` these seven things will make your house special value will increase rapidly | ನೀವು ಖರೀದಿ ಮಾಡಿದ ಮನೆಯ ದರ ಡಬಲ್ ಆಗುವ ಬಗೆ ಹೀಗೆ! | Money9 Kannada

ನೀವು ಖರೀದಿ ಮಾಡಿದ ಮನೆಯ ದರ ಡಬಲ್ ಆಗುವ ಬಗೆ ಹೀಗೆ!

ಪ್ರದೇಶ ಮತ್ತು ಸುರಕ್ಷತೆ ಕೂಡಾ ಮನೆ ಖರೀದಿ ಮಾಡುವಾಗ ಮುಖ್ಯವಾಗುತ್ತದೆ. ನಿಮ್ಮ ಲೈಫ್‌ಸ್ಟೈಲ್‌ಗೆ ಸರಿಯಾಗಿ ಹೊಂದುವ ಪ್ರದೇಶವನ್ನೇ ನೀವು ಆರಿಸಿಕೊಳ್ಳಬೇಕು. ನಿಮ್ಮಂಥದ್ದೇ ಜನ ನಿಮ್ಮ ಸುತ್ತಮುತ್ತ ಇದ್ದರೆ, ಸುರಕ್ಷತೆಯ ಭಾವ ಮೂಡುತ್ತದೆ. ಹೀಗಾಗಿ, ನೀವು ವಾಸಿಸುವ ಸ್ಥಳ ಹೆಚ್ಚು ಸುರಕ್ಷಿತವಾಗಿದೆ ಎಂದು ನೀವೇ ಖಾತ್ರಿ ಮಾಡಿಕೊಳ್ಳಬೇಕು.

ಅನಿತಾ ತನ್ನ ಲ್ಯಾಪ್‌ಟಾಪ್‌ನಲ್ಲಿ ಫ್ಲಾಟ್ ಹುಡುಕುತ್ತಿದ್ದಾಳೆ. ಇದೇ ಹೊತ್ತಿಗೆ ಅನಿಲ್‌ಗೆ ಕಾಲ್ ಮಾಡಿಕೊಂಡು ಒಂದು ಸಲಹೆ ಕೇಳುತ್ತಾಳೆ. ಏಕೆಂದರೆ ಅನಿಲ್‌ಗೆ ಪ್ರಾಪರ್ಟಿ ಬಗ್ಗೆ ತುಂಬಾ ತಿಳಿವಳಿಕೆ ಇದೆ. ನಾನು ಎರಡು ಫ್ಲಾಟ್ ನೋಡಿದ್ದೇನೆ. ಒಂದು ಸೊಸೈಟಿಯಲ್ಲಿದೆ. ಅಗಲ ರಸ್ತೆ ಇದೆ. ಶಾಲೆ ಮತ್ತು ಕಾಲೇಜು ಸಹ ಹತ್ತಿರದಲ್ಲಿದೆ. ಇನ್ನೊಂದು ರೇಟ್ ಕಡಿಮೆ ಇದೆ. ಆದರೆ, ಸ್ವಲ್ಪ ಒಳಗಡೆ ಇದೆ. ತುಂಬಾ ಜನರು ಇರುವ ಪ್ರದೇಶ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲ ಆಗಿದೆ ಅಂತ ಅನಿತಾ ಹೇಳಿದ್ದಕ್ಕೆ, ಒಳ್ಳೆಯ ಸ್ಥಳದಲ್ಲಿರುವ ಫ್ಲಾಟ್ ಆರಿಸಿಕೊಳ್ಳೋದು ಬೆಟರ್ ಅಂತ ಅನಿಲ್ ಹೇಳುತ್ತಾರೆ. ಏಕೆಂದರೆ ಇದರ ಬೆಲೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಎಲ್ಲ ಸ್ಥಳದ ವ್ಯಾಲ್ಯೂ ಏರಿಕೆಯಾಗುತ್ತದೆ ಎಂದು ಹೇಳೋಕಾಗಲ್ಲ. ಆದರೆ, ಮನೆಯನ್ನ ಮುಂದೊಂದು ದಿನ ಮಾರಾಟ ಮಾಡುವುದೇ ಆಗಲಿ ಅಥವಾ ಅದರಲ್ಲೇ ವಾಸಿಸೋದಾಗಲಿ ಕೆಲವು ಪ್ರಾಥಮಿಕ ಅಗತ್ಯಗಳು ಮತ್ತು ಸಂಗತಿಗಳು ನಿಮಗೆ ಗೊತ್ತಿರಲೇಬೇಕು. ಆಗ ಮಾತ್ರ ಮನೆಯ ಮೌಲ್ಯ ಹೆಚ್ಚಳವಾಗುತ್ತದೆ. ಹಾಗಾದರೆ, ಈ ಬೇಸಿಕ್ ನೆಸೆಸಿಟಿ ಅಂದರೆ ಏನು? ಇದನ್ನು ನಾವು ಮೊದಲು ತಿಳಿದುಕೊಳ್ಳೋಣ.

