` studio apartment how to earn from the home that you live | ಸಿಂಗಲ್ BHK ಮನೆ ಮತ್ತು ಸ್ಡುಡಿಯೋ ಅಪಾರ್ಟ್​ಮೆಂಟ್​ , ಯಾವುದು ಬೆಸ್ಟ್? | Money9 Kannada

ಸಿಂಗಲ್ BHK ಮನೆ ಮತ್ತು ಸ್ಡುಡಿಯೋ ಅಪಾರ್ಟ್​ಮೆಂಟ್​ , ಯಾವುದು ಬೆಸ್ಟ್?

ಇನ್ನು ಗಾತ್ರದ ಬಗ್ಗೆ ಮಾತನಾಡುವುದಾದರೆ ಒನ್ ಬಿ ಎಚ್ ಕೆ‌ ಫ್ಲಾಟ್ ಗಿಂತ ಸ್ಟುಡಿಯೋ ಅಪಾರ್ಟ್ಮೆಂಟ್ ನ‌ ಸೈಜ್ ಕಡಿಮೆ ಇರುತ್ತದೆ. ಇದು 250 ರಿಂದ 300 ಚದರಡಿಯಷ್ಟಿರತ್ತದೆ. ಒನ್ ಬಿ ಎಚ್ ಕೆ ಫ್ಲಾಟ್ 500-600 ಚದರಡಿ ವಿಸ್ತೀರ್ಣ ಇರುತ್ತದೆ.

ರಿಯಲ್ ಎಸ್ಟೇಟ್ ಬ್ರೋಕರ್ ಜೊತೆಗೆ ಸುವೇಶ್ ದೂರವಾಣಿಯಲ್ಲಿ ಮಾತನಾಡುತ್ತಿದ್ದಾರೆ. ಅವರು ಫ್ಲಾಟ್ ಹುಡುಕುತ್ತಿದ್ದಾರೆ. ಬಜೆಟ್ ಎಷ್ಟು ಅಂತಾ ಬ್ರೋಕರ್ ಕೇಳುತ್ತಾರೆ? 40 ಲಕ್ಷ ಅಂತಾ ಸುವೇಶ್ ಹೇಳುತ್ತಾರೆ. ಆಗ ಆ ಬ್ರೋಕರ್, ಅವರ ಬಜೆಟ್ ಗೆ ಎರಡು ಆಯ್ಜೆ ಇದೆ‌. ಒಂದು ಒನ್ ಬಿ ಎಚ್ ಕೆ ಫ್ಲಾಟ್, ಇನ್ನೊಂದು ಸ್ಟುಡಿಯೋ ಅಪಾರ್ಟ್ಮೆಂಟ್.. ಆಗ ಎರಡರ ಗಾತ್ರ ಎಷ್ಟು ಅಂತಾ ಸುವೇಶ್ ವಿಚಾರಿಸುತ್ತಾರೆ. ಸ್ಟುಡಿಯೋ ಅಪಾರ್ಟ್ಮೆಂಟ್ 300 ಚದರಡಿ ಇದ್ದರೆ ಒಂದು ಕೊಠಡಿ, ಹಜಾರ ಮತ್ತು ಅಡುಗೆ ಮನೆಯ ಒನ್ ಬಿ ಎಚ್ ಕೆ ಫ್ಲಾಟ್ 600 ಚದರಡಿ ಇರುತ್ತದೆ. ಒಬ್ಬನೇ ವ್ಯಕ್ತಿ ವಾಸಿಸುವುದಾದರೆ ಸ್ಟುಡಿಯೋ ಉತ್ತಮ ಆಯ್ಕೆ. ಅದನ್ನ ಬಾಡಿಗೆಗೂ ಕೊಡಬಹುದು ಅಂತಾ ಬ್ರೋಕರ್ ಹೇಳುತ್ತಾರೆ. ಆಗ ಸುವೇಶ್, ಎರಡರಲ್ಲಿ ಯಾವುದು ಅಗ್ಗ ಅಂತಾ ಕೇಳಿದಾಗ, 1ಬಿಎಚ್ ಕೆ ಅಗ್ಗ ಎನ್ನುವ ಬ್ರೋಕರ್ ಉತ್ತರ ಕೇಳಿ ಅವರಿಗೆ ಆಶ್ಚರ್ಯ ಆಗುತ್ತದೆ‌‌.. ಚದರಡಿ ಜಾಗ ಜಾಸ್ತಿ ಇದ್ರೂ ಅಗ್ಗ ಯಾಕೆ ಎನ್ನುವುದನ್ನು ವಿವರಿಸುವ ಕೆಲಸ ಶುರುವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಸ್ಟುಡಿಯೋ ಅಪಾರ್ಟ್ಮೆಂಟ್ ಗಳ ಕ್ರೇಜ್ ಕ್ಷಿಪ್ರವಾಗಿ ಹೆಚ್ಚುತ್ತಿದೆ. ವಿಶೇಷವಾಗಿ ಮೆಟ್ರೋ ನಗರಗಳಲ್ಲಿ ಇದರತ್ತ ಒಲವು ಜಾಸ್ತಿ ಆಗ್ತಿದೆ.. ದೇಶದ ಮೂಲೆಮೂಲೆಗಳಿಗಿಂದ ಕೆಲಸ ಅರಸಿ ಮಹಾನಗರಕ್ಕೆ ಜನ ಬಂದಿರುತ್ತಾರೆ. ಹಾಗಾಗಿ ಸಾಮಾನ್ಯವಾಗಿ ಆಸ್ತಿ ಬೆಲೆ ಹೆಚ್ಚಾಗಿಯೇ ಇರುತ್ತದೆ. ‌ಇಂತಹ ಸನ್ನಿವೇಶದಲ್ಲಿ, ಸ್ಟುಡಿಯೋ ಅಪಾರ್ಟ್ಮೆಂಟ್ ಗಳು ಹೂಡಿಕೆದಾರರ ನೆಚ್ಚಿನ ಆಯ್ಕೆಯಾಗಿದೆ. ಬಾಡಿಗೆ ವಾಸದವರೂ ಇದ ಕಡೆಗೆ ಆಸಕ್ತಿ ತೋರುತ್ತಿದ್ದಾಎ.ನ ಆರ್ತಾ ಇದಾರೆ.. ಹಾಗಾದ್ರೆ ಈ ಸ್ಟುಡಿಯೋ ಅಪಾರ್ಟ್ಮೆಂಟ್ ಅಂದ್ರೇನು? ಅದು ಒನ್ ಬಿ ಎಚ್ ಕೆ ಫ್ಲಾಟ್ ಗಿಂತ ಹೇಗೆ ಭಿನ್ನ? ಅದರ ಖರೀದಿ ಹೇಗೆ ಪ್ರಾಫಿಟೆಬಲ್ ಡೀಲ್ ಆಗಬಹುದು? ತಿಳಿಯೋಣ ಬನ್ನಿ…

