` sebi will investigate the claims of finfluencers like this | ಫಿನ್‌ಫ್ಲುಯೆನ್ಸರ್​ಗಳ ಫಾಲೋ ಮಾಡುವ ಮುನ್ನ! | Money9 Kannada

ಫಿನ್‌ಫ್ಲುಯೆನ್ಸರ್​ಗಳ ಫಾಲೋ ಮಾಡುವ ಮುನ್ನ!

ಇಂತಹ ವಂಚನೆ ತಡೆಯಲು ಮಾರುಕಟ್ಟೆ ನಿಯಂತ್ರಕ ಸೆಬಿ ಕಾಲಕಾಲಕ್ಕೆ ಕಠಿಣ ಕ್ರಮ ತೆಗೆದುಕೊಂಡೇ ಬರುತ್ತಿದೆ. ಈ ಕ್ರಮಗಳಲ್ಲಿ ಒಂದಾಗಿ ಸೆಬಿ ಬಿಲ್ಡಿಂಗ್ ಬ್ಲಾಕ್ ಗಳನ್ನು ಪರಿಚಯಿಸುತ್ತಿದೆ. ಹಾಗಿದ್ದರೆ ಈ 'ಬಿಲ್ಡಿಂಗ್ ಬ್ಲಾಕ್‌ಗಳು ಯಾವುವು? ಅವು ಹೇಗೆ ಕೆಲಸ ಮಾಡುತ್ತವೆ? ಫಿನ್‌ಫ್ಲುಯೆನ್ಸರ್‌ ಗಳ ನಿಯಂತ್ರಣದಲ್ಲಿ ಇವುಗಳ ಪಾತ್ರವೇನು ಅನ್ನೋದನ್ನು ನೋಡೋಣ.

 

 

 

 

 

ಫಿನ್‌ಫ್ಲುಯೆನ್ಸರ್ ಒಬ್ಬರನ್ನು ಸೌರಭ್ ಬಹಳ ಕಾಲದಿಂದ ಫಾಲೋ ಮಾಡುತ್ತ ಬಂದಿದ್ದಾರೆ. ಆ ಫಿನ್‌ಫ್ಲುಯೆನ್ಸರ್ ಚಾನೆಲ್ ಸೌರಭ್ ಸಬ್ ಸ್ಕ್ರೈಬ್ ಮಾಡಿದ್ದಾರೆ. ಆತನ ಟೆಲಿಗ್ರಾಂ ಚಾನೆಲ್‌ಗೆ ಸೌರಭ್ ಪಾಸ್ ಸಹ ಪಡೆದುಕೊಂಡಿದ್ದಾರೆ. ಆ ಫಿನ್‌ಫ್ಲುಯೆನ್ಸರ್‌ನ ಸಲಹೆಯ ಮೇರೆಗೆ ಸೌರಭ್ ಸಾಕಷ್ಟು ಮೊತ್ತ ಹೂಡಿಕೆ ಮಾಡಿದ್ದಾರೆ. ಆದರೆ ಯಾವುದೇ ಲಾಭ ಸಿಕ್ಕಿಲ್ಲ. ಆತನ ಹೂಡಿಕೆ ನಷ್ಟದಲ್ಲಿಯೇ ಇದೆ. ಈ ರೀತಿ ಸೌರಭ್ ಒಬ್ಬರೇ ಫಿನ್‌ಫ್ಲುಯೆನ್ಸರ್‌ನ ಸಲಹೆಯ ಮೇರೆಗೆ ಹಣ ಹೂಡಿ ಕಳೆದುಕೊಂಡಿಲ್ಲ. ಜನರು ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಫಿನ್‌ಫ್ಲುಯೆನ್ಸರ್ ಫಾಲೋ ಮಾಡುತ್ತಿದ್ದಾರೆ. ಅವರ ಮಾತುಗಳನ್ನು ಕುರುಡಾಗಿ ನಂಬುತ್ತಿದ್ದಾರೆ. ಹಣ ಕಳೆದುಕೊಳ್ಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ಫಿನ್‌ಫ್ಲುಯೆನ್ಸರ್‌ಗಳು ಒಂದರ್ಥದಲ್ಲಿ ಹೂಡಿಕೆ ಮಾಡುವ ಜನರನ್ನು ಬಲೆಗೆ ಬೀಳಿಸುವ ಮತ್ತು ಅವರನ್ನು ಮೋಸ ಮಾಡುವಂತಹ ಸಲಹೆಗಳನ್ನೇ ನೀಡುತ್ತಿದ್ದಾರೆ. ತಾವು ಲಾಭ ಮಾಡಿದ್ದೇವೆ ಎಂದು ನಂಬಿಸಿ ನಕಲಿ ಸ್ಕ್ರೀನ್‌ಶಾಟ್‌ಗಳನ್ನು ಬಳಸಿಕೊಂಡು ಜನರನ್ನು ವಂಚಿಸುತ್ತಾರೆ. ತಾವು ಹೇಳುವ ಪೇಯ್ಡ್ ಕೋರ್ಸ್ ಮಾಡಿ ಲಾಭ ಗಳಿಸುವಂತೆ ಹಾಗೂ ತಮ್ಮ ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗುವಂತೆ ಜನರನ್ನು ಮರಳು ಮಾಡುತ್ತಾರೆ. ಇನ್ನೊಂದು ಕಡೆ ಟ್ರೇಡಿಂಗ್ ಆ್ಯಪ್ ಗಳು ಸಹ ಈ ಫಿನ್‌ಫ್ಲುಯೆನ್ಸರ್‌ಗಳ ಮೋಸದ ಜಾಲಕ್ಕೆ ಒಂದು ರೀತಿಯಲ್ಲಿ ಸಪೋರ್ಟ್ ಮಾಡುತ್ತಿವೆ. ಕೆಲವೊಂದು ಲಿಂಕ್ ಗಳನ್ನು ಹೈಲೈಟ್ ಮಾಡುವುದಕ್ಕೆ ಈ ಆ್ಯಪ್ ಗಳು ಕಮಿಷನ್‌ ನೀಡುತ್ತವೆ.