ಪ್ರಾಪರ್ಟಿಯನ್ನು ಹೂಡಿಕೆಗೆ ಖರೀದಿಸಲಿ ಅಥವಾ ಅದರಲ್ಲಿ ವಾಸ ಮಾಡೋದೇ ಆಗಿರಲಿ. ಬಹುತೇಕ ಜನರು ಫ್ಲಾಟ್, ಜಾಗ ಅಥವಾ ಮನೆ ಖರೀದಿ ಮಾಡುವಾಗ ಬಜೆಟ್ ಅನ್ನೇ ನೋಡುತ್ತಾರೆ. ಬಜೆಟ್ ನೋಡುವುದು ಅತ್ಯಂತ ಮುಖ್ಯ. ಯಾಕೆಂದರೆ, ಇದು ನಮ್ಮ ಹಣಕಾಸಿನ ಸ್ಥಿತಿಗತಿಯನ್ನು ಅವಲಂಬಿಸಿರುತ್ತದೆ. ಆದರೆ, ಹಾಗೆಂದ ಮಾತ್ರಕ್ಕೆ ಭವಿಷ್ಯ ಪ್ರಯೋಜನವನ್ನೂ ಮರೆಯಬಾರದು. ನೀವು ಮನೆ ಎಲ್ಲೇ ಖರೀದಿ ಮಾಡಿದರೂ, ನೆರೆಹೊರೆಗೆ ಸಂಬಂಧಿಸಿದ ಕೆಲವು ಪ್ರಮುಖ ಸಂಗತಿಗಳನ್ನು ನಾವು ನೋಡಬೇಕಾಗುತ್ತದೆ. ಆಗ ನೀವು ಆರಾಮವಾಗಿ ವಾಸಿಸಬಹುದು. ಅಷ್ಟೇ ಅಲ್ಲ, ಮುಂದೊಂದು ನೀವು ಮಾರಾಟ ಮಾಡಿ, ಹೊಸ ಮನೆ ಖರೀದಿ ಮಾಡುತ್ತೀರಿ ಎಂದಾದರೆ ಒಳ್ಳೆಯ ಬೆಲೆಯೂ ಇದಕ್ಕೆ ಸಿಗುತ್ತದೆ. ಈ ಬೇಸಿಕ್ ನೆಸೆಸಿಟಿಗಳ ಪೈಕಿ ಒಂದೊಂದನ್ನೇ ನೋಡೋಣ ಬನ್ನಿ.

