-
ನಿಮ್ಮ ನೆಚ್ಚಿನ ಮನಿ9 ಕನ್ನಡ ಹೊಸ ಶೋ ಕಂಪನಿನಾಮಾದೊಂದಿಗೆ ನಿಮ್ಮ ಮುಂದೆ ಬರ್ತಿದೆ. ಈ ಶೋನಲ್ಲಿ ಕಾರ್ಪೋರೇಟ್ ಮತ್ತು ಸ್ಟಾರ್ಟ್ ಅಪ್ ಜಗತ್ತಿನ ಪ್ರತಿ ವಾರದ ಬೆಳವಣಿಗೆಗಳನ್ನು ನಿಮ್ಮ ಮುಂದೆ ಇಡುತ್ತೇವೆ. ಇಡೀ ವಾರದ ರೌಂಡ್ ಅಪ್ ಇಲ್ಲಿರಲಿದೆ.
-
ಬ್ಯಾಂಕ್ಗಳು ಯಾವಾಗ ರಜೆ ಇರುತ್ತದೆ? ನಿಮ್ಮ ಬ್ಯಾಂಕಿಂಗ್ ಕೆಲಸಗಳನ್ನು ಅತಿ ಸುಲಭವಾಗಿ ಮುಗಿಸಿಕೊಳ್ಳುವುದು ಹೇಗೆ? ಬ್ಯಾಂಕಿಂಗ್ ನಿಯಮದಲ್ಲಿ ಹೊಸ ಬದಲಾವಣೆ ಆಗಿದೆಯಾ? ತೆರಿಗೆ ಉಳಿತಾಯ ಮತ್ತು ನಿಮ್ಮ ಬ್ಯಾಂಕ್ ಅಕೌಂಟ್ ನಿರ್ವಹಣೆ ಹೇಗೆ? ಈ ಎಲ್ಲ ವಿಚಾರಗಳನ್ನು ಈ ಶೋದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಆನ್ ಲೈನ್ ವ್ಯವಹಾರಗಳಲ್ಲಿ ಆಗುತ್ತಿರುವ ಮುಂದೆ ಆಗಬಹುದಾದ ಪ್ರತಿಯೊಂದು ಬದಲಾವಣೆಗಳನ್ನು ನಿಮ್ಮ ಮುಂದೆ ಇಡುವ ಯತ್ನ ಇಲ್ಲಿದೆ.
-
ಭಾರತೀಯರು ಸರಳವಾಗಿ ಹೇಗೆ ಹೂಡಿಕೆ ಮಾಡಬೇಕು? ಇಕ್ವಿಟಿ ಮಾರ್ಕೆಟ್ಗೆ ಎಂಟ್ರಿ ಕೊಡುವುದಿದ್ದರೆ ಸರಿಯಾದ ಕಾಲ ಯಾವುದು? ಮ್ಯೂಚುವಲ್ ಫಂಡ್ ಇನ್ವೆಸ್ಟ್ಮೆಂಟ್ ನ ಸೂತ್ರಗಳೇನು? ಈ ಎಲ್ಲ ವಿಚಾರಗಳಿಗೆ ಗುರು ಮಂತ್ರದಲ್ಲಿ ನಿಮಗೆ ಉತ್ತರ ಸಿಗಲಿದೆ.
