team money9

Team Money9

https://images.money9.com/kannada/wp-content/uploads/2023/05/resize-16835265471291094807logo1.png
  • ಮ್ಯೂಚುವಲ್ ಫಂಡ್  ಹೂಡಿಕೆ ಮಾಡುವುದಕ್ಕೆ ಮುನ್ನ ಇದು ಗೊತ್ತಿರಲಿ!

    ನಿಮಗೆ ಯಾವ ಮ್ಯೂಚುವಲ್ ಫಂಡ್ ಸೂಕ್ತ?

    ನೀವು ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಆಯ್ಕೆ ಮಾಡಿಕೊಂಡಾಗ, ನಿಮಗೆ ಹೂಡಿಕೆಗೆ ಎರಡು ಆಯ್ಕೆಗಳಿವೆ. ಡೈರೆಕ್ಟ್ ಪ್ಲಾನ್ ಮತ್ತು ರೆಗ್ಯುಲರ್ ಪ್ಲಾನ್. ಎರಡೂ ಸ್ಕೀಂಗಳೂ ಒಂದೇ, ಆದರೆ ನೀವು ಎರಡು ವಿಧಗಳಲ್ಲಿ ಹೂಡಿಕೆ ಮಾಡಬಹುದಾ? ಹಾಗಿದ್ದರೆ ಈ ಎರಡರ ನಡುವಿನ ವ್ಯತ್ಯಾಸ ಏನು? ನಿಮಗೆ ಯಾವುದು ಸೂಕ್ತ? ಈ ಬಗ್ಗೆ ತಿಳಿದುಕೊಳ್ಳೋಣ.

  • ಅದಾನಿ ಕಂಪನಿಗಳಿಗೆ ಶೋಕಾಸ್ ನೋಟಿಸ್... ಉತ್ತರ ಕೊಡಲೇಬೇಕು!

    ಅದಾನಿ ಕಂಪನಿಗಳಿಗೆ ಬಿಗ್ ಶಾಕ್!

    ಅದಾನಿ ಎಂಟರ್ಪ್ರೈಸಸ್, ಅದಾನಿ ಪೋರ್ಟ್ಸ್ ಎಸ್​ಇಝಡ್, ಅದಾನಿ ಪವರ್, ಅದಾನಿ ಎನರ್ಜಿ ಸಲ್ಯೂಶನ್ಸ್, ಅದಾನಿ ವಿಲ್ಮರ್, ಅದಾನಿ ಟೋಟಲ್ ಗ್ಯಾಸ್ ಸಂಸ್ಥೆಗಳಿಗೆ ಸೆಬಿಯಿಂದ ನೋಟೀಸ್ ಬಂದಿದೆ. ಅದಾನಿ ಎಂಟರ್​ಪ್ರೈಸಸ್​ಗೆ ಎರಡು ನೋಟೀಸ್ ಸಿಕ್ಕಿವೆ.

  • ಅಲ್ಟ್ರಾ ಪ್ರೀಮಿಯಂ ಕ್ರೆಡಿಟ್​ ಕಾರ್ಡ್​ಗಳು ಯಾರಿಗೆ ಸೂಕ್ತ?

    ನಿಜಕ್ಕೂ ಈ ಕಾರ್ಡ್ ನಿಮಗೆ ಬೇಕೆ?