ಸ್ಟುಡಿಯೋ ಅಪಾರ್ಟ್ಮೆಂಟ್ ಅನ್ನೋದು ಕಿರು ಗಾತ್ರದ ಯೂನಿಟ್ ಗಳು.. ಇದರಲ್ಲಿ ಒಂದು ಮಲಗುವ ಕೋಣೆ, ಅಡುಗೆ ಮನೆ ಮತ್ತು ಹಜಾರ ಎಲ್ಲವೂ ಒಂದು ದೊಡ್ಡ ಕೊಠಡಿಯಲ್ಲಿಯೇ ಇರುತ್ತದೆ. ಇದರಲ್ಲಿನ ಕ್ಲೋಸ್ಡ್ ಏರಿಯಾ ಅಂದ್ರೆ ಅದು ಬಾತ್ ರೂಂ ಮಾತ್ರ. ಸ್ಟುಡಿಯೋ ಅಪಾರ್ಟ್ಮೆಂಟ್ ಅನ್ನ ಸ್ಟುಡಿಯೋ ಫ್ಲಾಟ್ ಅಂತಾ ಕೂಡ‌ ಹೇಳುತ್ತಾರೆ. ಸಾಮಾನಯವಾಗಿ ಈ ಸ್ಟುಡಿಯೋ ಅಪಾರ್ಟ್ಮೆಂಟ್ ಗೂ ಒನ್ ಬಿ ಎಚ್ ಕೆ ಫ್ಲಾಟ್ ಗೂ ಜನರು ಕನ್ಫ್ಯೂಸ್ ಆಗ್ತಾರೆ‌. ಇವೆರಡರ ನಡುವಿನ ಪ್ರಮುಖ ವ್ಯತ್ಯಾಸ ಅಂದ್ರೆ, ಒನ್ ಬಿ ಎಚ್ ಕೆ ಫ್ಲಾಟ್ ನಲ್ಲಿ ಪ್ರತಿ ಕೊಠಡಿ ಕೂಡ ಗೋಡೆಗಳಿಂದ ಬೇರ್ಪಟ್ಟಿರುತ್ತದೆ. ಅಂದರೆ ಬೆಡ್ ರೂಂ, ಲಿವಿಂಗ್ ರೂಮ್, ಕಿಚನ್ ಮತ್ತು ಬಾತ್ ರೂಂ ಎಲ್ಲವೂ ಸೆಪರೇಟ್ ಆಗಿರತ್ತದೆ.

