` big benefits of starting sip early can make you a millionaire | ಒಂದು ಪಿಜ್ಜಾದ ಹಣ ಮೀಸಲಿಟ್ಟರೆ ಕೋಟಿ ಸಂಪಾದನೆ! | Money9 Kannada

ಒಂದು ಪಿಜ್ಜಾದ ಹಣ ಮೀಸಲಿಟ್ಟರೆ ಕೋಟಿ ಸಂಪಾದನೆ!

ಇನ್ವೆಸ್ಟ್‌ಮೆಂಟ್ ಪ್ಲಾನಿಂಗ್ ಸಮಯದಲ್ಲಿ, ಮ್ಯೂಚುವಲ್ ಫಂಡ್‌ಗಳಿಗೆ ಎಂಟರ್ ಆಗಲು ಸರಿಯಾದ ಸಮಯ ಯಾವುದು ಎಂಬ ಪ್ರಶ್ನೆ ಮನಸ್ಸಿನಲ್ಲಿ ಇರುತ್ತದೆ. ಕೆಲಸಕ್ಕೆ ಹೋಗಲು ಪ್ರಾರಂಭಿಸಿದ ತಕ್ಷಣ ಇನ್ವೆಸ್ಟ್‌ಮೆಂಟ್ ಶುರು ಮಾಡಬೇಕೇ? ಅಥವಾ 30-35 ವರ್ಷ ವಯಸ್ಸಿನಲ್ಲಿ ವೃತ್ತಿ ಜೀವನದಲ್ಲಿ ಸೆಟಲ್ ಆದಾಗ ಇನ್ವೆಸ್ಟ್‌ಮೆಂಟ್ ಮಾಡುವ ಬಗ್ಗೆ ಯೋಚಿಸಬೇಕೇ?

ಹೂಡಿಕೆ ಅಂತ ಬಂದಾಗ ಮ್ಯೂಚುವಲ್ ಫಂಡ್‌ಗಳು ಒಂದೊಳ್ಳೆ ಆಯ್ಕೆ. ಯಾಕೆಂದರೆ ಅವು ಬ್ಯಾಂಕ್ ಎಫ್‌ಡಿ, ಸರ್ಕಾರಿ ಸಣ್ಣ ಉಳಿತಾಯ ಸ್ಕೀಮ್‌ಗಳು, ಚಿನ್ನ ಮತ್ತು ರಿಯಲ್ ಎಸ್ಟೇಟ್‌ಗೆ ಹೋಲಿಸಿದರೆ ಹೆಚ್ಚಿನ ಆದಾಯ ಕೊಡುತ್ತವೆ. ಈಗ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡೋಕೆ ಎರಡು ವಿಧಾನಗಳಿವೆ. ಮೊದಲನೆಯದು ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ ಅಥವಾ SIP. ಎರಡನೆಯದು ಲಂಪ್ಸಮ್ ಇನ್ವೆಸ್ಟ್‌ಮೆಂಟ್. SIP ಮೂಲಕ, ನಿಮ್ಮ ಹಣ ಪ್ರತಿ ತಿಂಗಳು, ಮೂರು ತಿಂಗಳು ಅಥವಾ ಆರು ತಿಂಗಳಿಗೆ ಕಂತುಗಳಲ್ಲಿ ಮ್ಯೂಚುವಲ್ ಫಂಡ್ ಸ್ಕೀಮ್‌ಗಳಲ್ಲಿ ಹೂಡಿಕೆ ಆಗುತ್ತದೆ. ಲಂಪ್ಸಮ್ ಇನ್ವೆಸ್ಟ್‌ಮೆಂಟ್‌ನಲ್ಲಿ, ನೀವು ಅಷ್ಟೂ ಹಣವನ್ನು ಒಂದೇ ಬಾರಿ ಹೂಡಿಕೆ ಮಾಡುತ್ತೀರಿ. ಇಂದು, ನಾವು SIP ಯ ಎಲ್ಲ ಪ್ರಯೋಜನಗಳ ಬಗ್ಗೆ ಮಾತನಾಡೋಣ. ಅದನ್ನು ಎಷ್ಟು ಬೇಗನೆ ಪ್ರಾರಂಭಿಸಿದರೆ ದೀರ್ಘಾವಧಿಯಲ್ಲಿ ನಿಮಗೆ ಎಷ್ಟು ಅನುಕೂಲಕರ ಎಂದು ನೋಡೋಣ.

