team money9

Team Money9

https://images.money9.com/kannada/wp-content/uploads/2023/05/resize-16835265471291094807logo1.png
  • ವಿಮೆ ಮಾಡಿಸಿ ಮರೆತರೆ ಆ ಹಣ  ಯಾರ ಪಾಲಾಗುತ್ತದೆ?

    ಇನ್ಶೂರೆನ್ಸ್ ಮಾಡಿಸಿ ಮನೆಯವರಿಗೆ ಹೇಳಿಲ್ವಾ?

    ಇನ್ಶುರೆನ್ಸ್‌ ಕಂಪನಿಗಳೂ ಈಗ ಬ್ಯಾಂಕ್‌ಗಳ ಹಾಗೆ ಕ್ಲೇಮ್ ಮಾಡದೇ ಇರುವ ಹಣವನ್ನು ತಮ್ಮ ಗ್ರಾಹಕರಿಗೆ ವಾಪಸ್ ಮಾಡುತ್ತವೆ. ಇನ್ಶುರೆನ್ಸ್‌ ಕಂಪನಿಗಳ ಬಳಿ ಈ ಅನ್‌ಕ್ಲೇಮ್ಡ್‌ ಹಣ ಹೆಚ್ಚಾಗುತ್ತಲೇ ಇರುವ ಬಗ್ಗೆ ರೆಗ್ಯುಲೇಟರ್ ಮತ್ತು ಸರ್ಕಾರಗಳಿಗೆ ಆತಂಕ ಆಗಿದೆ. ಇನ್ಶುರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್‌ಮೆಂಟ್ ಅಥಾರಿಟಿ ಆಫ್ ಇಂಡಿಯಾ IRDA ಇದಕ್ಕೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿದೆ. ಪಾಲಿಸಿದಾರರಿಗೆ ಈ ಅನ್‌ಕ್ಲೇಮ್ಡ್‌ ಹಣವನ್ನು ರಿಟರ್ನ್ ಮಾಡಿ ಅಂತ ಇನ್ಶುರೆನ್ಸ್‌ ಕಂಪನಿಗಳಿಗೆ IRDA ಸೂಚನೆ ನೀಡಿದೆ. ಬಾಕಿ ಇರುವ ಹಣ ಯಾರಿಗೆ ಸೇರಿದ್ದೋ ಅವರನ್ನು ಹುಡುಕುವಂತೆಯೂ ವಿಮೆ ಕಂಪನಿಗಳಿಗೆ ಇದು ತಿಳಿಸಿದೆ.

  • ವಿಮೆ ಸೆರಂಡರ್  ನಿಯಮದಲ್ಲಿ ಭಾರೀ ಬದಲಾವಣೆ!

    ವಿಮೆ ಸರಂಡರ್ ಮಾಡೋಕೆ ಹೊರಟ್ರಾ?

    ವಿಮಾ ನಿಯಂತ್ರಕ ಐಆರ್​ಡಿಎ, ಜೀವ ವಿಮಾ ಪಾಲಿಸಿಗಳ ಸರಂಡರ್ ವ್ಯಾಲ್ಯೂಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತಂದಿದೆ. ಮೆಚ್ಯುರಿಟಿಗೂ ಮೊದಲೇ ವಿಮಾ ಪಾಲಿಸಿಯನ್ನ ಕ್ಲೋಸ್ ಮಾಡಿದರೆ ಅದನ್ನು ಸರಂಡರ್ ಎಂದು ಕರೆಯಲಾಗುತ್ತದೆ. ನೀವು ಪಾಲಿಸಿಯನ್ನು ಸರಂಡರ್ ಮಾಡಿದ್ರೆ, ನೀವು ಪಾವತಿಸಿರುವ ಪ್ರೀಮಿಯಂನ ಒಂದು ಭಾಗ ಸಿಗುತ್ತದೆ. ಇದೇ ಸರಂಡರ್ ವ್ಯಾಲ್ಯೂ. ಏಪ್ರಿಲ್ 1 ರಿಂದ ಈ ಸರಂಡರ್ ವ್ಯಾಲ್ಯೂ ಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿಗೆ ಬಂದಿವೆ.

  • ಶುಗರ್ ಸೆಕ್ಟರ್​ ಮೇಲೆ ಹೂಡಿಕೆಗೆ ಇದು ಸಕಾಲವೆ?

