• ಲಕ್ಷದ್ವೀಪಕ್ಕೆ ಮೊದಲ ಆದ್ಯತೆ!

    ಮಾಲ್ಡೀವ್ಸ್ ಮತ್ತು ಲಕ್ಷದ್ವೀಪದ ವಿಚಾರ ಬಜೆಟ್​ಗೂ ಮುನ್ನ ಜೋರಾದ ಚರ್ಚೆಗೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಏನೋ ಅನ್ನುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ಆನ್‌ಲೈನ್‌ನಲ್ಲಿ 'ಚಲೋ ಲಕ್ಷದ್ವೀಪ' ಅಭಿಯಾನ ಸಹ ಆರಂಭವಾಗಿತ್ತು. ಅದರ ಬೆನ್ನಲ್ಲೆ ಕೇಂದ್ರ ಸರ್ಕಾರ ದ್ವೀಪ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದ ಪ್ರವಾಸಿ ಮೂಲಸೌಕರ್ಯವನ್ನು ಸುಧಾರಣೆ ನಿರ್ಧರಿಸಿದೆ.

  • ಮಧ್ಯಮ ವರ್ಗದವರಿಗೆ ಶಾಶ್ವತ ಸೂರು!

    ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರಿಗೆ ನಿರ್ಮಲಾ ಸೀತಾರಾಮನ್ ಭರಪೂರ ಕೊಡುಗೆ ಒಂದನ್ನು ನೀಡಿದ್ದಾರೆ. ಶಾಶ್ವತ ಸೂರು ಕಲ್ಪಿಸಲು ದಿಟ್ಟಡ ನಿರ್ಧಾರವೊಂದನ್ನು ಪ್ರಕಟ ಮಾಡಿದ್ದಾರೆ. ಬಾಡಿಗೆ ಮನೆಗಳಲ್ಲಿ ವಾಸಿಸುವ ಜನರಿಗೆ ಹಾಗೂ ಕೊಳೆಗೇರಿ ಅಥವಾ ಅನಧಿಕೃತ ಕಾಲೋನಿಗಳಲ್ಲಿ ವಾಸಿಸುವವರಿಗೆ ಸ್ವಂತ ಮನೆ ಖರೀದಿಸಲು ಅಥವಾ ಸ್ವಂತ ಮನೆ ನಿರ್ಮಿಸಲು ಸರ್ಕಾರವು ವಸತಿ ಯೋಜನೆಯನ್ನು ಪ್ರಾರಂಭಿಸಲಿದೆ ಎಂದು ನಿರ್ಮಲಾ ತಿಳಿಸಿದ್ದಾರೆ.

  • ತೆರಿಗೆ ಪದ್ಧತಿ ಬದಲಾವಣೆ ಇಲ್ಲ!

    ಈ ಸಾರಿಯ ಕೇಂದ್ರ ಬಜೆಟ್ ನಲ್ಲಿ ತೆರಿಗೆ ಸ್ಲ್ಯಾಬ್ ಗಳು ಬದಲಾಗುತ್ತದೆ ಎಂದು ಬಹಳಷ್ಟು ಜನ ಇಟ್ಟುಕೊಂಡಿದ್ದ ಆಸೆ ನಿರಾಸೆಯಾಗಿದೆ. ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಮಧ್ಯಂತರ ಬಜೆಟ್‌ ವೇತನದಾರರಿಗೆ ಒಂದು ಹಂತದ ನಿರಾಸೆಯನ್ನೇ ತಂದಿದೆ. ಕಳೆದ ವರ್ಷ ಮಂಡಿಸಿದ ಪೂರ್ಣ ಬಜೆಟ್‌ನಲ್ಲಿ ಘೋಷಿಸಿದ್ದ ಆದಾಯ ತೆರಿಗೆ ಸ್ಲ್ಯಾಬ್‌ಗಳು, ಹಳೆಯ ಮತ್ತು ಹೊಸ ಆದಾಯ ತೆರಿಗೆ ವ್ಯವಸ್ಥೆಗಳು ಹಾಗೆಯೇ ಮುಂದುವರಿದಿವೆ.

  • ರೈತರ ನೆರವಿಗೆ ನಿಂತ್ರಾ ನಿರ್ಮಲಾ?

    ಕೇಂದ್ರ ಬಜೆಟ್​ನಲ್ಲಿ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳ ಅಭಿವೃದ್ಧಿಗೆ 1,46,819 ಕೋಟಿ ರೂ. ಮೀಸಲಿಡಲಾಗಿದೆ. "ರೈತರು ನಮ್ಮ ಅನ್ನದಾತರು " ಎಂದು ಹೇಳುತ್ತಲೇ ನಿರ್ಮಲಾ ಸೀತಾರಾಮನ್ ಕರಷಿಗೆ ಮೀಸಲಿಟ್ಟ ಕೊಡುಗೆ ತಿಳಿಸಿದರು.

