ಸಮೀಕ್ಷೆ ನೋಡಿದ್ಯಾ ಅಂತ ರಮೇಶ್ ಬಳಿ ಸಚಿನ್ ಕೇಳುತ್ತಾರೆ. ಯಾವುದು ಸರ್ವೆ? ಸರ್ವೆಯಲ್ಲಿ ಏನಿದೆ? ಅಂತ ಏನೂ ಗೊತ್ತಿಲ್ಲದೆ ರಮೇಶ್ ಮರುಪ್ರಶ್ನೆ ಮಾಡುತ್ತಾರೆ. ಯಾಕೆ ಬಹುತೇಕ ಜನರು ಹಳೆಯ ಟ್ಯಾಕ್ಸ್ ವ್ಯವಸ್ಥೆಯನ್ನೇ ಮೊದಲು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಬಗ್ಗೆ ಸಮೀಕ್ಷೆ ನಡೀತಿದೆ ಅಂತ ಸಚಿನ್ ಹೇಳುತ್ತಾರೆ. ನನಗೂ ಹಳೆಯ ತೆರಿಗೆ ಸಿಸ್ಟಮ್ ಇಷ್ಟ ಎಂದು ರಮೇಶ್ ಹೇಳುತ್ತಾರೆ. ಆದರೆ, ಹೊಸ ತೆರಿಗೆ ವ್ಯವಸ್ಥೆಯಲ್ಲಿ ಹಲವು ಹಲವು ಅನುಕೂಲಗಳನ್ನು ಸರ್ಕಾರ ನೀಡಿದೆ ಎಂದು ಸಚಿನ್ ಹೇಳಿದಾಗ, ರಮೇಶ್ಗೂ ಇದರ ಬಗ್ಗೆ ಕೇಳಿದ ನೆನಪಾಯಿತು. ಆದರೆ, ಸಚಿನ್ಗೆ ಇನ್ನೂ ಅರ್ಥವಾಗದ ಒಂದು ಸಂಗತಿಯೆಂದರೆ, ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಕಡಿಮೆ ಇದ್ದರೂ ಯಾಕೆ ಹೆಚ್ಚಿನ ಜನರು ಇಂದಿಗೂ ಹಳೆಯ ತೆರಿಗೆ ವ್ಯವಸ್ಥೆಯನ್ನೇ ಇಷ್ಟಪಡುತ್ತಿದ್ದಾರೆ.
ಸಚಿನ್ ಮತ್ತು ರಮೇಶ್ ಮಾತನಾಡುತ್ತಿರೋದು ಒಂದು ಆನ್ಲೈನ್ ಇನ್ಶುರೆನ್ಸ್ ಪ್ಲಾಟ್ಫಾರಂ ಪಾಲಿಸಿ ಬಝಾರ್ ನಡೆಸಿರುವ ಸಮೀಕ್ಷೆಯ ಬಗ್ಗೆ. ಈ ಸಮೀಕ್ಷೆ ಪ್ರಕಾರ, ಇನ್ಕಮ್ ಟ್ಯಾಕ್ಸ್ ಕಟ್ಟುತ್ತಿರುವ 63 ಪರ್ಸೆಂಟ್ ಜನರು ಹಳೆಯ ತೆರಿಗೆ ವಿಧಾನವನ್ನು ಮುಂದುವರಿಸುವುದಕ್ಕೆ ಇಷ್ಟಪಡುತ್ತಿದ್ದಾರೆ. ಇನ್ನು 37 ಪರ್ಸೆಂಟ್ ಜನರು ಹೊಸ ತೆರಿಗೆ ವಿಧಾನಕ್ಕೆ ಬದಲಿಸುವ ಆಸಕ್ತಿ ಹೊಂದಿದ್ದಾರೆ. 350 ನಗರಗಳ 1263 ಜನರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಸಮೀಕ್ಷೆಯ ಪ್ರಕಾರ, 71 ಪರ್ಸೆಂಟ್ ಜನರು ಹಲವು ಲೆಕ್ಕಾಚಾರಗಳನ್ನು ಮಾಡಿ ತೆರಿಗೆ ವಿಧಾನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು 74 ಪರ್ಸೆಂಟ್ ಮಹಿಳೆಯುರು ಎರಡೂ ತೆರಿಗೆ ವಿಧಾನಗಳ ಅಡಿಯಲ್ಲೂ ತೆರಿಗೆ ಹೊಣೆಗಾರಿಕೆಯ ಲೆಕ್ಕಾಚಾರ ಮಾಡಿದ್ದಾರೆ. ಆದರೆ, ಪುರುಷರ ವಿಷಯಕ್ಕೆ ಬಂದರೆ 71 ಪರ್ಸೆಂಟ್ ಜನರು ಈ ಲೆಕ್ಕಾಚಾರ ಹಾಕಿ ನೋಡಿದ್ದಾರೆ.
