• EMI ಮಿಸ್ ಮಾಡೋ ತಪ್ಪು ಬೇಡ!

    ಪರ್ಸನಲ್ ಲೋನ್ ಮರುಪಾವತಿ 90 ದಿನಗಳನ್ನು ಮೀರಿದರೆ, ಬಾಕಿ ಮೊತ್ತವನ್ನು ಮರುಪಡೆಯಲು ಬ್ಯಾಂಕ್‌ಗಳು ನಿಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬಹುದು ಮತ್ತು ನಿಮ್ಮ ಮೇಲೆ ಕೇಸ್ ಹಾಕಬಹುದು.. ಆಗ ಕೋರ್ಟ್ ಸಾಲವನ್ನು ಮರುಪಾವತಿಸಲು ನಿಮಗೆ ಆದೇಶಿಸಬಹುದು ಅಥವಾ ಬಾಕಿ ಮೊತ್ತವನ್ನು ಮರುಪಡೆಯಲು ನಿಮ್ಮ ಆಸ್ತಿಯನ್ನು ವಶಪಡಿಸಿಕೊಳ್ಳಲು ಮತ್ತು ಮಾರಾಟ ಮಾಡಲು ಆದೇಶಿಸಬಹುದು.

  • ಸಿಕ್ಕೆಬಿಡ್ತು ಅಂತ ಸಾಲ ತಗೋಳೋದಲ್ಲ!

    ಹೆಚ್ಚಿನ ಬಡ್ಡಿದರದ ಹೊರತಾಗಿ, ಸಂಸ್ಕರಣಾ ಶುಲ್ಕಗಳು ಮತ್ತು ಪೂರ್ವ-ಪಾವತಿ ಶುಲ್ಕಗಳಂತಹ ವಿವಿಧ ಹಿಡನ್ ಚಾರ್ಜಸ್ ಸಹ ಇರುತ್ತದೆ. ಬೇರೆ ಬೇರೆ ಬ್ಯಾಂಕ್ ಗಳು ಮತ್ತು ಆನ್‌ಲೈನ್ ಲೋನ್ ಫ್ಲಾಟ್​ ಫಾರ್ಮ್ ಗಳು ಬೇರೆ ಬೇರೆ ಸಂಸ್ಕರಣಾ ಶುಲ್ಕ ಹೊಂದಿವೆ. ಈ ಶುಲ್ಕ ಮತ್ತು ಫೀ ಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಸಾಲದ ವಿಚಾರದಲ್ಲಿ ನೀವೊಂದು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

  • ಸೈಬರ್ ವಂಚಕರ ಜಾಲದಿಂದ ಮುಕ್ತಿ!

    ಸೈಬರ್ ಅಪರಾಧಗಳನ್ನ ಸಮರ್ಥವಾಗಿ ನಿಗ್ರಹಿಸುವುದಕ್ಕೆ ಚಕ್ಷು ಅನಾವರಣ ಮಾಡಲಾಗಿದೆ. ಪ್ರಸ್ತುತ, ಈ ಸೌಲಭ್ಯ ಸಾರಥಿ ಪೋರ್ಟಲ್ ನಲ್ಲಿ ಲಭ್ಯವಿದೆ. ಮುಂದುವರಿದು, ಚಕ್ಷು, ಆ್ಯಪ್ ಆಗಿ‌ ಕೂಡ ಬಿಡುಗಡೆಯಾಗಲಿದೆ. ಹಾಗಿದ್ದರೆ ಇಲ್ಲಿ ನೀವು ಯಾವ ರೀತಿ ದೂರು ನೀಡಬಹುದು? ಎನ್ನುವುದನ್ನು ತಿಳಿದುಕೊಳ್ಳೋಣ

  • ಫಿನ್‌ಫ್ಲುಯೆನ್ಸರ್​ಗಳಿಗೆ ಸೆಬಿ ಮೂಗುದಾರ!

    ಇಂತಹ ವಂಚನೆ ತಡೆಯಲು ಮಾರುಕಟ್ಟೆ ನಿಯಂತ್ರಕ ಸೆಬಿ ಕಾಲಕಾಲಕ್ಕೆ ಕಠಿಣ ಕ್ರಮ ತೆಗೆದುಕೊಂಡೇ ಬರುತ್ತಿದೆ. ಈ ಕ್ರಮಗಳಲ್ಲಿ ಒಂದಾಗಿ ಸೆಬಿ ಬಿಲ್ಡಿಂಗ್ ಬ್ಲಾಕ್ ಗಳನ್ನು ಪರಿಚಯಿಸುತ್ತಿದೆ. ಹಾಗಿದ್ದರೆ ಈ 'ಬಿಲ್ಡಿಂಗ್ ಬ್ಲಾಕ್‌ಗಳು ಯಾವುವು? ಅವು ಹೇಗೆ ಕೆಲಸ ಮಾಡುತ್ತವೆ? ಫಿನ್‌ಫ್ಲುಯೆನ್ಸರ್‌ ಗಳ ನಿಯಂತ್ರಣದಲ್ಲಿ ಇವುಗಳ ಪಾತ್ರವೇನು ಅನ್ನೋದನ್ನು ನೋಡೋಣ.

  • PF, ನಿಮ್ಮ ಕಂಪನಿ ಮೋಸ ಮಾಡ್ತಿದ್ಯಾ?

