ರೀಮಾ ಅವರು ತುಂಬಾ ದಿನಗಳಿಂದ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿಕೊಂಡು ಬಂದಿದ್ದಾರೆ. ಷೇರು ಮಾರುಕಟ್ಟೆ ಏರಿಳಿತಗಳನ್ನ ಗಮನಿಸಿ ಅವರು, ತಮ್ಮ ಹೂಡಿಕೆ ರಿಡೀಮ್ ಮಾಡೋ ಬಗ್ಗೆ ಅಂದ್ರೆ ಹಿಂಪಡೆಯೋ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಈ ತರಹ ಆಲೋಚನೆ ಮಾಡುತ್ತಿರುವುದು ರೀಮಾ ಒಬ್ಬರೇ ಅಲ್ಲ. ಮಾರುಕಟ್ಟೆ ಅಸ್ಥಿರತೆ ಗಮನಿಸಿರುವ ಎಲ್ಲರೂ ಸಹ ತಮ್ಮ ಮ್ಯೂಚುಯಲ್ ಫಂಡ್ ಹೂಡಿಕೆಗಳನ್ನ ರಿಡೀಮ್ ಮಾಡುವ ಆಲೋಚನೆಯಲ್ಲಿದ್ದಾರೆ. ಆದರೆ ಈ ಚಿಂತನೆ ಸರಿಯಾಗಿದ್ಯಾ? ಯಾವಾಗ ನಿಮ್ಮ ಫಂಡ್ ರಿಡೀಮ್ ಮಾಡಬಹುದು, ಯಾವಾಗ ಮಾಡಬಾರದು ಎನ್ನುವುದನ್ನು ಸಮಗ್ರವಾಗಿ ತಿಳಿದುಕೊಳ್ಳೋಣ.
ಮೊದಲಿಗೆ, ರಿಡಮ್ಷನ್ ಪ್ರಕ್ರಿಯೆ ಅರ್ಥ ಮಾಡ್ಕೋಳೋಣ. ಈಗ ನಿಮ್ಮ ಮ್ಯೂಚುಯಲ್ ಫಂಡ್ ಹೂಡಿಕೆ ರಿಡೀಮ್ ಮಾಡೋಕೆ ನೀವು ಸುದೀರ್ಘ ಅರ್ಜಿ ತುಂಬೋ ಅಗತ್ಯ ಇಲ್ಲ. ಜೊತೆಗೆ ಅಸೆಟ್ ಮ್ಯಾನೇಜ್ಮೆಂಟ್ ಕಂಪೆನಿ (ಎಎಂಸಿ)ಗೆ ಭೇಟಿ ಕೊಡೋ ಅಗತ್ಯ ಕೂಡ ಇಲ್ಲ. ಡಿಜಿಟಲೀಕರಣದ ಬಳಿಕ ಹೂಡಿಕೆಗಳನ್ನ ರಿಡೀಮ್ ಮಾಡೋದು ಸುಲಭ ಆಗಿದೆ. ಒಂದೇ ಒಂದು ಕ್ಲಿಕ್ ನಿಂದ ನೀವು ನಿಮ್ಮ ಮ್ಯೂಚುಯಲ್ ಫಂಡ್ ನ ನೆಟ್ ಅಸೆಟ್ ವ್ಯಾಲ್ಯೂ –ಎನ್ ಎ ವಿ, ಅಂದ್ರೆ ಮ್ಯೂಚುಯಲ್ ಫಂಡ್ ಯೂನಿಟ್ ಗಳನ್ನ ಸರಳವಾಗಿ ಹಿಂಪಡೆಯಬಹುದು. ಮ್ಯೂಚುಯಲ್ ಫಂಡ್ ಗಳಲ್ಲಿ ರಿಡಮ್ಷನ್ ಅನ್ನೋದು ಯಾವುದೇ ಒಂದು ಸ್ಕೀಂನಿಂದ ಹೊರಬರುವುದಕ್ಕೆ ಅಥವಾ ಭಾಗಶಃ ಹೂಡಿಕೆ ಹಣವನ್ನ ಹಿಂಪಡೆಯುವುದಕ್ಕೆ ಬಳಸೋ ಪದ. ನಿಮ್ಮ ಮ್ಯೂಚುಯಲ್ ಫಂಡ್ ಹೂಡಿಕೆಯನ್ನು ಸುಲಭವಾಗಿ ರಿಡೀಮ್ ಮಾಡುವ ಕೆಲವು ವಿಧಾನಗಖಳನ್ನು ನಾವು ತಿಳಿಸಿಕೊಡುತ್ತೇವೆ.