SIP ಪ್ರಾರಂಭಿಸೋಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಪಿಜ್ಜಾದ ಒಂದು ಸ್ಲೈಸ್‌ಗೆ ಪೇ ಮಾಡುವಷ್ಟೇ ಅಮೌಂಟಲ್ಲಿ SIP ಶುರು ಮಾಡಬಹುದು. ಹೆಚ್ಚಿನ ಮ್ಯೂಚುಯಲ್ ಫಂಡ್ ಸ್ಕೀಮ್‌ಗಳು ತಿಂಗಳಿಗೆ 500 ರೂಪಾಯಿ SIP ಮಾಡೋಕೆ ನಿಮಗೆ ಅವಕಾಶ ಮಾಡಿಕೊಡುತ್ತವೆ. ICICI Pru ಇನ್ಫ್ರಾಸ್ಟ್ರಕ್ಚರ್ ಫಂಡ್, ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್, ಮೋತಿಲಾಲ್ ಓಸ್ವಾಲ್ ಮಿಡ್‌ಕ್ಯಾಪ್ ಫಂಡ್, ಮತ್ತು ICICI Pru ಲಾರ್ಜ್ ಮತ್ತು ಮಿಡ್‌ಕ್ಯಾಪ್ ಫಂಡ್‌ನಂತಹ ಕೆಲವು ಯೋಜನೆಗಳು ಕೇವಲ ರೂ. 100 ರ ಮಾಸಿಕ SIP ಆಯ್ಕೆಯನ್ನೂ ಕೊಟ್ಟಿವೆ. ವೃತ್ತಿಪರರು, ಗೃಹಿಣಿಯರು ಮತ್ತು ವಿದ್ಯಾರ್ಥಿಗಳಿಗೆ, ಮ್ಯೂಚುವಲ್ ಫಂಡ್‌ಗಳಲ್ಲಿ SIP ಮಾಡೋದು ಒಳ್ಳೆಯ ವಿಧಾನ.

SIP ಮೂಲಕ ಇನ್ವೆಸ್ಟ್ ಮಾಡೋದು ಓಪನ್ ಎಂಡೆಡ್ ಮ್ಯೂಚುವಲ್ ಫಂಡ್‌ಗಳಲ್ಲಿ ಮಾತ್ರ ಸಾಧ್ಯ. ನಿಮಗೆ ಬೇಕಾದಾಗ ನಿಮ್ಮ ಹಣ ವಿತ್‌ಡ್ರಾ ಮಾಡಲು ನಿಮಗೆ ಇದು ಸ್ವಾತಂತ್ರ್ಯ ನೀಡುತ್ತದೆ. ವಿತ್‌ಡ್ರಾ ಮಾಡಿದ ಹಣ 1 ರಿಂದ 3 ಕೆಲಸದ ದಿನಗಳಲ್ಲಿ ನಿಮ್ಮ ಖಾತೆಗೆ ಕ್ರೆಡಿಟ್ ಆಗುತ್ತದೆ. ನಿಮ್ಮ ಆದಾಯದ ಮಟ್ಟವನ್ನು ಆಧರಿಸಿ SIP ಅಮೌಂಟ್ ಅನ್ನು ನಂತರ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಯಾವುದೇ ತುರ್ತು ಸಂದರ್ಭದಲ್ಲಿ, ನೀವು ಸ್ವಲ್ಪ ಸಮಯದವರೆಗೆ SIP ನಿಲ್ಲಿಸಲೂ ಕೂಡ ಆಗುತ್ತದೆ.

