ರತ್ನಾ ತನ್ನ ಗ್ರಾಮದಲ್ಲಿ ಇದ್ದ 30 ಲಕ್ಷ ರೂ. ಮೌಲ್ಯದ ಪ್ರಾಪರ್ಟಿಯನ್ನು ಮಾರಾಟ ಮಾಡಿ, ಆದಾಯ ತರುವ ಪ್ರಾಪರ್ಟಿಯಲ್ಲಿ ಹೂಡಿಕೆ ಮಾಡುವುದಕ್ಕೆ ಬಯಸಿದ್ದಾರೆ. ರಿಯಲ್ ಎಸ್ಟೇಟ್ನಲ್ಲಿ ಫ್ರಾಕ್ಷನಲ್ ಓನರ್ಶಿಪ್ ಆಧಾರದಲ್ಲಿ ಹೂಡಿಕೆ ಮಾಡಿ ಎಂದು ಸ್ನೇಹಿತರೊಬ್ಬರು ಸಲಹೆ ಮಾಡಿದ್ದಾರೆ. ಆದರೆ, ರತ್ನಾಗೆ ಇದರ ಬಗ್ಗೆ ತಿಳಿವಳಿಕೆ ಇಲ್ಲ. ಫ್ರಾಕ್ಷನಲ್ ಓನರ್ಶಿಪ್ ಎಂದರೆ ಏನು, ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಇದರಲ್ಲಿ ನೀವು ಎಷ್ಟು ರಿಟರ್ನ್ ಗಳಿಸಬಹುದು ಎಂದು ನೋಡೋಣ ಬನ್ನಿ.
ಇಡೀ ಆಸ್ತಿ ಖರೀದಿ ಮಾಡದೇ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡುವ ಒಂದು ವಿಧಾನವೇ ಫ್ರಾಕ್ಷನಲ್ ಓನರ್ಶಿಪ್. ಒಂದು ಪ್ರಾಪರ್ಟಿಯಲ್ಲಿ ಹೂಡಿಕೆ ಮಾಡಲು ಹಲವು ಖರೀದಿದಾರರು ಒಟ್ಟಾಗುತ್ತಾರೆ. ಇದು ಸಾಮಾನ್ಯವಾಗಿ ಕಮರ್ಷಿಯಲ್ ಅಥವಾ ವೆಕೇಶನ್ ಹೋಮ್ ಖರೀದಿ ವಿಷಯದಲ್ಲಿ ಆಗುತ್ತದೆ. ಪ್ರತಿ ಖರೀದಿದಾರರಿಗೂ ಪ್ರಾಪರ್ಟಿಯಲ್ಲಿ ಒಂದಷ್ಟು ಭಾಗದ ಮಾಲೀಕತ್ವ ಸಿಗುತ್ತದೆ.
ಉದಾಹರಣೆಗೆ, ಮೂರು ಕೋಟಿ ರೂ. ಮೌಲ್ಯದ ಪ್ರಾಪರ್ಟಿ ಇದ್ದರೆ, ಒಬ್ಬ ಸಾಮಾನ್ಯ ಮನುಷ್ಯ ಅದನ್ನು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಫ್ರಾಕ್ಷನಲ್ ಓನರ್ಶಿಪ್ ಮಾಡಿದರೆ 10 ಜನರು ಒಟ್ಟಾಗಿ ಇದರಲ್ಲಿ ಹೂಡಿಕೆ ಮಾಡಬಹುದು. ಇದರಿಂದ, ಪ್ರತಿ ವ್ಯಕ್ತಿಯ ಹೂಡಿಕೆ ವೆಚ್ಚ 30 ಲಕ್ಷ ರೂ. ಆಗುತ್ತದೆ ಮತ್ತು ರಿಯಲ್ ಎಸ್ಟೇಟ್ನಲ್ಲಿ ಅವರಿಗೆ 10% ಪಾಲು ಸಿಗುತ್ತದೆ.