ಇನ್ನು ಸಮೀಕ್ಷೆಯನ್ನು ನೋಡಿದರೆ, ಯಾರ ಮನಸಿಗಾದರೂ ಪ್ರಶ್ನೆ ಉದ್ಭವಿಸುತ್ತದೆ. 2023-24 ರ ಬಜೆಟ್ನಲ್ಲೇ ಹೊಸ ತೆರಿಗೆ ವ್ಯವಸ್ಥೆಯನ್ನು ಪ್ರಚಾರ ಮಾಡುವುದಕ್ಕೆ ಹಲವು ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿತ್ತು. ಬೇಸಿಕ್ ಎಕ್ಸೆಂಪ್ಷನ್ ಲಿಮಿಟ್ ಅನ್ನು 2.5 ಲಕ್ಷ ರೂ. ಇಂದ 3 ಲಕ್ಷ ರೂ.ಗೆ ಏರಿಸಲಾಗಿತ್ತು. ಟ್ಯಾಕ್ಸ್ ಸ್ಲ್ಯಾಬ್ನ ಸಂಖ್ಯೆಯನ್ನು 6 ರಿಂದ 5ಕ್ಕೆ ಇಳಿಸಲಾಗಿದೆ. ರಿಬೇಟ್ ನಂತರ 7 ಲಕ್ಷದ ವರೆಗಿನ ಆದಾಯಕ್ಕೆ ತೆರಿಗೆ ರಿಯಾಯಿತಿ ನೀಡಲಾಗಿದೆ. ಸಂಬಳ ಪಡೆಯುವ ನೌಕರರಿಗೆ 50 ಸಾವಿರ ಸ್ಟಾಂಡರ್ಡ್ ಡಿಡಕ್ಷನ್ ನೀಡಲಾಗಿದೆ. ಹೆಚ್ಚು ಗಳಿಕೆ ಮಾಡುವವರಿಗೆ ಸರ್ಚಾರ್ಜ್ ಕಡಿಮೆ ಮಾಡಲಾಗಿದೆ. ಹಳೆಯ ತೆರಿಗೆ ವ್ಯವಸ್ಥೆಯ ಬಗ್ಗೆ ತೆರಿಗೆದಾರರಿಗೆ ವಿಪರೀತ ಮೋಹ ಇದ್ದ ಹಾಗಿದೆ. ಇದಕ್ಕೆ ಕಾರಣವೇನು? ಯಾಕೆ ಜನರು ಹಳೆಯ ತೆರಿಗೆ ವ್ಯವಸ್ಥೆಯಿಂದ ಹೊಸ ತೆರಿಗೆ ವ್ಯವಸ್ಥೆಗೆ ಬದಲಾವಣೆ ಯಾಕೆ ಬಯಸುತ್ತಿಲ್ಲ? ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ದರ ಕಡಿಮೆ ಇದೆ. ಹಾಗಾದರೆ, ಯಾರಿಗೆ ಯಾವ ತೆರಿಗೆ ವ್ಯವಸ್ಥೆ ಸೂಕ್ತವಾಗಿದೆ? ಬನ್ನಿ ನೋಡೋಣ.
ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಅಂದರೆ ಐಟಿಆರ್ ಫೈಲ್ ಮಾಡುವ ಜನರ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಿದೆ. 7 ಕೋಟಿ 40 ಲಕ್ಷಕ್ಕೂ ಹೆಚ್ಚು ಜನರು 2022-23 ರ ಹಣಕಾಸು ವರ್ಷದಲ್ಲಿ ರಿಟರ್ನ್ಸ್ ಫೈಲ್ ಮಾಡಿದ್ದಾರೆ. ಈ ಪೈಕಿ ಮೂರನೇ ಎರಡು ಭಾಗದಷ್ಟು ಅಂದರೆ 5.16 ಕೋಟಿ ಜನರಿಗೆ ತೆರಿಗೆ ಹೊಣೆಗಾರಿಕೆ ಇಲ್ಲ. ಕೇವಲ 2 ಕೋಟಿ 24 ಲಕ್ಷ ಜನರು ತೆರಿಗೆ ಕಟ್ಟಿದ್ದಾರೆ ಎಂದು ಡಿಸೆಂಬರ್ನಲ್ಲಿ ಸಂಸತ್ತಿಗೆ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
ವಿತ್ತ ವರ್ಷ 202-21 ರಲ್ಲಿ ಸರ್ಕಾರ ಹೊಸ ತೆರಿಗೆ ಪದ್ಧತಿಯನ್ನು ಪರಿಚಯಿಸಿದೆ. ಇದರಲ್ಲಿ ತೆರಿಗೆ ದರಗಳನ್ನು ಕಡಿಮೆ ಇಡಲಾಗಿದೆ. ಈ ವರ್ಷದ ಬಜೆಟ್ನಲ್ಲೂ ಹೊಸ ತೆರಿಗೆ ವಿಧಾನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈಗ ಹೊಸ ತೆರಿಗೆ ವಿಧಾನ ಡೀಫಾಲ್ಟ್ ಆಪ್ಷನ್ ಆಗಿದೆ. ಅಂದರೆ, ಹಳೆಯ ತೆರಿಗೆ ವಿಧಾನದ ಪ್ರಯೋಜನಗಳನ್ನು ಪಡೆಯುವುದಕ್ಕಾಗಿ, ನೀವು ಅದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ, ತೆರಿಗೆದಾರರಿಗೆ ಇದು ಅಷ್ಟೇನೂ ಆಕರ್ಷಕವಾಗಿ ಕಾಣಿಸುತ್ತಿಲ್ಲ. ಹಳೆಯ ತೆರಿಗೆ ವ್ಯವಸ್ಥೆ ಇನ್ನೂ ಬಹುತೇಕ ತೆರಿಗೆದಾರರಿಗೆ ಮೆಚ್ಚಿನ ಆಯ್ಕೆಯಾಗಿರಲಿದೆ.
ಯಾಕೆ ಜನರು ಹಳೆಯ ತೆರಿಗೆ ವ್ಯವಸ್ಥೆಯನ್ನು ಇಷ್ಟಪಡುತ್ತಾರೆ ಎಂಬ ಬಗ್ಗೆ ಈಗ ನಾವು ಅರ್ಥ ಮಾಡಿಕೊಳ್ಳೋಣ. ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಸುಮಾರು 70 ವಿನಾಯಿತಿಗಳಿವೆ. ಇದರಲ್ಲಿ ಮನೆ ಬಾಡಿಗೆ ಭತ್ಯೆ (ಎಚ್ಆರ್ಎ), ಎಲ್ಟಿಎ, 80ಸಿ, 80ಡಿ, ಮನೆ ಸಾಲದ ಬಡ್ಡಿ ಮತ್ತು ಎನ್ಪಿಎಸ್ನಲ್ಲಿ ವಿನಾಯಿತಿ ಎಲ್ಲವೂ ಇವೆ. ತೆರಿಗೆಗೆ ಒಳಪಡುವ ಆದಾಯ ಮತ್ತು ತೆರಿಗೆ ಬಾಧ್ಯತೆಯನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುವ ಕಡಿತಗಳೂ ಇವೆ. ಇಷ್ಟಿದ್ದರೂ, ಉಳಿತಾಯದ ಹವ್ಯಾಸ, ಇಪಿಎಫ್, ಪಿಪಿಎಫ್ ಮತ್ತು ಎನ್ಪಿಎಸ್ನಂತಹ ದೀರ್ಘಕಾಲೀನ ಹೂಡಿಕೆಗಳಿಂದ ತೆರಿಗೆ ರಹಿತ ರಿಟರ್ನ್ಸ್ ಅನ್ನು ಪಡೆಯುವುದು ಮತ್ತು ನಿವೃತ್ತಿಗೆ ಹಣ ಉಳಿತಾಯ ಮಾಡುವಂತಹ ಹವ್ಯಾಸದಿಂದ ಹಳೆಯ ತೆರಿಗೆ ವ್ಯವಸ್ಥೆಯನ್ನು ಜನರು ಇಷ್ಟಪಡುತ್ತಿದ್ದಾರೆ.