    ಶುಗರ್ ಸೆಕ್ಟರ್​ನಲ್ಲಿ ಹೂಡಿಕೆ ಮಾಡ್ಬಹುದಾ?

    2023-24 ರ ವರ್ಷದಲ್ಲಿ ಸಕ್ಕರೆ ಉತ್ಪಾದನೆ ಕಳೆದ ವರ್ಷಕ್ಕೆ ಹೋಲಿಸಿದರೆ ಕುಸಿತ ಕಂಡಿದೆ. ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಶನ್ ಐಎಸ್‌ಎಂಎ ಪ್ರಕಾರ, 223 ಲಕ್ಷ ಟನ್ ಸಕ್ಕರೆಯನ್ನು ಫೆಬ್ರವರಿ 15 ರ ವೇಳೆಗೆ ಇಡೀ ದೇಶದಲ್ಲಿ ಉತ್ಪಾದನೆ ಮಾಡಲಾಗಿದೆ. ಈ ವರ್ಷ ಎಥನಾಲ್ ಉತ್ಪಾದನೆಗೆ ಸಂಬಂಧಿಸಿ ಸರ್ಕಾರ ಕಟ್ಟುನಿಟ್ಟಿನ ನಿಯಮ ರೂಪಿಸಿದ್ದರೂ, ಸಕ್ಕರೆ ಉತ್ಪಾದನೆಯಲ್ಲಿ 2.5 ಪರ್ಸೆಂಟ್‌ ಇಳಿಕೆ ಕಂಡುಬಂದಿದೆ. ಅಕ್ಟೋಬರ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯನ್ನು ಉತ್ಪಾದನೆಗೆ ಸಂಬಂಧಿಸಿ ಸಕ್ಕರೆ ವರ್ಷ ಎಂದು ಕರೆಯಲಾಗುತ್ತದೆ.

  • ಹೂಡಿಕೆ ಆರಂಭಿಸಲು ಕೇವಲ 250 ರೂ. ಸಾಕು!

    ಇಷ್ಟು ಸಣ್ಣ ಮೊತ್ತದಿಂದಲೂ ಹೂಡಿಕೆ ಸಾಧ್ಯ!

    ಯಾವುದೇ ಪ್ರಾಡಕ್ಟ್ ಜನಪ್ರಿಯಗೊಳ್ಳಲು ಮಾರ್ಕೆಟಿಂಗ್ ಎನ್ನುವುದು ಅತ್ಯಂತ ಪರಿಣಾಮಕಾರಿ ಸಾಧನ. ಮಾರ್ಕೆಟಿಂಗ್ ಮಾಡೆಲ್ ನಲ್ಲಿ ನಾಲ್ಕು ‘ಪಿ’ ಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಅವುಗಳೆಂದರೆ - ಪ್ರಾಡಕ್ಟ್, ಪ್ರೈಸ್, ಪ್ಲೇಸ್ ಮತ್ತು ಪ್ರೊಮೋಷನ್. ಅಂದ್ರೆ ಉತ್ಪನ್ನ, ಅದರ ಬೆಲೆ, ಸ್ಥಳ ಮತ್ತು ಉತ್ತೇಜನ ಮುಖ್ಯವಾದವು. ಈ ಬ್ರಾಂಡಿಂಗ್ ಟೆಕ್ನಿಕ್ ಅನ್ನೋದು ಎಫ್ ಎಂ ಸಿ ಜಿ ವಲಯದಲ್ಲಿ ಕ್ರಾಂತಿ ತಂದಿದೆ. ಉದಾಹರಣೆಗೆ, ಎಫ್ ಎಂ ಸಿ ಜಿ ಕಂಪೆನಿಗಳು ತಮ್ಮ ಶಾಂಪೂಗಳನ್ನ ಬಾಟೆಲ್ ಗಳ ಬದಲಿಗೆ ಒಂದು ಅಥವಾ ಎರಡು ರೂಪಾಯಿಗಳ ಸ್ಯಾಷೆಯಲ್ಲಿ ಮಾರಾಟ ಮಾಡುತ್ತಿವೆ. ಇದರಿಂದಾಗಿ ಸಾಮಾನ್ಯ ವ್ಯಕ್ತಿಗಳು ಈ ಉತ್ಪನ್ನವನ್ನ ಖರೀದಿಸೋದು ಸುಲಭ ಆಗಿದೆ, ಕೈಗೆಟಕುವ ಬೆಲೆಯಲ್ಲಿ ಕೂಡ ಸಿಗುತ್ತಿದೆ.