ಹಲವು ಫ್ರಾಕ್ಷನಲ್ ಓನರ್ಶಿಪ್ ಪ್ಲಾಟ್ಫಾರಂಗಳು ಈ ಅನುಕೂಲವನ್ನು ಒದಗಿಸುತ್ತವೆ. ಸ್ಟ್ರಾಟಾ, ಎಚ್ಬಿಟ್ಸ್, ಪ್ರಾಪರ್ಟಿಶೇರ್ ಮತ್ತು ಬಿಹೈವ್ ಸೇರಿದಂತೆ ಹಲವು ಪ್ಲಾಟ್ಫಾರಂಗಳು ಈ ವಲಯದಲ್ಲಿವೆ. ಸಾಮಾನ್ಯವಾಗಿ, ಹೂಡಿಕೆ 10 ರಿಂದ 25 ಲಕ್ಷ ರೂ.ವರೆಗೆ ಆಗುತ್ತದೆ. ಇಂಥ ವ್ಯವಸ್ಥೆಯಲ್ಲಿ ಈ ಪ್ಲಾಟ್ಫಾರಂಗಳು ಪ್ರಾಪರ್ಟಿ ನಿರ್ವಹಣೆ ಮಾಡುತ್ತವೆ, ಮೇಂಟೆನೆನ್ಸ್ ವೆಚ್ಚವನ್ನು ಕವರ್ ಮಾಡುತ್ತವೆ ಮತ್ತು ಬಾಡಿಗೆ ಆದಾಯವನ್ನು ಹೂಡಿಕೆದಾರರಿಗೆ ಹಂಚಿಕೆ ಮಾಡುತ್ತವೆ.
ಆದರೆ, ಫ್ರಾಕ್ಷನಲ್ ಓನರ್ಶಿಪ್ ಪ್ಲಾಟ್ಫಾರಂಗಳು ಹೇಗೆ ಕೆಲಸ ಮಾಡುತ್ತವೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಫ್ರಾಕ್ಷನ್ ಓನರ್ಶಿಪ್ ಪ್ಲಾಟ್ಫಾರಂಗಳು ಖಾಸಗಿ ನಿಯಮಿತ ಕಂಪನಿಯನ್ನು ಕ್ರಿಯೇಟ್ ಮಾಡುತ್ತವೆ. ಇದನ್ನು ಸ್ಪೆಷಲ್ ಪರ್ಪಸ್ ವೆಹಿಕಲ್ ಅಥವಾ ಎಸ್ಪಿವಿ ಎಂದು ಕರೆಯಲಾಗುತ್ತದೆ. ಪ್ರಾಪರ್ಟಿ ಮೌಲ್ಯದಷ್ಟು ಹಣವನ್ನು ಹೂಡಿಕೆದಾರರಿಂದ ಈ ಎಸ್ಪಿವಿ ಸಂಗ್ರಹಿಸಿ, ಪ್ರಾಪರ್ಟಿ ಖರೀದಿ ಮಾಡುತ್ತದೆ. ಸೆಲ್ಲರ್ ಮತ್ತು ಎಸ್ಪಿವಿ ಮಧ್ಯೆ ಪ್ರಾಪರ್ಟಿ ರಿಜಿಸ್ಟ್ರೇಶನ್ ನಡೆಯುತ್ತದೆ. ಹೂಡಿಕೆದಾರರು ಅಥವಾ ಖರೀದಿದಾರರು ಈ ಕಂಪನಿಯ ಷೇರುದಾರರಾಗುತ್ತಾರೆ.
ರಿಯಲ್ ಎಸ್ಟೇಟ್ ಮ್ಯಾನೇಜ್ಮೆಂಟ್ ಕಂಪನಿ ಟ್ರೂಬೋರ್ಡ್ ಪಾರ್ಟರ್ನ್ಸ್ ಪ್ರಕಾರ ಫ್ರಾಕ್ಷನಲ್ ಓನರ್ಶಿಪ್ನ ಟ್ರೆಂಡ್ ತುಂಬಾ ವೇಗವಾಗಿ ಬೆಳೆಯುತ್ತಿದೆ. ಭಾರತದಲ್ಲಿ, ಫ್ರಾಕ್ಷನಲ್ ಓನರ್ಶಿಪ್ ಪ್ಲಾಟ್ಫಾರಂಗಳ ಎಯುಎಂ 2019 ರಲ್ಲಿ 1500 ಕೋಟಿ ರೂ. ಇತ್ತು. 