ನೀವು ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಆಯ್ಕೆ ಮಾಡಿಕೊಂಡಾಗ, ನಿಮಗೆ ಹೂಡಿಕೆಗೆ ಎರಡು ಆಯ್ಕೆಗಳಿವೆ. ಡೈರೆಕ್ಟ್ ಪ್ಲಾನ್ ಮತ್ತು ರೆಗ್ಯುಲರ್ ಪ್ಲಾನ್. ಎರಡೂ ಸ್ಕೀಂಗಳೂ ಒಂದೇ, ಆದರೆ ನೀವು ಎರಡು ವಿಧಗಳಲ್ಲಿ ಹೂಡಿಕೆ ಮಾಡಬಹುದಾ? ಹಾಗಿದ್ದರೆ ಈ ಎರಡರ ನಡುವಿನ ವ್ಯತ್ಯಾಸ ಏನು? ನಿಮಗೆ ಯಾವುದು ಸೂಕ್ತ? ಈ ಬಗ್ಗೆ ತಿಳಿದುಕೊಳ್ಳೋಣ.
1. ಡೈರೆಕ್ಟ್ ಮತ್ತು ರೆಗ್ಯುಲರ್ ಪ್ಲಾನ್ ಎಂದರೇನು? ಡೈರೆಕ್ಟ್ ಪ್ಲಾನ್ ನಲ್ಲಿ, ಹೂಡಿಕೆದಾರರು ಯಾವುದೇ ವಿತರಕರು ಅಥವಾ ಏಜೆಂಟ್ ಇಲ್ಲದೆ ನೇರವಾಗಿ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದು. ಮತ್ತೊಂದೆಡೆ, ರೆಗ್ಯುಲರ್ ಪ್ಲಾನ್ ನಲ್ಲಿ, ಡಿಸ್ಟ್ರಿಬ್ಯೂಟರ್ ಅಥವಾ ಏಜೆಂಟರ ಸಹಾಯದೊಂದಿಗೆ ಮ್ಯೂಚುಯಲ್ ಫಂಡ್ ಸ್ಕೀಂ ನಲ್ಲಿ ಹೂಡಿಕೆ ಮಾಡಬಹುದು.
2. ಎರಡೂ ಬಗೆಯ ಹೂಡಿಕೆಗಳ ನಡುವಿನ ಸಾಮ್ಯತೆ ಏನು? ಡೈರೆಕ್ಟ್ ಪ್ಲಾನ್ ಮತ್ತು ರೆಗ್ಯುಲರ್ ಪ್ಲಾನ್ ಈ ಎರಡು ಆಯ್ಕೆಗಳು ಅದೇ ಮ್ಯೂಚುಯಲ್ ಫಂಡ್ ಸ್ಕೀಂ ನಲ್ಲಿ ಲಭ್ಯವಿದೆ. ಅಂದರೆ ಒಂದೇ ಪ್ಲಾನ್ ಗೆ ಎರಡು ಬಗೆಯ ವಿಧಾನ ಇದೆ. ಸ್ಕೀಂ, ಪೋರ್ಟ್ ಫೋಲಿಯೋ ಮತ್ತು ಫಂಡ್ ಮ್ಯಾನೇಜರ್ ಎಲ್ಲಾ ಒಂದೇ.
