ನಿಮೇಶ್ ಟಿವಿಯಲ್ಲಿ ಮ್ಯೂಚುಯಲ್ ಫಂಡ್ ಜಾಹೀರಾತೊಂದನ್ನು ವೀಕ್ಷಿಸುತ್ತಿದ್ದರು. ಮಾಡುತ್ತಿದ್ದರು. ಮ್ಯೂಚುಯಲ್ ಫಂಡ್ ಹೂಡಿಕೆ ಮಾರ್ಕೆಟ್ ರಿಸ್ಕ್ ಗೆ ಒಳಪಟ್ಟಿರುತ್ತದೆ ಎಂದು ಆ ಜಾಹೀರಾತಿನಲ್ಲಿ ಹೇಳುತ್ತಾರೆ. ಈ ವಿಷಯ ಅವರ ಗಮನ ಸೆಳೆಯುತ್ತದೆ. ಅವರು ತಮ್ಮ ಸಹೋದ್ಯೋಗಿ ವಿನಯ್ ಗೆ ಈ ಜಾಹೀರಾತಿನ ಕುರಿತಾಗಿ ಪ್ರಶ್ನೆ ಮಾಡುತ್ತಾರೆ. ಸ್ಕೀಂ ಗೆ ಸಂಬಂಧಿಸಿದ ಹಾಗೆ ಯಾವ ಯಾವ ದಾಖಲೆಗಳನ್ನು ಜಾಗರೂಕರಾಗಿ ನೋಡಬೇಕು ಎನ್ನುವುದನ್ನು ಕೇಳುತ್ತಾರೆ.
ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವ ಮೊದಲು ಯಾವ ದಾಖಲೆಗಳನ್ನ ಗಮನಿಸಬೇಕು ಅಥವಾ ಯಾವ ದಾಖಲೆಗಳನ್ನು ಜಾಗರೂಕರಾಗಿ ಓದಿ ತಿಳಿದುಕೊಳ್ಳಬೇಕು ಅಂತಹ ದಾಖಲೆ ಆಫರ್ ಡಾಕ್ಯುಮೆಂಟ್ಸ್ ಅಂತಾ ವಿನಯ್ ವಿವರವಾಗಿ ಹೇಳುತ್ತಾರೆ. ಸ್ಕೀಂ ಇನ್ಫರ್ಮೇಷನ್ ಡಾಕ್ಯುಮೆಂಟ್ (ಎಸ್ ಐ ಡಿ), ಸ್ಟೇಟ್ಮೆಂಟ್ ಆಫ್ ಅಡಿಷಿನಲ್ ಇನ್ಫರ್ಮೇಶನ್ (ಎಸ್ ಎ ಐ) ಮತ್ತು ಕೀ ಇನ್ಫರ್ಮೇಶನ್ ಮೆಮೋರಂಡಮ್, (ಕೆಐಎಂ) ಇವುಗಳೆಲ್ಲನ್ನ ಸೇರಿಸಿ ರೂಪಿಸಿರೋ ದಾಖಲೆ ಇದು. ಸ್ಕೀಂ ಮಾಹಿತಿ, ಹೆಚ್ಚುವರಿ ವಿವರಗಳ ತಪ್ಪದೆ ಹಾಗೇ ಒಪ್ಪಂದದ ಪ್ರಮುಖ ವಿವರಗಳನ್ನುಇದು ಒಳಗೊಂಡಿರತ್ತದೆ. ಮ್ಯೂಚುಯಲ್ ಫಂಡ್ ಕಂಪನಿಯು ಹೊಸ ಸ್ಕೀಂ ಲಾಂಚ್ ಮಾಡಿದಾಗಲೆಲ್ಲಾ ಆಫರ್ ಡಾಕ್ಯುಮೆಂಟ್ ಇಷ್ಯೂ ಮಾಡುತ್ತದೆ. ಈ ಪೈಕಿ ಮ್ಯೂಚುಯಲ್ ಫಂಡ್ ಸ್ಕೀಂ ವಿಶ್ಲೇಷಿಸುವುದಕ್ಕೆ ಅಥವಾ ಮೌಲ್ಯಮಾಪನ ಮಾಡುವುದಕ್ಕೆ ಎಸ್ ಐ ಡಿ ಅತ್ಯಂತ ಮುಖ್ಯ.