ಇಂತಹ ವಂಚನೆ ತಡೆಯಲು ಮಾರುಕಟ್ಟೆ ನಿಯಂತ್ರಕ ಸೆಬಿ ಕಾಲಕಾಲಕ್ಕೆ ಕಠಿಣ ಕ್ರಮ ತೆಗೆದುಕೊಂಡೇ ಬರುತ್ತಿದೆ. ಈ ಕ್ರಮಗಳಲ್ಲಿ ಒಂದಾಗಿ ಸೆಬಿ ಬಿಲ್ಡಿಂಗ್ ಬ್ಲಾಕ್ ಗಳನ್ನು ಪರಿಚಯಿಸುತ್ತಿದೆ. ಹಾಗಿದ್ದರೆ ಈ ‘ಬಿಲ್ಡಿಂಗ್ ಬ್ಲಾಕ್‌ಗಳು ಯಾವುವು? ಅವು ಹೇಗೆ ಕೆಲಸ ಮಾಡುತ್ತವೆ? ಫಿನ್‌ಫ್ಲುಯೆನ್ಸರ್‌ ಗಳ ನಿಯಂತ್ರಣದಲ್ಲಿ ಇವುಗಳ ಪಾತ್ರವೇನು ಅನ್ನೋದನ್ನು ನೋಡೋಣ.

