` pig butchering scam cyber fraud by online apps what is it how does it work | ಈ ನಕಲಿ ಆ್ಯಪ್​ಗಳನ್ನು ನಂಬಿಕೊಂಡರೆ ನೀವು ದಿವಾಳಿ! | Money9 Kannada

ಈ ನಕಲಿ ಆ್ಯಪ್​ಗಳನ್ನು ನಂಬಿಕೊಂಡರೆ ನೀವು ದಿವಾಳಿ!

ಸೈಬರ್‌ ಸ್ಕ್ಯಾಮರ್‌ಗಳು ಮೊದಲು ಜನರಿಗೆ ಆಸೆ ತೋರಿಸಲು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರಂಗಳಲ್ಲಿ ಜಾಹೀರಾತುಗಳನ್ನು ಬಳಸುತ್ತವೆ. ನಂತರ, ಈ ಜಾಹೀರಾತನ್ನು ಕ್ಲಿಕ್ ಮಾಡಿದವರಿಗೆ ಮೆಸೇಜ್‌ ಕಳುಹಿಸುತ್ತವೆ. ವಾಟ್ಸಾಪ್ ಅಥವಾ ಟೆಲಿಗ್ರಾಮ್ ಗ್ರೂಪ್‌ಗೆ ಜಾಯಿನ್ ಆಗಿ ಅಂತ ನಿಮ್ಮನ್ನು ಆಹ್ವಾನಿಸುತ್ತವೆ.

ಹೆಚ್ಚು ಹಣ ಕೈಯಲ್ಲಿದ್ದರೆ ಯಾರಿಗೆ ತಾನೆ ಖುಷಿಯಾಗುವುದಿಲ್ಲ? ಆದರೆ, ಬೇಗ ಹಣ ಮಾಡಬೇಕು ಎಂಬ ಅತಿಯಾಸೆ ನಮ್ಮನ್ನು ಸಂಕಷ್ಟಕ್ಕೀಡು ಮಾಡಬಹುದು. ಸಚಿನ್‌ಗೆ ಇದು ಅನುಭವಕ್ಕೆ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಸಚಿನ್‌ಗೆ ಒಂದು ಬ್ರೋಕರ್‌ ಆಪ್‌ ಬಗ್ಗೆ ಜಾಹೀರಾತು ಕಂಡಿತು. ಭಾರಿ ಹೂಡಿಕೆ ಮಾಡಿದರೆ ಭಾರಿ ರಿಟರ್ನ್ಸ್‌ ಕೊಡುತ್ತೇವೆ ಎಂದು ಜಾಹೀರಾತಿನಲ್ಲಿ ಹೇಳಿದ್ದರು. ಕುತೂಹಲ ಹುಟ್ಟಿದ ಸಚಿನ್ ಅದರ ಮೇಲೆ ಕ್ಲಿಕ್ ಮಾಡಿದರು. ಹಾಗೆ ಕ್ಲಿಕ್ ಮಾಡುತ್ತಿದ್ದ ಹಾಗೆಯೇ ಅವರ ಇನ್‌ಬಾಕ್ಸ್‌ನಲ್ಲಿ ಇಮೇಲ್‌ಗಳ ಸುರಿಮಳೆಯೇ ಬಂದು ಬಿದ್ದಿತು. ಅದನ್ನೆಲ್ಲ ನೋಡಿದ ಸಚಿನ್ ಕೂಡ ತಡ ಮಾಡದೇ, ಯೋಚನೆಯನ್ನೂ ಮಾಡದೇ 3 ಲಕ್ಷ ರೂ. ಹಾಕಿದರು. ಎರಡು ವಾರಗಳ ನಂತರ ಅದೊಂದು ಸ್ಕ್ಯಾಮ್ ಎನ್ನುವುದು ಆತನಿಗೆ ಗೊತ್ತಾಯಿತು. ಒಂದು ಜನಪ್ರಿಯ ಆಪ್‌ ರೀತಿಯಲ್ಲೇ ಇದು ಕಾಣಿಸಿದ್ದರಿಂದ ಸಚಿನ್ ಮೋಸ ಹೋಗಿದ್ದರು. ಈ ರೀತಿ ಮೋಸ ಹೋಗಿದ್ದರಲ್ಲಿ ಸಚಿನ್ ಒಬ್ಬರೇ ಅಲ್ಲ. ಇಂತಹ ಅಪರಾಧಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದನ್ನು ಪಿಗ್ ಬಚರಿಂಗ್ ಸ್ಕ್ಯಾಮ್‌ ಎಂದು ಕರೆಯಲಾಗುತ್ತದೆ. ಇದೊಂದು ರೀತಿಯ ಇನ್ವೆಸ್ಟ್‌ಮೆಂಟ್ ರಿಲೇಟೆಡ್‌ ಸ್ಕ್ಯಾಮ್. ಸೈಬರ್‌ಕ್ರಿಮಿನಲ್‌ಗಳು ನಕಲು ಹೂಡಿಕೆ ಆಪ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ರಚಿಸಿಕೊಂಡು, ಇದರಲ್ಲಿ ಹೂಡಿಕೆ ಮಾಡಿ, ನಿಮಗೆ ಭಾರಿ ರಿಟರ್ನ್ಸ್‌ ಬರುತ್ತದೆ ಎಂದು ಜನರನ್ನು ವಂಚಿಸುತ್ತಲೇ ಬಂದಿದ್ದಾರೆ.