  • ನಿಮ್ಮ ರಿಟೈರ್​ಮೆಂಟ್​ ಪ್ಲಾನ್ ಹೇಗಿರಬೇಕು?

    ಹೀಗ್ ಮಾಡಿ ಪೆನ್ಶನ್ ಅನ್ನೋ ಟೆನ್ಶನ್ ಇರಲ್ಲ!

    ವೃತ್ತಿಪರರಾಗಿರಲಿ ಅಥವಾ ಕಿರು‌ ಉದ್ಯಮ ಹೊಂದಿರುವವರಾಗಿರಲಿ, ಅಥವಾ ಯಾರೇ ಆಗಲಿ, ನಿವೃತ್ತಿ ಸಮಯದಲ್ಲಿ ಗಣನೀಯ ಮೊತ್ತ ಕೂಡಿಟ್ಟಿರಬೇಕು ಎಂದೇ ಬಯಸುತ್ತಾರೆ. ಆಗ ಉಳಿದ ಜೀವನವನ್ನು ನಿರಾಯಾಸವಾಗಿ ಕಳೆಯಬಹುದು. ಕುಟುಂಬದವರೊಂದಿಗೆ ಆರಾಮವಾಗಿ ಜೀವನ ನಡೆಸಬಹುದು ಅನ್ನೋದು ಎಲ್ಲರ‌ ಜೀವನ‌ ಲೆಕ್ಕಾಚಾರ.. ಅಲ್ಲದೇ 55 ರಿಂದ 60 ವರ್ಷ ವಯಸ್ಸಾಗೋವರೆಗೂ ಅವರವರ ಕುಟುಂಬ ನಿರ್ವಹಿಸಿದವರಿಗೆ, ಈ ಇಳಿವಯಸ್ಸಿನಲ್ಲಿ ತಮ್ಮ ಅಗತ್ಯಗಳಿಗೆ ಬೇರೆಯವರ ಮೇಲೆ ಅವಲಂಬಿತರಾಗೋಕೆ ಇಷ್ಟವಿರುವುದಿಲ್ಲ. ಇಂತಹ ಪರಿಸ್ಥಿತಿ ಎದುರಾಗಬಾರದು ಅಂದರೆ ರಿಟೈರ್ಮೆಂಟ್ ಪ್ಲಾನಿಂಗ್ ಇರಲೇಬೇಕು.

  • ಈ ನಕಲಿ ಆ್ಯಪ್​ಗಳನ್ನು ನಂಬಿಕೊಂಡರೆ ನೀವು ದಿವಾಳಿ!

    ನಿಮ್ಮನ್ನು ದಿವಾಳಿ ಮಾಡುವ ಆ್ಯಪ್ಸ್!

    ಹೆಚ್ಚು ಹಣ ಕೈಯಲ್ಲಿದ್ದರೆ ಯಾರಿಗೆ ತಾನೆ ಖುಷಿಯಾಗುವುದಿಲ್ಲ? ಆದರೆ, ಬೇಗ ಹಣ ಮಾಡಬೇಕು ಎಂಬ ಅತಿಯಾಸೆ ನಮ್ಮನ್ನು ಸಂಕಷ್ಟಕ್ಕೀಡು ಮಾಡಬಹುದು. ಸಚಿನ್‌ಗೆ ಇದು ಅನುಭವಕ್ಕೆ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಸಚಿನ್‌ಗೆ ಒಂದು ಬ್ರೋಕರ್‌ ಆಪ್‌ ಬಗ್ಗೆ ಜಾಹೀರಾತು ಕಂಡಿತು. ಭಾರಿ ಹೂಡಿಕೆ ಮಾಡಿದರೆ ಭಾರಿ ರಿಟರ್ನ್ಸ್‌ ಕೊಡುತ್ತೇವೆ ಎಂದು ಜಾಹೀರಾತಿನಲ್ಲಿ ಹೇಳಿದ್ದರು. ಕುತೂಹಲ ಹುಟ್ಟಿದ ಸಚಿನ್ ಅದರ ಮೇಲೆ ಕ್ಲಿಕ್ ಮಾಡಿದರು. ಹಾಗೆ ಕ್ಲಿಕ್ ಮಾಡುತ್ತಿದ್ದ ಹಾಗೆಯೇ ಅವರ ಇನ್‌ಬಾಕ್ಸ್‌ನಲ್ಲಿ ಇಮೇಲ್‌ಗಳ ಸುರಿಮಳೆಯೇ ಬಂದು ಬಿದ್ದಿತು. ಅದನ್ನೆಲ್ಲ ನೋಡಿದ ಸಚಿನ್ ಕೂಡ ತಡ ಮಾಡದೇ, ಯೋಚನೆಯನ್ನೂ ಮಾಡದೇ 3 ಲಕ್ಷ ರೂ. ಹಾಕಿದರು.

