ವಿವೇಕ್ ಮನೆ ಹುಡುಕುತ್ತಾ ಇದ್ದಾನೆ. ಒಂದು ದಿನ ಆಫ್ ಸಿಕ್ಕರೂ ಆತ ಮನೆ ಹುಡುಕುವುದಕ್ಕೆ ಹೋಗುತ್ತಿದ್ದ. ನಿರ್ಮಾಣ ಆಗುತ್ತಿರುವ ಮನೆ ಖರೀದಿ ಮಾಡಬೇಕೋ ಅಥವಾ ರೀಸೇಲ್ ಫ್ಲಾಟ್ ಖರೀದಿ ಮಾಡಬೇಕೋ ಎನ್ನುವುದು ಅವನ ಗೊಂದವಾಗಿತ್ತು. ಮನೆ ಖರೀದಿ ಮಾಡುವ ಬಹುತೇಕರಿಗೆ ಈ ಗೊಂದಲ ಮೂಡುತ್ತದೆ. ರೀಸೇಲ್ ಫ್ಲಾಟ್ ಅನ್ನು ನೀವು ಯಾವಾಗ ಖರೀದಿ ಮಾಡಬೇಕು? ನಿರ್ಮಾಣವಾಗುತ್ತಿರುವ ಪ್ರಾಪರ್ಟಿಗಿಂತ ರೀಸೇಲ್ ಪ್ರಾಪರ್ಟಿ ಕಡಿಮೆಗೆ ಸಿಗುತ್ತದೆಯೇ? ರಿಸೇಲ್ ಪ್ರಾಪರ್ಟಿ ಖರೀದಿ ಮಾಡುವಾಗ ಯಾವ ಅಂಶಗಳನ್ನು ನೀವು ನೋಡಬೇಕು? ವಿವೇಕ್ ಅವರ ಗೊಂದಲವನ್ನು ಪರಿಹರಿಸುವುದಕ್ಕೂ ಮೊದಲು ರಿಸೇಲ್ ಪ್ರಾಪರ್ಟಿ ಎಂದರೆ ಏನು ಎಂದು ತಿಳಿದುಕೊಳ್ಳಬೇಕು.
ರೀಸೇಲ್ ಪ್ರಾಪರ್ಟಿ ಅಥವಾ ಫ್ಲಾಟ್ ಅನ್ನು ಬಿಲ್ಡರ್ ಇಂದ ನೇರವಾಗಿ ಖರೀದಿ ಮಾಡಲಾಗುವುದಿಲ್ಲ. ಅಂದರೆ, ಬಿಲ್ಡರ್ರಿಂದ ಎ ಎಂಬ ವ್ಯಕ್ತಿ ಖರೀದಿ ಮಾಡಿರುತ್ತಾನೆ. ಒಂದಷ್ಟು ವರ್ಷ ಆತ ಅದನ್ನು ಬಳಸುತ್ತಾನೆ. ಅದನ್ನು ಬಿ ಎಂಬ ವ್ಯಕ್ತಿಗೆ ಅಂದರೆ ನಿಮಗೆ ಅದನ್ನು ಮಾರಾಟ ಮಾಡುತ್ತಾನೆ. ಸಾಮಾನ್ಯವಾಗಿ, ಹಳೆಯ ಪ್ರಾಪರ್ಟಿಗಳನ್ನು ರೀಸೇಲ್ಗೆ ಹಾಕಲಾಗುತ್ತದೆ. ಆದರೆ, ಎಲ್ಲ ಬಾರಿಯೂ ಹೀಗೆಯೇ ಆಗಬೇಕೆಂದೇನೂ ಇಲ್ಲ. ಕೆಲವು ಬಾರಿ ಬಿಲ್ಡರ್ಗಳಿಂದ ನಿರ್ಮಾಣವಾಗುತ್ತಿರುವ ಫ್ಲಾಟ್ಗಳನ್ನು ಖರೀದಿ ಮಾಡುತ್ತಾರೆ. ನಂತರ, ನಿರ್ಮಾಣ ಮುಗಿಯುವುದಕ್ಕೂ ಮೊದಲೇ ಅಥವಾ ನಿರ್ಮಾಣ ಮುಗಿದ ನಂತರ, ಇನ್ನೊಬ್ಬ ವ್ಯಕ್ತಿಗೆ ಅದನ್ನು ಮಾರುತ್ತಾರೆ. ಇಂತಹ ಸಂದರ್ಭದಲ್ಲಿ, ಫ್ಲಾಟ್ ಹೊಸದಾದರೂ, ಅದನ್ನು ರಿಸೇಲ್ ಫ್ಲಾಟ್ ಎಂದೇ ಪರಿಗಣಿಸಲಾಗುತ್ತದೆ.
