-
ಬಡ್ಡಿ ರೂಪದಲ್ಲಿ ಆದಾಯ ಗಳಿಸಬಹುದಾದ ಅನೇಕ ಮಾರ್ಗಗಳಿವೆ. ಉಳಿತಾಯ ಖಾತೆ, ನಿಶ್ಚಿತ ಠೇವಣಿ, ರೆಕರಿಂಗ್ ಡೆಪಾಸಿಟ್ ಇತ್ಯಾದಿ. ನಿಮ್ಮ ವೇತನದ ಗಳಿಕೆ ಅಥವಾ ವೃತ್ತಿಯ ಗಳಿಕೆಯ ಮೇಲೆ ಅಥವಾ ಬ್ಯುಸಿನೆಸ್ ನಿಂದ ಸಿಗೋ ಆದಾಯದ ಮೇಲೆ ಹೇಗೆ ಆದಾಯ ತೆರಿಗೆ ವಿಧಿಸಲ್ಪಡುತ್ತದೆಯೋ ಹಾಗೇ ಬಡ್ಡಿಯಿಂದ ಸಿಗುವ ಆದಾಯದ ಮೇಲೆ ಕೂಡ ತೆರಿಗೆ ಅನ್ವಯವಾಗತ್ತದೆ. ಆದಾಗ್ಯೂ ನೀವು ಬಡ್ಡಿಯಿಂದ ಗಳಿಸುವ ಆದಾಯದ ಮೇಲೆ ಡಿಡಕ್ಷನ್ ಕ್ಲೇಮ್ ಮಾಡಬಹುದು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹೆಚ್ಚಿನ ಡಿಡಕ್ಷನ್ ಸಿಗುತ್ತದೆ. ಹಾಗಿದ್ದರೆ ನಿಮ್ಮ ಹೂಡಿಕೆ ಗಳಿಕೆಗೆ ತೆರಿಗೆ ವಿನಾಯಿತಿ ಸಿಗುತ್ತದೆಯೋ? ಇಲ್ಲವೋ? ಎನ್ನುವುದನ್ನು ತಿಳಿದುಕೊಳ್ಳೋಣ.
-
ಸರ್ಕಾರ ಸಣ್ಣ ಸಣ್ಣ ಟ್ಯಾಕ್ಸ್ ಡಿಮ್ಯಾಂಡ್ಗಳನ್ನು ವಿತ್ಡ್ರಾ ಮಾಡಲು ಆರಂಭಿಸಿದೆ. 2024 ಫೆಬ್ರವರಿ 1 ರಂದು ಮಂಡಿಸಿದ ಮಧ್ಯಂತರ ಬಜೆಟ್ನಲ್ಲಿ ಸಣ್ಣ ತೆರಿಗೆದಾರರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ವಲ್ಪ ನಿರಾಳ ಯೋಜನೆಯನ್ನು ಘೋಷಿಸಿದ್ದಾರೆ. ದೀರ್ಘಕಾಲದಿಂದ ಬಾಕಿ ಇರುವ ಟ್ಯಾಕ್ಸ್ ಡಿಮ್ಯಾಂಡ್ಗಳನ್ನು ವಿತ್ಡ್ರಾ ಮಾಡುವುದಾಗಿ ಅವರು ಘೋಷಿಸಿದ್ದಾರೆ. ವಿನಾಯಿತಿ ನೀಡಲಾಗುತ್ತಿರುವ ಟ್ಯಾಕ್ಸ್ ಡಿಮ್ಯಾಂಡ್ನ ಮೊತ್ತದ ಬಗ್ಗೆ ಯಾವ ವಿವರಗಳನ್ನು ಘೋಷಿಸಿದ್ದಾರೆ ಎಂದು ನೋಡೋಣ ಬನ್ನಿ. ಆನ್ಲೈನ್ ಚೆಕಿಂಗ್ ಪ್ರಕ್ರಿಯೆಯ ಬಗ್ಗೆಯೂ ನಾವು ಇಲ್ಲಿ ವಿವರಿಸುತ್ತೇವೆ. ಘೋಷಣೆ ಮಾಡಿದ್ದರಲ್ಲಿ ಏನಿದೆ ಎಂದು ನೋಡೋಣ ಬನ್ನಿ.
-
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಟಿಟಿಎ ಅಡಿಯಲ್ಲಿ, ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಸಿಗುವ ಬಡ್ಡಿ ಮೇಲೆ ಡಿಡಕ್ಷನ್ ಕ್ಲೇಮ್ ಮಾಡಬಹುದು. ಒಂದು ವರ್ಷದಲ್ಲಿ ಉಳಿತಾಯ ಖಾತೆಯಲ್ಲಿ ಸಿಗುವ ಹತ್ತು ಸಾವಿರ ರೂಪಾಯಿವರೆಗಿನ ಬಡ್ಡಿಗೆ ತೆರಿಗೆ ವಿನಾಯಿತಿ ಇರುತ್ತದೆ.
