LIC ನೌಕರರಿಗೆ ಬಂಪರ್, ಮಸಾಲೆ ಕಂಪನಿಗಳಿಗೆ ಆಘಾತ!

ಭಾರತದ ಫುಡ್ ಸೇಫ್ಟಿ ರೆಗ್ಯುಲೇಟರ್‌ ಈಗ MDH ಮತ್ತು ಎವರೆಸ್ಟ್ ಮತ್ತು ಎಲ್ಲ ಮಸಾಲೆ ಮಿಕ್ಸ್‌ ತಯಾರಿಕೆ ಕಂಪನಿಗಳ ಉತ್ಪನ್ನಗಳ ಪರೀಕ್ಷೆ ಮತ್ತು ತಪಾಸಣೆಗೆ ಆದೇಶ ನೀಡಿದೆ.

alternate

ಎಲ್‌ಐಸಿ ನೌಕರರಿಗೆ ಶೀಘ್ರದಲ್ಲೇ ವೇತನ ಹೆಚ್ಚಳ, ಅಧಿಸೂಚನೆ ಪ್ರಕಟ
ಎಲ್‌ಐಸಿ ಉದ್ಯೋಗಿಗಳಿಗೆ ಶೀಘ್ರದಲ್ಲೇ ವೇತನ ಹೆಚ್ಚಳವಾಗಲಿದೆ. ನೌಕರರ ವೇತನ ಪರಿಷ್ಕರಣೆಗೆ ಹಣಕಾಸು ಸಚಿವಾಲಯ ಗ್ರೀನ್ ಸಿಗ್ನಲ್ ನೀಡಿದೆ. ಈ ಸಂಬಂಧ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಇದರಿಮದ, ಎಲ್‌ಐಸಿ ನೌಕರರ ವೇತನ ವಾರ್ಷಿಕವಾಗಿ ಶೇ.17ರಷ್ಟು ಏರಿಕೆಯಾಗಲಿದೆ. ಆಗಸ್ಟ್ 1, 2022 ರಿಂದ ಜಾರಿಗೆ ಬರುವಂತೆ ಇದನ್ನು ಪರಿಗಣಿಸಲಾಗುತ್ತದೆ. 1 ಲಕ್ಷ 10 ಸಾವಿರಕ್ಕೂ ಹೆಚ್ಚು ನೌಕರರು ಇದರ ಪ್ರಯೋಜನ ಪಡೆಯಲಿದ್ದಾರೆ. ವೇತನ ಪರಿಷ್ಕರಣೆಯಿಂದ ಎಲ್‌ಐಸಿಗೆ ಪ್ರತಿ ವರ್ಷ ಸುಮಾರು 4,000 ಕೋಟಿ ರೂ. ಹೊರೆಯಾಗಲಿದೆ.

ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ 50% ಕುಸಿತ
ಏಪ್ರಿಲ್ 2024 ರಲ್ಲಿ ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ 50% ಇಳಿಕೆಯಾಗಿದೆ… government transportation portal Vahan ಡೇಟಾ ಪ್ರಕಾರ, ಮಾರ್ಚ್‌ನಲ್ಲಿ ದಾಖಲೆಯ 1,36,000 ಇಲೆಕ್ಟ್ರಿಕ್ 2 ವೀಲರ್‌ಗಳು ಮಾರಾಟವಾಗಿವೆ… ಆದರೆ ಏಪ್ರಿಲ್‌ನಲ್ಲಿ ಕೇವಲ 64000 EV ಗಳು ಮಾರಾಟವಾಗಿವೆ. ಸಾಮಾನ್ಯವಾಗಿ ಏಪ್ರಿಲ್ ತಿಂಗಳು ಎಲೆಕ್ಟ್ರಿಕ್ ಸ್ಕೂಟರ್‌ ಮಾರಾಟದ ವಿಷಯದಲ್ಲಿ ನಿಧಾನವಾಗಿರುತ್ತದೆ ಎಂದು ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆ ಕಂಪನಿಯ ಎಕ್ಸೆಕ್ಯೂಟಿವ್ ಒಬ್ಬರು ಹೇಳಿದ್ದಾರೆ. ಇದೇ ವೇಳೆ, ಕಂಪನಿಗಳು ಕೂಡಾ ಕಡಿಮೆ ಪ್ರೊಡಕ್ಷನ್ ಮಾಡುತ್ತಿವೆ, ಸ್ಟ್ರಾಟಜಿಗಳ ಬಗ್ಗೆ ಮರುಚಿಂತನೆ ಮಾಡುತ್ತಿವೆ… ಮಾರ್ಚ್ 31ಕ್ಕೆ FAME 2 ಯೋಜನೆ ಮುಗಿದು, ಸಬ್ಸಿಡಿ ನಿಂತಿದೆ. heavy industry ministry ಯ 500 ಕೋಟಿ ರೂ. ಎಲೆಕ್ಟ್ರಿಕ್ ಮೊಬಿಲಿಟಿ ಪ್ರಮೋಶನ್ ಸ್ಕೀಮ್ ಅಂದರೆ EMPS ಶುರುವಾಗಿದೆ. EMPS 2024 ರ ಅಡಿಯಲ್ಲಿ, 3 ಲಕ್ಷಕ್ಕೂ ಹೆಚ್ಚು 2 ವೀಲರ್‌ಗೆ 10,000 ರೂ.ವರೆಗೆ ಹಣಕಾಸಿನ ಸಹಾಯ ನೀಡಲಾಗುತ್ತದೆ. ಹೊಸ ಸಬ್ಸಿಡಿಯು ಏಪ್ರಿಲ್ 1 ರ ಮೊದಲು ರಿಜಿಸ್ಟರ್ ಮಾಡಿದ 2 ವೀಲರ್‌ಗಳಿಗೆ ಅನ್ವಯವಾಗುವುದಿಲ್ಲ. ಇದರಿಂದ ಕಂಪನಿಗಳು ತಮ್ಮ ಪ್ರೊಡಕ್ಷನ್ ಮತ್ತು ಮಾರಾಟವನ್ನು ನಿಧಾನ ಮಾಡಿವೆ. ಸಬ್ಸಿಡಿ ಕುರಿತು ಇನ್ನಷ್ಟು ಸ್ಪಷ್ಟತೆ ಬೇಕಿದೆ ಎಂದು ಈ ವಲಯ ಕಾಯುತ್ತಿದೆ. ಆದರೆ, ಒಟ್ಟು ದ್ವಿಚಕ್ರ ವಾಹನಗಳಲ್ಲಿ EV ಮಾರುಕಟ್ಟೆಯು FY24 ರಲ್ಲಿ 940,000 ಯುನಿಟ್‌ ಆಗಿದ್ದು, ಹಿಂದಿನ ವರ್ಷದಿಂದ 30% ರಷ್ಟು ಬೆಳೆದಿದೆ.

