` if you forget these six things then online instant loan will be burdensome | ಇನ್​ಸ್ಟಂಟ್ ಲೋನ್ ತೆಗೆದುಕೊಳ್ಳುವ ಮುನ್ನ! | Money9 Kannada

ಇನ್​ಸ್ಟಂಟ್ ಲೋನ್ ತೆಗೆದುಕೊಳ್ಳುವ ಮುನ್ನ!

ಹೆಚ್ಚಿನ ಬಡ್ಡಿದರದ ಹೊರತಾಗಿ, ಸಂಸ್ಕರಣಾ ಶುಲ್ಕಗಳು ಮತ್ತು ಪೂರ್ವ-ಪಾವತಿ ಶುಲ್ಕಗಳಂತಹ ವಿವಿಧ ಹಿಡನ್ ಚಾರ್ಜಸ್ ಸಹ ಇರುತ್ತದೆ. ಬೇರೆ ಬೇರೆ ಬ್ಯಾಂಕ್ ಗಳು ಮತ್ತು ಆನ್‌ಲೈನ್ ಲೋನ್ ಫ್ಲಾಟ್​ ಫಾರ್ಮ್ ಗಳು ಬೇರೆ ಬೇರೆ ಸಂಸ್ಕರಣಾ ಶುಲ್ಕ ಹೊಂದಿವೆ. ಈ ಶುಲ್ಕ ಮತ್ತು ಫೀ ಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಸಾಲದ ವಿಚಾರದಲ್ಲಿ ನೀವೊಂದು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಅರ್ಜೆಂಟಾಗಿ ಹಣ ಬೇಕಾಗಿರುತ್ತದೆ. ಎಲ್ಲಿಯೂ ದುಡ್ಡು ಒಟ್ಟು ಮಾಡಲಾಗದ ಸ್ಥಿತಿ ಬಂದಿರುತ್ತದೆ. ಆಗ ನಮಗೆ ಕಾಣುವ ಆಯ್ಕೆಯೇ ಪರ್ಸನಲ್ ಲೋನ್. ಡಿಜಿಟಲ್ ಆರ್ಥಿಕತೆಯ ಯುಗದಲ್ಲಿ ಜನರು ತ್ವರಿತ ಆನ್‌ಲೈನ್ ಸಾಲ ಅಂದರೆ ಇನ್ ಸ್ಟಂಟ್ ಲೋನ್ ಗಳತ್ತ ಆಸಕ್ತಿ ಹೆಚ್ಚಿಸಿಕೊಂಡಿದ್ದಾರೆ. ಜನರು ಬ್ಯಾಂಕ್ ಗಳಿಗೆ ಅಲೆದಾಡುವ ತಾಪತ್ರಯದಿಂದಲೂ ತಪ್ಪಿಸಿಕೊಳ್ಳಲು ನೋಡುತ್ತಾರೆ. ಅಲ್ಲದೆ ಇಲ್ಲಿ ಸಾಲ ತಕ್ಷಣಕ್ಕೆ ಸಿಗುತ್ತದೆ. ಸುಲಭವಾಗಿ ಸಿಗುತ್ತದೆ ಎಂದ ಮಾತ್ರಕ್ಕೆ ಈ ಸಾಲ ಒಳ್ಳೆಯದು ಅಂತಾ ಏನಲ್ಲ. ಇಂಥ ಇನ್ ಸ್ಟಂಟ್ ಲೋನ್ ತೆಗೆದುಕೊರ್ಳಳುವ ,ಮುನ್ನ ಕೆಲವೊಂದು ವಿಚಾರಗಳ ಬಗ್ಗೆ ನೀವು ಗಮನ ಹರಿಸದೇ ಇದ್ದರೆ ನಂತರ ಸಂಕಷ್ಟ ಪಡೆಬೇಕಾಗುತ್ತದೆ.

ಇನ್ ಸ್ಟಂಟ್ ಲೋನ್ ಪಡೆದುಕೊಳ್ಳಲು ಹೆಜ್ಜೆ ಇಡುವ ಮುನ್ನ ಅವುಗಳಿಗೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ… ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಸಾಲಗಳ ಬಡ್ಡಿ ದರ, ಸಂಸ್ಕರಣಾ ಶುಲ್ಕಗಳು ಮತ್ತು ಇತರ ಶುಲ್ಕಗಳಿಗೆ ಗಮನ ಕೊಡಿ. ಇದರಲ್ಲಿ ಯಾವುದೇ ಗೊಂದಲ ಅಥವಾ ಸಂಕಟ ತರವು ಸಂಗತಿ ಇರಬಾರದು. ಸಾಲ ಮರುಪಾವತಿ ನಿಯಮ ಮತ್ತು ಸಾಲದ ಸಂಪೂರ್ಣ ಕಾಸ್ಟ್ ಗೊತಯ್ತಿರಬೇಕು.