-
ಟ್ಯಾಕ್ಸ್ ಡಿಮ್ಯಾಂಡ್ನ ಸ್ಟೇಟಸ್ ಅನ್ನು ಚೆಕ್ ಮಾಡಲು, ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ವೆಬ್ಸೈಟ್ಗೆ ತಮ್ಮ ಯೂಸರ್ ಐಡಿ ಮತ್ತು ಪಾಸ್ವರ್ಡ್ ಬಳಸಿ ಟ್ಯಾಕ್ಸ್ಪೇಯರ್ಗಳು ಲಾಗಿನ್ ಮಾಡಬೇಕು. "Pending Action" ಅಡಿಯಲ್ಲಿ "ರೆಸ್ಪಾನ್ಸ್ ಟು "Response to Outstanding Demand" ಆಪ್ಷನ್ಗೆ ಹೋದರೆ, ಅಲ್ಲಿ ಟ್ಯಾಕ್ಸ್ ಡಿಮ್ಯಾಂಡ್ ಸ್ಟೇಟಸ್ ಕಾಣಿಸುತ್ತದೆ.
-
ಸಮೀಕ್ಷೆ ನೋಡಿದ್ಯಾ ಅಂತ ರಮೇಶ್ ಬಳಿ ಸಚಿನ್ ಕೇಳುತ್ತಾರೆ. ಯಾವುದು ಸರ್ವೆ? ಸರ್ವೆಯಲ್ಲಿ ಏನಿದೆ? ಅಂತ ಏನೂ ಗೊತ್ತಿಲ್ಲದೆ ರಮೇಶ್ ಮರುಪ್ರಶ್ನೆ ಮಾಡುತ್ತಾರೆ. ಯಾಕೆ ಬಹುತೇಕ ಜನರು ಹಳೆಯ ಟ್ಯಾಕ್ಸ್ ವ್ಯವಸ್ಥೆಯನ್ನೇ ಮೊದಲು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಬಗ್ಗೆ ಸಮೀಕ್ಷೆ ನಡೀತಿದೆ ಅಂತ ಸಚಿನ್ ಹೇಳುತ್ತಾರೆ. ನನಗೂ ಹಳೆಯ ತೆರಿಗೆ ಸಿಸ್ಟಮ್ ಇಷ್ಟ ಎಂದು ರಮೇಶ್ ಹೇಳುತ್ತಾರೆ. ಆದರೆ, ಹೊಸ ತೆರಿಗೆ ವ್ಯವಸ್ಥೆಯಲ್ಲಿ ಹಲವು ಹಲವು ಅನುಕೂಲಗಳನ್ನು ಸರ್ಕಾರ ನೀಡಿದೆ ಎಂದು ಸಚಿನ್ ಹೇಳಿದಾಗ, ರಮೇಶ್ಗೂ ಇದರ ಬಗ್ಗೆ ಕೇಳಿದ ನೆನಪಾಯಿತು. ಆದರೆ, ಸಚಿನ್ಗೆ ಇನ್ನೂ ಅರ್ಥವಾಗದ ಒಂದು ಸಂಗತಿಯೆಂದರೆ, ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಕಡಿಮೆ ಇದ್ದರೂ ಯಾಕೆ ಹೆಚ್ಚಿನ ಜನರು ಇಂದಿಗೂ ಹಳೆಯ ತೆರಿಗೆ ವ್ಯವಸ್ಥೆಯನ್ನೇ ಇಷ್ಟಪಡುತ್ತಿದ್ದಾರೆ.
-
ಡೊನೇಷನ್ ಪಡೆಯೋ ರಾಜಕೀಯ ಪಕ್ಷಗಳು ಜನಪ್ರತಿನಿಧಿ ಕಾಯ್ದೆ, 1951 ರ ಸೆಕ್ಷನ್ 29ಎ ಅಡಿಯಲ್ಲಿ ನೋಂದಣಿಯಾಗಿರಬೇಕು. ಎರಡನೆಯದಾಗಿ, ಈ ಡೊನೇಷನ್ ಕ್ಯಾಷ್ ಆರ್ ಕೈಂಡ್ ಆಗಿರಬಾರದು ಅಂದರೆ ನಗದು ಅಥವಾ ವಸ್ತು, ಸೇವೆಗಳ ರೂಪದಲ್ಲಿ ಇರಬಾರದು.
