು ಎಂಬ ತುರ್ತು ಮೂಡುತ್ತದೆ. ಬೇಗ ನಿರ್ಧಾರ ಮಾಡಿ ಎಂದು ಹೇಳುತ್ತಾರೆ. ಬೆಲೆ ಏರುವುದಕ್ಕೂ ಮೊದಲೇ ಮನೆ ಖರೀದಿ ಮಾಡಿಬಿಡುವುದು ಒಳಿತು ಎಂದು ಯೋಚನೆ ಮಾಡುವಂತೆ ನಿಮ್ಮನ್ನು ಪ್ರಚೋದಿಸುತ್ತಾರೆ.
-
ವಿವೇಕ್ ಮನೆ ಹುಡುಕುತ್ತಾ ಇದ್ದಾನೆ. ಒಂದು ದಿನ ಆಫ್ ಸಿಕ್ಕರೂ ಆತ ಮನೆ ಹುಡುಕುವುದಕ್ಕೆ ಹೋಗುತ್ತಿದ್ದ. ನಿರ್ಮಾಣ ಆಗುತ್ತಿರುವ ಮನೆ ಖರೀದಿ ಮಾಡಬೇಕೋ ಅಥವಾ ರೀಸೇಲ್ ಫ್ಲಾಟ್ ಖರೀದಿ ಮಾಡಬೇಕೋ ಎನ್ನುವುದು ಅವನ ಗೊಂದವಾಗಿತ್ತು. ಮನೆ ಖರೀದಿ ಮಾಡುವ ಬಹುತೇಕರಿಗೆ ಈ ಗೊಂದಲ ಮೂಡುತ್ತದೆ. ರೀಸೇಲ್ ಫ್ಲಾಟ್ ಅನ್ನು ನೀವು ಯಾವಾಗ ಖರೀದಿ ಮಾಡಬೇಕು? ನಿರ್ಮಾಣವಾಗುತ್ತಿರುವ ಪ್ರಾಪರ್ಟಿಗಿಂತ ರೀಸೇಲ್ ಪ್ರಾಪರ್ಟಿ ಕಡಿಮೆಗೆ ಸಿಗುತ್ತದೆಯೇ? ರಿಸೇಲ್ ಪ್ರಾಪರ್ಟಿ ಖರೀದಿ ಮಾಡುವಾಗ ಯಾವ ಅಂಶಗಳನ್ನು ನೀವು ನೋಡಬೇಕು? ವಿವೇಕ್ ಅವರ ಗೊಂದಲವನ್ನು ಪರಿಹರಿಸುವುದಕ್ಕೂ ಮೊದಲು ರಿಸೇಲ್ ಪ್ರಾಪರ್ಟಿ ಎಂದರೆ ಏನು ಎಂದು ತಿಳಿದುಕೊಳ್ಳಬೇಕು.