` is a will valid without probate | ವಿಲ್ ಪ್ರೊಬೇಟ್ ಎಂದರೇನು? ಇದು ಯಾಕೆ ಬೇಕು? | Money9 Kannada

ವಿಲ್ ಪ್ರೊಬೇಟ್ ಎಂದರೇನು? ಇದು ಯಾಕೆ ಬೇಕು?

ಪ್ರೊಬೇಟ್ ಅಂದರೆ ನ್ಯಾಯಾಲಯದಲ್ಲಿ ವಿಲ್​ನ ಸಿಂಧುತ್ವವನ್ನು ದೃಢೀಕರಿಸುವ ಕಾನೂನು ಪ್ರಕ್ರಿಯೆಯಾಗಿದೆ. ಆಸ್ತಿಯ ಮೇಲೆ ವಿವಾದವಿದ್ದರೆ, ಅಥವಾ, ಬಹು ಹಕ್ಕುದಾರರಿದ್ದರೆ ಪ್ರೊಬೇಟ್ ಅಗತ್ಯವಾಗುತ್ತದೆ.

ತಂದೆ ಮರಣದ ನಂತರ, ಮನೆಯ ಮ್ಯುಟೇಶನ್ ಮಾಡಲು ತಹಶೀಲ್ದಾರ್ ಕಚೇರಿಗೆ ತೆರಳಿದ್ದ ಅನಿಲ್​ಗೆ ಚಿಂತೆ ಎದುರಾಯಿತು. ಅಲ್ಲಿನ ಅಧಿಕಾರಿಗಳು ಪ್ರೊಬೇಟ್ ದಾಖಲೆ ಕೊಡಿ ಅಂತ ಕೇಳಿದ್ದರು. ತನ್ನ ಅಪ್ಪ ವಿಲ್ ಮಾಡಿಸಿ ತನ್ನನ್ನು ಮನೆ ಮಾಲೀಕನನ್ನಾಗಿ ಮಾಡಿದ್ದಾರೆ ಅಂತ ಅನಿಲ್ ಅಂದುಕೊಂಡಿದ್ದರು. ಹಾಗಾದರೆ ಪ್ರೊಬೇಟ್ ಅಂದ್ರೆ ಏನು? ಅಧಿಕಾರಿಗಳು ಇದನ್ನು ಯಾಕೆ ಕೇಳಿದರು? ಎನ್ನವುದನ್ನು ತಿಳಿದುಕೊಳ್ಳಬೇಕು.

ನೀವೂ ಕೂಡ ಈ ಪ್ರೊಬೇಟ್ ಎನ್ನುವ ಪದವನ್ನು ಮೊದಲ ಬಾರಿಗೆ ಕೇಳುತ್ತಿರಬಹುದು. ಅದಕ್ಕಾಗಿಯೇ ನಾವು ಇವತ್ತು ಇದರ ಬಗ್ಗೆ ಮಾತನಾಡೋಣ.. ಪ್ರೊಬೇಟ್ ಅಂದ್ರೆ ಏನು? ಅದು ಯಾಕೆ ಮುಖ್ಯ ಎನ್ನುವುದನ್ನು ತಿಳಿದುಕೊಳ್ಳೋಣ.

ಮೂಲಭೂತವಾಗಿ, ಪ್ರೊಬೇಟ್ ಅಂದರೆ ನ್ಯಾಯಾಲಯದಲ್ಲಿ ವಿಲ್​ನ ಸಿಂಧುತ್ವವನ್ನು ದೃಢೀಕರಿಸುವ ಕಾನೂನು ಪ್ರಕ್ರಿಯೆಯಾಗಿದೆ. ಆಸ್ತಿಯ ಮೇಲೆ ವಿವಾದವಿದ್ದರೆ, ಅಥವಾ, ಬಹು ಹಕ್ಕುದಾರರಿದ್ದರೆ ಪ್ರೊಬೇಟ್ ಅಗತ್ಯವಾಗುತ್ತದೆ. ಪ್ರೊಬೇಟ್ ಉದ್ದೇಶ ಏನಂದರೆ ವಿಲ್​ನಲ್ಲಿ ಹೇಳಿದಂತೆ ವಿಲ್ ಮಾಡಿರುವ ಆಸ್ತಿಯ ಹಕ್ಕುಗಳನ್ನು ವಿಲ್​ನಲ್ಲಿ ಹೇಳಿದಂತೆ ಅವನ ಇಚ್ಛೆಯಂತೆ ಸರಿಯಾಗಿ ಭಾಗ ಮಾಡಲಾಗಿದ್ಯಾ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು. ವಿಲ್​ನಲ್ಲಿ ಒಂದಕ್ಕಿಂತ ಹೆಚ್ಚಿನ ವ್ಯಕ್ತಿಗಳ ಹೆಸರನ್ನು ಹೊಂದಿದ್ದರೆ ಆಗ ಆಸ್ತಿಯನ್ನು ವಿಲ್​ನಲ್ಲಿ ಹೇಳಿದಂತೆ ಹಂಚಲಾಗುತ್ತದೆ. ಸರಳವಾಗಿ ಹೇಳುವುದಾದರೆ ಪ್ರೊಬೇಟ್ ಎನ್ನುವುದು ಕೋರ್ಟ್ ವಿಲ್ ಮೇಲೆ ನೀಡಿದ ಪ್ರಮಾಣ ಪತ್ರವಾಗಿರುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ವಿಲ್ ಅನ್ನು ಜಾರಿಗೊಳಿಸಲು ಕೋರ್ಟ್ ನೀಡಿದ ಆದೇಶವೇ ಈ ಪ್ರೊಬೇಟ್.