2023 ರಲ್ಲಿ ಇದು 4 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ಫ್ರಾಕ್ಷನಲ್ ಓನರ್ಶಿಪ್ ಮಾರ್ಕೆಟ್ ಮುಂದಿನ 4-5 ವರ್ಷಗಳಿಗೆ 25-30% ವಾರ್ಷಿಕ ದರದಲ್ಲಿ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಫ್ರಾಕ್ಷನಲ್ ಓನರ್ಶಿಪ್ ಇನ್ವೆಸ್ಟ್ಮೆಂಟ್ಗಳಿಂದ ಆದಾಯ ಗಳಿಸುವುದಕ್ಕೆ ಎರಡು ವಿಧಾನಗಳಿವೆ. ಈ ಪೈಕಿ ಒಂದನೆಯದು ಬಾಡಿಗೆಯಿಂದ ಆದಾಯ ಮತ್ತು ಇನ್ನೊಂದು ಬಂಡವಾಳದ ಮೌಲ್ಯವರ್ಧನೆ. ಬಾಡಿಗೆಯಿಂದ 8-10% ವರೆಗೆ ರಿಟರ್ನ್ ಗಳಿಸಬಹುದು ಎಂಬುದು ಫ್ರಾಕ್ಷನಲ್ ಓನರ್ಶಿಪ್ ಪ್ಲಾಟ್ಫಾರಂಗಳು ಕ್ಲೇಮ್ ಮಾಡುತ್ತವೆ. ವರ್ಷ ಕಳೆದಂತೆ ಪ್ರಾಪರ್ಟಿ ಮೌಲ್ಯ ಹೆಚ್ಚಾಗುತ್ತದೆ. ಇದರಿಂದ ಹೂಡಿಕೆದಾರರಿಗೆ ಅನುಕೂಲವಾಗುತ್ತದೆ. ಫ್ರಾಕ್ಷನಲ್ ಓನರ್ಶಿಪ್ ಪ್ಲಾಟ್ಫಾರಂ ಎಚ್ಬಿಟ್ಸ್ ಪ್ರಕಾರ, 5 ವರ್ಷಗಳಲ್ಲಿ 13 ರಿಂದ 20% ವರೆಗೆ ಒಟ್ಟು ರಿಟರ್ನ್ ಗಳಿಸಬಹುದು.
ಐಷಾರಾಮಿ ಪ್ರದೇಶದಲ್ಲಿ ಭಾರಿ ಬೆಲೆ ಇರುವ ಪ್ರಾಪರ್ಟಿ ಖರೀದಿ ಮಾಡುವುದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಆದರೆ, ಫ್ರಾಕ್ಷನಲ್ ಓನರ್ಶಿಪ್ನಿಂದ, ಹೈ ವ್ಯಾಲ್ಯೂ ಪ್ರಾಪರ್ಟಿಗಳ ಒಂದು ಭಾಗವನ್ನು ಹೂಡಿಕೆದಾರರು ಖರೀದಿ ಮಾಡಬಹುದು. ಪ್ರೀಮಿಯಂ ಪ್ರಾಪರ್ಟಿಯಲ್ಲಿ ಹೂಡಿಕೆ ಮಾಡಿದಾಗ ಒಳ್ಳೆಯ ರಿಟರ್ನ್ ಸಿಗುತ್ತದೆ ಮತ್ತು ದೈನಂದಿನ ವಹಿವಾಟನ್ನು ಪ್ರಾಪರ್ಟಿ ಮ್ಯಾನೇಜ್ಮೆಂಟ್ ಸಂಸ್ಥೆಗಳೇ ನಿರ್ವಹಣೆ ಮಾಡುತ್ತಿರುತ್ತವೆ. ಹೀಗಾಗಿ, ಅದರ ನಿರ್ವಹಣೆ ಸಮಸ್ಯೆ ಹೂಡಿಕೆದಾರರಿಗೆ ಇರುವುದಿಲ್ಲ.
ಫ್ರಾಕ್ಷನಲ್ ಓನರ್ಶಿಪ್ನಲ್ಲಿ, ಬಾಡಿಗೆದಾರುರ ಬಾಡಿಗೆ ಕೊಡದಿದ್ದರೆ ಅಥವಾ ಪ್ರಾಪರ್ಟಿ ಖಾಲಿ ಇದ್ದರೆ, ಬಾಡಿಗೆ ಆದಾಯ ನಷ್ಟವಾಗಬಹುದು. ಅದೇ ರೀತಿ, ಸಹ ಮಾಲೀಕರು ಮೇಂಟೆನೆನ್ಸ್ ವೆಚ್ಚ ಕೊಡದೇ ಇದ್ದರೆ, ಅವರ ಪಾಲನ್ನು ಇತರ ಪಾಲುದಾರರು ಭರಿಸಬೇಕಾಗುತ್ತದೆ. ಬಳಕೆ, ನಿರ್ವಹಣೆ ಅಥವಾ ಪ್ರಾಪರ್ಟಿ ಮಾರಾಟಕ್ಕೆ ಸಂಬಂಧಿಸಿದಂತೆ ವಿವಾದಗಳು ಉಂಟಾದರೆ, ಅದು ಕಾನೂನು ಸಂಘರ್ಷಕ್ಕೆ ಕಾರಣವಾಗಬಹುದು. ಇದರಿಂದ ಸಮಯ ಮತ್ತು ಹಣವೆರಡೂ ಹಾಳಾಗಬಹುದು.