ಹೆಚ್ಚಿನ ಜನ ಮದುವೆ ಆಗುವಾಗ ಅಥವಾ ಮಕ್ಕಳು ಹುಟ್ಟಿದಾಗ ಮನೆ ಖರೀದಿ ಮಾಡುವ ಯೋಚನೆ ಮಾಡುತ್ತಾರೆ. ಅಂತಹ ಜನರಿಗೆ ಶಿಕ್ಷಣ ಸಂಸ್ಥೆ ಅಂದರೆ ಶಾಲೆ ಕಾಲೇಜು ಹತ್ತಿರದಲ್ಲಿ ಇರೋದು ಮುಖ್ಯವಾಗುತ್ತದೆ. ವಾಸ್ತವವಾಗಿ, ಜನಪ್ರಿಯ ಶಿಕ್ಷಣ ಸಂಸ್ಥೆಗಳು ಇರುವ ಪ್ರದೇಶದಲ್ಲಿ ಮನೆ ದರವೂ ಹೆಚ್ಚಿರುತ್ತದೆ. ಶಾಲೆ ಕಾಲೇಜುಗಳು ಈಗಾಗಲೇ ಇರುವ ಅಥವಾ ಮುಂದೊಂದು ದಿನ ಶಾಲೆ ಕಾಲೇಜು ಬರುವ ಪ್ರದೇಶಗಳಲ್ಲಿ ಮನೆ ಖರೀದಿಸುವುದು ಅನುಕೂಲಕರವೂ ಹೌದು. ಈ ಪ್ರದೇಶದಲ್ಲಿ ಬಾಡಿಗೆ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.

ನೀವು ಎಲ್ಲಿ ಮನೆ ಖರೀದಿ ಮಾಡೋದಕ್ಕೆ ಹೊರಟಿದ್ದೀರೋ ಆ ಪ್ರದೇಶದಿಂದ ಇತರ ಪ್ರದೇಶಗಳಿಗೆ ಕನೆಕ್ಟಿವಿಟಿ ಅತ್ಯಂತ ಮುಖ್ಯ. ಬಸ್, ಮೆಟ್ರೋ ಅಥವಾ ಸಾರ್ವಜನಿಕ ಸಾರಿಗೆ ಮೂಲಕ ನಗರದ ಇತರ ಭಾಗಗಳಿಗೆ ಕನೆಕ್ಟ್ ಆಗಿರುವ ಪ್ರದೇಶ ಸಾಮಾನ್ಯವಾಗಿ ಪ್ರೀಮಿಯಂ ಪ್ರಾಪರ್ಟಿ ಆಗಿರುತ್ತದೆ. ಉದಾಹರಣೆಗೆ, ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿ ಬಸ್ ಮತ್ತು ಮೆಟ್ರೋದಂತಹ ಸಾರ್ವಜನಿಕ ಸಾರಿಗೆ ಇಲ್ಲ. ಎರಡು ಮೆಟ್ರೋ, ಬ್ಲ್ಯೂ ಲೈನ್ ಮತ್ತು ಪಿಂಕ್ ಲೈನ್‌ಗಳು ಮಯೂರ್ ವಿಹಾರ್ ಫೇಸ್ 1 ನಲ್ಲಿ ಇವೆ. ಇದರಿಂದಾಗಿ ಇಲ್ಲಿ ಬಾಡಿಗೆ ಮನೆಯನ್ನ ಜನರು ಹುಡುಕ್ತಾರೆ. ಹೀಗಾಗಿ, ಸಾರ್ವಜನಿಕ ಸಾರಿಗೆ ಇರುವ ಪ್ರದೇಶದಲ್ಲಿ ಅಥವಾ ಶೀಘ್ರದಲ್ಲೇ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಆಗಲಿರುವ ಪ್ರದೇಶದಲ್ಲಿ ಮನೆ ಖರೀದಿಸಿ. ಏಕೆಂದರೆ, ಸಾರ್ವಜನಿಕ ಸಾರಿಗೆ ಇದೆ ಎಂದಾದರೆ ಮನೆ ಬೆಲೆಯೂ ಏರಿಕೆಯಾಗುತ್ತದೆ. ಸಾರ್ವಜನಿಕ ಸಾರಿಗೆ ಇಲ್ಲದಿದ್ದರೆ, ಹಣ ಮತ್ತು ಸಮಯ ಎರಡೂ ಹಾಳಾಗುತ್ತಿರುತ್ತದೆ.