2023 ರ ನವೆಂಬರ್ 1 ರಂದು ಮಾರುಕಟ್ಟೆ ನಿಯಂತ್ರಕ ಸೆಬಿ ಸ್ಕೀಂ ಮಾಹಿತಿ ದಾಖಲೆ-ಎಸ್ ಐ ಡಿ ಫಾರ್ಮ್ಯಾಟ್ ಗಳನ್ನು ಸರಳ ಹಾಗೂ ತರ್ಕಬದ್ಧವಾಗಿ ಕೊಡುವ ನಿರ್ಧಾರ ಮಾಡಿತು. ಮ್ಯೂಚುಯಲ್ ಫಂಡ್ ಸ್ಕೀಂ ಗಳಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಇದರ ಮುಖ್ಯ ಉದ್ದೇಶ. ಈ ಹೊಸ ಫಾರ್ಮಾಟ್ ಸ 2024 ರ ಏಪ್ರಿಲ್ 1 ರಿಂದ ಅನ್ವಯವಾಗುತ್ತಿದೆ. ಎಲ್ಲಾ ಮ್ಯೂಚುಯಲ್ ಫಂಡ್ ಸ್ಕೀಂಗಳೂ ಈ ಮೂರು ದಾಖಲೆಗಳನ್ನು ಕೊಡಿತ್ತವೆ. ಇವುಗಳಲ್ಲಿ ಸ್ಕೀಂ ಬಗ್ಗೆ ಪ್ರಮುಖ ಮಾಹಿತಿ ಇರುತ್ತದೆ. . ಅಸೆಟ್ ಮ್ಯಾನೇಜ್ಮೆಂಟ್ ಕಂಪೆನಿ – ಎಎಂಸಿ ಈ ಮೂರೂ ದಾಖಲೆಗಳನ್ನು ತಯಾರಿಸುತ್ತದೆ ಇದಕ್ಕೆ ಸೆಬಿ ಅನುಮೋದನೆ ಕೊಡುತ್ತದೆ.
ಈ ಡಾಕ್ಯುಮೆಂಟ್ಸ್ ಗಳನ್ನ ಸರಿಯಾಗಿ ಓದಿ ತಿಳಿದುಕೊಂಡರೆ ಈ ಸ್ಕೀಂನ ರಿಸ್ಕ್ ಗಳು ಗೊತ್ತಾಗುತ್ತದೆ. ಹೀಗಾಗಿ ಹೂಡಿಕೆದಾರರು ಮತ್ತು ಸಲಹೆಗಾರರು ಯಾವುದೇ ಹೂಡಿಕೆ ಮಾಡುವುದಕ್ಕೂ ಮೊದಲು ಇವುಗಳನ್ನ ಸರಿಯಾಗಿ ಓದುವುದು ಮುಖ್ಯ. ಈ ದಾಖಲೆಗಳು ಎಎಂಸಿ ವೆಬ್ಸೈಟ್ ನಲ್ಲಿ ಸಿಗತ್ತೆ. ಮೊದಲು, ಈ ದಾಖಲೆಗಳು ಏನು? ಯಾವುದೇ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡೋಕೂ ಮೊದಲು ಇವುಗಳನ್ನು ಯಾಕೆ ಅರ್ಥ ಮಾಡಿಕೊಳ್ಳಬೇಕು ಎನ್ನುವುದನ್ನು ನೋಡೋಣ.