  • ಕೊರೋನಾ ನಂತರ ಬದಲಾವಣೆ ಹಾದಿಯಲ್ಲಿ FMCG ಸೆಕ್ಟರ್

    FMCG ಸೆಕ್ಟರ್​ ಮೇಲೆ ಹೂಡಿಕೆ ಮಾಡ್ಬಹುದೆ?

    2023 ರ ನಾಲ್ಕನೇ ತ್ರೈಮಾಸಿಕಕ್ಕೆ ಸಂಬಂಧಿಸಿ ಎಫ್ ಎಂಸಿಜಿ ಅಂದ್ರೆ ಫಾಸ್ಟ್ ಮೂವಿಂಗ್ ಕಸ್ಯೂಮರ್ ಗೂಡ್ಸ್ ಆಗಿರುವ ಬದಲಾವಣೆಗಳನ್ನು ತಿಳಿದುಕೊಳ್ಳಲೇಬೇಕು. 2023 ರ ನಾಲ್ಕನೇ ತ್ರೈಮಾಸಿಕಸಲ್ಲಿ ಎಫ್ ಎಂಸಿಜಿಯ ವಾಲ್ಯೂಮ್ ಶೇ. 6.4 ರಷ್ಟು ಏರಿಕೆ ಕಂಡಿದೆ. ಇದರ ಪರಿಣಾಮ ಎಫ್ ಎಂಸಿಜಿ ವ್ಯಾಲ್ಯೂ ಸಹ ಶೇ. 6 ರಷ್ಟು ಹೆಚ್ಚಾಗಿದೆ. ನೀಲ್ಸನ್ ರಿಪೋರ್ಟ್ ಹೇಳಿರುವ ಪ್ರಕಾರ ಈ ಹೆಚ್ಚಳವು ದೇಶದ ಅನೇಕ ಭಾಗಗಳಲ್ಲಿ ಎಫ್ ಎಂಸಿಜಿ ಪ್ರಾಡಕ್ಟ್ ಬಳಕೆಯನ್ನು ಸೂಚಿಸುತ್ತದೆ.

  • ಭಾರತಕ್ಕೆ ಬರಬೇಕಿದ್ದ ಮಸ್ಕ್ ಚೀನಾದಲ್ಲಿ ಪ್ರತ್ಯಕ್ಷ!

    ಭಾರತ ಬಿಟ್ಟು ಚೀನಾಕ್ಕೆ ಹಾರಿದ ಮಸ್ಕ್!

    ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಮ್ಯಾಜಿಕ್ ಮಾಡಿಕೊಂಡಿರುವ ಮಸ್ಕ್ ನಂತರ ಟ್ವಿಟರ್ ಖರೀದಿ ಮಾಡಿ ಹೊಸ ಸಾಹಸ ಮಾಡಿದರು. ಇವಿ ವಾಹನ ಜಗತ್ತಿನಲ್ಲಿ ಮಸ್ಕ್ ಭಾರತ ಭೇಟಿಯ ನಂತ ಒಂದಿಷ್ಟು ಮಹತ್ವದ ಬದಲಾವಣೆಗಳಾಗಿವೆ ಎಂದು ಹೇಳಲಾಗುತ್ತಿದೆ. 

  • ಲಿಕ್ವಿಡ್ ETF ಎಂದರೇನು?  ಯಾರೆಲ್ಲ ಹೂಡಿಕೆ ಮಾಡಬಹುದು?

    ಅದ್ಭುತ ಲಾಭ ಕೊಡುವ ETF!