    ನಿಮ್ಮ ಸಂಬಳದಿಂದ ಪಿಎಫ್ ಹಣವನ್ನು ಕಟ್ ಮಾಡಲಾಗಿದ್ದರೂ, ಪಿಎಫ್ ಅಕೌಂಟ್‌ಗೆ ಡೆಪಾಸಿಟ್ ಮಾಡಿಲ್ಲವೇ? ಹಾಗಾದರೆ, ನೀವು ಏನು ಮಾಡಬೇಕು? ಈ ಸಮಸ್ಯೆಗೆ ಪರಿಹಾರ ಹುಡುಕೋದು ಹೇಗೆ?

  • ನಿಮ್ಮನ್ನು ದಿವಾಳಿ ಮಾಡುವ ಆ್ಯಪ್ಸ್!

    ಸೈಬರ್‌ ಸ್ಕ್ಯಾಮರ್‌ಗಳು ಮೊದಲು ಜನರಿಗೆ ಆಸೆ ತೋರಿಸಲು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರಂಗಳಲ್ಲಿ ಜಾಹೀರಾತುಗಳನ್ನು ಬಳಸುತ್ತವೆ. ನಂತರ, ಈ ಜಾಹೀರಾತನ್ನು ಕ್ಲಿಕ್ ಮಾಡಿದವರಿಗೆ ಮೆಸೇಜ್‌ ಕಳುಹಿಸುತ್ತವೆ. ವಾಟ್ಸಾಪ್ ಅಥವಾ ಟೆಲಿಗ್ರಾಮ್ ಗ್ರೂಪ್‌ಗೆ ಜಾಯಿನ್ ಆಗಿ ಅಂತ ನಿಮ್ಮನ್ನು ಆಹ್ವಾನಿಸುತ್ತವೆ.

  • ಸೈಬರ್ ವಂಚಕರ ಜಾಲದಲ್ಲಿ ಭಾರತೀಯರು!

    ಬಲವಂತವಾಗಿ ಯಾರನ್ನಾದರೂ ತಮ್ಮ ವಶದಲ್ಲಿ ಇರುವಂತೆ ನೋಡಿಕೊಂಡು ಅವರ ಬಳಿ ಸೈಬರ್ ವಂಚನೆ ಮಾಡಲು ಪ್ರೇರೇಪಿಸುವುದೇ ಸೈಬರ್ ಸ್ಲೇವರಿ. ಸೈಬರ್ ಗುಲಾಮಗಿರಿಯ ಹಲವಾರು ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬರುತ್ತಲೇ ಇವೆ.

  • ಸೈಬರ್ ಚೋರರ 9 ಕಳ್ಳ ದಾರಿ.. ಅಬ್ಬಬ್ಬಾ!

    ಇಂಥ ಫ್ರಾಡ್ ಕರೆ ಮಾಡಿದವರು ನಿಮ್ಮ ವೈಯಕ್ತಿಕ ಮಾಹಿತಿ ಕೇಳುತ್ತಾರೆ. ಬ್ಯಾಂಕ್ ಖಾತೆ ವಿವರ, ಡೆಬಿಟ್ ಕಾರ್ಡ್ ವಿವರ, ಪ್ಯಾನ್ ಕಾರ್ಡ್ ವಿವರ, ಕಾರ್ಡ್‌ನ ಸಿವಿವಿ ಸಂಖ್ಯೆ... ಹೀಗೆ ಏನನ್ನಾದರೂ ಕೇಳಿದರೆ ತಕ್ಷಣ ಎಚ್ಚೆತ್ತುಕೊಳ್ಳಿ.

  • ನೀವು ಡಾರ್ಕ್​ ಪ್ಯಾಟರ್ನ್​ಗೆ ಬಲಿಯಾದ್ರಾ?

    ಗ್ರಾಹಕರ ಜೇಬಿಗೆ ಕನ್ನ ಹಾಕುವುದೇ ಈ ಡಾರ್ಕ್ ಪ್ಯಾಟರ್ನ್‌ನ ಮೂಲ ಉದ್ದೇಶ. ಖುಷಿಯ ಸಂಗತಿಯೇನೆಂದರೆ, ಸರ್ಕಾರಕ್ಕೆ ಈ ತಂತ್ರದ ಅರಿವಿದೆ.

  • ನಿಮ್ಮ ಬ್ಯಾಂಕ್​ ಅಕೌಂಟ್ ಸುರಕ್ಷಿತವೇ?

    ಅಕೌಂಟ್ ಟೇಕ್‌ಓವರ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದು ಅಂಕಿ ಸಂಖ್ಯೆಗಳಿಂದ ನಮಗೆ ತಿಳಿಯುತ್ತದೆ. ಗ್ಲೋಬಲ್ ಡಿಜಿಟಲ್ ಮೋಸದ ಪತ್ತೆ ಮಾಡುವ ಕಂಪನಿ ಬಯೋಕ್ಯಾಚ್‌ ಪ್ರಕಟಿಸಿರುವ ಒಂದು ವರದಿಯ ಪ್ರಕಾರ, ಎಲ್ಲ ಬ್ಯಾಂಕಿಂಗ್ ಮೋಸದ ಪ್ರಕರಣಗಳಲ್ಲಿ ಅರ್ಧಕ್ಕೂ ಹೆಚ್ಚು ಪ್ರಕರಣಗಳು ಅಕೌಂಟ್ ಟೇಕೋವರ್‌ಗಳದ್ದೇ ಆಗಿದೆ. ಒಟ್ಟು ಮೋಸದ ಪ್ರಕರಣಗಳಲ್ಲಿ ಥರ್ಡ್ ಪಾರ್ಟಿ ಅಕೌಂಟ್ ಟೇಕೋವರ್‌ ಪ್ರಕರಣಗಳು ಸುಮಾರು 55% ಆಗಿವೆ.