ಮೊದಲನೆಯದು ಎಎಂಸಿ ಅಥವಾ ಡಿಸ್ಟ್ರಿಬ್ಯೂಟರ್ ಮೂಲಕ ರಿಡಮ್ಷನ್. ಇದು ಅತ್ಯಂತ ಸರಳ ಮಾರ್ಗ. ಇತ್ತೀಚಿನ ದಿನಗಳಲ್ಲಿ, ಬಹುತೇಕ ಹೂಡಿಕೆದಾರರು ಮ್ಯೂಚುಯಲ್ ಫಂಡ್ ಗಳನ್ನ ನೇರವಾಗಿ ಮ್ಯೂಚುಯಲ್ ಫಂಡ್ ಹೌಸ್ ಮೂಲಕ ಅಥವಾ ಡಿಸ್ಟ್ರಿಬ್ಯೂಟರ್ ಮೂಲಕ ಖರೀದಿಸ್ತಾ ಇದಾರೆ. ಎಲ್ಲಾ ಎಎಂಸಿಗಳು ತಮ್ಮ ವೆಬ್ ಸೈಟ್ ಮೂಲಕ ಮ್ಯೂಚುಯಲ್ ಫಂಡ್ ಗಳನ್ನ ಖರೀದಿಸೋ ಹಾಗೇ ಮಾರಟ ಮಾಡೋ ಸೌಲಭ್ಯ ಕೊಟ್ಟಿವೆ. ಎಲ್ಲಾ ಡಿಸ್ಟ್ರಿಬ್ಯೂಟರ್ ಗಳು ಕೂಡ ಈ ಆಯ್ಕೆ ಕೊಟ್ಟಿದಾರೆ. ಇದರ ಮೂಲಕ ನೀವು ಸುಲಭವಾಗಿ ನಿಮ್ಮ ಹೂಡಿಕೆಯನ್ನ ರಿಡೀಮ್ ಮಾಡ್ಕೋಬಹುದು. ನೀವೇನಾದರೂ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಮೂಲಕ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದರೆ, ನೀವು ಯಾವಾಗ ಬೇಕಾದರೂ ಮಾರಾಟ ಮಾಡುವ ಆರ್ಡರ್ ಕೊಡಬಹುದು. ಈ ಮಾರಾಟದಿಂದ ಸಿಗುವ ಹಣ ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ.
ನೀವು ರಿಜಿಸ್ಟ್ರಾರ್ ಮತ್ತು ಟ್ರಾನ್ಸ್ಫರ್ ಏಜೆಂಟ್ (ಆರ್ ಟಿ ಎ) ಮೂಲಕ ನಿಮ್ಮ ಮ್ಯೂಚುಯಲ್ ಫಂಡ್ ಹೂಡಿಕೆಗಳನ್ನು ರಿಡೀಮ್ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಕೆ.ಫಿನ್ಟೆಕ್ ಮತ್ತು ಸಿಎಎಂಎಸ್ ಗಳಂತಹ ಆರ್ ಟಿಎಗಳನ್ನು ಸಂಪರ್ಕಿಸಬೇಕಾಗತ್ತೆ. ಆನ್ಲೈನ್ ನಲ್ಲಿ ಅರ್ಜಿ ಡೌನ್ ಲೋಡ್ ಮಾಡಿಕೊಂಡು ಹತ್ತಿರದ ಎಎಂಸಿ ಶಾಖೆಯಲ್ಲಿ ನೀವು ಖರೀದಿ ಮಾಡಿರುವ ಮ್ಯೂಚುಯಲ್ ಫಂಡ್ ರಿಡೀಮ್ ಮಾಡಿಕೊಳ್ಳಬಹುದು. ಎಎಂಸಿ ಅಥವಾ ಬ್ರೋಕರ್ ಮೂಲಕ ಮ್ಯೂಚುಯಲ್ ಫಂಡ್ ರಿಡೀಮ್ ಮಾಡಿದಲ್ಲಿ, ಈ ರಿಡಮ್ಷನ್ ಪ್ರಕ್ರಿಯೆಗಳಲ್ಲಿ ವ್ಯತ್ಯಾಸಗಳಿರಬಹುದು ಅನ್ನೋದನ್ನ ನೆನಪಿನಲ್ಲಿಡಿ. ಮ್ಯೂಚುಯಲ್ ಫಂಡ್ ಗಳನ್ನ ರಿಡೀಮ್ ಮಾಡುವ ಬಗೆಗಿನ ನಿಖರ ಮಾಹಿತಿಗಾಗಿ ಎಎಂಸಿಯ ಅಧಿಕೃತ ವೆಬ್ಸೈಟ್ ನೋಡಿ. ಯಾವುದೇ ಅನುಮಾನ, ಪ್ರಶ್ನೆಗಳಿದ್ದರೆ ಕಂಪೆನಿಯ ಕಸ್ಟಮರ್ ಕೇರ್ ಸಂಪರ್ಕಿಸಿ.