-
ಹಣಕಾಸು ವರ್ಷ 2023-24 ಕ್ಕೆ ಸಂಬಂಧಿಸಿದ ಹಾಗೇ ನಿಮ್ಮ ತೆರಿಗೆಗಳ ಬಗ್ಗೆ ಪ್ಲಾನ್ ಮಾಡುವುದಕ್ಕೆ ಕೆಲ ದಿನ ಸಹ ಬಾಕಿ ಇಲ್ಲ. ಹಾಗಿದ್ದರೆ ನಿಮಗೆ ಹೊಸ ತೆರಿಗೆ ಪದ್ಧತಿ ಸೂಟ್ ಆಗುತ್ತದೆಯಾ ಇಲ್ಲವಾ ಹಳೆ ತೆರಿಗೆ ಪದ್ಧತಿಯಾ ಅನ್ನೋದನ್ನು ತಿಳಿದುಕೊಳ್ಳಬೇಕಿದೆ. ತೆರಿಗೆ ಉಳಿತಾಯಕ್ಕೆ ಅನೇಕ ಅವಕಾಶಗಳು ಇರುವುದರಿಂದ ಹಳೆಯ ತೆರಿಗೆ ವಿಧಾನವೇ ಜನಪ್ರಿಯವಾಗಿದೆ. ಹಳೆಯ ರಿಜೈಮ್ ನಲ್ಲಿ ಸುಮಾರು 70 ವಿನಾಯಿತಿಗಳು ಮತ್ತು ಕಡಿತಗಳಿವೆ, ಇದರಿಂದ ತೆರಿಗೆಗೆ ಒಳಪಡುವ ಆದಾಯ ಪ್ರಮಾಣ ಮತ್ತು ತೆರಿಗೆ ಮೊತ್ತ ಕಡಿಮೆ ಆಗತ್ತದೆ. ದೀರ್ಘಾವಧಿ ಹೂಡಿಕೆಗಳಿಗೆ ತೆರಿಗೆ ಮುಕ್ತ ರಿಟರ್ನ್ಸ್ ಮೂಲಕ ನಿವೃತ್ತಿಗೆ ಹಣ ಕ್ರೋಢೀಕರಿಸಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ.
-
ಸ್ವಂತ ಸೂರಿರಬೇಕು ಅನ್ನೋದು ಪ್ರತಿಯೊಬ್ಬರ ಕನಸು.. ಆದಾಯ ತೆರಿಗೆ ಕಾಯ್ದೆ ಕೂಡ ಈ ಭಾವನೆಗೆ ಪೂರಕವಾಗಿದೆ.. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24(ಬಿ) ಅಡಿಯಲ್ಲಿ, ಗೃಹ ಸಾಲ ಪಡೆದು ಮನೆ ಖರೀದಿಸಿದರೆ ಅಥವಾ ನಿರ್ಮಾಣ ಮಾಡಿದರೆ ತೆರಿಗೆ ವಿನಾಯಿತಿ ಸಿಗುತ್ತದೆ.
-
ಮನೆ ಬಾಡಿಗೆ ಭತ್ಯೆ ಅಥವಾ ಎಚ್ ಆರ್ ಎ ಕ್ಲೇಮ್ ಮಾಡುವುದಕ್ಕೆ ಉದ್ಯೋಗಿಗಳು ಒಂದಿಷ್ಟು ದಾಖಲೆ ಅಥವಾ ಪುರಾವೆಗಳನ್ನು ಸಲ್ಲಿಸಬೇಕಾಗತ್ತದೆ. ಈ ಪೈಕಿ ರೆಂಟ್ ರಸೀಪ್ಟ್, ರೆಂಟ್ ಅಗ್ರಿಮೆಂಟ್, ಮನೆ ಮಾಲೀಕರ ಹೆಸರು ಮತ್ತು ವಿಳಾಸ ಸೇರಿದೆ.
-
ಹಣಕಾಸು ವರ್ಷ ಇನ್ನೇನು ಮುಕ್ತಾಯವಾಗುತ್ತಿದೆ. ಟ್ಯಾಕ್ಸ್ ಪ್ಲಾನಿಂಗ್ ವಿಷಯದಲ್ಲಿ ಅಜಿತ್ಗೆ ತುಂಬಾ ಆತಂಕವಾಗಿದೆ. ವರ್ಷದ ಆರಂಭದಲ್ಲಿ ಎಲ್ಲ ಪ್ಲಾನ್ ಮಾಡಿದ್ದರು. ಇದರಲ್ಲಿ ಹಣ ಹಾಕಬೇಕು, ಅದರಲ್ಲಿ ಹಣ ಹಾಕಬೇಕು ಎಂದೆಲ್ಲ ಅಂದುಕೊಂಡಿದ್ದರು. ಆದರೆ, ಏನನ್ನೂ ಮಾಡಲಿಲ್ಲ. ಈಗ ಅವರಿಗೆ ಚಿಂತೆಯಾಗಿದೆ. ಯಾವ ತೆರಿಗೆ ಪದ್ಧತಿ ಆರಿಸಿಕೊಳ್ಳಬೇಕು? ತೆರಿಗೆ ಉಳಿಸಲು ಯಾವುದರಲ್ಲಿ ಹೂಡಿಕೆ ಮಾಡಬೇಕು? ತೆರಿಗೆ ಉಳಿತಾಯದ ಹೂಡಿಕೆಗಳಿಗೆ ಸಾಕ್ಷ್ಯವನ್ನು ಎರಡು ತಿಂಗಳುಗಳಲ್ಲಿ ಒದಗಿಸಬೇಕಾಗುತ್ತದೆ. ಈಗ, ಹೂಡಿಕೆ ಮಾಡದೇ ಇದ್ದರೆ ಸಾಕ್ಷ್ಯ ಎಲ್ಲಿಂದ ಬರುತ್ತದೆ?