    ದೇಶದಲ್ಲಿ ಕ್ರೆಡಿಟ್ ಕಾರ್ಡ್‌ಗಳ ಬಳಕೆ ವ್ಯಾಪಕವಾಗಿ ಹೆಚ್ಚುತ್ತಿದೆ. ಎಕ್ಸ್ ಪೆನ್ಸಿವ್ ಕ್ರೆಡಿಟ್ ಕಾರ್ಡ್‌ ವಿಷಯ ನಿಮ್ಮ ಕಿವಿಗೆ ಬಿದ್ದಾಗ, ಅದಕ್ಕೆ ಜಾಯ್ನಿಂಗ್ ಫೀ ಅಥವಾ ವಾರ್ಷಿಕ 10-20 ಸಾವಿರ ಫೀ ಇರುತ್ತದೆ ಎಂದು ನೀವು ಅಂದುಕೊಂಡಿರುತ್ತೀರಿ. ಆದರೆ, ಅಷ್ಟೇ ಅಲ್ಲ, ಇನ್ನೂ ಎಕ್ಸ್‌ಪೆನ್ಸಿವ್ ಕ್ರೆಡಿಟ್ ಕಾರ್ಡ್‌ಗಳು ಇದರಲ್ಲಿ ಇರುತ್ತವೆ. ಇದನ್ನು ಅಲ್ಟ್ರಾ ಪ್ರೀಮಿಯಂ ಕ್ರೆಡಿಟ್ ಕಾರ್ಡ್‌ಗಳು ಎಂದು ಕರೆಯಲಾಗುತ್ತದೆ. ಇಂತಹ ಪ್ಲಾಸ್ಟಿಕ್ ಮನಿಯ ಜಾಯ್ನಿಂಗ್ ಮತ್ತು ಆನ್ಯುಯಲ್ ಫೀ 40 ರಿಂದ 60 ಸಾವಿರ ರೂ. ಆಗುತ್ತದೆ. ಲಕ್ಷಗಟ್ಟಲೆ ಫೀ ಇರುವ ಕಾರ್ಡ್‌ಗಳೂ ಇವೆ. ಹೀಗಾಗಿ, ಅಲ್ಟ್ರಾ ಪ್ರೀಮಿಯಂ ಕ್ರೆಡಿಟ್ ಕಾರ್ಡ್‌ಗಳು ಎಂದರೇನು? ಇದು ಯಾರಿಗೆ ಸೂಕ್ತ? ಇದರ ಅನುಕೂಲ ಮತ್ತು ಅನಾನುಕೂಲಗಳು ಯಾವುವು? ಬನ್ನಿ ತಿಳಿದುಕೊಳ್ಳೋಣ.

  • ಕೃಷಿ ಸೆಕ್ಟರ್​ಗೆ ಪೂರಕ ಕಂಪನಿಗಳು ಕೈತುಂಬಾ ಲಾಭ ತರ್ತವಾ?

    ಮ್ಯಾಜಿಕ್ ಮಾಡ್ತಿವೆ ಟ್ರ್ಯಾಕ್ಟರ್ ಕಂಪನಿಗಳು.!

    ಭಾರತದಲ್ಲಿ ಆರ್ಥಿಕ ಸುಧಾರಣೆಯ ಪರ್ವ ಆರಂಭವಾದಾಗಿನಿಂದಲೂ, ಕೃಷಿ ವಲಯದಿಂದ ದೇಶದ ಜಿಡಿಪಿಗೆ ನೀಡುತ್ತಿರುವ ಕೊಡುಗೆ ಪ್ರಮಾಣದಲ್ಲಿ ಕಡಿಮೆಯಾಗುತ್ತಲೇ ಇದೆ. 1990-91 ರಲ್ಲಿ 35 ಪರ್ಸೆಂಟ್ ಇತ್ತು. ಈಗ ಇದು 2022-23 ರ ಹಣಕಾಸು ವರ್ಷದಲ್ಲಿ ಕೇವಲ 15 ಪರ್ಸೆಂಟ್‌ಗೆ ಕುಸಿದಿದೆ. ಅಂದರೆ, 32 ವರ್ಷಗಳಲ್ಲಿ ದೇಶದ ಕೃಷಿ ವಲಯದಿಂದ ದೇಶದ ಆರ್ಥಿಕತೆಗೆ ಬರುತ್ತಿರುವ ಕೊಡುಗೆಯ ಪ್ರಮಾಣ 20 ಪರ್ಸೆಂಟ್ ಇಳಿಕೆಯಾಗಿದೆ. ಆದರೆ, ಇದಕ್ಕೆ ಮುಖ್ಯ ಕಾರಣ, ಕೃಷಿ ವಲಯದ ಕುಸಿತವಲ್ಲ. ಬದಲಿಗೆ, ಔದ್ಯಮಿಕ ಮತ್ತು ಸರ್ವೀಸ್‌ ಸೆಕ್ಟರ್‌ನ ಬೆಳವಣಿಗೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.

  • ಗೊತ್ತಾಗದಂತೆ ನಿಮ್ಮಿಂದ ಹೆಚ್ಚಿನ ಫೀ ವಸೂಲಿ ಮಾಡುವ  ಬ್ಯಾಂಕ್!

    ನೀವು ಡಾರ್ಕ್​ ಪ್ಯಾಟರ್ನ್​ಗೆ ಬಲಿಯಾದ್ರಾ?