3. ಈಗ ರೆಗ್ಯುಲರ್ ಮತ್ತು ಡೈರೆಕ್ಟ್ ಪ್ಲಾನ್ ನಲ್ಲಿನ ವ್ಯತ್ಯಾಸಗಳನ್ನು ತಿಳಿದುಕೊಳ್ಳೋಣ. ನೀವು ರೆಗ್ಯುಲರ್ ಮತ್ತು ಡೈರೆಕ್ಟ್ ವಿಧಗಳ ಮೂಲಕ ಸ್ಕೀಂನಲ್ಲಿ ಹೂಡಿಕೆ ಮಾಡುತ್ತೀರಾ? ಈ ಡೈರೆಕ್ಟ್ ಮತ್ತು ರೆಗ್ಯುಲರ್ ನಡುವಿನ ಏಕೈಕ ವ್ಯತ್ಯಾಸ ಏನೆಂದರೆ ಎಕ್ಸ್ ಪೆನ್ಸ್ ರೇಷ್ಯೋ. ಇದರ ಮೇಲಿನ ಖರ್ಚುಗಳನ್ನ ಆಧರಿಸಿ ಈ ವೆಚ್ಚಾನುಪಾತ ಲೆಕ್ಕಾಚಾರ ಮಾಡಲಾಗುತ್ತದೆ. ರೆಗ್ಯುಲರ್ ಪ್ಲಾನ್ ಗೆ ಹೋಲಿಕೆ ಮಾಡಿದರೆ ಡೈರೆಕ್ಟ್ ಪ್ಲಾನ್ ವೆಚ್ಚ ಕಡಿಮೆ. ಏಕೆಂದರೆ ಡೈರೆಕ್ಟ್ ಪ್ಲಾನ್ ನಲ್ಲಿ ಯಾರೇ ಡಿಸ್ಟ್ರಿಬ್ಯೂಟರ್ ಅಥವಾ ಏಜೆಂಟ್ ಅಗತ್ಯ ಇರಲ್ಲ. ಹೀಗಾಗಿ, ಡೈರೆಕ್ಟ್ ಪ್ಲಾನ್ ನಲ್ಲಿ ಬ್ರೋಕರ್ ಅಥವಾ ವಿತರಕರಿಗೆ ಕಮಿಷನ್ ನೀಡುವ ಅಗತ್ಯ ಇರುವುದಿಲ್ಲ. ಹೀಗಾಗಿ, ಇದರ ವಾರ್ಷಿಕ ವೆಚ್ಚ ಅಂದ್ರೆ ಎಕ್ಸ್ ಪೆನ್ಸ್ ರೇಷ್ಯೂ ಕಡಿಮೆ ಇರುತ್ತದೆ. ಡೈರೆಕ್ಟ್ ಪ್ಲಾನ್ ನ ಎಕ್ಸ್ ಪೆನ್ಸ್ ರೇಷ್ಯೋ ಶೇಕಡ 0.6 ರಿಂದ 1 ರಷ್ಟಿದ್ರೆ, ರೆಗ್ಯುಲರ್ ಪ್ಲಾನ್ ನ ಈ ಅನುಪಾತ ಶೇಕಡ 1.7 ರಿಂದ 2.44 ರಷ್ಟಿರತ್ತದೆ.
4. ಈಗ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ನ ಗ್ರೋತ್ ಬಗ್ಗೆ ನೋಡೋಣ. ಡೈರೆಕ್ಟ್ ಮ್ಯೂಚುಯಲ್ ಫಂಡ್ ಗಳಲ್ಲಿ ಕಡಿಮೆ ವೆಚ್ಚ ಅಂದರೆ ಹೂಡಿಕೆದಾರರ ಬಂಡವಾಳದ ಬಹುಪಾಲು ಹೂಡಿಕೆಯಾಗುತ್ತದೆ. ಅತ್ಯಲ್ಪ ಮೊತ್ತ ಮಾತ್ರ ಕಮಿಷನ್ ಗೆ ಸೇರುತ್ತದೆ. ಹೀಗಾಗಿ ಅನೇಕರು ಇದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಮ್ಯೂಚುಯಲ್ ಫಂಡ್ ಇಂಡಸ್ಟ್ರಿ ಆರ್ಗನೈಸೇಷನ್ ಎಎಂಎಫ್ಐ ನ ದತ್ತಾಂಶದ ಪ್ರಕಾರ, ಫೆಬ್ರವರಿ 2023 ರಲ್ಲಿ ದೇಶದ ಸುಮಾರು ಶೇಕಡ 20 ರಷ್ಟು ಚಿಲ್ಲರೆ ಹೂಡಿಕೆದಾರರು, ನೇರವಾಗಿ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದ್ದರು.. ಈ ಪ್ರಮಾಣ ಫೆಬ್ರವರಿ 2024 ರಲ್ಲಿ ಶೇಕಡ 23 ಕ್ಕೆ ಏರಿಕೆಯಾಯಿತು. ಹೀಗಾಗಿ, ಚಿಲ್ಲರೆ ಹೂಡಿಕೆದಾರರಿಂದ, ನೇರ ಹೂಡಿಕೆಯಲ್ಲಿ ವಾರ್ಷಿಕ ಶೇಕಡ 15 ರಷ್ಟು ಪ್ರಗತಿ ಇದೆ ಎಂದೇ ಹೇಳಬಹುದು.