ಬಹುತೇಕ ತೆರಿಗೆ ಪಾವತಿದಾರರು ಬಳಸುವ ಹಳೆಯ ತೆರಿಗೆ ವಿಧಾನದಲ್ಲಿ ಸೇರಿಸಿರುವ ಸಾಮಾನ್ಯ ವಿನಾಯಿತಿಗಳು ಮತ್ತು ಡಿಡಕ್ಷನ್ಗಳ ಬಗ್ಗೆ ನಾವು ಈಗ ಮಾತನಾಡೋಣ. ಮೊದಲನೆಯದಾಗಿ, ಇಪಿಎಫ್, ಪಿಪಿಎಫ್ ಮತ್ತು ಲೈಫ್ ಇನ್ಶುರೆನ್ಸ್ನಂತಹ ವಿವಿಧ ಸ್ಕೀಮ್ಗಳಲ್ಲಿ ಹೂಡಿಕೆ ಮಾಡಿ ಸೆಕ್ಷನ್ 80ಸಿ ಅಡಿಯಲ್ಲಿ 1.5 ಲಕ್ಷ ರೂ.ವರೆಗಿನ ಡಿಡಕ್ಷನ್ ಅನ್ನು ಪಡೆಯಬಹುದು. ಇದರ ಜೊತೆಗೆ, ಎನ್ಪಿಎಸ್ನಲ್ಲಿ ಹೂಡಿಕೆ ಮಾಡಿದಾಗ 50 ಸಾವಿರದ ವರೆಗೆ ಹೆಚ್ಚುವರಿ ಡಿಡಕ್ಷನ್ ಸಿಗುತ್ತದೆ. ಈ ಮೂಲಕ, 2 ಲಕ್ಷ ರೂ.ವರೆಗೆ ತೆರಿಗೆ ಉಳಿಆಯ ಮಾಡಬಹುದು. ಇದೇ ರೀತಿ, 80ಡಿ ಅಡಿಯಲ್ಲಿ ಹೆಲ್ತ್ ಇನ್ಶುರೆನ್ಸ್ ಪ್ರೀಮಿಯಂಗೂ ಡಿಡಕ್ಷನ್ ಇದೆ. ಸ್ವಂತಕ್ಕೆ, ಪತ್ನಿ ಮತ್ತು ಮಕ್ಕಳ ಪಾಲಿಸಿ ಪ್ರೀಮಿಯಂ ಪಾವತಿ ಮಾಡಿದಾಗ 25,000 ವರೆಗೆ ಡಿಡಕ್ಷನ್ ಸಿಗುತ್ತದೆ. ಹಿರಿಯ ನಾಗರಿಕರಿಗೆ ಈ ಮಿತಿ 50 ಸಾವಿರ ರೂ. ಇದೆ. ನೀವು ಮತ್ತು ನಿಮ್ಮ ಪಾಲಕರು ಹಿರಿಯ ನಾಗರಿಕರಾಗಿದ್ದರೆ, ಆಗ ನೀವು 1 ಲಕ್ಷ ರೂ.ವರೆಗೆ ಡಿಡಕ್ಷನ್ ಪಡೆಯಬಹುದು.
ಮೂರನೆಯ ಪ್ರಮುಖ ಸಂಗತಿಯೇನೆಂದರೆ, ಮನೆ ಬಾಡಿಗೆ ಭತ್ಯೆ ಅಂದರೆ ಎಚ್ಆರ್ಎ ಅಡಿಯಲ್ಲಿ ಮನೆ ಬಾಡಿಗೆ ರಿಯಾಯಿತಿಯನ್ನೂ ಪಡೆಯಬಹುದು. ಎಚ್ಆರ್ಎ ಅಡಿಯಲ್ಲಿ ಪಡೆಯಬಹುದಾದ ರಿಯಾಯಿತಿ ಹೀಗಿದೆ: – ಮೆಟ್ರೋ ಸಿಟಿಯಲ್ಲಿ ಮೂಲ ಸಂಬಳದ ಮೇಲೆ 50 ಪರ್ಸೆಂಟ್ ಮತ್ತು ಮೆಟ್ರೋ ಅಲ್ಲದ ನಗರದಲ್ಲಿ 40 ಪರ್ಸೆಂಟ್ – ವಾರ್ಷಿಕ ಮನೆ ಬಾಡಿಗೆಯಿಂದ ವಾರ್ಷಿಕ ಸಂಬಳದಲ್ಲಿ 10% ಕಡಿತಗೊಳಿಸಿದ ನಂತರ ಉಳಿಯುವ ಮೊತ್ತ. ಈ ಮೂರರಲ್ಲಿ ಯಾವುದು ಕಡಿಮೆ ಇದೆಯೋ ಅದರ ಡಿಡಕ್ಷನ್ ಅನ್ನು ಪಡೆದುಕೊಳ್ಳಬಹುದು ಇದನ್ನು ಹೊರತುಪಡಿಸಿ, ಸೆಕ್ಷನ್ 24 ರ ಅಡಿಯಲ್ಲಿ, ಮನೆ ಸಾಲದ ಬಡ್ಡಿಯ ಮೇಲೆ 2 ಲಕ್ಷ ರೂ.ವರೆಗೆ ಡಿಡಕ್ಷನ್ ಪಡೆಯಬಹುದು.