ಸ್ಕೀಂ ಇನ್ಫರ್ಮೇಶನ್ ಡಾಕ್ಯುಮೆಂಟ್ – ಎಸ್ ಐ ಡಿ ಯಲ್ಲಿ ನಿರ್ದಿಷ್ಟ ಮ್ಯೂಚುಯಲ್ ಫಂಡ್ ಸ್ಕೀಂ ಬಗ್ಗೆ ಪ್ರಾಥಮಿಕ ಮಾಹಿತಿ ಇರುತ್ತದೆ. ಅಂದರೆ ಹೂಡಿಕೆ ಉದ್ದೇಶ, ಪಾಲಿಸಿಗಳು, ಅಸೆಟ್ ಹಂಚಿಕೆ ವಿಧಾನ (ಅಂದರೆ ಯಾವ ಅಸೆಟ್ ಕ್ಲಾಸ್ ನಲ್ಲಿ ಎಷ್ಟು ಹೂಡಿಕೆ ಮಾಡಲಾಗಿರುತ್ತದೆ ಎನ್ನುವ ಮಾಹಿತಿ), ಶುಲ್ಕ, ಲಿಕ್ವಿಡಿಟಿ ಸಂಬಂಧಿತ ನಿಯಮಗಳು ಇತ್ಯಾದಿ ಇದರಲ್ಲಿ ಇರುತ್ತದೆ. ಇದು ಮಾತ್ರವಲ್ಲದೆ ಎಸ್ ಐ ಡಿಯಲ್ಲಿ ಲೋಡ್, ಪ್ಲಾನ್ಸ್ ಅಂಡ್ ಅಪ್ಷನ್ಸ್, ಫಾಸ್ಟ್ ಪರ್ಫಾರ್ಮೆನ್ಸ್, ಬೆಂಚ್ ಮಾರ್ಕ್, ರಿಸ್ಕ್ ಫ್ಯಾಕ್ಟರ್ಸ್, ಫಂಡ್ ಮ್ಯಾನೇಜರ್ ಇನ್ಫರ್ಮೇಶನ್, ರಿಸ್ಕ್ ಮಿಟಿಗೇಷನ್ ಪ್ರಾವಿಷನ್ಸ್ ಮೊದಲಾದ ನಿಯಮಗಳು ಇದರಲ್ಲಿ ಇರುತ್ತವೆ.
ಇನ್ನು ಮ್ಯೂಚುಯಲ್ ಫಂಡ್ ಸ್ಕೀಂ ಗೆ ಸಂಬಂಧಿಸಿದ ಎರಡನೇ ಪ್ರಮುಖ ದಾಖಲೆ ಅಂದರೆ ಸ್ಟೇಟ್ಮೆಂಟ್ ಆಫ್ ಅಡಿಷಿನಲ್ ಇನ್ಫರ್ಮೇಶನ್ – ಎಸ್ ಎ ಐ. ಇದು ಮ್ಯೂಚುಯಲ್ ಫಂಡ್ ಸ್ಟ್ರಕ್ಚರ್ ನ ಕಾನೂನಾತ್ಮಕ ಮಾಹಿತಿ ಅಥವಾ ಲೀಗಲ್ ಡೀಟೇಲ್ಸ್ ಕೊಡುತ್ತದೆ. ಇದರಲ್ಲಿ ಮ್ಯೂಚುಯಲ್ ಫಂಡ್ ಏನೇನು ಒಳಗೊಂಡಿದೆ. ಅದರ ಕಾನ್ಸ್ಟಿಟ್ಯೂಷನ್ ಏನು? ಸ್ಪಾನ್ಸರ್ಸ್, ಅಸೆಟ್ ಮ್ಯಾನೇಜ್ಮೆಂಟ್ ಕಂಪೆನಿ ಮತ್ತು ಟ್ರಸ್ಟೀ ವಿವರಗಳಿರತ್ತವೆ. ಅಸೆಟ್ ಮ್ಯಾನೇಜ್ಮೆಂಟ್ ಕಂಪೆನಿಯ ಪ್ರಮುಖ ಅಧಿಕಾರಿಗಳು ಮತ್ತು ಸಹವರ್ತಿಗಳ ಮಾಹಿತಿಯೂ ಇರುತ್ತದೆ. ಅಂದರೆ ರಿಜಿಸ್ಟ್ರಾರ್, ಕಸ್ಟೋಡಿಯನ್, ಬ್ಯಾಂಕರ್, ಆಡಿಟರ್, ಮತ್ತು ಲೀಗಲ್ ಅಡ್ವೈಸರ್ ಯಾರು ಯಾರು ಎನ್ನುವ ಮಾಹಿತಿ ಇರುತ್ತದೆ. ಇದರ ಜೊತೆಗೆ ಹಣಕಾಸು ಮತ್ತು ಕಾನೂನಾತ್ಮಕ ಮಾಹಿತಿ ಕೂಡ ಇರುತ್ತದೆ.