ಇನ್ನು ಗಾತ್ರದ ಬಗ್ಗೆ ಮಾತನಾಡುವುದಾದರೆ ಒನ್ ಬಿ ಎಚ್ ಕೆ‌ ಫ್ಲಾಟ್ ಗಿಂತ ಸ್ಟುಡಿಯೋ ಅಪಾರ್ಟ್ಮೆಂಟ್ ನ‌ ಸೈಜ್ ಕಡಿಮೆ ಇರುತ್ತದೆ. ಇದು 250 ರಿಂದ 300 ಚದರಡಿಯಷ್ಟಿರತ್ತದೆ. ಒನ್ ಬಿ ಎಚ್ ಕೆ ಫ್ಲಾಟ್ 500-600 ಚದರಡಿ ವಿಸ್ತೀರ್ಣ ಇರುತ್ತದೆ. ಈಗ ಎರಡನೇ ವ್ಯತ್ಯಾಸ ಏನು ಎನ್ನುವುದನ್ನು ತಿಳಿದುಕೊಳ್ಳೋಣ. ಒನ್ ಬಿ ಎಚ್ ಕೆ ಫ್ಲಾಟ್ ಪೂರ್ಣವಾಗಿ ವಸತಿ ಉದ್ದೇಶಕ್ಕಾಗಿ ‌ವಿನ್ಯಾಸ ಮಾಡಲಾಗಿರುತ್ತದೆ. ಆದರೆ ಸ್ಟುಡಿಯೋ ಅಪಾರ್ಟ್ಮೆಂಟ್ ನ‌ ವಿನ್ಯಾಸ ಕಾಂಪ್ಯಾಕ್ಟ್ ಲಿವಿಂಗ್‌ ರೀತಿ ಇರುತ್ತದೆ. ಅಂದ್ರೆ ಅದನ್ನು ವಸತಿ ಮತ್ತು ವಾಣಿಜ್ಯ, ಎರಡೂ ಉದ್ದೇಶಗಳಿಗೆ ಬಳಸಲಾಗುತ್ತದೆ.‌ ಉದಾಹರಣೆಗೆ, ಅನೇಕ‌ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಬಾಡಿಗೆಗೆ ಕೊಡಬಹುದು‌‌..‌ ಅಥವಾ ಅನೇಕರು ಈ ಸ್ಟುಡಿಯೋ ಫ್ಲಾಟ್ ಗಳಲ್ಲೇ ತಮ್ಮ ಆಫೀಸ್ ಓಪನ್ ಮಾಡಬಹುದು.

ಗಾತ್ರದಲ್ಲಿ ಚಿಕ್ಕದು..‌ ನಿರ್ವಹಣೆ ಸುಲಭ.. ಇಂತಹ ಸ್ಟುಡಿಯೋ ಫ್ಲಾಟ್ ಗಳು ಮೆಟ್ರೋ ನಗರಗಳಲ್ಲಿ ಅಥವಾ ದೊಡ್ಡ ದೊಡ್ಡ ನಗರಗಳಾದ ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್, ಗುರುಗ್ರಾಮ್, ನೋಯ್ಡಾ ಮತ್ತು ನೋಯ್ಡಾ ಎಕ್ಸ್ ಟೆನ್ಷನ್ ಮೊದಲಾದೆಡೆಗಳಲ್ಲಿದೆ.. ನಗರಗಳ ಪ್ರೈಮ್ ಲೊಕೇಷನ್ ನಲ್ಲಿ ಈ ಸ್ಟುಡಿಯೋ ಅಪಾರ್ಟ್ಮೆಂಟ್ ಗಳನ್ನ ನಿರ್ಮಿಸಲಾಗಿರುತ್ತದೆ. ಹೀಗಾಗಿ ಅವುಗಳನ್ನ ವಸತಿ, ಜೊತೆಗೆ ಕಚೇರಿ ಉದ್ದೇಶಗಳಿಗೆ ಬಳಸಲಾಗುತ್ತಿದೆ.