ಈ ಫಿನ್‌ಫ್ಲುಯೆನ್ಸರ್‌ ಗಳು ನೀಡುವ ತಪ್ಪು ಮಾಹಿತಿ ಮತ್ತು ಟಿಪ್ಸ್ ಗಳನ್ನು ನಿಯಂತ್ರಿಸುವುದಕ್ಕೆ ಸೆಬಿ ಆದ್ಯತೆ ನೀಡಿಕೊಂಡು ಬಂದಿದೆ. ಟ್ರೆಡಿಶನಲ್ ಮೆಥೆಡ್ ಇವರನ್ನು ಕಂಟ್ರೋಲ್ ಮಾಡಲು ಸಾಕಾಗಲ್ಲ ಅನ್ನೋದನ್ನು ಸೆಬಿ ಬಲವಾಗಿ ನಂಬಿದೆ. ಹೊಸ ನೀತಿ ನಿಯಮಾವಳಿಗಳನ್ನು ರಚನೆ ಮಾಡುವುದಕ್ಕೆ ಮುನ್ನ ಸೆಬಿ ಕೆಲವೊಂದು ಬಿಲ್ಲಿಂಗ್ ಬ್ಲಾಕ್ ಗಳನ್ನು ಎಸ್ಟಾಬ್ಲಿಶ್ ಮಾಡುವುದಕ್ಕೆ ಮುಂದಾಗಿದೆ. ಫಿನ್‌ಫ್ಲುಯೆನ್ಸರ್‌ಗಳ ವಿಶ್ವಾಸಾರ್ಹತೆ ಪರಿಶೀಲಿಸುದನ್ನೇ ಸರಳವಾಗಿ ಬಿಲ್ಲಿಂಗ್ ಬ್ಲಾಕ್ ಅಂತಾ ಹೇಳಬಹುದು. ಈ ಬಿಲ್ಲಿಂಗ್ ಬ್ಲಾಕ್ ಅಡಿಯಲ್ಲೇ ಸೆಬಿ, ಫಿನ್‌ಫ್ಲುಯೆನ್ಸರ್‌ಗಳು ಪಡೆದುಕೊಂಡ ಹೆಚ್ಚಿನ ಆದಾಯದ ಮೂಲಗಳನ್ನು ಪರಿಶೀಲಿಸಲು ಸಂಸ್ಥೆ ಅಥವಾ ಏಜೆನ್ಸಿಯನ್ನು ರಚಿಸುವ ಯೋಜನೆ ಇಟ್ಟುಕೊಂಡಿದೆ. ಏಜೆನ್ಸಿ ಸ್ಥಾಪಿಸಿದ ನಂತರ, ಸೆಬಿ ಫಿನ್‌ಫ್ಲುಯೆನ್ಸರ್‌ ಅಂದ್ರೆ ಯಾರು? ಅನ್ನೋದನ್ನು ನಿರ್ಧರಿಸುತ್ತದೆ. ರೆಗ್ಯೂಲೇಟೇಡ್ ಬಾಡಿಯೇ ಈ ಕೆಲಸವನ್ನು ಮಾಡಬೇಕಿದೆ.