ಮ್ಯೂಚುಯಲ್ ಫಂಡ್ ಯೂನಿಟ್ ಗಳನ್ನ ಯಾವಾಗ ರಿಡೀಮ್ ಮಾಡಬಹುದು ಅನ್ನೋದು ಈಗಿನ ಪ್ರಶ್ನೆ. ಮೊದಲಿಗೆ ಮೂರು ಸಂದರ್ಭಗಳನ್ನು ಗಣನೆಗೆ ತೆಗೆದುಕೊಳ್ಳಿ. ನಿಮಗೆ ಯಾವಾಗ ಹಣ ಬೇಕಾಗಬಹುದು ಮತ್ತು ಬೇರೆಡೆಗಳಿಂದ ಹಣ ಹೊಂದಿಸುವುದಕ್ಕೆ ಸಾಧ್ಯವಾಗಲ್ಲ ಎನ್ನುವ ಸಂದರ್ಭ ಇರುತ್ತದೆ. ಇನ್ನು ಎರಡನೆಯದು, ನಿಮ್ಮ ಫಂಡ್ ಸ್ಟ್ರ್ಯಾಟೆಜಿ ಬದಲಾಗಿದ್ದರೆ ಇನ್ನು ಮೂರನೆಯದು, ನಿಮ್ಮ ಫಂಡ್ ಚೆನ್ನಾಗಿ ಫರ್ಮಾರ್ಮ್ ಮಾಡದೆ ಇದ್ದರೆ ಇಂತಹ ಸಂದರ್ಭಗಳಲ್ಲಿ ನೀವು ನಿಮ್ಮ ಮ್ಯೂಚುಯಲ್ ಫಂಡ್ ಗಳನ್ನ ಮಾರಾಟ ಮಾಡುವ ಬಗ್ಗೆ ಯೋಚನೆ ಮಾಡಬಹುದು.
ಇನ್ವೆಸ್ಟೋಗ್ರಫಿ ಮತ್ತು ಸಿ ಎಫ್ ಪಿ ಸಂಸ್ಥಾಪಕರಾದ ಶ್ವೇತಾ ಜೈನ್ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಮ್ಯೂಚುವಲ್ ಫಂಡ್ ಗಳನ್ನು ರಿಡೀಮ್ ಮಾಡುವುದಕ್ಕೂ ಮೊದಲು ನಿಮ್ಮನ್ನ ನೀವು ಕೆಲವು ಪ್ರಶ್ನೆಗಳು ಕೇಳಿಕೊಳ್ಳಬೇಕು. ನೀವು ಯಾವ ಉದ್ದೇಶಕ್ಕಾಗಿ ಹೂಡಿಕೆ ಮಾಡಿದ್ದಿರೋ ಅದು ಈಡೇರಿದ್ಯಾ? ನಿಮ್ಮ ಉತ್ತರ ಹೌದು ಎಂದಾದರೆ ನೀವು ಆ ಹೂಡಿಕೆಯನ್ನ ರಿಡೀಮ್ ಮಾಡಿಕೊಳ್ಳಬಹುದು. ಅದೇ ರೀತಿ ನೀವು, ಮಾರುಕಟ್ಟೆ ಏರಿಳಿತದ ಕಾರಣ ನಿಮ್ಮ ಹೂಡಿಕೆ ಹಿಂಪಡೆಯಲು ಮುಂದಾಗಿದ್ದರೆ ಸ್ವಲ್ಪ ನಿಲ್ಲಿ.. ನಿಮ್ಮ ಟಾರ್ಗೆಟ್ ಬಗ್ಗೆ ಗಮನಹರಿಸಿ. ಮಾರುಕಟ್ಟೆ ಏರಿಳಿತ ಶಾಶ್ವತವಲ್ಲ, ಹೀಗಾಗಿ ನಿಮ್ಮ ಹೂಡಿಕೆಯನ್ನ ಹಿಂಪಡೆಯಬೇಡಿ.
