` these 9 steps can help you identify online frauds | ಈ ಅಸ್ತ್ರ ನಿಮ್ಮ ಬಳಿ ಇದ್ದರೆ ಸೈಬರ್ ಕಳ್ಳರು ಏನೂ ಮಾಡಕಾಗೋಲ್ಲ! | Money9 Kannada

ಈ ಅಸ್ತ್ರ ನಿಮ್ಮ ಬಳಿ ಇದ್ದರೆ ಸೈಬರ್ ಕಳ್ಳರು ಏನೂ ಮಾಡಕಾಗೋಲ್ಲ!

ಇಂಥ ಫ್ರಾಡ್ ಕರೆ ಮಾಡಿದವರು ನಿಮ್ಮ ವೈಯಕ್ತಿಕ ಮಾಹಿತಿ ಕೇಳುತ್ತಾರೆ. ಬ್ಯಾಂಕ್ ಖಾತೆ ವಿವರ, ಡೆಬಿಟ್ ಕಾರ್ಡ್ ವಿವರ, ಪ್ಯಾನ್ ಕಾರ್ಡ್ ವಿವರ, ಕಾರ್ಡ್‌ನ ಸಿವಿವಿ ಸಂಖ್ಯೆ... ಹೀಗೆ ಏನನ್ನಾದರೂ ಕೇಳಿದರೆ ತಕ್ಷಣ ಎಚ್ಚೆತ್ತುಕೊಳ್ಳಿ.

ಸುಮೇಧಾ ಅವರಿಗೆ ಅಪರಿಚಿತ ನಂಬರ್‌ನಿಂದ ಪದೇ ಪದೇ ಕರೆಗಳು ಬರುತ್ತಿದ್ದವು. ಈ ಕಾಟ ತಾಳಲಾರದೆ ಕೊನೆಗೂ ಆಕೆ ಕಾಲ್ ರಿಸೀವ್ ಮಾಡಿದಳು. ಅತ್ತ ಕಡೆಯಿಂದ ಕರೆ ಮಾಡಿದಾತ ತಾನು ವಿದ್ಯುತ್ ಇಲಾಖೆಯವ ಅಂತಾ ಪರಿಚಯ ಮಾಡಿಕೊಂಡ. ನಿಮ್ಮ ವಿದ್ಯುತ್ ಬಿಲ್ ಬಾಕಿ ಉಳಿದಿದ್ದು, ಕೂಡಲೇ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಅಂತಾ ಭಯ ಬೀಳಿಸಿದ. ಇದನ್ನು ಕೇಳಿದ ಸುಮೇಧಾ ಆತಂಕಕ್ಕೆ ಒಳಗಾದರು. ನೀವು ಇಲ್ಲಿಯೂ ಬಿಲ್ ತುಂಬಬಹುದು ಅಂತಾ ಕರೆ ಮಾಡಿದವ ಲಿಂಕ್ ಒಂದನ್ನು ಕಳುಹಿಸಿದ ಅದರ ಮೇಲೆ ಕ್ಲಿಕ್ ಮಾಡಲು ಹೇಳಿದ. ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ ಎಂಬ ಭಯದಿಂದ ಸುಮೇಧಾ ಕರೆ ಮಾಡಿದವ ನೀಡಿದ್ದ ಲಿಂಕ್ ಕ್ಲಿಕ್ ಮಾಡಿದ್ದಾಳೆ. ಅವಳು ಕ್ಲಿಕ್ ಮಾಡಿದ ನಂತರ, ಒಂದು ಅಪ್ಲಿಕೇಶನ್ ಡೌನ್‌ಲೋಡ್ ಆಗಿದೆ. ಅತ್ತ ಕಡೆಯಿಂದ ಕರೆ ಮಾಡಿದವ ಸೂಚನೆಗಳನ್ನು ನೀಡುತ್ತಲೇ ಇದ್ದ. ಸುಮೇಧಾ ಆತನ ಸೂಚನೆ ಫಾಲೋ ಮಾಡುತ್ತಿದ್ದಳು. ಕೆಲವೇ ನಿಮಿಷಗಳಲ್ಲಿ ಸುಮೇಧಾ ಅವರ ಬ್ಯಾಂಕ್ ಖಾತೆಯಿಂದ 60,000 ರೂ. ವಿತ್ ಡ್ರಾ ಆಗಿತ್ತು!