5. ಹೂಡಿಕೆ ಮಾಡುವುದು ಹೇಗೆ? ಮ್ಯೂಚುಯಲ್ ಫಂಡ್ ಗಳ ಡೈರೆಕ್ಟ್ ಪ್ಲಾನ್ ನಲ್ಲಿ, ಎಎಂಸಿಯ ಜಾಲತಾಣ, ಷೇರು ವಿನಿಮಯ ಕೇಂದ್ರ, ಮ್ಯೂಚುಯಲ್ ಫಂಡ್ ಯುಟಿಲಿಟಿ (ಎಂ ಎಫ್ ಯು) ಅಥವಾ ಆನ್ ಲೈನ್ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಹೂಡಿಕೆ ಮಾಡಬಹುದು.. ಮಾರುಕಟ್ಟೆಯಲ್ಲಿ ಈಗ ಅನೇಕ ಫಿನ್ ಟೆಕ್ ಕಂಪೆನಿಗಳು ಡೈರೆಕ್ಟ್ ಮ್ಯೂಚುಯಲ್ ಫಂಡ್ ಗಳಿಗೆ ವೇದಿಕೆ ಒದಗಿಸಿಕೊಡುತ್ತಿವೆ. ಕೆಲವು ಕಂಪೆನಿಗಳು ಈ ಸೌಲಭ್ಯವನ್ನ ಉಚಿತವಾಗಿ ಕೊಟ್ಟರೆ ಇನ್ನು ಕೆಲವು ಕಂಪೆನಿಗಳು ಇದಕ್ಕೆ ಶುಲ್ಕ ವಿಧಿಸುತ್ತಿವೆ.
6. ಡೈರೆಕ್ಟ್ ಪ್ಲಾನ್ ನಲ್ಲಿ ಹೂಡಿಕೆ ಎಷ್ಟು ಸುರಕ್ಷಿತ? ಈ ಸೌಲಭ್ಯ ಕೊಡುತ್ತಿರುವ ಬಹುತೇಕ ಆನ್ಲೈನ್ ಹೂಡಿಕೆ ವೇದಿಕೆಗಳು ಸೆಬಿಯೊಂದಿಗೆ ನೋಂದಾಯಿಸಿಕೊಂಡಿವೆ ಮತ್ತು ನಿಯಂತ್ರಕ ಸಂಸ್ಥೆಯ ನಿಯಮಗಳಿಗೆ ಒಳಪಟ್ಟಿದೆ. ಈ ಸಂಸ್ಥೆಗಳು ಪ್ರೈವಸಿ ಮತ್ತು ಸೆಕ್ಯುರಿಟಿಗೆ ಸಂಬಂಧಿಸಿದಂತೆ ಸೆಬಿಯ ನಿಯಮಗಳನ್ನು ಪಾಲಿಸುತ್ತವೆ. ಪ್ರಸ್ತುತ ಅನೇಕ ಪ್ಲಾಟ್ ಫಾರಂಗಳು ಸೆಬಿಯಿಂದ ನಿರ್ವಹಿಸಲ್ಪಟ್ಟಿವೆ. ಭವಿಷ್ಯದಲ್ಲಿ ಕೆಲವು ಪ್ಲಾಟ್ ಫಾರಂಗಳು ಮುಚ್ಚಬಹುದಾದ ಸಾಧ್ಯತೆ ಕೂಡ ಇದೆ ಅಥವಾ ಅವುಗಳನ್ನ ದೊಡ್ಡ ಕಂಪೆನಿಗಳು ಅಕ್ವೈರ್ ಮಾಡಿಕೊಳ್ಳಬಹುದು. ಆದರೆ ಹೂಡಿಕೆದಾರರು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಭವಿಷ್ಯದಲ್ಲಿ ಯಾವುದೇ ಕಾರಣಕ್ಕಾಗಲೀ ಪ್ಲಾಟ್ ಫಾರಂ ಮುಚ್ಚಲ್ಪಟ್ಟರೆ, ಅಥವಾ ಬೇರೆ ಕಂಪೆನಿ ಅದನ್ನು ತೆಗೆದುಕೊಂಡರೂ ಕೂಡ ನಿಮ್ಮ ಹಣ ಮ್ಯೂಚುಯಲ್ ಫಂಡ್ ಕಂಪೆನಿಯೊಂದಿಗೆ ಸುರಕ್ಷಿತವಾಗಿರುತ್ತದೆ. ಪ್ರತಿ ಫಂಡ್ ಗೂ ರಿಜಿಸ್ಟ್ರಾರ್ ಇರುತ್ತಾರೆ. ಇವರು ಸೆಬಿಯಿಂದ ನೇಮಕಗೊಂಡಿರುತ್ತಾರೆ. ಇವರು ನಿಮ್ಮ ಹೂಡಿಕೆ ಮೇಲೆ ಕಣ್ಣಿಟ್ಟಿರುತ್ತಾರೆ.
7. ಸೆಬಿಯ ಚೌಕಟ್ಟು.. ಹೂಡಿಕೆ ಭದ್ರತೆ ಖಾತರಿಪಡಿಸಲು, 2023ರ ಜೂನ್ ನಲ್ಲಿ ಸೆಬಿ ಹೊಸ ಚೌಕಟ್ಟು ಪರಿಚಯಿಸಿದೆ.. ಇದರಡಿ, ನೇರ ಹೂಡಿಕೆ ಸೇವೆಗಳನ್ನ ಒದಗಿಸುತ್ತಿರುವ ವೇದಿಕೆಗಳು ಎಕ್ಸಿಕ್ಯೂಷನ್ ಒನ್ಲಿ ಪ್ಲಾಟ್ ಫಾರಂ (ಇಒಪಿ)ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಮ್ಯೂಚುಯಲ್ ಫಂಡ್ ಗಳ ಡೈರೆಕ್ಟ್ ಪ್ಲಾನ್ ಅಡಿಯಲ್ಲಿ, ಇಒಪಿ ಅಂದರೆ ಮ್ಯೂಚುಯಲ್ ಫಂಡ್ ಗಳ ಸಬ್ಸ್ ಕ್ರಿಪ್ಷನ್, ರಿಡಮ್ಷನ್ ಮತ್ತು ಸಿಚ್ ಸೌಲಭ್ಯಗಳನ್ನ ಒದಗಿಸುವ ಡಿಜಿಟಲ್ ಅಥವಾ ಆನ್ಲೈನ್ ವೇದಿಕೆಯಾಗಿದೆ. ಸೆಬಿಯ ವ್ಯಾಪ್ತಿಯಡಿ ಈ ಆನ್ಲೈನ್ ಹೂಡಿಕೆ ವೇದಿಕೆಗಳು, ಸ್ಟಾಕ್ ಬ್ರೋಕರ್ ಅಥವಾ ನೋಂದಾಯಿತ ಹೂಡಿಕೆ ಸಲಹೆಗಾರರು (ಆರ್ ಐ ಎ) ರಾಗಿ ಕಾರ್ಯನಿರ್ವಹಿಸುತ್ತಿದ್ದು, ಮ್ಯೂಚುಯಲ್ ಫಂಡ್ ಸ್ಕೀಂಗಳನ್ನ ಖರೀದಿಸುವ ಅಥವಾ ಮಾರಾಟ ಮಾಡೋ ಸೌಲಭ್ಯ ಕೊಡುತ್ತವೆ. . ಆರ್ ಐ ಎ ನ ಹೊಸ ನಿಯಮಗಳಡಿ, ಯಾವುದೇ ಸಲಹೆ ಪಡೆಯದೇ ಮ್ಯೂಚುಯಲ್ ಫಂಡ್ ಗಳನ್ನ ಖರೀದಿ ಮಾಡುವ ಅಥವಾ ಮಾರಾಟ ಮಾಡುವ ಹೂಡಿಕೆದಾರರಿಗೆ… ಆನ್ಲೈನ್ ಪ್ಲಾಟ್ ಫಾರಂ ವಹಿವಾಟುಗಳಿಗೆ ಸಂಬಂಧಿಸಿದ ಸಂಭಾವ್ಯ ರಿಸ್ಕ್ ಗಳಿಗೆ ಯಾವುದೇ ಭದ್ರತೆ ಸಿಗಲ್ಲ.. ಇದನ್ನ ಮನಸ್ಸಿನಲ್ಲಿಟ್ಕೊಂಡು, ಎಎಂಎಫ್ಐ ನೊಂದಿಗೆ ಇಒಪಿ ನೋಂದಣಿ ಮಾಡಿಸಿಕೊಂಡು, ಎಎಂಸಿಗಳೊಂದಿಗೆ ಏಜೆಂಟ್ ಆಗಿ ಕಾರ್ಯನಿರ್ವಹಿಸಬಹುದು ಅಂತಾ ಸೆಬಿ ಹೇಳಿದೆ.. ಇವುಗಳನ್ನ ಕ್ಯಾಟಗರಿ 1 ಅಂತಾ ವರ್ಗೀಕರಿಸಲಾಗುತ್ತದೆ. ಒಂದು ವೇಳೆ, ಅವರೇನಾದರೂ ಸೆಬಿಯೊಂದಿಗೆ ಸ್ಟಾಕ್ ಬ್ರೋಕರ್ ಆಗಿ ನೋಂದಾಯಿಸಲ್ಪಟ್ಟವರೊಂದಿಗೆ ಹೂಡಿಕೆದಾರರಿಗೆ ಏಜೆಂಟರಾಗಿ ಕಾರ್ಯನಿರ್ವಹಿಸದರೆ, ಅದು ಕ್ಯಾಟಗರಿ 2 ಎಂದು ಪರಿಗಣಿಸಲ್ಪಡುತ್ತದೆ.