-
ಸ್ಮಾರ್ಟ್ ಥಿಂಕ್ ಮಾಡಿದರೆ 2+2 = 4 ಅಲ್ಲ 2+2 =5 ಹೇಗೆ ಅನ್ನೊದನ್ನು ಈ ಶೋ ಹೇಳುತ್ತದೆ. ಷೇರು ಮಾರುಕಟ್ಟೆಯ ಒಳ-ಹೊರಗು ಮತ್ತು ಗುಟ್ಟನ್ನು ತಿಳಿಸುವ ಶೋ ಇದು. ಷೇರು ಮಾರುಕಟ್ಟೆಯಲ್ಲಿ ಒಬ್ಬ ಸ್ಮಾರ್ಟ್ ಇನ್ವೆಸ್ಟರ್ ಯಾವ ರೀತಿ ಯೋಚನೆ ಮಾಡಬೇಕು? ವಾಣಿಜ್ಯ ವಿಭಾಗದ ಸುದ್ದಿ ಒಳಗಿನ ಸುದ್ದಿಯ ಗುಟ್ಟೇನು? ಎಲ್ಲಿ ಮತ್ತು ಯಾವಾಗ ಹೂಡಿಕೆ ಮಾಡಿದರೆ ಅತಿ ಹೆಚ್ಚಿನ ಲಾಭ ಗಳಿಸಬಹುದು? ಮಾರುಕಟ್ಟೆಯ ಹಾದಿ ಯಾವ ದಿಕ್ಕಿನಲ್ಲಿ ಇರಲಿದೆ? ಎಲ್ಲವನ್ನು ನಿಮ್ಮ ಮುಂದೆ ಕಟ್ಟಿಕೊಡುವ ಶೋ 2+2 = 5
-
ಷೇರ್ ಮಾರ್ಕೆಟ್ ನಲ್ಲಿ ದೀರ್ಘಾವಧಿ ಹೂಡಿಕೆ ಎಂದರೇನು? ನಿಮ್ಮ ಪೋರ್ಟ್ಫೋಲಿಯೊದಲ್ಲಿ ಎಷ್ಟು ಷೇರುಗಳು ಇರಬೇಕು? ಪ್ರಸ್ತುತ ಮಾರುಕಟ್ಟೆ ಸ್ಥಿತಿಯಲ್ಲಿ ಯಾವ ವಲಯವು ದೀರ್ಘಾವಧಿ ಹೂಡಿಕೆಗೆ ಬೆಸ್ಟ್ ತಾಣ? ಸ್ಟಾರ್ಟಪ್ ಮೇಲಿನ ಹೂಡಿಕೆ ಉತ್ತಮವೇ? ನಿಮ್ಮ ಎಲ್ಲ ಪ್ರಶ್ನೆಗಳಿಗೆ ಮನಿ9 ವಿಶೇಷ ಶೋದಲ್ಲಿ ಉತ್ತರವಿದೆ.
-
ಹೂಡಿಕೆ ಮಾಡುವುದೇ ಇರಲಿ... ಹಣಕಾಸು ವ್ಯವಹಾರದ ತಿಳಿವಳಿಕೆಯೇ ಇರಲಿ ಇಲ್ಲಿ ಎಲ್ಲ ಮಾಹಿತಿಗಳು ಲಭ್ಯವಿದೆ. ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದ ಸಂದರ್ಭ ಇಲ್ಲಿನ ಮಾಹಿತಿಗಳು ನಿಮಗೆ ಪರಿಹಾರದ ಉಪಾಯ ತಿಳಿಸಬಲ್ಲವು. ಇದಲ್ಲದೇ ಆನ್ ಲೈನ್ ವಂಚನೆಯಿಂದ ಪಾರಾಗುವುದು ಹೇಗೆ? ಆಧುನಿಕ ಜಗತ್ತಿನಲ್ಲಿ ಹಣಕಾಸಿನ ಭದ್ರತೆ ಹೇಗೆ? ಟೇಕ್ ಇಟ್ ಈಸಿ...
-
ಆನ್ ಲೈನ್ ಜಮಾನಾದಲ್ಲಿ ಹಣಕಾಸಿನ ವಿಚಾರ ಎಂದರೆ ಎಚ್ಚರಿಕೆ ಹೆಜ್ಜೆಯನ್ನೇ ಇಡಬೇಕು. ಹಣಕಾಸಿಗೆ ಸಂಬಂಧಿಸಿದ ಮಾಹಿತಿ ಕೊರತೆಯೂ ನಿಮ್ಮನ್ನು ಆತಂಕ ಮತ್ತು ಸಂಕಷ್ಟದಲ್ಲಿ ಸಿಲುಕುವಂತೆ ಮಾಡಬಹುದು. ಮನಿ 9 ರೆಡ್ ಅಲರ್ಟ್ ಮೂಲಕ ವಂಚಕರಿಂದ ಯಾವ ರೀತಿ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಸರಳ ಸೂತ್ರಗಳ ಮೂಲಕ ಹಣಕಾಸು ರಕ್ಷಣೆಯ ಉಪಾಯವನ್ನು ನಿಮಗೆ ರೆಡ್ ಅಲರ್ಟ್ ತಿಳಿಸುತ್ತದೆ.. ಸದಾ ಎಚ್ಚರವಾಗಿರಿ.