ಇಂತಹ ಮೋಸದ ಪ್ರಕರಣಗಳು ಹೆಚ್ಚುತ್ತಿರುವುದರಿಂದ, ಹೂಡಿಕೆದಾರರಿಗೆ ಈ ಬಗ್ಗೆ ಸ್ಟಾಕ್ ಮಾರ್ಕೆಟ್ ಎಕ್ಸ್‌ಚೇಂಜ್‌ಗಳು ಎಚ್ಚರಿಕೆ ನೀಡಿವೆ. ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ ಅಥವಾ ಎನ್‌ಎಸ್‌ಇ ಎಚ್ಚರಿಕೆ ನೀಡಿದ್ದು, ಕೆಲವರು ತಾವು ಪ್ರತಿಷ್ಠಿತ ಸಂಸ್ಥೆಯವರು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದಾರೆ. ಭಾರತದ ಮತ್ತು ಅಂತಾರಾಷ್ಟ್ರೀಯ ಮೊಬೈಲ್‌ ನಂಬರ್‌ಗಳನ್ನು ಅವರು ನೀಡುತ್ತಾರೆ, ವಾಟ್ಸಾಪ್‌ ಗ್ರೂಪ್‌ಗಳು, ಟೆಲಿಗ್ರಾಮ್ ಚಾನೆಲ್‌ಗಳು, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಚಾನೆಲ್‌ಗಳ ಮಾಹಿತಿಯನ್ನು ಅವರು ಕೊಡುತ್ತಾರೆ. ಸೆಬಿ/ಸ್ಟಾಕ್ ಎಕ್ಸ್‌ಚೇಂಜ್‌ಗಳ ನಕಲಿ ಸರ್ಟಿಫಿಕೇಟ್‌ಗಳನ್ನು ಅವರು ತೋರಿಸುತ್ತಾರೆ. ಫಿಸ್ಡಮ್‌, ಧನ್‌, ಫೈಯರ್ಸ್‌ ಮತ್ತು ಚಾಯ್ಸ್‌ ಬ್ರೋಕಿಂಗ್‌ ರೀತಿಯ ಆ್ಯಪ್ ಗಳು ಕೂಡಾ ತಮ್ಮ ಹೆಸರನ್ನು ಬಳಸಿಕೊಂಡು ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಹೂಡಿಕೆದಾರರಿಗೆ ಮಾಹಿತಿ ನೀಡಿವೆ.