ಈ ರೀತಿಯ ವಿದ್ಯುತ್ ಬಿಲ್ ಸ್ಕಾಮ್ ಅಲ್ಲದೆ ಹಲವು ರೀತಿಯಲ್ಲಿ ಇಂತಹ ವಂಚನೆಗಳು ನಡೆಯುತ್ತಿವೆ. ಕೆಲವೊಮ್ಮೆ, ಹಳೆಯ ವಿಮಾ ಪಾಲಿಸಿಗಳನ್ನು ನವೀಕರಣ ಮಾಡಿ ಅಂತ ಕರೆ ಮಾಡ್ತಾರೆ. ಕೆಲವೊಮ್ಮೆ ನಿಮ್ಮ ಸಾಲ ಬಾಕಿಯಿದ್ದು ತೀರಿಸಬೇಕು ಅಂತಾ ಬೆದರಿಕೆ ಕರೆ ಮಾಡುತ್ತಾರೆ. ಇಂಥ ವಂಚನೆಯಿಂದ ಪಾರಾಗಲು ಮೊದದಲು ಈ ಫ್ರಾಡ್ ಕಾಲ್ ಗಳನ್ನು ಗುರುತಿಸುವುದನ್ನು ಕಲಿಯಬೇಕು. ಈ ವಿಡಿಯೋದಲ್ಲಿ ನಾವು ತಿಳಿಸುವ 9 ಅಂಶಗಳು ನಿಮಗೆ ಈ ವಂಚನೆಗಳಿಂದ ಬಚಾವಾಗಲು ಅತ್ಯುತ್ತಮ ಟಿಪ್ಸ್ ಆಗುವುದರಲ್ಲಿ ಅನುಮಾನ ಇಲ್ಲ.

1. ಇಂತಹ ವಂಚನೆಗಳಲ್ಲಿ ಎಮರ್ಕನ್ಸಿ ಇದೇ ಅನ್ನೋ ತರ ಬಿಂಬಿಸಲಾಗುತ್ತದೆ. ಉದಾಹರಣೆಗೆ, ನೀವು ನಿಮ್ಮ ವಿದ್ಯುತ್ ಬಿಲ್ ಪಾವತಿಸದಿದ್ದರೆ, ನಿಮ್ಮ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತೇವೆ. ನಿಮ್ಮ ಬ್ಯಾಂಕ್ KYC ರಿನ್ಯೂ ಮಾಡದಿದ್ದರೆ ನಿಮ್ಮ ಖಾತೆ ಫ್ರೀಜ್ ಮಾಡಲಾಗುತ್ತದೆ ಹೀಗೆ ಭಯಬೀಳಿಸಲಾಗುತ್ತದೆ. ಒಂದು ವೇಳೆ ವಂಚಕರ ಮಾತಿಗೆ ಕಿವಿ ಕೊಟ್ಟರೆ ನಿಮ್ಮ ಹಣ ಕಳೆದುಕೊಳ್ಳುತ್ತೀರಿ.

2. ಇಂಥ ಫ್ರಾಡ್ ಕರೆ ಮಾಡಿದವರು ನಿಮ್ಮ ವೈಯಕ್ತಿಕ ಮಾಹಿತಿ ಕೇಳುತ್ತಾರೆ. ಬ್ಯಾಂಕ್ ಖಾತೆ ವಿವರ, ಡೆಬಿಟ್ ಕಾರ್ಡ್ ವಿವರ, ಪ್ಯಾನ್ ಕಾರ್ಡ್ ವಿವರ, ಕಾರ್ಡ್‌ನ ಸಿವಿವಿ ಸಂಖ್ಯೆ… ಹೀಗೆ ಏನನ್ನಾದರೂ ಕೇಳಿದರೆ ತಕ್ಷಣ ಎಚ್ಚೆತ್ತುಕೊಳ್ಳಿ.