-
ಹೆಚ್ಚು ಹೆಚ್ಚು ಆದಾಯ ಗಳಿಕೆ ಹೇಗೆ ಮುಖ್ಯವಾಗುತ್ತದೆಯೋ ಅದರ ಜತೆಗೆ ಆದಾಯ ತೆರಿಗೆ ಇಲಾಖೆಗೆ ಸಲ್ಲಿಕೆ ಮಾಡುವ ದಾಖಲೆಗಳು ಅಱ್ಟೇ ಮುಖ್ಯವಾಗುತ್ತದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ, ಬದಲಾಗುವ ಕಾನೂನು ತಿಳಿವಳಿಕೆ, ಫಾರಂ ನಮೂನೆಗಳು ಸೇರಿದಂತೆ ಇನ್ ಕಂ ಟ್ಯಾಕ್ಸ್ ಶಿಕ್ಷಣ ನಿಮಗೆ ಇಲ್ಲಿ ಸಿಗುತ್ತದೆ.
-
ಆಧುನಿಕ ಜಗತ್ತಿನಲ್ಲಿ ಪ್ರತಿದಿನ ಖರ್ಚು ವೆಚ್ಚ ಸಾಮಾನ್ಯ. ಬಸ್ ಟಿಕೆಟ್ ಬುಕ್ ಮಾಡುವಾಗ, ಸಿನಿಮಾ ಟಿಕೆಟ್ ಖರೀದಿಸುವಾಗ, ಹೋಟೆಲ್ ರೆಸ್ಟೋರೆಂಟ್ ಗೆ ತೆರಳಿದಾಗ, ಆನ್ ಲೈನ್ ನಲ್ಲಿ ಫುಡ್ ಆರ್ಡರ್ ಮಾಡುವಾಗ ಹಾಗೂ ಇನ್ನಿತರ ಸಂದರ್ಭದಲ್ಲಿ ಸರಳ ವಿಧಾನಗಳ ಮೂಲಕ ಹೇಗೆ ಹಣ ಉಳಿತಾಯ ಮಾಡಬಹುದು ಎಂಬುದನ್ನು ಇಲ್ಲಿ ಹೇಳುತ್ತ ಹೋಗುತ್ತೇವೆ.
-
ಷೇರು ಮಾರುಕಟ್ಟೆ ಬಗ್ಗೆ ಗೊತ್ತು ಆದರೆ ಅದರ ವ್ಯಾಪ್ತಿ! ನಿಮ್ಮ ಸಹಾಯಕ್ಕೆ ಫಾರ್ಮುಲಾ ಗುರು ಬಂದಿದ್ದಾರೆ. ಸರಳ ಟಿಪ್ಸ್ ಗಳ ಮೂಲಕ ಷೇರ್ ಮಾರ್ಕೆಟ್ ಅರ್ಥ ಮಾಡಿಸುತ್ತಾರೆ. ಮ್ಯೂಚುವಲ್ ಫಂಡ್, ಕಮಾಡಿಟಿ ಮಾರ್ಕೆಟ್ ಬಗ್ಗೆ ತಿಳಿಸಿಕೊಡುತ್ತಾರೆ. ಬಂಡವಾಳ ಹೂಡಿಕೆ ಮತ್ತು ಸಮಗ್ರ ಉಳಿತಾಯದ ಬಗ್ಗೆ ತಿಳಿಸಿಕೊಡುತ್ತಾರೆ. ಮಾರುಕಟ್ಟೆಯ ಜಟಿಲತೆ ಅರ್ಥ ಮಾಡಿಕೊಳ್ಳಲು ಫಾರ್ಮುಲಾ ಗುರು ಸದಾ ನಿಮ್ಮೊಂದಿಗೆ ಇರ್ತಾರೆ.