ಈಗ, ಈ ಪಿಗ್ ಬಚರಿಂಗ್ ಸ್ಕ್ಯಾಮ್ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ನೋಡೋಣ. ಸೈಬರ್‌ ಸ್ಕ್ಯಾಮರ್‌ಗಳು ಮೊದಲು ಜನರಿಗೆ ಆಸೆ ತೋರಿಸಲು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರಂಗಳಲ್ಲಿ ಜಾಹೀರಾತುಗಳನ್ನು ಬಳಸುತ್ತವೆ. ನಂತರ, ಈ ಜಾಹೀರಾತನ್ನು ಕ್ಲಿಕ್ ಮಾಡಿದವರಿಗೆ ಮೆಸೇಜ್‌ ಕಳುಹಿಸುತ್ತವೆ. ವಾಟ್ಸಾಪ್ ಅಥವಾ ಟೆಲಿಗ್ರಾಮ್ ಗ್ರೂಪ್‌ಗೆ ಜಾಯಿನ್ ಆಗಿ ಅಂತ ನಿಮ್ಮನ್ನು ಆಹ್ವಾನಿಸುತ್ತವೆ. ಈ ಸಮಯದಲ್ಲಿ ಅಸಲಿ ಕಂಪನಿಯ ಹೆಸರನ್ನು ಬಳಸಲಾಗುತ್ತದೆ. ನಿಮಗೆ ಟ್ರೇಡಿಂಗ್ ಟಿಪ್ಸ್ ಕೂಡ ಬರುತ್ತದೆ. ಹಲವು ಬಾರಿ ಒಂದೆರಡು ಸ್ಟಾಕ್‌ನಿಂದ ನಿಮಗೆ ಲಾಭವೂ ಆಗಬಹುದು. ಇದು ಜನರಿಗೆ ನಂಬಿಕೆ ಹುಟ್ಟುಹಾಕುತ್ತದೆ. ಆ ನಂತರ, ನಿಜವಾದ ಸ್ಕ್ಯಾಮ್ ಶುರುವಾಗುತ್ತದೆ. ಒಂದು ಆಪ್ ಡೌನ್‌ಲೋಡ್ ಮಾಡಿಕೊಳ್ಳಿ ಎಂದು ನಿಮಗೆ ಹೇಳುತ್ತಾರೆ.