3. ಥರ್ಡ್ ಪಾರ್ಟಿ ಆ್ಯಪ್ ಗಳನ್ನು ಸಹ ಡೌನ್‌ಲೋಡ್ ಮಾಡಲು ಹೇಳಲಾಗುತ್ತದೆ. ಇದು ವಂಚನೆಗಳಿಗೆ ಬಳಸುವ ಒಂದು ವಿಧಾನ. ಟಾಸ್ಕ್ ಕಂಪ್ಲೀಟ್ ಮಾಡಲು ಸ್ಕಾಮರ್ ನಿಮ್ಮ ಬಳಿ ಥರ್ಡ್ ಪಾರ್ಟಿ ಆ್ಯಪ್ ಡೌನ್ ಲೋಡ್ ಮಾಡಲು ಕೇಳಬವಹುದು. ನೀವು ಅವರು ಹೇಳಿದ ಆ್ಯಪ್ ಡೌನ್ ಲೋಡ್ ಮಾಡಿದಾಗ ಅದು ನಿಮ್ಮ ಪೋನ್ ಬಳಿ ವಿವಿಧ ಆಕ್ಸೆಸ್ ಕೇಳುತ್ತದೆ. ನೀವು ಆಕ್ಸಸ್ ನೀಡಿದ ತಕ್ಷಣ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಟ್ ಆಗುತ್ತದೆ.

4. ನಿಮ್ಮ ಮೇಲೆ ಒತ್ತಡ ಹಾಕಲಾಗುತ್ತದೆ. ಅವರು ನನಿಮ್ಮ ಜತೆ ಅಗ್ರೆಸಿವ್ ಆಗಿ ಮಾತನಾಡುತ್ತಾರೆ. ಕರೆ ಮಾಡಿರುವ ಅವರೇ ನಿಮ್ಮ ಸಹಾಯಕ್ಕೆ ನಿಂತಿರುವಂತೆ ನಾಟಕ ಮಾಡುತ್ತಾರೆ. ನಮ್ಮ ಮಾತನ್ನು ಕೇಳಿದರೆ ಮಾತ್ರ ನೀವು ಅಪಾಯದಿಂದ ಪಾರಾಗಬಹುದು ಅಂತಾ ನಂಬಿಸುತ್ತಾರೆ.

5. ಕರೆ ಮಾಡುವ ಸ್ಕಾಮರ್ ಗಳು ನಿಮ್ಮ ಮೇಲೆ ಕಾನೂನು ಕ್ರಮ ಆಗುತ್ತದೆ ಎನ್ನುವ ಭಯ ಸೃಷ್ಟಿ ಮಾಡುತ್ತಾರೆ. ನಿಮ್ಮ ಕೊರಿಯರ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಹಿಡಿದಿದ್ದಾರೆ ಎಂದು ಸೈಬರ್ ಸ್ಕ್ಯಾಮರ್‌ಗಳು ಹೇಳುತ್ತಾರೆ ಮತ್ತು ನಿಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಅಂತಾ ಭಯ ಬೀಳಿಸುತ್ತಾರೆ. ಈ ಪ್ರಕರಣ ಇತ್ಯರ್ಥಗೊಳಿಸಲು ಇಂತಿಷ್ಟು ಹಣ ಕಳಿಸಬೇಕು ಅಂತಾ ಬೇಡಿಕೆ ಇಡುತ್ತಾರೆ. ಜನ ಭಯಕ್ಕೆ ಬಿದ್ದು ಹಣ ಕಳುಹಿಸಿ ಮೋಸ ಹೋಗುತ್ತಾರೆ.