2024-25 ರ ಅಸೆಸ್ಮೆಂಟ್ ಇಯರ್‌ನ ಮೊದಲ ತಿಂಗಳಲ್ಲಿ 6 ಲಕ್ಷ ರಿಟರ್ನ್ಸ್‌ ಸಲ್ಲಿಕೆ
ಆದಾಯ ತೆರಿಗೆ ಇಲಾಖೆಗೆ 2024-25 ರ ಅಸೆಸ್ಮೆಂಟ್ ಇಯರ್‌ನ ಮೊದಲ ತಿಂಗಳಲ್ಲಿ ಅಂದರೆ ಏಪ್ರಿಲ್‌ನಲ್ಲಿ ಅಂದಾಜು 6 ಲಕ್ಷ ರಿಟರ್ನ್ಸ್‌ ಬಂದಿಎದೆ. ಮಹತ್ವದ ಸಂಗತಿಯೆಂದರೆ, ಮುಕ್ಕಾಲು ಭಾಗ verified returns process ಕೂಡಾ ಮಾಡಲಾಗಿದೆ. ಏಪ್ರಿಲ್ 29 ರವರೆಗೆ, 5.92 ಲಕ್ಷಕ್ಕೂ ಹೆಚ್ಚು ರಿಟರ್ನ್ಸ್ ಸಲ್ಲಿಕೆಯಾಗಿದ್ದು, ಅದರಲ್ಲಿ 5.38 ಲಕ್ಷಕ್ಕೂ ಹೆಚ್ಚು verified ಆಗಿದೆ ಮತ್ತು 3.67 ಲಕ್ಷ verified returns process ಮಾಡಲಾಗಿದೆ. ಹೊಸ ಹಣಕಾಸು ವರ್ಷದಲ್ಲಿ ತೆರಿಗೆದಾರರು ತಮ್ಮ ರಿಟರ್ನ್ಸ್ ಸಲ್ಲಿಸಲು ಇಲಾಖೆಯು ಮೊದಲ ಬಾರಿಗೆ ಇ ಫೈಲಿಂಗ್ ಪೋರ್ಟಲ್ ತೆರೆದಿದೆ.

ಬ್ಯಾಂಕಿಂಗ್ ವ್ಯವಸ್ಥೆಗೆ ಹಿಂತಿರುಗಬೇಕಿದೆ 7961 ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳು
7961 ಕೋಟಿ ಮೌಲ್ಯದ 2000 ರೂಪಾಯಿ ನೋಟುಗಳು ದೇಶದಲ್ಲಿ ಇನ್ನೂ ಚಲಾವಣೆಯಲ್ಲಿವೆ… ಏಪ್ರಿಲ್ 30 ರವರೆಗೆ ಒಟ್ಟು 97.76 ಪರ್ಸೆಂಟ್ 2000 ರೂಪಾಯಿ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಎಂದು RBI ಹೇಳಿದೆ… ಮೇ 19, 2023 ರಂದು ಆರ್‌ಬಿಐ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಿಸಿತ್ತು. ಆಗ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಒಟ್ಟು 3 ಲಕ್ಷದ 56 ಸಾವಿರ ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳು ಚಲಾವಣೆಯಲ್ಲಿತ್ತು. ಈಗ ಅದು ಏಪ್ರಿಲ್ 30, 2024 ರಂದು 7961 ಕೋಟಿ ರೂ.ಗೆ ಇಳಿದಿದೆ… ಅಂದರೆ, ಸುಮಾರು ಎರಡೂವರೆ ಪರ್ಸೆಂಟ್ ನೋಟುಗಳು ಇನ್ನೂ ವಾಪಸಾಗಿಲ್ಲ.