ಷೇರುಗಳಲ್ಲಿ ಡೈರೆಕ್ಟ್ ಆಗಿ ಇನ್ವೆಸ್ಟ್‌ ಮಾಡುವುದರ ಬದಲಿಗೆ, ಒಂದು ಬ್ಯಾಂಕ್ ಅಕೌಂಟ್‌ಗೆ ಹಣವನ್ನು ವರ್ಗಾವಣೆ ಮಾಡಿ ಎಂದು ನಿಮಗೆ ಹೇಳಲಾಗುತ್ತದೆ. ಈ ಫೇಕ್ ಆಪ್‌ನಲ್ಲಿ, ನಿಮ್ಮ ಹಣದ ಬ್ಯಾಲೆನ್ಸ್‌ ತೋರಿಸುತ್ತದೆ. ತಾವು ರೆಗ್ಯುಲರ್ ಮಾರ್ಕೆಟ್‌ನಲ್ಲಿ ಟ್ರೇಡ್ ಮಾಡುವುದಿಲ್ಲ. ಬದಲಿಗೆ ಪ್ರೈಮರಿ ಮಾರ್ಕೆಟ್‌ನಲ್ಲಿ ಟ್ರೇಡ್ ಮಾಡುತ್ತೇವೆ. ಅಲ್ಲಿ ನೀವು ನೇರವಾಗಿ ಇನ್ವೆಸ್ಟ್ ಮಾಡೋದಕ್ಕಾಗಲ್ಲ ಅಂತ ನಿಮ್ಮನ್ನು ನಂಬಿಸುತ್ತಾರೆ. ಅದೇ ಕಾರಣಕ್ಕೆ ನಿಮ್ಮ ಹಣವನ್ನು ಇನ್ನೊಂದು ಬ್ಯಾಂಕ್‌ ಅಕೌಂಟ್‌ಗೆ ವರ್ಗಾವಣೆ ಮಾಡಬೇಕಾಗುತ್ತದೆ ಎಂದೆಲ್ಲ ಹೇಳುತ್ತಾರೆ. ವಾಸ್ತವ ಸಂಗತಿ ಏನೆಂದರೆ, ಇದು ಆ ಮೋಸಗಾರರ ಬ್ಯಾಂಕ್ ಅಕೌಂಟ್ ಆಗಿರುತ್ತದೆ. ನಿಮ್ಮ ಹೆಸರಿನಲ್ಲಿ ಯಾವ ಇನ್ವೆಸ್ಟ್‌ಮೆಂಟ್ ಕೂಡಾ ಆಗುವುದಿಲ್ಲ. ಅದಕ್ಕೆ ಇದನ್ನು ಪಿಗ್ ಬಚರಿಂಗ್ ಸ್ಕ್ಯಾಮ್ ಎನ್ನಲಾಗುತ್ತದೆ. ಈ ಅವಧಿಯಲ್ಲಿ, ಪ್ರತಿ ವಾರ 30 ರಿಂದ 40 ಪರ್ಸೆಂಟ್‌ ರಿಟರ್ನ್‌ ಗ್ಯಾರಂಟಿ ನೀಡಲಾಗುತ್ತದೆ.

ಈ ಮೋಸಗಾರರ ತಂತ್ರ ಗೊತ್ತಾದ ನಂತರ, ಇಂತಹ ಸ್ಕ್ಯಾಮ್‌ಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂದೂ ನಾವು ತಿಳಿದುಕೊಳ್ಳಬೇಕು. ಮೊದಲು, ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರಂ ಮೂಲಕ ನಿಮ್ಮನ್ನು ಕಾಂಟ್ಯಾಕ್ಟ್ ಮಾಡಲು ಪ್ರಯತ್ನಿಸಿದರೆ, ಎಚ್ಚರದಿಂದಿರಿ. ಸೋಷಿಯಲ್ ಮೀಡಿಯಾದಲ್ಲಿ ನಿಮಗೆ ಆಪ್ ಬಗ್ಗೆ ಜಾಹೀರಾತು ಕಂಡುಬಂದಿದೆ ಎಂದಾದರೆ, ಪ್ಲೇ ಸ್ಟೋರ್ ಅಥವಾ ಆಪ್‌ಸ್ಟೋರ್‌ನಲ್ಲಿ ಅದರ ರಿವ್ಯೂ ಹೇಗಿದೆ ಎಂದು ಚೆಕ್ ಮಾಡಿಕೊಳ್ಳಿ. ಸೆಬಿ ವೆಬ್‌ಸೈಟ್‌ನಲ್ಲಿ ರಿಜಿಸ್ಟರ್ ಮಾಡಿದ ಬ್ರೋಕರ್‌ಗಳ ಲಿಸ್ಟ್‌ ನೋಡಿ. ಭಾವನಾತ್ಮಕ ಒತ್ತಡ ಅಥವಾ ಭಾರಿ ರಿಟರ್ನ್‌ ಬರುತ್ತದೆ ಎಂಬ ಅತಿಯಾಸೆಯಿಂದ ಹಣಕಾಸಿನ ನಿರ್ಧಾರ ಮಾಡಬೇಡಿ. ಯಾವುದೇ ಹೂಡಿಕೆ ಮಾಡುವುದಕ್ಕೂ ಮೊದಲು ಸರಿಯಾಗಿ ಸಂಶೋಧನೆ ಮಾಡಿಕೊಳ್ಳಿ.

Published: April 22, 2024, 13:13 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