    ಮೋಹಿತ್‌ಗೆ ಪರ್ಸನಲ್ ಲೋನ್ ಅಷ್ಟು ಬೇಗ ಅಪ್ರೂವ್ ಆಗಿದ್ದು ನೋಡಿ ಭಾರಿ ಖುಷಿಯಾಗಿದೆ. ಇಡೀ ಪ್ರೋಸೆಸ್ ಆನ್‌ಲೈನ್‌ನಲ್ಲಿ ಮುಗಿದುಹೋಗಿದೆ. ಬ್ಯಾಂಕ್‌ ಶಾಖೆಗೆ ಹೋಗುವ ಅಗತ್ಯವೇ ಇರಲಿಲ್ಲ. ಆದರೆ, ಮೋಹಿತ್ ಸಾಲವನ್ನ ಫೋರ್‌ಕ್ಲೋಸ್ ಮಾಡುವುದಕ್ಕೆ ಹೋದಾಗ ಬ್ಯಾಂಕ್ ನಿರಾಕರಿಸಿತು. ಇದನ್ನು ಆನ್‌ಲೈನ್‌ನಲ್ಲಿ ಮಾಡೋದಕ್ಕಾಗಲ್ಲ. ಬ್ಯಾಂಕ್‌ಗೆ ಹೋಗಿ ಲೋನ್ ಕ್ಲೋಸ್ ಮಾಡಿಕೊಳ್ಳಬೇಕು ಎಂದಿತು. ಇದಕ್ಕೆ ಕಾರಣ ಏನು ಎಂದು ಮೋಹಿತ್‌ಗೆ ತಿಳಿಯಲಿಲ್ಲ. ಸಾಲವನ್ನು ಆನ್‌ಲೈನ್‌ನಲ್ಲಿ ಕೊಡಬಹುದು ಎಂದಾದರೆ, ಮರುಪಾವತಿಗೆ ಯಾಕೆ ನಾನು ಬ್ಯಾಂಕ್‌ಗೆ ಹೋಗಬೇಕು? ಎನ್ನುವುದು ಮೋಹಿತ್​ ಪ್ರಶ್ನೆ.

  • ಆರೋಗ್ಯ ವಿಮೆ ಮಹತ್ವ ಜನರಿಗೆ ಇನ್ನೂ ಗೊತ್ತಾಗಿಲ್ಲ!

    ನಿಮ್ಮ ಆರೋಗ್ಯ ವಿಮೆ ಹೇಗಿರಬೇಕು?

    ಧ್ರುವ ಆನ್​ಲೈನ್ ನಲ್ಲಿ ಆರೋಗ್ಯ ವಿಮೆ ಪಾಲಿಸಿ ನೋಡುತ್ತಿದ್ದಾರೆ. ಆಗ ಅವರ ಫ್ರೆಂಡ್ ಅಭಿಷೇಕ್ ನೀವೇನಾದರೂ ಇನ್ನೊಂದು ಫಾರಿನ್ ಟ್ರಿಪ್ ಪ್ಲಾನ್ ಮಾಡಿದ್ದೀರಾ ಅಂತ ಕೇಳಿದರು. ಅದಕ್ಕೆ ಧ್ರುವ, ಇಲ್ಲ ನಾನು ಹೆಲ್ತ್ ಪಾಲಿಸಿ ನೋಡುತ್ತಿರೋದಾಗಿ ಹೇಳುತ್ತಾರೆ. ಕಳೆದ ಬಾರಿ ಆಸ್ಪತ್ರೆಗೆ ದಾಖಲಾದಾಗ ಅವರು ತಮ್ಮ ಹೂಡಿಕೆಯನ್ನ ಹಿಂಪಡೆದುಕೊಂಡರು. ಅಲ್ಲದೇ ಆಸ್ಪತ್ರೆ ಬಿಲ್ ಪಾವತಿಸಲು ಸಂಬಂಧಿಕರಿಂದ ಸಾಲ ಕೂಡ ಪಡೆಯಬೇಕಾಯಿತು. ಅಭಿಷೇಕ್ ಧ್ರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ನಾನೂ ಕೂಡ ಹೆಲ್ತ್ ಪಾಲಿಸಿ ಖರೀದಿ ಮಾಡಿದ್ದೇನೆ ಅಂತ ಹೇಳಿದರು. ಆದರೆ ಆ ಹೆಲ್ತ್ ಕವರ್ ಸಾಕಾಗುತ್ತಾ ಅಂತ ಧ್ರುವ, ಅಭಿಷೇಕ್ ರನ್ನು ಕೇಳಿದರು.