ಎಲ್ಲಾ ಆನ್‌ಲೈನ್ ಲೋನ್ ಪ್ಲಾಟ್‌ಫಾರ್ಮ್‌ಗಳು ಒಂದೇ ಸಮಾನವಾಗಿ ಇರೋದಿಲ್ಲ. ನೀವು ಸಾಲ ಪಡೆಯಲು ಮುಂದಾಗಿರುವ ಪ್ಲಾಟ್‌ಫಾರ್ಮ್ ಎಷ್ಟು ವಿಶ್ವಾಸಾರ್ಹವಾಗಿದೆ ಮತ್ತು ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಗಳ ಪ್ರಕಾರ ಕಾರ್ಯನಿರ್ವಹಿಸುತ್ತಾ ಇದೆಯೇ ಅನ್ನೋದನ್ನು ಖಚಿತಪಡಿಸಿಕೊಳ್ಳಿ. ನೀವು ರಿಸರ್ವ್ ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ರೆಗ್ಯೂಲೇಟೇಡ್ ಘಟಕಗಳ ಲಿಸ್ಟ್ ಕಾಣಬಹುದು. ನೀವು ಲೋನ್ ಅಪ್ಲಿಕೇಶನ್‌ಗಳಿಂದ ಸಾಲವನ್ನು ತೆಗೆದುಕೊಳ್ಳುತ್ತಿದ್ದರೆ, ಅವರು ಯಾವ ನಿಯಂತ್ರಕ ಘಟಕದೊಂದಿಕೆ ಪಾಲುದಾರಿಕೆಯಲ್ಲಿದ್ದಾರೆ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು. ಗ್ರಾಹಕರ ವಿಮರ್ಶೆ ಮತ್ತು ರೇಟಿಂಗ್‌ಗಳನ್ನು ಪರಿಶೀಲಿಸುವ ಮೂಲಕವೂ ನೀವು ಸಾಲ ನೀಡಿಕೆಯ ಪ್ಲಾಟ್‌ಫಾರ್ಮ್‌ನ ರೆಪ್ಯೂಟೇಶನ್ ಲೆಕ್ಕ ಹಾಕಬಹುದು.

ಇಲ್ಲಿ ಸಾಲದ ಮೇಲಿನ ಬಡ್ಡಿದರ ಅತಿ ಮುಖ್ಯವಾದ ಸಂಗತಿ. ತ್ವರಿತ ಸಾಲಗಳು ಹಣವನ್ನು ತಕ್ಷಣಕ್ಕೆ ಒದಗಿಸಬಹುದು. ಆದರೆ ಸಾಂಪ್ರದಾಯಿಕ ಅಥವಾ ಸಾಮಾನ್ಯ ಸಾಲಗಳಿಗೆ ಹೋಲಿಸಿದರೆ ಇವುಗಳ ಬಡ್ಡಿ ದರ ಹೆಚ್ಚಿರುತ್ತವೆ. ಇದು ಸಾಲದ ಒಟ್ಟಾರೆ ವೆಚ್ಚ ಅಂದರೆ ಕಾಸ್ಟ್ ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಆನ್‌ಲೈನ್ ಲೋನ್ ಪ್ಲಾಟ್‌ಫಾರ್ಮ್‌ಗಳು ದೊಡ್ಡ ಬ್ಯಾಂಕ್‌ಗಳಿಗೆ ಹೋಲಿಸಿದರೆ ಹೆಚ್ಚಿನ ಬಡ್ಡಿದರಗಳನ್ನು ವಿಧಿಸುತ್ತವೆ. ಉದಾಹರಣೆಗೆ, ಲೋನ್‌ಟ್ಯಾಪ್‌ ನಿಡುವ ಪರ್ಸನಲ್ ಲೋನ್ ಬಡ್ಡಿ ದರವು ಶೇ. 12 ರಿಂದ ಶೇ. 24 ರಷ್ಟು ಇರುತ್ತದೆ. ಕ್ರೆಡಿಟ್‌ಬೀಯು ಶೇಕಡಾ 17 ರಿಂದ ಶೇ. 29.95 ರ ನಡುವಿನ ಬಡ್ಡಿದರ ವಿಧಿಸುತ್ತದೆ. ಅದೇ ICICI ಬ್ಯಾಂಕಿನ ಪರ್ಸನಲ್ ಲೋನ್ ಬಡ್ಡಿ ದರವು ಶೇ. 10.65 ರಿಂದ ಶೇ. 16 ರಷ್ಟಿದೆ.