ಎಲ್ಲ ಮಸಾಲೆ ತಯಾರಿಕಾ ಕಂಪನಿಗಳ ಕಾರ್ಖಾನೆಗಳ ತಪಾಸಣೆ ನಡೆಸಲು ನಿರ್ಧಾರ
ಭಾರತದ ಫುಡ್ ಸೇಫ್ಟಿ ರೆಗ್ಯುಲೇಟರ್‌ ಈಗ MDH ಮತ್ತು ಎವರೆಸ್ಟ್ ಮತ್ತು ಎಲ್ಲ ಮಸಾಲೆ ಮಿಕ್ಸ್‌ ತಯಾರಿಕೆ ಕಂಪನಿಗಳ ಉತ್ಪನ್ನಗಳ ಪರೀಕ್ಷೆ ಮತ್ತು ತಪಾಸಣೆಗೆ ಆದೇಶ ನೀಡಿದೆ. ಎರಡು ಜನಪ್ರಿಯ ಸ್ಥಳೀಯ ಬ್ರಾಂಡ್‌ಗಳ ಉತ್ಪನ್ನಗಳಲ್ಲಿ ಕೀಟನಾಶಕ ಎಥಿಲೀನ್ ಆಕ್ಸೈಡ್ ಇರುವ ಬಗ್ಗೆ ಕುರಿತು ಗ್ಲೋಬಲ್ ರೆಗ್ಯುಲೇಟರ್‌ಗಳು ತನಿಖೆ ನಡೆಸುತ್ತಿರುವುದರಿಂದ ಈ ವಲಯದ ತನಿಖೆಯ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಂದರೆ FSSAI ಹೇಳಿದೆ. ಈಗ ಸ್ಥಳೀಯ ಮತ್ತು ವಿದೇಶಿ ಮಾರಾಟಕ್ಕೆಂದು ಕರ್ರಿ ಪೌಡರ್ ಮತ್ತು ಮಿಕ್ಸೆಡ್‌ ಮಸಾಲಾ ಬ್ಲೆಂಡ್‌ಗಳನ್ನು ತಯಾರಿಸುವ ಕಂಪನಿಗಳ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರ ಜೊತೆಗೆ ಎಲ್ಲ ಮಸಾಲಾ ಪೌಡರ್ ತಯಾರಿಕಾ ಕಂಪನಿಗಳ ತಯಾರಿಕಾ ಘಟಕಗಳ ತಪಾಸಣೆ, ಮಾದರಿ ಮತ್ತು ಪರೀಕ್ಷೆಗೆ ಆದೇಶ ನೀಡಲಾಗಿದೆ. ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಇವು ಅನುಸರಿಸುತ್ತವೆಯೇ ಎಂದು ಪ್ರತಿ ಉತ್ಪನ್ನವನ್ನೂ ವಿಶ್ಲೇಷಿಸಲಾಗುತ್ತದೆ.

5500mAh ಬ್ಯಾಟರಿ ಇರುವ ಭಾರತದ ಅತ್ಯಂತ ತೆಳುವಾದ ಸ್ಮಾರ್ಟ್‌ಫೋನ್ Vivo V30e ಬಿಡುಗಡೆ
ಬ್ಯಾಟರಿ ದೊಡ್ಡದಿದ್ದರೆ ಫೋನ್‌ನ ತೂಕ ಹೆಚ್ಚಾಗುತ್ತದೆ. ಆದರೆ Vivo ಹೊಸ ಸ್ಮಾರ್ಟ್‌ಫೋನ್ Vivo V30e ಬಿಡುಗಡೆ ಮಾಡಿದೆ. ಇದರಲ್ಲಿ 5500mAh ಬ್ಯಾಟರಿ ಇದೆ. ಹಾಗಿದ್ದರೂ, ಅದರ ತೂಕ ಕೇವಲ 190 ಗ್ರಾಂ. ಇದೆ. ದಪ್ಪವು 7.65 ಮಿಮೀ. ಇದೆ. ಹೀಗಾಗಿ 5500mAh ಬ್ಯಾಟರಿ ಹೊಂದಿರುವ ಭಾರತದ ಅತ್ಯಂತ ತೆಳುವಾದ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆ ಪಡೆದಿದೆ. ಫೋನ್ ಎರಡು ಬಣ್ಣದಲ್ಲಿದೆ. ವೆಲ್ವೆಟ್ ರೆಡ್ ಮತ್ತು ಸಿಲ್ಕ್ ಬ್ಲೂ ಕಲರ್ ಆಯ್ಕೆ ಇರುತ್ತದೆ. ಇದರ ಮಾರಾಟವು 9 ಮೇ 2024 ರಿಂದ ಪ್ರಾರಂಭವಾಗುತ್ತದೆ. ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಸ್ಟೋರ್ ಮತ್ತು ರಿಟೇಲ್ ಪಾರ್ಟ್ನರ್‌ ಸ್ಟೋರ್‌ಗಳಿಂದ ಖರೀದಿಸಬಹುದು.

Published: May 4, 2024, 15:39 IST

LIC ನೌಕರರಿಗೆ ಬಂಪರ್, ಮಸಾಲೆ ಕಂಪನಿಗಳಿಗೆ ಆಘಾತ!