ದೆಹಲಿ-ಎನ್ ಸಿ ಆರ್, ಮುಂಬೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ, ಸ್ಟುಡಿಯೋ ಅಪಾರ್ಟ್ಮೆಂಟ್ ಬೆಲೆಗಳು 25 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿವರೆಗಿದೆ.. ಇನ್ನು ದೆಹಲಿ-ಎನ್ ಸಿ ಆರ್ ನ ಐಟಿ ಗಬ್ ಗಳಲ್ಲಿ ಸ್ಟುಡಿಯೋ ಅಪಾರ್ಟ್ಮೆಂಟ್ ಬೆಲೆ 40 ರಿಂದ 45 ಲಕ್ಷ ರೂಪಾಯಿಯಷ್ಟಿದೆ.. ಇದು ಪ್ರಾಪರ್ಟಿ ಲೊಕೇಷನ್ ಹಾಗೂ ಆ ಸ್ಟುಡಿಯೋ ಫ್ಲಾಟ್ ನಲ್ಲಿ ಕೊಡ್ತಾ ಇರುವ ಸೌಲಭ್ಯಗಳನ್ನ ಅವಲಂಬಿಸಿರತ್ತೆ.. ಅದೇ ಪ್ರದೇಶದಲ್ಲಿ ಒನ್ ಬಿ ಎಚ್ ಕೆ ಫ್ಲಾಟ್ ಗೆ ಸುಮಾರು 25 ರಿಂದ 30 ಲಕ್ಷ ರೂಪಾಯಿಯಷ್ಟಾಗುತ್ತದೆ.

ಮೆಟ್ರೋ ನಗರಗಳಲ್ಲಿ ಕೆಲಸ ಮಾಡುತ್ತಿರುವ ಯುವ ಸಮೂಹ, ತಮ್ಮ ಕಚೇರಿ ಸಮೀಪ ಇರುವ ಸ್ಟುಡಿಯೋ ಅಪಾರ್ಟ್ಮೆಂಟ್ ಬಾಡಿಗೆಗೆ ಪಡೆಯಬಹುದು.. ಉನ್ನತ ವಿದ್ಯಾಭ್ಯಾಸಕ್ಕಾಗಿ ದೊಡ್ಡ ನಗರಗಳಲ್ಲಿ ವಾಸಿಸುತ್ತಿರುವ ಮಕ್ಕಳ ಪೋಷಕರು ಆಗ್ಗಾಗ್ಗೆ ಬಂದು ಒಂದೆರಡು ದಿನ ಇದ್ದು ಹೋಗುವುದಕ್ಕೆ ಸ್ಟುಡಿಯೋ ಫ್ಲಾಟ್ ಗಳು ಅನುಕೂಲ.. ಹಾಗೇ ಕೆಲಸದ ನಿಮಿತ್ತ ವಾರಕ್ಕೆ ಎರಡು ಮೂರು ಸಲ ಬರುವವರು ಕೂಡ, ಹೋಟೆಲ್ ಗಳಿಗೆ ಹಣ ಖರ್ಚು ಮಾಡೋ ಬದಲು ಸ್ಟುಡಿಯೋ ಫ್ಲಾಟ್ ಆಯ್ಕೆ ಮಾಡಿಕೊಳ್ಳಬಹುದು.