6. ಈ ಭಯ ಬೀಳಿಸುವ ತಂತ್ರದ ಹೊರತಾಗಿ ನಿಮಗೆ ಆಮಿಷ ಒಡ್ಡಿ ಮೋಸ ಮಾಡುವವರು ಇದ್ದಾರೆ. ನೀವು ಲಾಟರಿ ಗೆದ್ದಿದ್ದೀರಿ, ಬಂಪರ್ ರಿಯಾಯಿತಿ ನಿಮ್ಮದಾಗಿದೆ ಅಂತಾ, ಉಚಿತ ವಿಮಾನ ಟಿಕೆಟ್ ನಿಮ್ಮದಾಗಿದೆ ಅಂತಾ ನಂಬಿಸುತ್ತಾರೆ. ಇದನ್ನು ನಂಬುವ ಜನರು ಅದನ್ನು ಪಡೆಯಲು ಏನು ಮಾಡಬೇಕು ಅಂತಾ ಕೇಳ್ತಾರೆ. ವಂಚಕರು ಕಳಿಸುವ ಅಪರಿಚಿತ ಲಿಂಕ್‌ ಮೇಲೆ ಕ್ಲಿಕ್ ಮಾಡಿ ಹಣ ಕಳೆದುಕೊಳ್ಳುತ್ತಾರೆ.

7. ನಿಮ್ಮ ಪಿನ್ ಅಥವಾ ಕೋಡ್ ಕೇಳಿ ಮಾಡುವ ವಂಚನೆಯೂ ಇನ್ನೊಂದಿದೆ. ಕರೆ ಮಾಡಿದವರು ನಿಮ್ಮ ಬಳಿ OTP ಕೇಳುತ್ತಾರೆ. ಯುಪಿಐ ವಂಚನೆಗಳಲ್ಲಿ ಈ ರೀತಿಯ ಓಟಿಪಿ ಕೇಳುವ ಸಂಭವ ಜಾಸ್ತಿ. ನೀವು ಓಟಿಪಿ ನೀಡಿದ ತಕ್ಷಣ ಹಣ ಕಳೆದುಕೊಳ್ಳುತ್ತೀರಿ.

8. ಕರೆ ಮಾಡಿದ ವಂಚಕ ತನ್ನ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಬಹಿರಂಗ ಮಾಡಲ್ಲ. ನೀವು ಅವರ ವೈಯಕ್ತಿಕ ಮಾಹಿತಿಯನ್ನು ಕೇಳಿದರೆ ಅವರು ಅಸ್ಪಷ್ಟವಾಗಿ ಮಾತನಾಡಲು ಪ್ರಾರಂಭಿಸುತ್ತಾರೆ, ಹೇಳಿದ್ದನ್ನೇ ಹೇಳುತ್ತಾರೆ. ಇಂತಹ ಸಂದರ್ಭ ನೀವು ಎಚ್ಚರಿಕೆ ತೆಗೆದುಕೊಳ್ಳುಬೇಕು.

9. ಬ್ಯಾಕ್ ಗ್ರೌಂಡ್ ಸೌಂಡ್ ಬಗ್ಗೆ ವಿಶೇಷ ಗಮನ ನೀಡಬೇಕು. ಹೆಚ್ಚಿನ ಕರೆಗಳು ಕಾಲ್ ಸೆಂಟರ್‌ನಿಂದ ಬರುವುದರಿಂದ ಏಕಕಾಲದಲ್ಲಿ ಅನೇಕ ಜನರು ಕರೆ ಮಾಡುತ್ತಾರೆ. ಅಂತಹ ಸಂದರ್ಭಗಳಲ್ಲಿ, ನೀವು ಕರೆಯ ಬಾಕ್ ಗ್ರೌಂಡ್ ವೈಸ್ ಕೇಳಿದರೆ ಅದು ವಂಚಕರ ಕಡೆಯಿಂದ ಬಂದಿರುವ ಕರೆನಾ ಎಂದು ಗುರುತಿಸಬಹುದು. ಈ ಎಲ್ಲ ಅಂಶಗಳನ್ನು ತಲೆಯಲ್ಲಿ ಇಟ್ಟುಕೊಂಡರೆ ನೀವು ವಂಚಕರ ಕೈಯಿಂದ ಬಚಾವಾಗಬಹುದು.

Published: April 23, 2024, 14:53 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