ರೀಸೇಲ್ ಪ್ರಾಪರ್ಟಿಯ ಅತಿದೊಡ್ಡ ಅನುಕೂಲವೆಂದರೆ, ಅದು ರೆಡಿ ಟು ಮೂವ್ ಇನ್ ಆಗಿರುತ್ತದೆ. ಅಂದರೆ, ಖರೀದಿ ಮಾಡಿದ ತಕ್ಷಣವೇ ನೀವು ಈ ಮನೆಯಲ್ಲಿ ವಾಸಿಸಲು ಶುರು ಮಾಡಬಹುದು. ಆದರೆ, ನಿರ್ಮಾಣವಾಗುತ್ತಿರುವ ಫ್ಲಾಟ್ ಖರೀದಿ ಮಾಡಿದರೆ ತಕ್ಷಣವೇ ವಾಸಿಸಲು ಸಾಧ್ಯವಿಲ್ಲ. ನಿರ್ಮಾಣವಾಗುತ್ತಿರುವ ಫ್ಲಾಟ್ಗೆ ಶಿಫ್ಟ್ ಆಗಲು ನೀವು 3-4 ವರ್ಷಗಳವರೆಗೆ ಕಾಯಬೇಕಾಗಬಹುದು.
ನಿಮ್ಮ ಮನೆ ಖರೀದಿ ಮಾಡುವುದಕ್ಕೆ ನೀವು ಸಾಲ ಮಾಡುತ್ತಿದ್ದು, ಮನೆ ಬಾಡಿಗೆ ಜೊತೆಗೆ ಇಎಂಐ ಕೂಡಾ ಪಾವತಿ ಮಾಡಲು ಬಯಸದಿದ್ದರೆ, ಆಗ ರೀಸೇಲ್ ಮನೆ ಖರೀದಿ ಮಾಡುವುದು ಉತ್ತಮ ನಿರ್ಧಾರ. ರೀಸೇಲ್ ಪ್ರಾಪರ್ಟಿಯ ಬೆಲೆಯು ಅದರ ಸ್ಥಳ, ನಿರ್ಮಾಣದ ಗುಣಮಟ್ಟ, ವಯಸ್ಸು ಮತ್ತು ಪ್ರಾಪರ್ಟಿ ಮಾರ್ಕೆಟ್ನ ಪ್ರಸ್ತುತ ಸ್ಥಿತಿಯನ್ನು ಬೆಲೆ ಆಧರಿಸಿರುತ್ತದೆ. ಪ್ರಾಪರ್ಟಿ ಹಳೆಯದಾದಷ್ಟೂ, ಕಡಿಮೆ ಮಾರ್ಕೆಟ್ ವ್ಯಾಲ್ಯೂ ಸಿಗುತ್ತದೆ. ಅಂದರೆ, ವರ್ಷ ಕಳೆದಂತೆ ಪ್ರಾಪರ್ಟಿಯ ಸಾಮರ್ಥ್ಯ ಕಡಿಮೆಯಾಗುತ್ತ ಹೋಗುತ್ತದೆ. ಹೀಗಾಗಿ, ಹೊಸ, ಇದೇ ರೀತಿಯ ಮನೆಗೆ ಹೋಲಿಸಿದರೆ ಹಳೆಯ ಮನೆ ಕಡಿಮೆ ದರದಲ್ಲಿ ಸಿಗುತ್ತದೆ.