ಸ್ಟುಡಿಯೋ ಫ್ಲಾಟ್ ಗಳ ಅನುಕೂಲ ಮತ್ತು ಅನಾನುಕೂಲ ಎರಡನ್ನು ನಾವು ತಿಳುದುಕೊಳ್ಳಬೇಕು.
1) ಲೊಕೇಷನ್ ಮತ್ತು ಕನೆಕ್ಟಿವಿಟಿ ಈ ಸ್ಟುಡಿಯೋ ಫ್ಲಾಟ್ ಗಳ ಪ್ರಮುಖ ಅನುಕೂಲ‌. ಸಾಮಾನ್ಯವಾಗಿ, ಇಂತಹ ಫ್ಲಾಟ್ ಗಳನ್ನ ಕಮರ್ಷಿಯಲ್ ಹಬ್ ಅಥವಾ ಕಾರ್ಪೊರೇಟ್ ಆಫೀಸ್ ಗಳಿರೋ‌ ಪ್ರೈಮ್ ಲೊಕೇಷನ್ ನಲ್ಲಿ ನಿರ್ಮಾಣ ಮಾಡಲಾಗಿರತ್ತದೆ. ಇಂತಹ ಕಡೆಗಳಲ್ಲಿ ಸಾರಿಗೆ ಸೌಲಭ್ಯ ಚೆನ್ನಾಗಿರುತ್ತದೆ. ಇದರಿಂದ ಓಡಾಟದ ವೆಚ್ಚ ಮತ್ತು ಸಮಯ ಎರಡರ ಉಳಿತಾಯ ಕೂಡ ಸಾಧ್ಯವಾಗುತ್ತದೆ. ‌

2)-ಬಹುತೇಕ ಸ್ಟುಡಿಯೋ ಅಪಾರ್ಟ್ಮೆಂಟ್ ಗಳಲ್ಲಿ ಮರಗೆಲಸ ಅಥವಾ ವುಡನ್ ವರ್ಕ್ ಮಾಡಲಾಗಿರತ್ತದೆ. ಮಾಡ್ಯುಲಾರ್ ಕಿಚನ್, ಎಸಿ, ಟಿವಿ- ಫ್ರಿಡ್ಜ್ ಮೊದಲಾದವುಗಳಿರತ್ತವೆ. ಹೀಗಾಗಿ, ನೀವು ತಕ್ಷಣ ಶಿಫ್ಟ್ ಆಗಬಹುದು.

3)- ಸ್ಟುಡಿಯೋ ಅಪಾರ್ಟ್ಮೆಂಟ್ ಗಳು ಬಾಡಿಗೆ ಆದಾಯದ ಉತ್ತಮ ಮೂಲವಾಗಿದೆ ಅಂದರೆ ಬಾಡಿಗೆಯಿಂದ ಹಣ ಗಳಿಸಬಹುದು

4)- ಸ್ಟುಡಿಯೋ ಅಪಾರ್ಟ್ಮೆಂಟ್ ಗಾತ್ರದಲ್ಲಿ ಚಿಕ್ಕವಿರುವುದರಿಂದ ಸ್ವಚ್ಛ ಮಾಡೋಕೆ ಕಡಿಮೆ ಸಮಯ ಮತ್ತು ಶ್ರಮ ಸಾಕಾುತ್ತದೆ

ಇದರಲ್ಲಿ ಕೆಲವು ಅನಾನುಕೂಲತೆಗಳೂ ಇವೆ.. ಇದರ ಬಗ್ಗೆ ಗಮನ ಹರಿಸಬೇಕಾಗಿರೋದು ಕೂಡ ತುಂಬಾನೇ ಮುಖ್ಯ.
1)- ಇಬ್ಬರಿಗಿಂತ ಹೆಚ್ಚು ಜನರಿದ್ರೆ, ಸ್ಟುಡಿಯೋ ಅಪಾರ್ಟ್ಮೆಂಟ್ ಗಳು ಸೂಕ್ತ ಆಗೋದಿಲ್ಲ. ಹೀಗಾಗಿ ದಂಪತಿಗಳಿಗೆ ಅಥವಾ ಕುಟುಂಬಕ್ಕಾಗಿ ಪ್ಲಾನ್ ಮಾಡ್ತಾ ಇರೋರಿಗೆ ಇದು ಹೊಂದಿಕೆಯಾಗುವುದಿಲ್ಲ.
2) ಕಡಿಮೆ ಗಾತ್ರದಿಂದಾಗಿ‌ ಹೆಚ್ಚು ಜನರು ಒಂದೆ ಕಡೆ ಸೇರಲು ಸಾಧ್ಯವಿಲ್ಲ. ಅಂದ್ರೆ ಕ್ರೌಡ್ ಗ್ಯಾದರಿಂಗ್ ಗೆ ಅವಕಾಶ ಸಾಧ್ಯಗುವುದಿಲ್ಲ.
3)- ನಿಮ್ಮ ಬಳಿ ಅನೇಕ ಗೃಹ ಬಳಕೆ ವಸ್ತುಗಳಿದ್ದರೆ ಆಗ ಸ್ಟುಡಿಯೋ ಫ್ಲಾಟ್ ನಿಮಗೆ ಚಿಕ್ಕದಾಗಬಹುದು..