ಕಾಂಪೌಂಡಿಂಗ್… ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಒಂದು ದೊಡ್ಡ ಪ್ರಯೋಜನ ಅಂದರೆ ಕಾಂಪೌಂಡಿಂಗ್. ಅಂದರೆ ನೀವು ಮಾಡಿದ ಹೂಡಿಕೆ ಮೇಲೆ ನೀವು ಗಳಿಸುವ ಆದಾಯ ಕೂಡಾ ನಿಮ್ಮ ಅಸಲಿನ ಭಾಗವಾಗುತ್ತದೆ. ಆಗ, ನಿಮ್ಮ ಆದಾಯವು ಪ್ರತಿ ಬಾರಿಯೂ ಅಸಲು ಮೊತ್ತಕ್ಕೆ ಸೇರುತ್ತಲೇ ಇರುತ್ತದೆ. ಮುಂದಿನ ಬಾರಿ ಆದಾಯದ ಲೆಕ್ಕ ಮಾಡುವಾಗ ಅಸಲು ಮತ್ತು ಹಿಂದಿನ ಬಾರಿ ಬಂದ ಆದಾಯವನ್ನೂ ಪರಿಗಣಿಸಲಾಗುತ್ತದೆ. ಈ ‘ರಿಟರ್ನ್ಸ್ ಆನ್ ರಿಟರ್ನ್ಸ್’ ಲೆಕ್ಕಾಚಾರದಲ್ಲಿ, 7, 10, 15, ಅಥವಾ 20 ವರ್ಷಗಳಷ್ಟು ದೀರ್ಘಾವಧಿಯಲ್ಲಿ ಒಳ್ಳೆಯ ರಿಟರ್ನ್ಸ್ ಗಳಿಸಬಹುದು.

ರೂಪಾಯಿ ಕಾಸ್ಟ್‌ ಎವರೇಜಿಂಗ್… ಮಾರುಕಟ್ಟೆಯ ಏರಿಳಿತಗಳ ಬಗ್ಗೆ ಆತಂಕ ಇರುವವರಿಗೆ SIP ಸರಿಯಾದ ಆಯ್ಕೆ. ಏಕೆಂದರೆ SIP ಯಲ್ಲಿ, ಫಿಕ್ಸೆಡ್ ಅಮೌಂಟ್ ಅನ್ನು ರೆಗ್ಯುಲರ್ ಆಗಿ ಇನ್ವೆಸ್ಟ್‌ ಮಾಡಲಾಗುತ್ತದೆ. ಸೋ, ಇದು ಮಾರ್ಕೆಟ್ ಇಳಿದಾಗ ಹೆಚ್ಚಿನ ಯುನಿಟ್ ಕೊಡುತ್ತದೆ. ಅದೇ ರೀತಿ, ಮಾರ್ಕೆಟ್ ಏರಿದಾಗ ಕಡಿಮೆ ಯುನಿಟ್ ಖರೀದಿಸುತ್ತದೆ. ಇದು ದೀರ್ಘಾವಧಿಯಲ್ಲಿ ಪ್ರತಿ ಯೂನಿಟ್‌ಗೆ ಸರಾಸರಿ ಕಾಸ್ಟ್ ಕೊಡುತ್ತದೆ. ಇದನ್ನೇ ರುಪೀ ಕಾಸ್ಟ್‌ ಎವರೇಜಿಂಗ್‌ ಎಂದು ಕರೆಯಲಾಗುತ್ತದೆ. ಹೀಗಾಗಿ, ಕಾಸ್ಟ್‌ ಎವರೇಜಿಂಗ್‌ನಲ್ಲಿ ಮಾರುಕಟ್ಟೆಯ ಏರಿಳಿತಗಳನ್ನು ತುಂಬಾ ಗಮನವಿಟ್ಟು ಮೇಲ್ವಿಚಾರಣೆ ಮಾಡುವ ಅಗತ್ಯವಿಲ್ಲ.