ಆಗಸ್ಟ್ 2023 ರ ವೇಳೆ ಸೆಬಿ ಬಿಡುಗಡೆ ಮಾಡಿರುವ ಕನ್ಸಲ್ ಸ್ಟೇಶನ್ ಪೇಪರ್ ಒಂದಿಷ್ಟು ಅಂಶಗಳನ್ನು ತೆರದಿಟ್ಟಿದೆ. ಫಿನ್‌ಫ್ಲುಯೆನ್ಸರ್‌ ಗಳ ವ್ಯಾಲಿಡೇಶನ್ ರಿಟರ್ನ್ಸ್ ಮತ್ತು ರಿಸ್ಕ್ ಗಳನ್ನು ಆಧರಿಸಿರುತ್ತದೆ. ಇಂಡಸ್ಟ್ರಿ ಫೋರಂ ಈ ಮಾನದಂಡಗಳ ನಿರ್ಧಾರ ಮಾಡುತ್ತದೆ. ಫಿನ್‌ಫ್ಲುಯೆನ್ಸರ್‌ ಗಳೊಂದಿಗೆ ಕೋಲಾಬೋರೇಟ್ ಆಗಲು ಅಥವಾ ಹೊಂದಾಣಿಕೆಯಿಂದಿರಲು ಸೆಬಿಯ ನಿಯಂತ್ರಿತ ಘಟಕಗಳು ಯಾವತ್ತೂ ಬಯಸೋದಿಲ್ಲ. ಹಾಗಾಗಿಯೇ ಕಳೆದ ವರ್ಷ ಇಂಥ ಕೋಲಾಬರೇಶನ್ ಪ್ರಸ್ತಾವಗಳನ್ನು ಸೆಬಿ ತಿರಸ್ಕರಿಸಿದೆ. ಇದೆಲ್ಲದರ ನಡುವೆಯೂ ಯಾರ ನಿಯಂತ್ರಣಕ್ಕೂ ಒಳಪಡದ ಫಿನ್‌ಫ್ಲುಯೆನ್ಸರ್‌ಗಳು ತಪ್ಪು ಮಾಹಿತಿ ನೀಡುತ್ತಲೇ ಇನ್ನೂ ಲಕ್ಷಾಂತರ ರೂಪಾಯಿ ಗಳಿಸಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಮಾರುಕಟ್ಟೆ ನಿಯಂತ್ರಕ ಸೆಬಿ ಪಂಪ್ ಆ್ಯಂಡ್ ಡಂಪ್ ಸ್ಕೀಮ್ ಗಳ ವಿರುದ್ಧ ಕ್ರಮ ಕೈಗೊಂಡಿತ್ತು. ಯೂಟ್ಯೂಬ್ ವೀಡಿಯೊಗಳ ಮೂಲಕ ಸಲಹೆ ನೀಡುತ್ತ ಷೇರುಗಳನ್ನು ಖರೀದಿಸಲು ಫಿನ್‌ಫ್ಲುಯೆನ್ಸರ್‌ಗಳು ಸಲಹೆ ಕೊಟ್ಟಿದ್ದರು. ಇದು ಸಾಕಾಗೋದಿಲ್ಲ ಅಂತ ಹಲವಾರು ಫಿನ್‌ಫ್ಲುಯೆನ್ಸರ್‌ಗಳಿಗೆ ಕಠಿಣ ಎಚ್ಚರಿಕೆ ನೀಡಲಾಯಿತು. ಈಗ, ‘ಬಿಲ್ಡಿಂಗ್ ಬ್ಲಾಕ್ಸ್’ ಮೂಲಕ ತಪ್ಪುದಾರಿಗೆಳೆಯುವ ಫಿನ್‌ಫ್ಲುಯೆನ್ಸರ್‌ಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಹಾದಿ ಸ್ಪಷ್ಟವಾಗುತ್ತದೆ.

ನೀವು ಸಹ ಯಾವುದೇ ಫಿನ್‌ಫ್ಲುಯೆನ್ಸರ್‌ ಗಳಿಂದ ಆಮಿಷಕ್ಕೆ ಒಳಗಾಗಬಾರದು. ಅವರ ಮಾತುಗಳನ್ನು ಆಲಿಸಿ, ಅವರ ಸಲಹೆ ಅರ್ಥಮಾಡಿಕೊಳ್ಳಿ, ಆದರೆ ಹೂಡಿಕೆ ಮಾಡುವ ಮೊದಲು ನಿಮ್ಮದೇ ಆದ ರಿಸರ್ಚ್ ಮಾಡಿ. SEBI ನೋಂದಾಯಿತ ಹಲವಾರು ಘಟಕಗಳಿವೆ ಅದರ YouTube ಚಾನಲ್‌ಗಳನ್ನು ಸಹ ನೀವು ವೀಕ್ಷಿಸಬಹುದು. ಸೆಬಿ ನೋಂದಾಯಿತ ಸಲಹೆಗಾರರ ಮಾತುಗಳನ್ನು ಆಲಿಸುವ ಮೂಲಕ ನಿಮ್ಮ ತಿಳಿವಳಿಕೆ ಹೆಚ್ಚಿಸಿಕೊಳ್ಳಿ.

Published: April 18, 2024, 13:03 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