` advantages of monthly income fixed deposit fd | ಪ್ರತಿ ತಿಂಗಳು ಆದಾಯ ತಂದುಕೊಡುವ FD ಬಗ್ಗೆ ನಿಮಗೆಷ್ಟು ಗೊತ್ತು? | Money9 Kannada

ಪ್ರತಿ ತಿಂಗಳು ಆದಾಯ ತಂದುಕೊಡುವ FD ಬಗ್ಗೆ ನಿಮಗೆಷ್ಟು ಗೊತ್ತು?

ಮಾಸಿಕ ಬಡ್ಡಿ ಪಡೆಯಬಹುದಾದ ಎಫ್‌ಡಿ ಅನ್ನು ಅಲ್ಪಾವಧಿ ಮತ್ತು ದೀರ್ಘಾವಧಿ ಎರಡರಲ್ಲೂ ಇರಿಸಬಹುದು. ಅನೇಕ ಬ್ಯಾಂಕ್ ಗಳು ಹತ್ತು ವರ್ಷಗಳವರೆಗೆ ಇಂತಹ ಎಫ್ ಡಿ ಗಳನ್ನ ಆಫರ್ ಮಾಡತ್ತೆ. ಇದರಿಂದಾಗಿ ದೀರ್ಘಾವಧಿಗೆ ಕೊಡೋ ಹೆಚ್ಚಿನ ಬಡ್ಡಿ ದರದ ಲಾಭವನ್ನ‌ ನೀವು‌ ಪಡೀಬಹುದು. ಇದಲ್ಲದೇ, ಅವಧಿ ಪೂರ್ವ ಹಿಂಪಡೆಯುವಿಕೆ- ಪ್ರಿಮೆಚ್ಯೂರ್ ವಿತ್ ಡ್ರಾ ಸೌಲಭ್ಯ ಕೂಡ ಇದೆ.

ಸುಬೋಧ್ ಅವರು ಇತ್ತೀಚೆಗೆ ನಿವೃತ್ತರಾಗಿ, ಪಿಂಚಣಿ ಪ‌ಡೆಯುತ್ತಿದ್ದಾರೆ. ಜೊತೆಗೆ ಅವರು ತಮ್ಮ ಪಿಂಚಣಿ ಆದಾಯದ ಜೊತೆಗೆ ಹೆಚ್ಚುವರಿ ಆದಾಯ ಗಳಿಕೆ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಆಗ ಅವರಿಗೆ ಯಾರೋ ಒಬ್ಬರು ನಿಶ್ಚಿತ ಠೇವಣಿ (ಎಫ್ ಡಿ) ಗಳಿಂದ ಮಾಸಿಕ‌ ಬಡ್ಡಿ ಪಡೆಯಬಹುದು ಎಂದು ಹೇಳುತ್ತಾರೆ. ಸುಬೋಧ್ ಅವರಿಗೆ ಎಫ್ ಡಿ ಗಳ ಬಗ್ಗೆ ಗೊತ್ತಿತ್ತು‌. ಅವರು ಅನೇಕ ಠೇವಣಿಗಳನ್ನ ಕೂಡ ಇಟ್ಟಿದ್ದರು. ಆದರೆ ಮಾಸಿಕ ಬಡ್ಡಿ ಪಡೆಯಬಹುದು ಎನ್ನುವುದು ಅವರಿಗೆ ಗೊತ್ತಿರಲಿಲ್ಲ.

ಫಿಕ್ಸೆಡ್ ಡೆಪಾಸಿಟ್ ಅಥವಾ ಎಫ್ ಡಿ ಗಳು ಯಾವಾಗಲೂ ಸುಭದ್ರ ಮತ್ತು ಜನಪ್ರಿಯ ಹೂಡಿಕೆ ವಿಧಾನವಾಗಿದೆ. ಅವು ಕೇವಲ ಸುರಕ್ಷಿತ ಮಾತ್ರ ಅಲ್ಲ, ಒಳ್ಳೆಯ ರಿಟರ್ನ್ಸ್ ಕೂಡ ಕೊಡತ್ತವೆ.‌ ನಿವೃತ್ತಿ ನಂತರ ನಿಯಮಿತ ಆದಾಯ ಪಡೆಯಬೇಕು ಎಂದು ನೋಡುತ್ತಿರುವ ಸುಬೋಧ್ ಅವರಂತಹವರಿಗೆ, ಎಫ್ ಡಿ ಗಳು ನಿರಂತರ ಮಾಸಿಕ ಆದಾಯದ ಮೂಲವಾಗಬಹುದಾಗಿದೆ. ಹಾಗಾದ್ರೆ, ಈ ಸೌಲಭ್ಯ ಏನು? ಅದು ಹೇಗೆ ಕೆಲಸ ಮಾಡುತ್ತದೆ? ಈ ವಿಡಿಯೋದಲ್ಲಿ ತಿಳ್ಕೋಳೋಣ ಬನ್ನಿ..