ಫ್ರಾಕ್ಷನಲ್ ಓನರ್ಶಿಪ್ಗೆ ಸೀಮಿತ ಲಿಕ್ವಿಡಿಟಿ ಇರುತ್ತದೆ. ಪ್ರಾಪರ್ಟಿಯಲ್ಲಿ ಒಬ್ಬನ ಪಾಲನ್ನು ಮಾರಾಟ ಮಾಡುವುದು ಕಷ್ಟವಾಗಬಹುದು. ಹೂಡಿಕೆದಾರರು ಎರಡು ರೀತಿಯಲ್ಲಿ ಎಕ್ಸಿಟ್ ಆಗಬಹುದು. ಒಂದನೆಯದು, ಫ್ರಾಕ್ಷನಲ್ ಓನರ್ಶಿಪ್ ಪ್ಲಾಟ್ಫಾರಂನಲ್ಲಿ ತನ್ನ ಪಾಲನ್ನು ಮಾರಾಟ ಮಾಡಬಹುದು. ಇನ್ನು ಎರಡನೆಯದಾಗಿ, ಇಡೀ ಪ್ರಾಪರ್ಟಿ ಖರೀದಿ ಮಾಡಲು ಎಸ್ಪಿವಿಗೆ ಖರೀದಿದಾರರು ಸಿಗಬಹುದು ಮತ್ತು ಎಲ್ಲ ಷೇರುದಾರರು ತಮ್ಮ ಹೋಲ್ಡಿಂಗ್ ಅನ್ನು ಮಾರಿಕೊಳ್ಳಬಹುದು.
ರತ್ನಾಳ ಹಾಗೆಯೇ, ನೀವು ಕೂಡಾ ಫ್ರಾಕ್ಷನಲ್ ಓನರ್ಶಿಪ್ ಮೂಲಕ ಪ್ರಾಪರ್ಟಿಯಲ್ಲಿ ಹೂಡಿಕೆ ಮಾಡಲು ಬಯಸಿದ್ದರೆ, ನೀವು ಒಂದಷ್ಟು ಸಂಶೋಧನೆ ಮಾಡಬೇಕಾಗುತ್ತದೆ. ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಇರುವ ಪ್ಲಾಟ್ಫಾರಂ ಆಯ್ಕೆ ಮಾಡಿಕೊಳ್ಳಿ. ಪ್ರಾಪರ್ಟಿಯ ಸ್ಥಳ, ಬಾಡಿಗೆ ಆದಾಯ ಮತ್ತು ಮೌಲ್ಯವರ್ಧನೆಯ ಸಾಧ್ಯತೆಯನ್ನು ವಿಶ್ಲೇಷಣೆ ಮಾಡಿ. ಮಾಲೀಕತ್ವ ಮತ್ತು ಇತರ ಕಾನೂನು ಬಾಧ್ಯತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಗಮನವಿಟ್ಟು ನೋಡಿ. ಫ್ರಾಕ್ಷನಲ್ ಓನರ್ಶಿಪ್ ವಿಷಯದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುವುದು ಉತ್ತಮ. ಸದ್ಯ ಈ ಉದ್ಯಮ ಕಂಪನಿಗಳ ಕಾಯ್ದೆ 2013 ರ ಅಡಿಯಲ್ಲಿ ಕೆಲಸ ಮಾಡುತ್ತದೆ. ಮಾಲೀಕತ್ವದ ಪ್ಲಾಟ್ಫಾರಂಗಳು ರೇರಾ ಅಡಿಯಲ್ಲಿ ನೋಂದಣಿ ಆಗಿವೆ. ಮಾರ್ಕೆಟ್ ರೆಗ್ಯುಲೇಟರ್ ಸೆಬಿ ಕೂಡಾ ತನ್ನ ರೆಗ್ಯುಲೇಟರಿ ವ್ಯಾಪ್ತಿಯಲ್ಲಿ ಫ್ರಾಕ್ಷನಲ್ ಓನರ್ಶಿಪ್ ಅನ್ನು ಸೇರಿಸಬಹುದು.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