ಹೆಚ್ಚಿನ ಬಡ್ಡಿದರದ ಹೊರತಾಗಿ, ಸಂಸ್ಕರಣಾ ಶುಲ್ಕಗಳು ಮತ್ತು ಪೂರ್ವ-ಪಾವತಿ ಶುಲ್ಕಗಳಂತಹ ವಿವಿಧ ಹಿಡನ್ ಚಾರ್ಜಸ್ ಸಹ ಇರುತ್ತದೆ. ಬೇರೆ ಬೇರೆ ಬ್ಯಾಂಕ್ ಗಳು ಮತ್ತು ಆನ್‌ಲೈನ್ ಲೋನ್ ಫ್ಲಾಟ್​ ಫಾರ್ಮ್ ಗಳು ಬೇರೆ ಬೇರೆ ಸಂಸ್ಕರಣಾ ಶುಲ್ಕ ಹೊಂದಿವೆ. ಈ ಶುಲ್ಕ ಮತ್ತು ಫೀ ಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಸಾಲದ ವಿಚಾರದಲ್ಲಿ ನೀವೊಂದು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಸಾಲದ ಮೊತ್ತ ಫೈನಲ್ ಮಾಡುವ ಮೊದಲು, ನಿಮ್ಮ ಹಣಕಾಸಿನ ಅಗತ್ಯತೆಗಳನ್ನು ಮೊದಲು ನಿರ್ಣಯಿಸಿಕೊಳ್ಳಿ. ನಿಮಗೆ ಅತಿ ಅಗತ್ಯವಾಗಿ ಎಷ್ಟು ಮೊತ್ತ ಬೇಕಿದೆಯೋ ಅಷ್ಟೇ ಮೊತ್ತದ ಸಾಲ ಪಡೆದುಕೊಳ್ಳಿ ಅಗತ್ಯಕ್ಕಿಂತ ಹೆಚ್ಚು ತೆಗೆದುಕೊಳ್ಳುವುದು ನಿಮಗೆ ಅನಗತ್ಯ ಹೊರೆಯಾಗಿಸುತ್ತದೆ. ತ್ವರಿತ ಸಾಲಗಳು ಸಾಮಾನ್ಯವಾಗಿ ಕಡಿಮೆ ಮರುಪಾವತಿ ಅವಧಿ ಹೊಂದಿರುತ್ತವೆ , ಇದರ ಪರಿಣಾಮ EMI ಮೊತ್ತ ಜಾಸ್ತಿ ಇರಬಹುದು. ನಿಮ್ಮ ತಿಂಗಳ ಖರ್ಚಿನ ಬಜೆಟ್ ಮೇಲೂ ಇದು ಪರಿಣಾಮ ಉಂಟುಮಾಡಬಲ್ಲದು.

ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಅದೇ ರೀತಿ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ ಸಹ ಬದಲಾಗುತ್ತಲೇ ಇರುತ್ತದೆ. ಈ ಇನ್ ಸ್ಟಂಟ್ ಲೋನ್ ಅಥವಾ ತ್ವರಿತ ಸಾಲವನ್ನು ತೆಗೆದುಕೊಳ್ಳುವ ಮೊದಲು ಪ್ರೀ ಪೇಮೆಂಟ್ ನ ಕಂಡಿಶನ್ ಗಳನ್ನು ವಿಚಾರಿಸಿ ತಿಳಿದುಕೊಳ್ಳಿ. ಕೆಲವು ಬ್ಯಾಂಕುಗಳು ಸಾಲದ ಪುನರ್ ರಚನೆ ಅಥವಾ ಕಷ್ಟದ ಸಮಯದಲ್ಲಿ ಮರುಪಾವತಿ ಅವಧಿಯನ್ನು ವಿಸ್ತರಿಸುವಂತಹ ಆಯ್ಕೆ ನೀಡುತ್ತವೆ. ಇನ್ನೊಂದು ಕಡೆ EMI ವಿಳಂಬ ಅಥವಾ ಸಾಲ ಮರುಪಾವತಿ ಮಾಡದೆ ಇರುವುದು ಪೆನಾಲ್ಟಿಗಳಿಗೆ ಕಾರಣವಾಗುತ್ತದೆ. ಸಕಾಲಿಕ ಪಾವತಿಗಳನ್ನು ಮಾಡುವ ಮೂಲಕ ಲೋನ್ ಪ್ಲಾಟ್‌ಫಾರ್ಮ್‌ನೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. EMI ಪಾವತಿ ಮಿಸ್ ಮಾಡಿದರೆ ಸಾಲದ ಏಜೆಂಟರೊಂದಿಗಿನ ಘರ್ಷಣೆಗೂ ಅದು ಕಾರಣವಾಗಬಲ್ಲದು.