ಸ್ಟುಡಿಯೋ ಅಪಾರ್ಟ್ಮೆಂಟ್ ಖರೀದಿಗೂ ಮೊದಲು ನೀವು ಕೆಲವು ವಿಷಯಗಳನ್ನ ಮನಸ್ಸಿನಲ್ಲಿಟ್ಕೋಬೇಕು..
ಮೊದಲನೆಯದು – ಆ ಸ್ಟುಡಿಯೋ ಫ್ಲಾಟ್, ಬ್ಯುಸಿನೆಸ್ ಅಥವಾ ಕಾರ್ಪೊರೇಟ್ ಹಬ್ ಗೆ ಹತ್ತಿರ ಇರಬೇಕು.. ಎರಡನೆಯದು – ಡೆವಲಪರ್ ನ‌ ಹಳೆಯ ಪ್ರಾಜೆಕ್ಟ್ ಗಳನ್ನ ಗಮನಿಸಿ.. ಸಮಯಕ್ಕೆ ಸರಿಯಾಗಿ ಪ್ರಾಜೆಕ್ಟ್ ಪೂರ್ಣಗೊಳಿಸೋ ಡೆವಲಪರ್ ಆಯ್ಕೆ ಮಾಡಿಕೊಳ್ಳಬೇಕು. ಮೂರನೆಯದು – ಸ್ಟುಡಿಯೋ ಅಪಾರ್ಟ್ಮೆಂಟ್ ನ‌ ಸೂಪರ್ ಏರಿಯಾ ಬದಲಿಗೆ ಕಾರ್ಪೆಟ್ ಏರಿಯಾ ಎಷ್ಟಿದೆ ಅಂತಾ ನೋಡಿ. ಕಾರ್ಪೆಟ್ ಏರಿಯಾ ಕನಿಷ್ಠ 150-200 ಚದರಡಿ ಇರಬೇಕು. ಕಾರ್ಪೆಟ್ ಏರಿಯಾ ಅನ್ನೋದು ಫ್ಲಾಟ್ ಒಳಗೆ ನಿಮಗೆ ಬಳಕೆಗೆ ಸಿಗಬಹುದಾದ ಒಟ್ಟು ಸ್ಥಳಾವಕಾಶ.

ವಾಸಕ್ಕಿಂತ ಗಳಿಕೆಗೆ ಸ್ಟುಡಿಯೋ ಅಪಾರ್ಟ್ಮೆಂಟ್ ಗಳು ಹೆಚ್ಚು ಸೂಕ್ತ.. ‌ ಹೂಡಿಕೆ ದೃಷ್ಟಿಯಿಂದ ನೋಡಿದಾದ್ರೆ, ಸ್ಟುಡಿಯೋ ಫ್ಲಾಟ್ ಖರೀದಿಸಿ, ಬಾಡಿಗೆ ರೂಪದಲ್ಲಿ ಉತ್ತಮ ಆದಾಯ ಗಳಿಸಬಹುದು.‌.. ನೀವು ಸ್ವಂತ ವಾಸಕ್ಕೆ ದೊಡ್ಡ ಮನೆ ಖರೀದಿಸಬೇಕು ಅಂತಾದ್ರೆ, ಆಗ ಈ ಸ್ಟುಡಿಯೋ ಫ್ಲಾಟ್ ಮಾರಾಟ ಮಾಡಿ, ಇದರಲ್ಲಿ ಸಿಗೋ ಹಣವನ್ನ ಡೌನ್ ಪೇಮೆಂಟ್ ಮಾಡಬಹುದು.‌

Published: May 4, 2024, 14:22 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