ಹಾಗಿದ್ದರೆ ಸಿಪ್ ಅಥವಾ ಲಂಪ್ಸಮ್, ಹೊಸ ಹೂಡಿಕೆದಾರರಿಗೆ ಯಾವುದು ಬೆಸ್ಟ್‌? ಒಬ್ಬ ವ್ಯಕ್ತಿಯ ಜೀವನದಲ್ಲಿ, ಉನ್ನತ ಶಿಕ್ಷಣ, ಮದುವೆ, ಕಾರು, ಮನೆ, ಮಕ್ಕಳ ಶಿಕ್ಷಣ, ನಿವೃತ್ತಿ ಮುಂತಾದ ಹಲವು ಆರ್ಥಿಕ ಗುರಿಗಳಿರುತ್ತವೆ. ನಿಮ್ಮ ಪ್ರತಿಯೊಂದು ಗುರಿಗಳಿಗೂ ನೀವು ಪ್ರತ್ಯೇಕ SIP ಅನ್ನು ಸ್ಟಾರ್ಟ್‌ ಮಾಡಬಹುದು. ನಿಮಗೆ ಮುಂದಿನ 6 ವರ್ಷಗಳಲ್ಲಿ ಹೊಸ ಕಾರಿಗೆ 10 ಲಕ್ಷ, 10 ವರ್ಷಗಳಲ್ಲಿ ನಿಮ್ಮ ಮಕ್ಕಳ ಶಿಕ್ಷಣಕ್ಕೆ 25 ಲಕ್ಷ ಬೇಕು ಎಂದು ಭಾವಿಸೋಣ. ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಎರಡು ಪ್ರತ್ಯೇಕ SIP ಮಾಡಬೇಕು. ಒಂದರಲ್ಲಿ ರೂ. 9,550 ಮತ್ತು ಇನ್ನೊಂದರಲ್ಲಿ ರೂ. 10,867 ಹಾಕುತ್ತೀರಿ. ಅಂದಾಜು 12% ರಿಟರ್ನ್ಸ್ ಕೊಡುತ್ತದೆ ಎಂದುಕೊಳ್ಳೋಣ. ಪ್ರತಿ ಗುರಿಗೆ ಪ್ರತ್ಯೇಕ SIP ಗಳನ್ನು ಮಾಡಿಕೊಂಡರೆ, ನಿಮ್ಮ ಇನ್ವೆಸ್ಟ್‌ಮೆಂಟ್‌ಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು.

ಇನ್ವೆಸ್ಟ್‌ಮೆಂಟ್ ಪ್ಲಾನಿಂಗ್ ಸಮಯದಲ್ಲಿ, ಮ್ಯೂಚುವಲ್ ಫಂಡ್‌ಗಳಿಗೆ ಎಂಟರ್ ಆಗಲು ಸರಿಯಾದ ಸಮಯ ಯಾವುದು ಎಂಬ ಪ್ರಶ್ನೆ ಮನಸ್ಸಿನಲ್ಲಿ ಇರುತ್ತದೆ. ಕೆಲಸಕ್ಕೆ ಹೋಗಲು ಪ್ರಾರಂಭಿಸಿದ ತಕ್ಷಣ ಇನ್ವೆಸ್ಟ್‌ಮೆಂಟ್ ಶುರು ಮಾಡಬೇಕೇ? ಅಥವಾ 30-35 ವರ್ಷ ವಯಸ್ಸಿನಲ್ಲಿ ವೃತ್ತಿ ಜೀವನದಲ್ಲಿ ಸೆಟಲ್ ಆದಾಗ ಇನ್ವೆಸ್ಟ್‌ಮೆಂಟ್ ಮಾಡುವ ಬಗ್ಗೆ ಯೋಚಿಸಬೇಕೇ? SIP ಅನ್ನು ಮೊದಲೇ ಪ್ರಾರಂಭಿಸದಿದ್ದರೆ ಸಮಸ್ಯೆ ಏನು? ಈ ಬಗ್ಗೆಯೂ ನಾವು ತಿಳಿದುಕೊಳ್ಳಬೇಕಾಗುತ್ತದೆ.