ಹಳೆಯ ತೆರಿಗೆ ವಿಧಾನದಲ್ಲಿ ಜೀವ ವಿಮೆ, ಆರೋಗ್ಯ ವಿಮೆ ಮತ್ತು ನಿವೃತ್ತಿ ಯೋಜನೆ ಹಾಗೂ ದೀರ್ಘಕಾಲೀನ ಸಂಪತ್ತು ಸೃಷ್ಟಿ ಮಾಡಿಕೊಳ್ಳುವವರಿಗೆ ತೆರಿಗೆ ಉಳಿತಾಯ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಆದರೆ, ಹೊಸ ತೆರಿಗೆ ವ್ಯವಸ್ಥೆಯಲ್ಲಿ ಹೆಚ್ಚು ಹೆಚ್ಚು ಗಳಿಸಿದರೆ, ಅದರ ಮೇಲೆ ಕಡಿಮೆ ತೆರಿಗೆ ವಿಧಿಸಲಾಗುತ್ತದೆ ಎಂಬ ವಿಶ್ವಾಸವನ್ನು ನೀಡುತ್ತದೆ. ಇದರಲ್ಲಿ ಉಳಿತಾಯ ಮಾಡುವುದು ನಿಮ್ಮ ಕೈಯಲ್ಲೇ ಇರುತ್ತದೆ. ಕಂದಾಯ ಇಲಾಖೆಯ ಆರಂಭಿಕ ಲೆಕ್ಕಾಚಾರದ ಪ್ರಕಾರ, 2023-24 ರ ವಿತ್ತವರ್ಷದಲ್ಲಿ 5.5 ಕೋಟಿ ಜನರು ಹೊಸ ತೆರಿಗೆ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಪೈಕಿ ಬಹುತೇಕರ ತೆರಿಗೆಗೆ ಒಳಪಡಬಹುದಾದ ಆದಾಯವು 7 ಲಕ್ಷ ರೂ.ವರೆಗೆ ಇರುತ್ತದೆ.
ಸಚಿನ್ರಂತೆಯೇ, ನಿಮಗೂ ಕೂಡಾ ಯಾಕೆ ಜನರು ಹಳೆಯ ತೆರಿಗೆ ವ್ಯವಸ್ಥೆಯನ್ನೇ ಇಷ್ಟಪಡುತ್ತಾರೆ ಎಂಬುದು ಅರ್ಥವಾಗಿರಬೇಕು. ತೆರಿಗೆ ಉಳಿಸಲು ಹೂಡಿಕೆ ಮಾಡುವುದು ಬೇಡ ಎಂದಾದರೆ, ಹೊಸ ತೆರಿಗೆ ವ್ಯವಸ್ಥೆಗೆ ನೀವು ಹೋಗಬಹುದು. ಇದರಲ್ಲಿ ತೆರಿಗೆ ದರ ಕಡಿಮೆ ಇರುತ್ತದೆ. ಆದರೆ, ಯಾವುದೇ ವಿನಾಯಿತಿಗಳು ಮತ್ತು ರಿಯಾಯಿತಿಗಳು ಇರುವುದಿಲ್ಲ. ನೀವು ಮನೆ ಸಾಲ ತೆಗೆದುಕೊಂಡಿದ್ದರೆ, ಎಚ್ಆರ್ಎ, 80ಸಿ ಮತ್ತು ಎನ್ಪಿಎಸ್ ಪ್ರಯೋಜನವನ್ನೂ ಪಡೆದುಕೊಳ್ಳಬಹುದು.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