ನಿಶ್ಚಿತ ಠೇವಣಿಗಳಲ್ಲಿ ಹೂಡಿಕೆ ಮಾಡೋವಾಗ, ನೀವು ಎರಡು ವಿಧಾನಗಳಲ್ಲಿ ಯಾವುದು ಬೇಕು ಅನ್ನೋದನ್ನ ಆಯ್ಕೆ ಮಾಡ್ಕೋಬಹುದಾಗಿದೆ..ನೀವು ಮೆಚ್ಯುರಿಟಿ ನಂತರ ಹಣವನ್ನ ವಿತ್ ಡ್ರಾ ಮಾಡೋಕೆ ಬಯಸ್ತೀರಾ ಅಥವಾ ನಿಯಮಿತ ಅವಧಿಯಲ್ಲಿ ಹಣ ಬೇಕಾಗತ್ತಾ? ಅನ್ನೋದನ್ನ ನಿರ್ಧರಿಸಿ ನಿಮಗೆ ಸೂಕ್ತವಾದುದನ್ನ ಆಯ್ಕೆ ಮಾಡ್ಕೋಬಹುದು.. ನಿಮಗೆ ನಿಯಮಿತ ಅವಧಿಗೆ ಬಡ್ಡಿ ಹಣ ಬೇಕು ಅನ್ನೋದಾದ್ರೆ, ಮಾಸಿಕ ಬಡ್ಡಿ ಪಾವತಿ ಆಯ್ಕೆ ಮಾಡ್ಕೋಬಹುದು.. ಆಗ,‌ ನಿಮ್ಮ ಎಫ್ ಡಿ ಗೆ ಲಿಂಕ್ ಆಗಿರೋ ಉಳಿತಾಯ ಖಾತೆಗೆ ಪ್ರತಿ ತಿಂಗಳು ಹಣ ಸೇರತ್ತೆ..

ನಿರಂತರವಾಗಿ ಮಾಸಿಕ ಆದಾಯ ಬೇಕು ಅಂತಾ ಯಾರು ಬಯಸ್ತಾರೋ, ಅಂತಹವರಿಗೆ ಮಂತ್ಲಿ ಇಂಟರೆಸ್ಟ್ ಪೇಔಟ್ ಆಪ್ಷನ್ ಸೂಕ್ತ ಆಗತ್ತೆ. ಪಿಂಚಣಿ ರೀತಿಯಲ್ಲಿ ನಿಶ್ಚಿತ ಆದಾಯ ಬೇಕು ಅನ್ನೋರಿಗೆ ಈ ಆಯ್ಕೆ ತುಂಬಾನೇ ಸೂಕ್ತ.

ಮಾಸಿಕ ಬಡ್ಡಿ ಪಡೆಯಬಹುದಾದ ಎಫ್‌ಡಿ ಅನ್ನು ಅಲ್ಪಾವಧಿ ಮತ್ತು ದೀರ್ಘಾವಧಿ ಎರಡರಲ್ಲೂ ಇರಿಸಬಹುದು. ಅನೇಕ ಬ್ಯಾಂಕ್ ಗಳು ಹತ್ತು ವರ್ಷಗಳವರೆಗೆ ಇಂತಹ ಎಫ್ ಡಿ ಗಳನ್ನ ಆಫರ್ ಮಾಡತ್ತೆ. ಇದರಿಂದಾಗಿ ದೀರ್ಘಾವಧಿಗೆ ಕೊಡೋ ಹೆಚ್ಚಿನ ಬಡ್ಡಿ ದರದ ಲಾಭವನ್ನ‌ ನೀವು‌ ಪಡೀಬಹುದು. ಇದಲ್ಲದೇ, ಅವಧಿ ಪೂರ್ವ ಹಿಂಪಡೆಯುವಿಕೆ- ಪ್ರಿಮೆಚ್ಯೂರ್ ವಿತ್ ಡ್ರಾ ಸೌಲಭ್ಯ ಕೂಡ ಇದೆ.