ಈಗ ನಮ್ಮ ಮುಂದಿರುವ ಪ್ರಶ್ನೆ ಏನಂದರೆ ನಾವ್ಯಾಕೆ ಈ ಪ್ರೊಬೇಟ್ ಪಡೆದುಕೊಳ್ಳಬೇಕು? ರಿಯಲ್ ಎಸ್ಟೇಟ್ ಪ್ಲಾನರ್ ಜಿತೇಂದ್ರ ಸೋಲಂಕಿ ಹೇಳುವಂತೆ ಸಾದಾ ಕಾಗದದಲ್ಲೂ ವಿಲ್ ಬರೆಯಬಹುದು. ಇಂತಹ ಪ್ರಕರಣಗಳಲ್ಲಿ ನಕಲಿ ವಿಲ್​ಗಳು ಹಲವು ಬಾರಿ ಬೆಳಕಿಗೆ ಬಂದಿವೆ… ಕೆಲವರು ತಮ್ಮ ಜೀವಿತಾವಧಿಯಲ್ಲಿ ಒಂದಕ್ಕಿಂತ ಹೆಚ್ಚು ವಿಲ್​ಗಳನ್ನು ಬರೆಯುತ್ತಾರೆ. ಪರೀಕ್ಷಾ ಪ್ರಕ್ರಿಯೆಯ ಮೂಲಕ ನ್ಯಾಯಾಲಯವು ವಿಲ್​ನ ಸತ್ಯಾಸತ್ಯತೆಯನ್ನು ದೃಢೀಕರಿಸುತ್ತದೆ. ವಿಲ್​ನ ಪರೀಕ್ಷಣೆಗೆ ಸಂಬಂಧಿಸಿದ ನಿಬಂಧನೆಗಳನ್ನು ಭಾರತೀಯ ಉತ್ತರಾಧಿಕಾರ ಕಾಯಿದೆ, 1925 ರಲ್ಲಿ ನೀಡಲಾಗಿದೆ ಒದಗಿಸಲಾಗಿದೆ. ಈ ಕಾನೂನಿನ ಪ್ರಕಾರ, ವ್ಯಕ್ತಿಯ ಕೊನೆಯ ವಿಲ್ ಮಾತ್ರ ಮಾನ್ಯವೆಂದು ಪರಿಗಣಿಸಲಾಗುತ್ತದೆ.