ಹೊಸದಾಗಿ ಕಟ್ಟಿದ ಮನೆಗೆ ಹೋಲಿಸಿದರೆ ಹಳೆಯ ಮನೆಗಳ ದರ ಕಡಿಮೆ ಇರುತ್ತದೆ. ಕನ್ಸ್ಟ್ರಕ್ಷನ್ ಇನ್ನೇನು ಮುಗಿಯುತ್ತಿದೆ ಎಂಬ ಹಂತದಲ್ಲಿರುವ ಫ್ಲಾಟ್ ಅನ್ನು ರೀಸೇಲ್ನಲ್ಲಿ ಮಾರಾಟ ಮಾಡಬಹುದು. ಇಂತಹ ಸಂದರ್ಭದಲ್ಲಿ, ಮೌಲ್ಯದಲ್ಲಿ ತುಂಬಾ ವ್ಯತ್ಯಾಸವೇನೂ ಇರುವುದಿಲ್ಲ. ಬಿಲ್ಡರ್ ಬಳಿ ಸಿಗುವ ರೆಡಿ ಟು ಮೂವ್ ಪ್ರಾಪರ್ಟಿಗಳ ಮೌಲ್ಯದಲ್ಲೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಹಳೆಯದಕ್ಕೆ ಹೋಲಿಸಿದರೆ ಹೊಸ ಅಪಾರ್ಟ್ಮೆಂಟ್ಗಳು ಇನ್ನೂ ಹೆಚ್ಚು ಅನುಕೂಲವನ್ನು ಹೊಂದಿರುತ್ತವೆ. ಹೀಗಾಗಿ ರೀಡೆವಲಪ್ಮಾಡುವುದಕ್ಕೆ ನೀವು ಖರ್ಚು ಮಾಡಬೇಕಿರುವುದಿಲ್ಲ.
ಮನೆ ಅಥವಾ ಫ್ಲಾಟ್ ಖರೀದಿಸುವಾಗ, ಅದು 5-10 ವರ್ಷಗಳಿಗಿಂತ ಹಳೆಯದಾಗಿರಬಾರದು ಎಂಬುದನ್ನು ಗಮನಿಸಬೇಕು. ಮನೆ ತುಂಬಾ ಹಳೆಯದಾದರೆ, ರಿಪೇರಿಗೆ ತುಂಬಾ ಹಣ ವೆಚ್ಚ ಮಾಡಬೇಕಾಗಿ ಬರಬಹುದು. ಹಳೆ ಮನೆ ಖರೀದಿ ಮಾಡುವಾಗ, ನೀವು ಗಮನಿಸಬೇಕಾದ ಕೆಲವು ಸಂಗತಿಗಳಿರುತ್ತವೆ. ಅದೇನೆಂದರೆ, ಸ್ಥಳ, ಸೌಲಭ್ಯಗಳು, ಸೋರಿಕೆ ಸಮಸ್ಯೆ, ಪ್ರಾಪರ್ಟಿಯ ವಯಸ್ಸು ಮತ್ತು ನಿರ್ಮಾಣದ ಗುಣಮಟ್ಟ. ಪ್ರಾಪರ್ಟಿಯ ಸಾಮರ್ಥ್ಯ ಮತ್ತು ನಿರ್ಮಾಣ ಗುಣಮಟ್ಟವನ್ನು ಸ್ಟ್ರಕ್ಚರಲ್ ಇಂಜಿನಿಯರ್ ಬಳಿ ತಪಾಸಣೆ ಮಾಡಿಸಿಕೊಳ್ಳಿ. ಸ್ಥಳ ಮತ್ತು ಇತರ ಅಂಶಗಳನ್ನು ತಪಾಸಣೆ ಮಾಡಿದ ನಂತರ, ನೀವು ಮನೆ ಖರೀದಿ ಮಾಡಲು ಒಪ್ಪುತ್ತೀರಿ. ಈಗ ಅತ್ಯಂತ ಪ್ರಮುಖವಾದ, ಕಾಗದಪತ್ರದ ಕೆಲಸ ಆರಂಭವಾಗುತ್ತದೆ.