ಸಾಲ ಅಥವಾ ಇತರೆ ಹಣಕಾಸಿಗೆ ಸಂಬಂಧಿತ ವಿಚಾರಗಳಿಗೆ ಕಸ್ಟಮರ್ ಸಪೋರ್ಟ್ ಸಹ ನಿರ್ಣಾಯಕವಾಗುತ್ತದೆ. ಚಾಟ್, ಫೋನ್ ಅಥವಾ ಇಮೇಲ್‌ನಂತಹ ಚಾನೆಲ್‌ಗಳ ಮೂಲಕ ಗ್ರಾಹಕರ ಕಾಳಜಿ ಮತ್ತು ದೂರುಗಳನ್ನು ತ್ವರಿತವಾಗಿ ಪರಿಹರಿಸಬಹುದಾದ ಲೋನ್ ಫ್ಲಾಟ್ ಫಾರ್ಮ್ ಆಯ್ಕೆ ಮಾಡಿಕೊಳ್ಳಿ. ಹೆಚ್ಚಿನ ಸಂವಹನ ಮಾಧ್ಯಮಗಳು ಇದ್ದರೆ ಗ್ರಾಹಕರ ಜತೆಗಿನ ವ್ಯವಹಾರವೂ ಸುಧಾರಿಸುತ್ತದೆ.

ಎಲ್ಲ ಬಗೆಯಿಂದಲೂ ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡರೆ ಮಾತ್ರ ಈ ಇನ್ ಸ್ಟಂಟ್ ಲೋನ್ ಗಳು ನಿಮ್ಮ ತುರ್ತು ಹಣಕಾಸು ಅಗತ್ಯತೆ ಪೂರೈಸಬಲ್ಲದು. ಏಕಾಏಕಿ ತ್ವರಿತ ಸಾಲಗಳನ್ನು ತೆಗೆದುಕೊಳ್ಳುವುದು ಹೆಚ್ಚಿನ ಬಡ್ಡಿದರದ ಸುಳಿಯಲ್ಲಿ ನಿಮ್ಮನ್ನು ಸಿಲುಕಿಸಬಹುದು. ಈ ಸಾಲವನ್ನು ತೀರಿಸಲು ನೀವು ಇನ್ನೊಂದು ಕಡೆ ಸಾಲ ಮಾಡುವ ಪರಿಸ್ಥಿತಿ ಎದುರಾಗಬಹುದು. ಸಾಲ ಮರುಪಾವತಿಯಲ್ಲಿ ಸ್ವಲ್ಪ ಎಡವಟ್ಟಾದರೂ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಗೆ ಹಾನಿ ಉಂಟುಮಾಡಬಹುದು. ಈ ಇನ್ ಸ್ಟಂಟ್ ಸಾಲ ತೆಗೆದುಕೊಳ್ಳುವ ಬದಲು ಕುಟುಂಬ ಅಥವಾ ಸ್ನೇಹಿತರಿಂದ ಸಾಲ ಪಡೆಯುವುದು ಉತ್ತಮ. ಸಾಲ ತೀರಿಸಲು ಸಾಧ್ಯ ಎಂದು ನಿಮಗೆ ನಿಮ್ಮ ಮೇಲೆ ಖಾತ್ರಿ ಇದ್ದಾಗ ಮಾತ್ರ ತ್ವರಿತ ಸಾಲಗಳನ್ನು ತೆಗೆದುಕೊಳ್ಳಿ. ಹೆಚ್ಚಿನ ಬಡ್ಡಿದರಗಳ ಕಾರಣ, ಈ ಸಾಲಗಳನ್ನು ಆದಷ್ಟು ಬೇಗ ಮರುಪಾವತಿಸಲು ಪ್ರಯತ್ನಿಸುವುದು ಒಳಿತು. ಇ್ಲಿಗಲ್ ಲೋನ್ ಆ್ಯಪ್ ಗಳಿಂದ ಸಾಲ ತೆಗೆದುಕೊಳ್ಳುವ ದುಸ್ಸಾಹಸ ಮಾಡಬೇಡಿ!

Published: March 30, 2024, 13:22 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