ಮ್ಯೂಚುಯಲ್ ಫಂಡ್ ಗಳಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳ ಮೂರನೇ ಭಾಗ – ಕೀ ಇನ್ಫರ್ಮೇಶನ್ ಮೆಮೋರಂಡಮ್ (ಕಿಐಎಂ). ಕಿಮ್ ಅನ್ನೋದು ಸ್ಕೀಂ ಇನ್ಫರ್ಮೇಶನ್ ಡಾಕ್ಯುಮೆಂಟ್ ನ ಸಂಕ್ಷಿಪ್ತ ರೂಪ. ಇದು ಅಪ್ಲಿಕೇಷನ್ ಫಾರಂ ಜೊತೆಗೆ ಇರುತ್ತದೆ. ಹೆಸರೇ ಹೇಳುವ ಹಾಗೇ ಈ ಕೀ ಇನ್ಫರ್ಮೇಶನ್ ಮೆಮೊರಂಡಮ್, ಮ್ಯೂಚುಯಲ್ ಫಂಡ್ ಸ್ಕೀಂ ಗೆ ಸಂಬಂಧಿಸಿದ ಅಗತ್ಯ ಮಾಹಿತಿ ಒದಗಿಸುತ್ತದೆ. ಹೂಡಿಕೆದಾರರು ಸ್ಕೀಂ ನಲ್ಲಿ ಹೂಡಿಕೆ ಮಾಡುವುದಕ್ಕೂ ಮೊದಲು ತಿಳಿದಿರಲೇಬೇಕಾದ ಪ್ರಮುಖ ವಿಷಯಗಳು ಇದರಲ್ಲಿರರುತ್ತವೆ. ಪ್ರತಿ ಅರ್ಜಿಯೊಂದಿಗೆ ಈ ಕಿಮ್ ಕೊಡಬೇಕಿರೋದು ಕಡ್ಡಾಯ ಎನ್ನುವುದು ನಿಮಗೆ ಗೊತ್ತಿರಬೇಕು.
ಈಗ ಮ್ಯೂಚುಯಲ್ ಫಂಡ್ ಸ್ಕೀಂ ದಾಖಲೆಗಳಿಗೆ ಸೆಬಿ ಶಿಫಾರಸ್ಸು ಮಾಡಿರೋ ಬದಲಾವಣೆ ಬಗ್ಗೆಯೂ ತಿಳಿದುಕೊಳ್ಳೋಣ. ಸ್ಕೀಂ ಇನ್ಫರ್ಮೇಶನ್ ಡಾಕ್ಯುಮೆಂಟ್ ಎಸ್ ಐ ಡಿ ಯಲ್ಲಿನ ಬದಲಾವಣೆಗಳ ಪ್ರಕಾರ, ಸ್ಕೀಂ ಪೋರ್ಟ್ ಫೋಲಿಯೋ ಹೋಲ್ಡಿಂಗ್ ಮಾಹಿತಿಯನ್ನು ವೆಬ್ ಲಿಂಕ್ ಮೂಲಕ ಕೊಡಬೇಕಾಗುತ್ತದೆ. ಈ ಪೈಕಿ ಅಗ್ರ ಹತ್ತು ಹೋಲ್ಡಿಂಗ್ ಗಳು ಯಾವುವು? ವಿವಿಧ ವಲಯಗಳಿಗೆ ಫಂಡ್ ಅಲೊಕೇಷನ್ ಮೊದಲಾದ ಮಾಹಿತಿ ಇರುತ್ತದೆ.
ಇದಲ್ಲದೇ, ಅಸೆಟ್ ಮ್ಯಾನೇಜ್ಮೆಂಟ್ ಕಂಪೆನಿಗಳು ಸ್ಕೀಂ ನ ಮಾಹಿತಿ ಜೊತೆಗೆ ಬೆಂಚ್ ಮಾರ್ಕ್ ರಿಸ್ಕ್ ಒ ಮೀಟರ್ ವಿವರಗಳನ್ನ ಮೊದಲ ಪುಟದಲ್ಲೇ ಡಿಸ್ಕ್ಲೋಸ್ ಮಾಡಬೇಕು ಅಂದರೆ ಇನಿಷಿಯಲ್ ಆಫರ್ ಅಪ್ಲಿಕೇಷನ್ ಫಾರಂ, ಸ್ಕೀಂ ಇನ್ಫರ್ಮೇಶನ್ ಡಾಕ್ಯುಮೆಂಟ್, ಕೆಐಎಂ ಮತ್ತು ಕಾಮನ್ ಅಪ್ಲಿಕೇಷನ್ ಫಾರಂ ಗಳ ಮೊದಲ ಪುಟದಲ್ಲೇ ಈ ವಿವರಗಳು ಇರಬೇಕು.