ಹಳೆಯ ಫ್ಲಾಟ್ ಖರೀದಿ ಮಾಡುವಾಗ, ಹಲವು ಕಾಗದಪತ್ರಗಳನ್ನು ನೀವು ಪರಿಶೀಲಿಸಬೇಕಾಗುತ್ತದೆ. ಅಲಾಟ್ಮೆಂಟ್ ಲೆಟರ್, ಸ್ವಾಧೀನ ಪತ್ರ, ಕಂಪ್ಲೀಶನ್ ಸರ್ಟಿಫಿಕೇಟ್, ಆಕ್ಯುಪೆನ್ಸಿ ಸರ್ಟಿಫಿಕೇಟ್, ಸೇಲ್ ಡೀಡ್ ಅಥವಾ ರಿಜಿಸ್ಟ್ರಿ, ಮ್ಯುಟೇಶನ್ ಡೀಡ್, ಚೈನ್ ಡೀಡ್ ಮತ್ತು ಎನ್ಕಂಬರೆನ್ಸ್ ಸರ್ಟಿಫಿಕೇಟ್ ಅನ್ನು ನೀವು ನೋಡಬೇಕು. ಎನ್ಕಂಬರೆನ್ಸ್ ಸರ್ಟಿಫಿಕೇಟ್ನಲ್ಲಿ ಪ್ರಾಪರ್ಟಿಗೆ ಬಾಕಿ ಇರುವ ಎಲ್ಲ ಶುಲ್ಕಗಳ ವಿವರ ಇರುತ್ತದೆ. ಈ ಎಲ್ಲ ಕಾಗದಪತ್ರಗಳನ್ನು ಒಳ್ಳೆಯ ವಕೀಲರ ಬಳಿ ತಪಾಸಣೆ ಮಾಡಿಸಿಕೊಳ್ಳಿ. ಇದನ್ನು ಹೊರತುಪಡಿಸಿ, ಬ್ಯಾಂಕ್ಗೆ ಸಾಲಕ್ಕೂ ನೀವು ಅರ್ಜಿ ಸಲ್ಲಿಸಬಹುದು. ಎಲ್ಲ ಕಾಗದಪತ್ರಗಳನ್ನು ತಪಾಸಣೆ ಮಾಡಿದ ನಂತರವೇ ಸಾಲವನ್ನು ಬ್ಯಾಂಕ್ ಮಂಜೂರು ಮಾಡುತ್ತದೆ. ಹೀಗಾಗಿ, ರಿಸೇಲ್ ಪ್ರಾಪರ್ಟಿ ಬಗ್ಗೆ ವಿವೇಕ್ಗೆ ಇದ್ದ ಎಲ್ಲ ಗೊಂದಲ ನಿವಾರಣೆಯಾಯಿತು ಎಂದು ನಾವು ಈಗ ಭಾವಿಸಬಹುದು!
ಮನೆ ಖರೀದಿ ಮಾಡಿದ ತಕ್ಷಣವೇ ನೀವು ಶಿಫ್ಟ್ ಆಗುವುದಕ್ಕೆ ಯೋಚನೆ ಮಾಡುತ್ತಿದ್ದರೆ, ರಿಸೇಲ್ ಪ್ರಾಪರ್ಟಿಗಳು ಒಂದು ಒಳ್ಳೆಯ ಆಯ್ಕೆ. ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ಮಾರ್ಕೆಟ್ ಉತ್ತಮವಾಗಿದೆ. ಹೀಗಾಗಿ, ರೆಡಿ ಟು ಮೂವ್ ಫ್ಲಾಟ್ ಅನ್ನು ಬಿಲ್ಡರ್ನಿಂದಲೇ ಖರೀದಿ ಮಾಡುವ ಸಾಧ್ಯತೆ ಕಡಿಮೆ ಇರುತ್ತದೆ. ಸೆಕೆಂಡರಿ ಮಾರ್ಕೆಟ್ಗಳಲ್ಲಿ ರೀಸೇಲ್ ಪ್ರಾಪರ್ಟಿಯನ್ನು ನೀವು ಖರೀದಿ ಮಾಡಬಹುದಾಗಿದೆ.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