ಒಂದು ವೇಳೆ ನೀವು ನಿಮ್ಮ ಹೂಡಿಕೆಯನ್ನ ರಿಡೀಮ್ ಮಾಡಲೇಬೇಕಾಗಿ ಬಂದರೆ ಕೆಲವು ವಿಷಯಗಳನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕು – ಫಂಡ್ ಪರ್ಫಾರ್ಮೆನ್ಸ್ ಮತ್ತು ರಿಡಮ್ಷನ್ ಕಾರಣಗಳ ಬಗ್ಗೆ ಕೂಲಂಕುಷವಾಗಿ ಯೋಚಿಸಿ – ಮಾರುಕಟ್ಟೆ ಏರಿಳಿತದ ನಡುವೆ ಆತುರದ ನಿರ್ಧಾರ ಮಾಡಬೇಡಿ. ಫಂಡ್ ಮ್ಯಾನೇಜರ್ ನಿರ್ಧಾರದ ಮೇಲೆ ವಿಶ್ವಾಸವಿರಲಿ. – ರಿಡಮ್ಷನ್ ಆದ ಮೇಲೆ ನಿಮ್ಮ ಖಾತೆಗೆ ಹಣ ಜಮಾ ಆಗುವುದಕ್ಕೆ 1-2 ಆಗಬಹುದು. – ಈ ಅವಧಿ, ನಿಮ್ಮ ಫಂಡ್ ಕ್ಯಾಟಗರಿಯನ್ನ ಅವಲಂಬಿಸಿರತ್ತೆ. ಡೆಟ್ ಮತ್ತು ಲಿಕ್ವಿಡ್ ಫಂಡ್ ಗಳ ಹಣ ಈಕ್ವಿಟಿ ಫಂಡ್ ಗಳಿಗಿಂತ ಬೇಗ ಬರತ್ತೆ. – ಎಕ್ಸಿಟ್ ಲೋಡ್ ನಂತಹ ಹೆಚ್ಚುವರಿ ಶುಲ್ಕಗಳ ಬಗ್ಗೆ ಜಾಗೃತರಾಗಿರಿ, ಅವು ಫಂಡ್ ನಿಂದ ಫಂಡ್ ಗೆ ಭಿನ್ನವಾಗಿರತ್ತೆ.
ಇಂತಹ ಸನ್ನಿವೇಶದಲ್ಲಿ, ನಿಮ್ಮ ದೀರ್ಘಾವಧಿ ಗುರಿ ಆಧರಿಸಿ ನೀವು ಮ್ಯೂಚುಯಲ್ ಫಂಡ್ ರಿಡಮ್ಷನ್ ಬಗ್ಗೆ ನಿರ್ಧರಿಸಬೇಕು. ಈ ಅವಧಿಯಲ್ಲಿ ಪಾವತಿಸಬೇಕಾಗಬಹುದಾದ ತೆರಿಗೆಗಳ ಬಗ್ಗೆ ನಿರ್ಲಕ್ಷ್ಯ ಬೇಡ. ಹಣದ ಅಗತ್ಯ ಅಥವಾ ಉತ್ತಮ ಗಳಿಕೆಯ ಹೂಡಿಕೆ ಮೊದಲಾದ ಕಾರಣಗಳಿಗಾಗಿ ಅನೇಕ ಸಲ, ಜನರು ಮ್ಯೂಚುಯಲ್ ಫಂಡ್ ಗಳನ್ನ ಮಾರಾಟ ಮಾಡುತ್ತಾರೆ. ಮ್ಯೂಚುಯಲ್ ಫಂಡ್ ಗಳ ಮಾರಾಟದ ಬಗ್ಗೆ ನಿಮಗೆ ಗೊಂದಲ ಇದ್ದರೆ ನಿಮ್ಮ ಫೈನ್ಯಾನ್ಷಿಯಲ್ ಪ್ಲಾನರ್ ಸಲಹೆ ಪಡೆಯೋದು ಒಳ್ಳೆಯದು.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