ಅದಕ್ಕಿಂತ ಮುಖ್ಯವಾಗಿ, ಬೋರ್ಡ್ ಆಫ್ ಡೈರೆಕ್ಟರ್ಸ್ ಮತ್ತು ಅಸೆಟ್ ಮ್ಯಾನೇಜ್ಮೆಂಟ್ ಕಂಪೆನಿಯ ಇತರ ಪ್ರಮುಖ ಸಿಬ್ಬಂದಿ ಈ ಸ್ಕೀಂ ನಲ್ಲಿ ಮಾಡಿರೋ ಒಟ್ಟು ಹೂಡಿಕೆಯ ಮಾಹಿತಿಯನ್ನ ಬಹಿರಂಗಪಡಿಸಬೇಕು.. ಹೂಡಿಕೆ ಮಾಡೋಕೂ ಮೊದಲು ಮ್ಯೂಚುಯಲ್ ಫಂಡ್ ಸ್ಕೀಂ ಗೆ ಸಂಬಂಧಿಸಿದ ದಾಖಲೆಗಳನ್ನ ಕೂಲಂಕಷವಾಗಿ ಓದಬೇಕು. ಆಗ ಹೂಡಿಕೆದಾರರಿಗೆ ಸ್ಕೀಂ ಯಾವಾಗ ಶುರುವಾಯಿತು? ಸ್ಕೀಂ ನೇಚರ್ ಏನು, ಯಾವ ಯಾವ ವಲಯಗಳಲ್ಲಿ ಮತ್ತು ಎಷ್ಟು ಅನುಪಾತದಲ್ಲಿ ಈ ಸ್ಕೀಂ ಹೂಡಿಕೆ ಮಾಡುತ್ತದೆ ಮೊದಲಾದ ವಿವರಗಳು ಹೂಡಿಕೆದಾರರಿಗೆ ಗೊತ್ತಾಗುತ್ತದೆ. ಇದರಲ್ಲಿ ಸ್ಕೀಂ ನ ಪಾಸ್ಟ್ ಪರ್ಫಾರ್ಮೆನ್ಸ್ ಮಾಹಿತಿ ಕೂಡ ಇರುತ್ತದೆ. ಅಂದರೆ 1, 3 ಅಥವಾ 5 ವರ್ಷಗಳಲ್ಲಿನ ರಿಟರ್ನ್ಸ್ ಮಾಹಿತಿ ಇರತ್ತೆ. ಇದರ ಜೊತೆಗೆ ಈ ದಾಖಲೆಗಳು, ಈ ಸ್ಕೀಂ ಸಂಬಂಧಿತ ರಿಸ್ಕ್ ಮತ್ತು ಅದರ ನಿಗ್ರಹಕ್ಕೆ ಮಾರ್ಗೋಪಾಯ ಸಹ ತಿಳಿಸಿಕೊಡುತ್ತದೆ.
ರಿಟರ್ನ್ಸ್ ಇಂತಿಷ್ಟು ಸಿಗಬಹುದು ಅನ್ನೋ ನಿರೀಕ್ಷೆಯಲ್ಲೇ, ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವವರು ಇದ್ದಾರೆ. ನಿರೀಕ್ಷೆಯ ಆಧಾರದಲ್ಲಿ ಹೂಡಿಕೆ ಮಾಡೋದು ತಪ್ಪು. ಇದರಿಂದಾಗಿ ಅವರು ಸ್ಕೀಂ ಸಂಬಂಧಿತ ದಾಖಲೆಗಳನ್ನ ಓದದೇ ನಿರ್ಲಕ್ಷ್ಯ ತೋರುತ್ತಾರೆ. ಇದು ಸರಿಯಾದ ಕ್ರಮವಲ್ಲ. ಮ್ಯೂಚುಯಲ್ ಫಂಡ್ ಗಳ ರಿಟರ್ನ್ ಗಳು ಮಾರುಕಟ್ಟೆ ಆಧಾರಿತವಾಗಿರುತ್ತವೆ. ಹೀಗಾಗಿ, ಯಾವುದೇ ಮ್ಯೂಚುಯಲ್ ಫಂಡ್ ಸ್ಕೀಂ ಗಳಲ್ಲಿ ಹೂಡಿಕೆ ಮಾಡುವುದಕ್ಕೂ ಮೊದಲು ಎಲ್ಲಾ ಮೂರು ಡಾಕ್ಯುಮೆಂಟ್ ಗಳನ್ನ ಕೂಲಂಕಷವಾಗಿ ಓದಬೇಕು. ಈ ದಾಖಲೆಗಳು ಹೂಡಿಕೆದಾರರು ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತದೆ.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