ಈ ಎಫ್ ಡಿ ಗಳ ಮೇಲಿನ ಬಡ್ಡಿ ಲೆಕ್ಕಾಚಾರ ಹೇಗೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಸರಳ ಬಡ್ಡಿ ಸೂತ್ರ ಅಥವಾ ಸಿಂಪಲ್ ಇಂಟರೆಸ್ಟ್ ಫಾರ್ಮುಲಾದೊಂದಿಗೆ ಸಾಮಾನ್ಯವಾಗಿ ಇದರ ಬಡ್ಡಿ ಲೆಕ್ಕ ಮಾಡಲಾಗುತ್ತದೆ. ಈ ರೀತಿಯಾಗಿ, ನಿಮಗೆ ನಿಯಮಿತ ಆದಾಯ ಸಿಗುತ್ತದೆ. ನೀವು ಹೂಡಿಕೆ ಮಾಡಿರುವ ಮೊತ್ತ ಹಾಗೆಯೇ ಇರುತ್ತದೆ.

ಒಂದು ವೇಳೆ, ನೀವು ಮಂತ್ಲಿ ಪೇ ಔಟ್ ಆಪ್ಷನ್ ಅಡಿಯಲ್ಲಿ ಹತ್ತು ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ವಾರ್ಷಿಕ ಬಡ್ಡಿ ದರ ಶೇಕಡ 6 ರಷ್ಟಿದೆ ಎಂದಾದರೆ, ಮಾಸಿಕ ಬಡ್ಡಿ ಶೇಕಡ 0.5 ರಷ್ಟಿರುತ್ತದೆ. ಅಂದರೆ ಶೇಕಡ 6 ರಷ್ಟನ್ನು 12 ತಿಂಗಳಿಗೆ ವಿಭಾಗ ಮಾಡಿದರೆ ಪ್ರತಿ ತಿಂಗಳಿಗೆ ಶೇಕಡ 0.5 ರಷ್ಟಾಗತ್ತದೆ. ಸರಳ ಬಡ್ಡಿ ಸೂತ್ರದಿಂದ ಬಡ್ಡಿ ಎಷ್ಟು ಸಿಗತ್ತೆ? ಲೆಕ್ಕ ಮಾಡೋಣ‌ ಹತ್ತು ಲಕ್ಷ ರೂಪಾಯಿಯನ್ನ ಶೇಕಡ 0.5 ರಿಂದ ಗುಣಿಸಿದ್ರೆ, ಐದು ಸಾವಿರ ರೂಪಾಯಿ ಆಗತ್ತೆ. ಅಂದ್ರೆ ತಿಂಗಳಿಗೆ 5 ಸಾವಿರ ರೂಪಾಯಿ ಬಡ್ಡಿ ಸಿಗುತ್ತದೆ. ಬಹುತೇಕ ಬ್ಯಾಂಕ್ ಗಳು ನಿಶ್ಚಿತ ಠೇವಣಿಗಳಿಗೆ ಈ ಸೌಲಭ್ಯ ಕೊಡುತ್ತವೆ. ಹಾಗಿದ್ದರೆ ಇಲ್ಲಿ ಸಿಗುವ ಬಡ್ಡಿಗೆ ತೆರಿಗೆ ಇಲ್ಲವೆ? ಹೌದು, ಇದು ತೆರಿಗೆಗೆ ಒಳಪಡತ್ತೆ. ನಿರ್ದಿಷ್ಟ ಹೂಡಿಕೆದಾರರಿಗೆ ಅನ್ವಯವಾಗೋ ಆದಾಯ ತೆರಿಗೆ ಸ್ಲ್ಯಾಬ್ ನಂತೆ ತೆರಿಗೆ ವಿಧಿಸಲಾಗುತ್ತದೆ.

Published: May 4, 2024, 15:10 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