  • 50 ವರ್ಷಗಳ ಕಾಲ ಶೂನ್ಯ ಬಡ್ಡಿದರದಲ್ಲಿ ಸಾಲ..!

    ಈ ಬಾರಿಯ ಬಜೆಟ್​ನಲ್ಲಿ ದೇಶದ ಯುವಜನತೆ ನಮಗೇನು ಸಿಗುತ್ತೆ ಅಂತ ಕಾತರದಿಂದ ಕಾಯ್ತಿದ್ರು.. ಯುವ ಜನತೆಯ ನಿರೀಕ್ಷೆಯನ್ನ ಕೇಂದ್ರ ಹಣಕಾಸು ಸಚಿವೆ ಈಡೇರಿಸಿದ್ದಾರೆ.. ಹೌದು ಕೇಂದ್ರ ಮಧ್ಯಂತರ ಬಜೆಟ್​ನಲ್ಲಿ ಕೇಂದ್ರ ಸರ್ಕಾರ ಯುವ ಜನರತ್ತ ವಿಶೇಷ ಚಿತ್ತ ನೆಟ್ಟಿದ್ದು, ಯುವ ಜನರಿಗೆ ಇದು ಅಕ್ಷರಶಃ ಸುವರ್ಣ ಕಾಲವಾಗಿದೆ..

  • ಕರ್ನಾಟಕ ಬಜೆಟ್ 2024 ನೇರಪ್ರಸಾರ

    ಸಿಎಂ ಸಿದ್ದರಾಮಯ್ಯ ದಾಖಲೆಯ 15ನೇ ಸಾರಿ ಕರ್ನಾಟಕದ ಬಜೆಟ್ ಮಂಡಿಸುತ್ತಿದ್ದಾರೆ.

  • ಬಜೆಟ್​ನಲ್ಲಿ ಕೃಷಿಗೆ ಸಿಕ್ಕಿದ್ದೇನು?

    ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ಜಾರಿ ಮಾಡಿದ್ದ ಕೃಷಿ ಭಾಗ್ಯ ಯೋಜನೆಯನ್ನ ಈ ಬಾರಿ ಮರು ಜಾರಿ ಮಾಡಲಾಗಿದೆ.. ಈ ಯೋಜನೆಗೆ ಸುಮಾರು 200 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ..

  • ಈ ವರ್ಷ ಯಾವ ಇಲಾಖೆಗೆ ಎಷ್ಟು ಟಾರ್ಗೆಟ್!

    ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಒಟ್ಟು ಜಿಎಸ್​ಟಿ ಸಂಗ್ರಹಣೆಯಲ್ಲಿ ಕರ್ನಾಟಕವು 2ನೇ ಸ್ಥಾನದಲ್ಲಿದೆ. ಜನವರಿ ತಿಂಗಳ ಅಂತ್ಯದವರೆಗೆ ರಾಜ್ಯದಲ್ಲಿ 58,180 ಕೋಟಿ ರೂ.ಗಳ SGST ಸಂಗ್ರಹವಾಗಿದ್ದು ಕಳೆದ ಸಾಲಿಗೆ ಹೋಲಿಸಿದರೆ ಶೇ.14 ರಷ್ಟು ಬೆಳವವಣಿಗೆ ಸಾಧ್ಯವಾಗಿದೆ.

  • ಬಜೆಟ್​ನಲ್ಲಿ ಏನೆಲ್ಲಾ ಹೊಸ ಯೋಜನೆಗಳಿವೆ?

    ಸಿದ್ದರಾಮಯ್ಯ ಮಂಡಿಸಿದ ಆಯವ್ಯಯದಲ್ಲಿ ಹೋಟೆಲ್ ವ್ಯಾಪಾರಿಗಳಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ಬೆಂಗಳೂರು ನಗರ ಸೇರಿದಂತೆ 10 ಮಹಾನಗರಗಳಲ್ಲಿ ವ್ಯಾಪಾರ ನಡೆಸುತ್ತಿರುವ ಹೋಟೆಲ್ ವ್ಯಾಪರಿಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಸಿಎಂ ಗುಡ್‌ ನ್ಯೂಸ್ ಕೊಟ್ಟಿದ್ದಾರೆ.

  • ಬಜೆಟ್​ನ ಈ ಘೋಷಣೆಗಳು ನಿಮ್ಗೆ ಗೊತ್ತಿರಲಿ

    ರೈತರಿಗೆ ನೀಡುವ ಬಡ್ಡಿ ರಹಿತ ಅಲ್ಪಾವಧಿ ಸಾಲದ ಮಿತಿಯನ್ನು 3ರಿಂದ 5 ಲಕ್ಷ ರೂ. ಗೆ ಏರಿಸಲಾಗಿದೆ. ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲವನ್ನು ಶೇ. 3 ಬಡ್ಡಿ ದರದಲ್ಲಿ 10 ರಿಂದ 15ಲಕ್ಷ ರೂ. ಗೆ ಏರಿಕೆ ಮಾಡಲಾಗಿದೆ.