ಹಾಗಾದರೆ, ಮ್ಯೂಚುಯಲ್ ಫಂಡ್ ಗಳ ಡೈರೆಕ್ಟ್ ಪ್ಲಾನ್ ನಲ್ಲಿ ಯಾರು ಹೂಡಿಕೆ ಮಾಡಬೇಕು? ಎನ್ನುವ ಬಗ್ಗೆ ಹಣಕಾಸು ಸಲಹೆಗಾರ ಹೇಮಂತ್ ಅವರು ತಮ್ಮ ಅಭಿಪ್ರಾಯ ಹೇಳುತ್ತಾರೆ. ಎಕ್ಸಿಕ್ಯೂಷನ್ ಒನ್ಲಿ ಪ್ಲಾಟ್ ಫಾರಂ (ಇಒಪಿ) ಗಳಿಗೆ ಚೌಕಟ್ಟು ಜಾರಿಗೆ ಬಂದ ಮೇಲೆ, ಮ್ಯೂಚುಯಲ್ ಫಂಡ್ ಗಳ ಡೈರೆಕ್ಟ್ ಪ್ಲಾನ್ ಅಡಿ ಹೂಡಿಕೆ ಸ್ವಲ್ಪ ಸುರಕ್ಷಿತವಾಗಿದೆ.. ಇಒಪಿ ಹೂಡಿಕೆದಾರರಿಗೆ ಈಗ ಸೈಬರ್ ಭದ್ರತೆ, ತಂತ್ರಜ್ಞಾನ ಮತ್ತು ದೂರು ದಾಖಲಿಸುವ ಸೌಲಭ್ಯಗಳನ್ನ ಒದಗಿಸಲಾಗಿದೆ.. ಭವಿಷ್ಯದಲ್ಲಿ, ಡೈರೆಕ್ಟ್ ಪ್ಲಾನ್ ಗೆ ಸಂಬಂಧಿಸಿದ ಫೀಚರ್ಸ್ ಮತ್ತು ಸೌಲಭ್ಯಗಳು ಇನ್ನು ಹೆಚ್ಚಾಗುತ್ತದೆ. ನೀವು ಮ್ಯೂಚುಯಲ್ ಫಂಡ್ ಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರೆ ನೀವು ಡೈರೆಕ್ಟ್ ಪ್ಲಾನ್ ಗಳಲ್ಲಿ ಹೂಡಿಕೆ ಮಾಡಬಹುದು. ಡಿಸ್ಟ್ರಿಬ್ಯೂಟರ್ ಅಥವಾ ಹಣಕಾಸು ಸಲಹೆಗಾರರು ಅಗತ್ಯ ಇಲ್ಲದೆ ಇರುವ ಅನುಭವಿ ಹೂಡಿಕೆದಾರರಿಗೆ ಡೈರೆಕ್ಟ್ ಪ್ಲಾನ್ ಗಳು ಉತ್ತಮ ಆಯ್ಕೆ. ನಿಮಗೆ ಮ್ಯೂಚುಯಲ್ ಫಂಡ್ ಗಳು ಅರ್ಥ ಆಗದೆ ನೀವು ಡಿಸ್ಟ್ರಿಬ್ಯೂಟರ್ ಮೂಲಕ ಹೂಡಿಕೆ ಮಾಡುವುದು ಒಳಿತು.
ಮ್ಯೂಚುಯಲ್ ಫಂಡ್ ಗಳ ಡೈರೆಕ್ಟ್ ಪ್ಲಾನ್ ನಡಿ ಕಡಿಮೆ ವೆಚ್ಚದ ಕಾರಣದಿಂದಾಗಿ, ರೆಗ್ಯುಲರ್ ಪ್ಲಾನ್ ಗೆ ಹೋಲಿಸಿದರೆ ಹೆಚ್ಚಿನ ರಿಟರ್ನ್ಸ್ ಸಿಗುತ್ತದೆ. ಇದರಿಂದ ದೀರ್ಘಾವಧಿ ಹೂಡಿಕೆದಾರರಿಗೆ ಲಾಭವಾಗುತ್ತದೆ. ಡೈರೆಕ್ಟ್ ಪ್ಲಾನ್ ಗಳಲ್ಲಿ ಹೂಡಿಕೆ ಮಾಡುವುದಕ್ಕೆ ನಿಮಗೆ ಮ್ಯೂಚುಯಲ್ ಫಂಡ್ ಗಳ ಬಗ್ಗೆ ಚೆನ್ನಾಗಿ ಗೊತ್ತಿರಬೇಕು. ಜೊತೆಗೆ ಹೂಡಿಕೆ ಬಗ್ಗೆ ತಿಳಿವಳಿಕೆ ಹೊಂದಿರಬೇಕು.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