    ಲಿಕ್ವಿಡ್ ಮ್ಯೂಚುಯಲ್ ಫಂಡ್‌ಗಳು ಕಡಿಮೆ ಅಪಾಯ ಮತ್ತು ಹೆಚ್ಚಿನ ಲಿಕ್ವಿಡಿಟಿಯೊಂದಿಗೆ ಆದಾಯವನ್ನು ಒದಗಿಸುವ ಯೋಜನೆಯಾಗಿದೆ ಕಮರ್ಷಿಯಲ್ ಪೇಪರ್, ಕಾಲ್ ಮನಿ, ಗೌರ್ಮೆಂಟ್ ಸೆಕ್ಯೂರಿಟಿಸ್, ಟ್ರೆಷರಿ ಬಿಲ್ ಸೇರಿದಂತೆ ಮುಂತಾದವುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದು 91 ದಿನಗಳವರೆಗೆ ಮೆಚ್ಯೂರಿಟಿ ಅವಧಿಯನ್ನು ಹೊಂದಿದೆ.. ಲಿಕ್ವಿಡ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ದೊಡ್ಡ ಪ್ರಯೋಜನ ಏನೆಂದರೆ ಹಣವನ್ನು ಹಿಂಪಡೆಯಲು ಫ್ಲೆಕ್ಸಿಬಿಲಿಟಿ ನೀಡುತ್ತದೆ. ಅಂದರೆ ನಿಮಗೆ ಯಾವಾಗ ಬೇಕೋ ಆವಾಗ ಹಣ ಹಿಂಪಡೆಯಲು ಸಾಧ್ಯವಿದೆ. ಹಾಗಾದರೆ ಮಾರುಕಟ್ಟೆಯಲ್ಲಿ ಯಾವ ಬಗೆಯ ಲಿಕ್ವಿಡ್ ಎಕ್ಸ್‌ಚೇಂಜ್-ಟ್ರೇಡೆಡ್ ಫಂಡ್‌ಗಳು (ಇಟಿಎಫ್‌ಗಳು) ಲಭ್ಯವಿದೆ ಅನ್ನೋದು ನಿಮಗೆ ಗೊತ್ತಿದೆಯಾ?

  • ಸೈಬರ್ ಸ್ಲೇವರಿ ಎಂದರೇನು? ಭಾರತೀಯರೆ ಬಲಿಯಾಗುತ್ತಿರುವುದೇಕೆ?

    ಸೈಬರ್ ವಂಚಕರ ಜಾಲದಲ್ಲಿ ಭಾರತೀಯರು!

    ಬೆಂಗಳೂರಿನ ನಿವಾಸಿ ಮೋಹನ್ ಅವರಿಗೆ ಒಂದು ದಿನ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಕರೆ ಮಾಡಿದವರು ಪೊಲೀಸ್ ಠಾಣೆಯಿಂದ ಕರೆ ಮಾಡಿದ್ದೇವೆ ಎಂದು ಹೇಳುತ್ತಾರೆ. ಡ್ರಗ್ಸ್ ಪ್ರಕರಣದಲ್ಲಿ ಮೋಹನ್ ಅವರ ಪುತ್ರಿ ಹಾಗೂ ಆಕೆಯ ಸ್ನೇಹಿತರ ಹೆಸರು ಕೇಳಿಬಂದಿದೆ ಎಂದು ಭಯಬೀಳಿಸುತ್ತಾರೆ. ಇದನ್ನು ಕೇಳಿ ಮೋಹನ್ ಆತಂಕಗೊಂಡರು. ಈ ವಿಷಯ ಬಹಿರಂಗ ಆಗಬಾರದು ಎಂದರೆ ಹಣ ನೀಡಬೇಕು ಅಂತ ಬೇಡಿಕೆಯಿಟ್ಟರು. ಹಣ ನೀಡದಿದ್ದರೆ ನಿಮ್ಮ ಮಗಳಿಗೆ ತೊಂದರೆಯಾಗಬಹುದು ಅಂತಾ ಎಚ್ಚರಿಕೆ ಸಹ ನೀಡಿದರು. ಭಯದಿಂದ ಮೋಹನ್ ತಕ್ಷಣವೇ 30,000 ರೂ. ಅವರು ಹೇಳಿದಂತೆ ಟ್ರಾನ್ಸ್ ಫರ್ ಮಾಡಿದರು. ಇಂಥ ವಂಚನೆ ಪ್ರಕರಣಗಳೂ ಈಗ ವೇಗವಾಗಿ ಹೆಚ್ಚುತ್ತಿವೆ.