ಬಹುತೇಕ ಕುಟುಂಬದಲ್ಲಿ ಸಣ್ಣ ಮಕ್ಕಳು, ವೃದ್ಧರು ಇರುತ್ತಾರೆ. ಅವರಿಗೆ ಆಗಾಗ ಆಸ್ಪತ್ರೆಗೆ ಹೋಗಬೇಕಿರುತ್ತದೆ. ಆಗ, ಆಸ್ಪತ್ರೆ ಸೌಲಭ್ಯ ಸಮೀಪದಲ್ಲಿ ಇರುವ ಸ್ಥಳದಲ್ಲಿ ಮನೆ ಖರೀದಿ ಮಾಡಬೇಕಾಗುತ್ತದೆ. ಅದರಿಂದ ಅಗತ್ಯಕ್ಕೆ ತಕ್ಕ ಹಾಗೆ ವೈದ್ಯಕೀಯ ಸೇವೆ ಸಿಗುತ್ತದೆ. ನಗರೀಕರಣದ ಈ ಕಾಲದಲ್ಲಿ, ಸಂತೆ ಮಾರ್ಕೆಟ್‌ಗಳ ಕಾಲ ಹೋಗಿ ಶಾಪಿಂಗ್‌ ಮಾಲ್‌ಗಳು ಬಂದಿವೆ ಮತ್ತು ಕಿರಾಣಿ ಅಂಗಡಿಗಳ ಬದಲಿಗೆ ಹೈ ಎಂಡ್ ಗ್ರಾಸರಿ ಸ್ಟೋರ್‌ಗಳು ಬಂದಿವೆ. ಶಾಪಿಂಗ್‌ ಮಾಲ್‌ಗಳು ಮತ್ತು ರಿಟೇಲ್‌ ಶಾಪಿಂಗ್‌ ಸೌಲಭ್ಯ ಇರುವ ಸ್ಥಳಗಳು ಇಂದು ಭಾರಿ ಬೇಡಿಕೆಯದ್ದು. ಈ ರಿಟೇಲ್‌ ಸ್ಪೇಸ್‌, ಅಂಗಡಿಗಳು, ಕ್ಲಿನಿಕ್‌ಗಳು ಮತ್ತು ಮೆಡಿಕಲ್‌ ಸ್ಟೋರ್‌ಗಳಲ್ಲಿ ಅಗತ್ಯ ಸಾಮಗ್ರಿಗಳು ಸುಲಭವಾಗಿ ಸಿಗುತ್ತವೆ. ಹೀಗಾಗಿ, ಇಲ್ಲಿ ಜಾಗಕ್ಕೆ ಹೆಚ್ಚು ಬೇಡಿಕೆ ಇರುವುದು ಸಹಜ ಸಂಗತಿಯಾಗಿದೆ.

ಪ್ರದೇಶ ಮತ್ತು ಸುರಕ್ಷತೆ ಕೂಡಾ ಮನೆ ಖರೀದಿ ಮಾಡುವಾಗ ಮುಖ್ಯವಾಗುತ್ತದೆ. ನಿಮ್ಮ ಲೈಫ್‌ಸ್ಟೈಲ್‌ಗೆ ಸರಿಯಾಗಿ ಹೊಂದುವ ಪ್ರದೇಶವನ್ನೇ ನೀವು ಆರಿಸಿಕೊಳ್ಳಬೇಕು. ನಿಮ್ಮಂಥದ್ದೇ ಜನ ನಿಮ್ಮ ಸುತ್ತಮುತ್ತ ಇದ್ದರೆ, ಸುರಕ್ಷತೆಯ ಭಾವ ಮೂಡುತ್ತದೆ. ಹೀಗಾಗಿ, ನೀವು ವಾಸಿಸುವ ಸ್ಥಳ ಹೆಚ್ಚು ಸುರಕ್ಷಿತವಾಗಿದೆ ಎಂದು ನೀವೇ ಖಾತ್ರಿ ಮಾಡಿಕೊಳ್ಳಬೇಕು.