ಇದನ್ನು ಒಂದು ಉದಾಹರಣೆ ಮೂಲಕ ಅರ್ಥಮಾಡಿಕೊಳ್ಳೋಣ. ನಿಮಗೆ 22 ವರ್ಷ. 42 ನೇ ವಯಸ್ಸಿನಲ್ಲಿ, ಫ್ಲಾಟ್‌ಗೆ ಡೌನ್ ಪೇಮೆಂಟ್‌ ಮಾಡೋಕೆ ನಿಮಗೆ ಹಣ ಬೇಕು. ಅಂದರೆ ನಿಮ್ಮ ಕೈಯಲ್ಲಿ 20 ವರ್ಷಗಳಿವೆ. ನೀವು ರೂ. 2,000 ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಹಾಕಿದರೆ, ಅಂದಾಜು 12% ವಾರ್ಷಿಕ ರಿಟರ್ನ್ಸ್‌ ಬರುತ್ತದೆ ಎಂದು ಊಹಿಸಿದರೆ, 42 ನೇ ವಯಸ್ಸಿನಲ್ಲಿ ಸುಮಾರು ರೂ. 20 ಲಕ್ಷ ನಿಮ್ಮ ಕೈಯಲ್ಲಿರುತ್ತದೆ. ಆದರೆ ನೀವು ಇದೇ ಹೂಡಿಕೆಯನ್ನು 27 ನೇ ವಯಸ್ಸಿನಲ್ಲಿ ಪ್ರಾರಂಭಿಸಿದರೆ, 42 ನೇ ವಯಸ್ಸಿನಲ್ಲಿ, ನಿಮ್ಮ ಬಳಿ ಕೇವಲ 10 ಲಕ್ಷ ಕಾರ್ಪಸ್ ಇರುತ್ತದೆ. ನಿಮ್ಮ SIP ಕೇವಲ 5 ವರ್ಷ ತಡವಾದರೆ ರೂ. 10 ಲಕ್ಷ ನಷ್ಟ ಆಗುತ್ತೆ. ಹೀಗಾಗಿ, 42 ವರ್ಷ ವಯಸ್ಸಿನೊಳಗೆ 20 ಲಕ್ಷ ಕಾರ್ಪಸ್ ಅನ್ನು ಸಂಗ್ರಹಿಸಬೇಕು ಎಂದಾದರೆ, 27 ನೇ ವಯಸ್ಸಿನಲ್ಲಿ 2000 ರೂ. ಬದಲಿಗೆ 4,000 ರೂ. ನಿಮ್ಮ SIP ಮಾಡಬೇಕು.

ನೀವು ಎಷ್ಟು ಬೇಗ SIP ಅನ್ನು ಶುರು ಮಾಡುತ್ತೀರೋ, ನಿಮ್ಮ ಹಣ ಬೆಳೆಯುವುದಕ್ಕೆ ಹೆಚ್ಚಿನ ಸಮಯ ನಿಮಗೆ ಇರುತ್ತದೆ. SIP ಮೊತ್ತ ಕಡಿಮೆ ಇರುತ್ತದೆ. ಆದರೆ, ನೀವು ಹೂಡಿಕೆ ಪ್ರಾರಂಭಿಸುವುದು ತಡವಾದಷ್ಟೂ, ನಿಮ್ಮ ಹಣಕಾಸಿನ ಗುರಿಗಳನ್ನು ಪೂರೈಸಲು ನಿಮಗೆ ಕಡಿಮೆ ಸಮಯ ಇರುತ್ತದೆ. ಅಗತ್ಯ SIP ಮೊತ್ತವೂ ಹೆಚ್ಚಿರುತ್ತದೆ. ಚಿಕ್ಕವಯಸ್ಸಿನಲ್ಲಿ ಆರಂಭಿಸಿದ ಸಣ್ಣ SIP ಕೂಡ ದೀರ್ಘಾವಧಿಯಲ್ಲಿ ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿ ಮಾಡಬಹುದು.