  • ನಿಮ್ಮ PF ಕ್ಲೈಮ್ ರಿಜೆಕ್ಟ್ ಆಯ್ತಾ?

    PF ಖಾತೆಗಳಲ್ಲಿ KYC ಅನ್ನು ಅಪ್ ಡೇಟ್ ಮಾಡಿಸುವುದು ಅಗತ್ಯವಾಗಿದೆ. ನಿಮ್ಮ PF ಖಾತೆಯಲ್ಲಿ ನಿಮ್ಮ KYC ಅಪೂರ್ಣವಾಗಿದ್ದರೆ ಮತ್ತು ನೀವು ಹಿಂಪಡೆಯಲು ಅರ್ಜಿ ಸಲ್ಲಿಸಿದರೆ, ಅದನ್ನು ತಿರಸ್ಕರಿಸಲಾಗುತ್ತೆ. ಆದ್ದರಿಂದ, ಕ್ಲೈಮ್‌ಗಾಗಿ ಅರ್ಜಿ ಸಲ್ಲಿಸುವ ಮೊದಲು KYC ಅನ್ನು ಅಪ್ ಡೇಟ್ ಮಾಡೋದು ಅವಶ್ಯಕ.

  • ಕ್ರೆಡಿಟ್ ಕಾರ್ಡ್​ನ ಹೆಚ್ಚಿನ ಬಡ್ಡಿದರ ತಪ್ಪಿಸಿಕೊಳ್ಳೋದು ಹೇಗೆ?

    ಕ್ರೆಡಿಟ್ ಕಾರ್ಡ್​ ಈ ಆಪ್ಶನ್ ಗೊತ್ತಾ?

    ಮೊಹ್ಸಿನ್ ಕೆಲವು ತಿಂಗಳ ಹಿಂದೆ ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಅವರು ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ಎಲ್ಲರ ಬಳಿಯೂ ಕ್ರೆಡಿಟ್ ಕಾರ್ಡ್ ಇದೆ ಅಂತ ಭಾವಿಸಿಕೊಂಡು ತಾನೂ ಕೂಡ ಕಾರ್ಡ್ ಪಡೆಯುತ್ತಾರೆ. ಆದರೆ ಈಗ ಅವರು ಚಿಂತೆಗೆ ಒಳಗಾಗಿದ್ದಾರೆ. ಏಕೆಂದರೆ ಅವರ ಕಾರ್ಡ್​ನಲ್ಲಿ ಹೆಚ್ಚಿನ ಸಾಲ ಹೊಂದಿದ್ದಾರೆ. ಅದೂ ಕೂಡ ಹೆಚ್ಚಿನ ಬಡ್ಡಿದರದಲ್ಲಿ. ಈ ವೇಳೆ ಅವರ ಸ್ನೇಹಿತರೊಬ್ಬರು ಬ್ಯಾಲೆನ್ಸ್ ಟ್ರಾನ್ಸ್​ಫರ್ ಆಯ್ಕೆ ಇರುವ ಕಾರ್ಡ್ ತೆಗೆದುಕೊಳ್ಳಿ ಎನ್ನುವ ಸಲಹೆ ನೀಡುತ್ತಾರೆ. ಸಾಮಾನ್ಯವಾಗಿ ಇದು ಕಡಿಮೆ ಬಡ್ಡಿದರ ಹೊಂದಿರುತ್ತದೆ. ಅಲ್ಲದೇ ಮರುಪಾವತಿ ಅವಧಿ ಅಧಿಕವಾಗಿರುತ್ತೆ.

  • ರಫ್ತು ವಲಯದ ಕಂಪನಿಗಳು ಯಾವ ಹೆಜ್ಜೆ ಇಡಲಿವೆ?

    ಎಕ್ಸ್​ಪೋರ್ಟ್ ವಲಯದಲ್ಲಿ ಹೂಡಿಕೆ ಮಾಡ್ಬಹುದಾ?