ಮೂಲಸೌಕರ್ಯ ಅಭಿವೃದ್ಧಿ ಮಾಡುವುದಕ್ಕೆ ಸರ್ಕಾರಗಳು ನಿರಂತರವಾಗಿ ಕೆಲಸ ಮಾಡುತ್ತಿರುತ್ತವೆ. ಹೆಚ್ಚು ಅಭಿವೃದ್ಧಿಯಾಗುವ ಮತ್ತು ಇನ್‌ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್‌ಗಳು ಬರುವ ಸಾಧ್ಯತೆ ಹೆಚ್ಚಿರುವ ಸ್ಥಳಗಳು ಕಂಡುಬಂದರೆ, ಪ್ರಾಪರ್ಟಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಮೌಲ್ಯ ಸಿಗುತ್ತದೆ. ಅದರಲ್ಲೂ ವಿಶೇಷವಾಗಿ, ಈ ಪ್ರಾಜೆಕ್ಟ್‌ಗಳಿಂದ ಉದ್ಯೋಗ ಅಥವಾ ಸೌಲಭ್ಯಗಳು ಸೃಷ್ಟಿಯಾಗುತ್ತವೆ ಎಂದಾದರೆ, ಈ ಪ್ರದೇಶಗಳಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗುತ್ತದೆ.

ರೀಸೇಲ್ ಪ್ರಾಪರ್ಟಿ ಖರೀದಿ ಮಾಡುವಾಗ ಅಂದರೆ, ಹಳೆಯ ಮನೆ ಅಥವಾ ಫ್ಲಾಟ್ ಖರೀದಿ ಮಾಡುವಾಗ ಅದರ ವಯಸ್ಸನ್ನು ಪರಿಗಣಿಸಿ. ಪ್ರಾಪರ್ಟಿಯ ವಯಸ್ಸನ್ನು ಚೆಕ್ ಮಾಡಲು ಸ್ಟ್ರಕ್ಚರಲ್ ಎಂಜಿನಿಯರ್ ಸಹಾಯ ಪಡೆಯಬಹುದು. ಅದನ್ನು ಹೊರತುಪಡಿಸಿ, ನಿರ್ಮಾಣ ಗುಣಮಟ್ಟದ ಬಗ್ಗೆಯೂ ನೋಡಿಕೊಳ್ಳಿ. ಈ ಎರಡೂ ಪ್ರಾಪರ್ಟಿಯ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ. ಮನೆ ಅಂದರೆ ಪದೇ ಪದೇ ಖರೀದಿ, ಮಾರಾಟ, ನಿರ್ಮಾಣ ಮಾಡುವ ಸಂಗತಿ ಅಲ್ಲವೇ ಅಲ್ಲ. ಜೀವನದಲ್ಲಿ ಒಮ್ಮೆ ಮನೆ ಮಾಡುತ್ತೀರಿ. ಹೀಗಾಗಿ, ಸ್ಥಳ, ಸೌಲಭ್ಯ, ಸಾರ್ವಜನಿಕ ಸಾರಿಗೆ ಮತ್ತು ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಳ್ಳಿ. ಇವು ಪ್ರಾಪರ್ಟಿಯ ರಿಸೇಲ್ ವ್ಯಾಲ್ಯೂ ಹೆಚ್ಚಳವನ್ನು ಮಾಡುವುದಷ್ಟೇ ಅಲ್ಲ, ಒಳ್ಳೆಯ ಬಾಡಿಗೆ ಆದಾಯವನ್ನೂ ಕೊಡುತ್ತವೆ. ಅನಿತಾ ಥರ ನೀವು ಕೂಡಾ, ಮನೆ ಖರೀದಿ ಮಾಡುವ ನಿರ್ಧಾರ ಮಾಡುವಾಗ, ನೆರೆ ಹೊರೆಯನ್ನೂ ನೋಡಿಕೊಳ್ಳಿ.

Published: May 3, 2024, 15:29 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