-
ಆಧುನಿಕ ಜಗತ್ತಿನಲ್ಲಿ ಒಂದೊಂದು ರೂಪಾಯಿ ಖರ್ಚು ಮಾಡಬೇಕಿದ್ದರೂ ಸಾವಿರ ಸಾರಿ ಯೋಚನೆ ಮಾಡಬೇಕಾಗುತ್ತದೆ. ಮನಿ ಟೈಮ್ ನಿಮಗೆ ಉಳಿತಾಯದ ಹೊಸ ಕೋನಗಳನ್ನು ತಿಳಿಸಿಕೊಡುತ್ತದೆ. ಆನ್ ಲೈನ್ ಅಪ್ಲಿಕೇಶನ್ ಗಳು, ತಾಣಗಳು ಕೊಡಮಾಡುವ ವಿಶಿಷ್ಟ ಕೊಡುಗೆ ಮತ್ತು ಡಿಸ್ಕೌಂಟ್ ಗಳನ್ನು ಪಡೆದುಕೊಳ್ಳುವ ಪ್ಲಾನ್ ತಿಳಿಸುತ್ತೇವೆ.
-
ಹಣಕಾಸು ಹೂಡಿಕೆ ಮತ್ತು ಬಳಕೆಗೆ ಸಂಬಂಧಿಸಿ ಎಷ್ಟೊಂದು ಸಲಹೆಗಳನ್ನು ಪಡೆದುಕೊಂಡರೂ ಸಾಲದು. ಈ ದಿನದ ಆಫರ್ ಗಳು.. ಉಳಿತಾಯದ ಅವಕಾಶಗಳು.. ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿರುವ ಹೊಸ ಷೇರುಗಳು..ದಿನದ ವಹಿವಾಟು ಎಲ್ಲವನ್ನು ಮನಿ ಸೆಂಟ್ರಲ್ ನಿಮ್ಮ ಮುಂದೆ ತೆರೆದು ಇಡುತ್ತದೆ. ಎಲ್ಲ ವಿಚಾರಗಳನ್ನು ಸರಳವಾಗಿ ತಿಳಿಸಿಕೊಡುವ ಪ್ರಯತ್ನವೇ ಮನಿ ಸೆಂಟ್ರಲ್
-
ಪ್ರತಿದಿನದ ಹಣಕಾಸು ಆಗು ಹೋಗುಗಳು.. ಉಳಿತಾಯ ಮಾಡುವ ಟಿಪ್ಸ್.. ಕಡಿಮೆ ವೆಚ್ಚ ಮಾಡಿ ಅತ್ಯುತ್ತಮ ಆಯ್ಕೆ ಪಡೆದುಕೊಳ್ಳುವುದನ್ನು ಈ ಶೋ ನಿಮ್ಮ ಮುಂದೆ ಇಡುತ್ತದೆ. ಸಲಹೆಯೊಂದಿಗೆ ನಿಮಗೆ ಹಣಕಾಸು ಶಿಕ್ಷಣವನ್ನು ನೀಡುತ್ತದೆ. ಮಾರುಕಟ್ಟೆಯ ಏರಿಳಿತಗಳು, ಸದ್ಯದ ಹಣಕಾಸು ವ್ಯವಸ್ಥೆ ಬಗ್ಗೆಯೂ ನೀವಿಲ್ಲಿ ತಿಳಿದುಕೊಳ್ಳಬಹುದು.
-
ರಿಯಲ್ ಎಸ್ಟೇಟ್ ಉದ್ಯಮವೂ ಇಂದು ದೊಡ್ಡದಾಗಿ ಬೆಳೆದಿದೆ. ಆದರೆ ಅದಕ್ಕೆ ಸಂಬಂಧಿಸಿದ ನಿಖರ ಮತ್ತು ಸ್ಪಷ್ಟ ಸಲಹೆಗಳು ಸಿಗುವುದು ಅತಿ ಕಡಿಮೆ. ಮನೆ, ನಿವೇಶನ ಖರೀದಿ ವೇಳೆ ಹೇಗೆ ಹೇಗೆ ಜಾಗೃತವಾಗಿರಬೇಕು? ಖರೀದಿದಾರನಿಗೆ ಇರುವ ಹಕ್ಕುಗಳು ಯಾವುವು? ವಂಚನೆ ತಪ್ಪಿಸಿಕೊಳ್ಳಲು ಯಾವ ಸೂತ್ರ ಅನುಸರಿಸಬೇಕು? ಈ ರೀತಿಯ ಎಲ್ಲ ವಿಚಾರಗಳಿಗೆ ಉತ್ತರ ನೀಡುವ ಕಿಂಡಿ ಇಲ್ಲಿದೆ.