    ಕಳೆದ ವರ್ಷ ಭಾರತೀಯ ಷೇರು ಮಾರುಕಟ್ಟೆಯ ಪರ್ಫಾಮೆನ್ಸ್ ಅತ್ಯುತ್ತಮವಾಗಿತ್ತು. ಹಣಕಾಸು ವರ್ಷ 2023-24 ರಲ್ಲಿ ಸುಮಾರು ಶೇಕಡ 29 ರಷ್ಟು ರಿಟರ್ನ್ಸ್ ಕೊಟ್ಟಿದ್ದು, ವಿಶ್ವದ ಷೇರು ಮಾರುಕಟ್ಟೆಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಮಾರುಕಟ್ಟೆಯ ಈ ಸದೃಢ ಪರ್ಫಾಮೆನ್ಸ್ ಗೆ ಸಾಂಸ್ಥಿಕ ಹೂಡಿಕೆದಾರರ ಖರೀದಿ, ಉತ್ತಮ ವಿದೇಶಿ ಸೂಚನೆಗಳು, ಸದೃಢ ಆರ್ಥಿಕ ಸೂಚಕಗಳು ಕಾರಣವಾಗಿವೆ. ಆದರೆ, ಸದೃಢ ಆರ್ಥಿಕ ಪ್ರಗತಿ ಮತ್ತು ಷೇರು ಮಾರುಕಟ್ಟೆಯ ಓಟದ ನಡುವೆ ರಫ್ತು ಆಧಾರಿತ ಕಂಪೆನಿಗಳ ಷೇರುಗಳ ಕಥೆ ಏನು? ಈ ಕಂಪೆನಿಗಳು ಹೇಗೆ ಪರ್ಫಾಮ್ ಮಾಡಿವೆ? ಈ ಷೇರುಗಳಿಗಾಗಿ ಯಾವ ಸ್ಟ್ರ್ಯಾಟೆಜಿ ಇರಬೇಕು? ಇವೆಲ್ಲವನ್ನ ಅರ್ಥ ಮಾಡ್ಕೋಳೋಣ ಬನ್ನಿ..

  • ಟ್ರೇಡಿಂಗ್​ ಮಾಡಲು ಡಿಮ್ಯಾಟ್​ ಖಾತೆ ಬೇಕೆ ಬೇಕು... ಓಪನ್ ಮಾಡೋದು  ಹೇಗೆ?

    ಯಾವ ಬಗೆಯ ಡಿಮ್ಯಾಟ್​ ಅಕೌಂಟ್ ಬೆಸ್ಟ್?

    ಇತ್ತೀಚಿನ ವರ್ಷಗಳಲ್ಲಿ ಡಿಮ್ಯಾಟ್ ಖಾತೆಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಷೇರು ಮಾರುಕಟ್ಟೆ ಹೂಡಿಕೆಗೆ ಸಂಬಂಧಿಸಿ ಜನರಲ್ಲಿ ಹೆಚ್ಚುತ್ತಿರುವ ಜಾಗೃತಿಯೇ ಇದಕ್ಕೆ ಪ್ರಮುಖ ಕಾರಣ. ಇದಲ್ಲದೆ SEBIಯ ಪ್ರಯತ್ನಗಳು ಮತ್ತು ರಿಸ್ಕ್ ತೆಗೆದುಕೊಳ್ಳುವ ಆಲೋಚನೆಯಲ್ಲಿರು ವ್ಯಕ್ತಿಗಳು, ಮಾರ್ಕೆಟ್ ಕಡೆ ಮುಖ ಮಾಡುತ್ತಿರುವ ಯುವಕರು ಹೆಚ್ಚಾಗಿದ್ದಾರೆ. ಈ ಎಲ್ಲ ಕಾರಣಗಳಿಂದ ಡಿಮ್ಯಾಟ್ ಖಾತೆಗಳ ಸಂಖ್ಯೆ ಹೆಚ್ಚುತ್ತಿದೆ. ಹಿಂದೆ ಜನರು ತಮ್ಮ ಹಣವನ್ನು ಉಳಿತಾಯ ಖಾತೆಗಳಲ್ಲಿ ವರ್ಷಗಳವರೆಗೆ ಇಡುತ್ತಿದ್ದರು. ಆದರೆ ಈಗ ಅನೇಕರು ತಮ್ಮ ಹಣವನ್ನು ಷೇರುಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದಾರೆ. ಜನವರಿ 2024 ರ ಹೊತ್ತಿಗೆ ದೇಶದಲ್ಲಿ 14.39 ಕೋಟಿ ಡಿಮ್ಯಾಟ್ ಖಾತೆಗಳಿರುವುದೆ ಇದಕ್ಕೆ ಸಾಕ್ಷಿ.