ಈಗ ಪ್ರೊಬೇಟ್ ಪಡೆಯುವ ಪ್ರಕ್ರಿಯೆ ಹೇಗಿರುತ್ತೆ ಅನ್ನೋದನ್ನ ತಿಳ್ಕೊಳ್ಳೋಣ. ಇದನ್ನು ಪಡೆಯಲು ವಿಲ್​ದಾರ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು… ಫಲಾನುಭವಿ ಅಥವಾ ವಿಲ್ ಪಡೆಯುವವರು ಕೂಡ ಇದಕ್ಕೆ ಅರ್ಜಿ ಸಲ್ಲಿಸಬಹುದು.. ಪರೀಕ್ಷಾ ಪ್ರಕ್ರಿಯೆಯಡಿ ಎರಡು ಪತ್ರಿಕೆಗಳಲ್ಲಿ ಜಾಹೀರಾತುಗಳನ್ನೂ ಪ್ರಕಟಿಸಲಾಗುತ್ತದೆ.. ಇದರಿಂದ ಈ ಆಸ್ತಿಯ ಮೇಲೆ ಬೇರೆ ಯಾರಿಗಾದರೂ ಹಕ್ಕು ಇದೆಯೇ? ಎನ್ನುವುದನ್ನು ತಿಳಿದುಕೊಳ್ಳಬಹುದು. ಯಾವುದೇ ಆಕ್ಷೇಪಣೆಗಳಿಲ್ಲದಿದ್ದರೆ, ನ್ಯಾಯಾಲಯವು ವಿಲ್​ಗೆ ಪ್ರೊಬೇಟ್ ನೀಡುತ್ತದೆ. ಪ್ರೊಬೇಟ್‌ಗಾಗಿ, ನೀವು ನ್ಯಾಯಾಲಯದ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ. ಪ್ರೊಬೇಟ್ ಆದೇಶವನ್ನು ಹೊರಡಿಸಿದ ನಂತರ ಈ ಪಾವತಿಯನ್ನು ಮಾಡಬೇಕು. ವಿವಿಧ ರಾಜ್ಯಗಳಲ್ಲಿ ಈ ಶಿಲ್ಕವು ಬೇರೆ ಬೇರೆಯಾಗಿರುತ್ತದೆ. ಕೆಲವು ರಾಜ್ಯಗಳಲ್ಲಿ ಆಸ್ತಿಯ ಮೌಲ್ಯದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ವಿಲ್​ನ ಪ್ರೊಬೇಟ್ ಕಡ್ಡಾಯವಾ?
ಆಸ್ತಿಯು ಸಂಪೂರ್ಣವಾಗಿ ವಿಲ್ ಮಾಡಿದ ವ್ಯಕ್ತಿಯ ಹೆಸರಿನಲ್ಲಿದ್ದಾಗ, ಆ ಸಂದರ್ಭದಲ್ಲಿ ಪ್ರೊಬೇಟ್, ವಿಲ್​ನ ದೃಢೀಕರಣವನ್ನು ಒದಗಿಸುತ್ತದೆ. ಹೀಗಾಗಿ ಕಾನೂನುಬದ್ಧ ಉತ್ತರಾಧಿಕಾರಿ ತನ್ನ ಹೆಸರಿಗೆ ಆಸ್ತಿಯನ್ನು ಸುಲಭವಾಗಿ ವರ್ಗಾಯಿಸಬಹುದು. ವಿಲ್​ದಾರರು ವಿವಿಧ ರಾಜ್ಯಗಳಲ್ಲಿ ಸ್ಥಿರಾಸ್ತಿಯನ್ನು ಹೊಂದಿರುವಾಗ, ಅದನ್ನು ಬೇರೆಯವರಿಗೆ ವರ್ಗಾಯಿಸಲು ಪ್ರೊಬೇಟ್ ಅಗತ್ಯವಿರಬಹುದು… ಭಾರತೀಯ ಉತ್ತರಾಧಿಕಾರ ಕಾಯಿದೆ, 1925 ರ ಪ್ರಕಾರ, ವಿಲ್​ನಲ್ಲಿ ಉಲ್ಲೇಖಿಸಲಾದ ಆಸ್ತಿಯು ಮುಂಬೈ, ಕೋಲ್ಕತ್ತಾ, ಚೆನ್ನೈನಂತಹ ನಗರಗಳ ಭೌಗೋಳಿಕ ಗಡಿಯೊಳಗೆ ಬಂದರೆ ಆಗ ವಿಲ್​ನ ಪ್ರೊಬೇಟ್ ಕಡ್ಡಾಯವಾಗಿದೆ.. ವಿಲ್​ಗೆ ಸಂಬಂಧಪಟ್ಟ ವ್ಯಕ್ತಿಗಳು ಇಲ್ಲದೇ ಇದ್ದರೆ ಆಗ ನ್ಯಾಯಾಲಯವು ವಿಲ್ ಪ್ರಕಾರ ಆಸ್ತಿಯನ್ನು ವಿತರಿಸಲು ಅಧಿಕಾರಿಯನ್ನು ನೇಮಕ ಮಾಡುತ್ತೆ..

ಈ ಪ್ರಕರಣದಲ್ಲಿ ಅನಿಲ್ ಮೊದಲು ಜಿಲ್ಲಾ ನ್ಯಾಯಾಲಯಕ್ಕೆ ಹೋಗಿ ವಿಲ್ ಪ್ರೊಬೇಟ್‌ ಅನ್ನು ಪಡೆದುಕೊಳ್ಳಬೇಕು.. ಈ ಪ್ರಮಾಣಪತ್ರದ ಆಧಾರದ ಮೇಲೆ ತಂದೆಯ ಆಸ್ತಿಯನ್ನು ಆತನ ಹೆಸರಿಗೆ ವರ್ಗಾಯಿಸಲಾಗುತ್ತದೆ.

Published: May 6, 2024, 19:09 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