ಚಿಕ್ಕ ವಯಸ್ಸಿನಲ್ಲಿ, ನಿಮ್ಮ ರಿಸ್ಕ್‌ ಸಹಿಸಿಕೊಳ್ಳುವ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಹಣದುಬ್ಬರ ಎದುರಿಸುವ ಸಾಮರ್ಥ್ಯವನ್ನು ಹೊಂದಿರುವ ಷೇರುಗಳು ಅಥವಾ ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳಂತಹ ಹೆಚ್ಚು ರಿಸ್ಕ್ ಇರುವ ಆಪ್ಷನ್‌ಗಳಲ್ಲಿ ಹೂಡಿಕೆ ಮಾಡಲು ನೀವು ಆಗ ಉತ್ತಮ ಸ್ಥಾನದಲ್ಲಿರುತ್ತೀರಿ. ವೃತ್ತಿಜೀವನದ ಕೊನೆಯ ವೇಳೆಗೆ, ಕಡಿಮೆ ಆದಾಯವನ್ನು ನೀಡುವ ಮತ್ತು ಕಡಿಮೆ ಅಪಾಯಕಾರಿ ಡೆಟ್ ಮ್ಯೂಚುಯಲ್ ಫಂಡ್‌ಗಳಂತಹ ಆಯ್ಕೆಗಳನ್ನೇ ತೆಗೆದುಕೊಳ್ಳಬೇಕಾಗುತ್ತದೆ.

ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ರಿಸ್ಕ್ ಮತ್ತು ರಿಟರ್ನ್ ಎರಡೂ ಇದೆ. ಮ್ಯೂಚುವಲ್ ಫಂಡ್ ಆದಾಯವು ಷೇರು ಮಾರುಕಟ್ಟೆಯನ್ನು ಅವಲಂಬಿಸಿರುತ್ತದೆ. ಷೇರು ಮಾರುಕಟ್ಟೆಯಲ್ಲಿ ಆದಾಯದ ದರ ಅನಿಶ್ಚಿತ. ಆದಾಯದಲ್ಲಿ ಏರುವಿಕೆ ಇಳಿಯುವಿಕೆ ಎರಡೂ ಸಾಧ್ಯ. ನಿಮ್ಮ ರಿಸ್ಕ್ ಸಹಿಸಿಕೊಳ್ಳುವ ಸಾಮರ್ಥ್ಯ, ಹೂಡಿಕೆ ಮೊತ್ತ, ಅವಧಿ ಮತ್ತು ಹಣಕಾಸಿನ ಗುರಿಗಳ ಆಧಾರದ ಮೇಲೆ ಫಂಡ್‌ ಆಯ್ಕೆಮಾಡಿ. ಹೂಡಿಕೆ ಮಾಡುವ ಮೊದಲು ಸರಿಯಾಗಿ ಸಂಶೋಧನೆ ಮಾಡಿ ಮತ್ತು ಅನುಭವಿ ಹಣಕಾಸು ಸಲಹೆಗಾರರಿಂದ ಸಲಹೆ ಪಡೆಯಿರಿ. ನಿಮ್ಮ ಪೋರ್ಟ್‌ಫೋಲಿಯೊವನ್ನು ರೆಗ್ಯುಲರ್ ಆಗಿ ಪರಿಶೀಲಿಸಿ. ಹೂಡಿಕೆ ಮಾಡುವ ಮೊದಲು ತುರ್ತು ನಿಧಿ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದರಿಂದ ನಿಮ್ಮ ಹೂಡಿಕೆಗಳನ್ನು ಕಷ್ಟದ ಸಮಯದಲ್ಲಿ ತೆಗೆಯಬೇಕಾಗುವುದಿಲ್ಲ ಅಥವಾ ನಿಲ್ಲಿಸಬೇಕಾಗುವುದಿಲ್ಲ.

Published: May 4, 2024, 12:29 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