ನೀವು ನಿಮ್ಮ ಪ್ರಾಪರ್ಟಿ ವಿಲ್ ಅನ್ನು ಒಂದು ಸರಳ ಕಾಗದದ ಮೇಲೆಯೂ ಬರೆಯಬಹುದು. ಅದಕ್ಕೆ ಸ್ಟಾಂಪ್ ಪೇಪರ್ರೇ ಆಗಬೇಕು ಎಂದೇನಿಲ್ಲ. ಆದರೂ, ಹಲವರು ಈ ತಪ್ಪೊಂದನ್ನು ಮಾಡುತ್ತಾರೆ. ಇದರಿಂದ ನಿಮ್ಮ ವಿಲ್ ಅನೂರ್ಜಿತವೂ ಆಗಬಹುದು. ದಯಾಳ್ ಬಾಬು ಅವರ ಪ್ರಕರಣವನ್ನೇ ನೋಡಿ. ಅವರು ಕಳೆದ ವರ್ಷ ತನ್ನ ಕುಟುಂಬದ ವಿಲ್ ಮಾಡಿದರು. ತನ್ನ ಎಲ್ಲ ಭೂಮಿ ಮತ್ತು ಅಸೆಟ್ಗಳನ್ನು ತನ್ನ ಮಕ್ಕಳಿಗೆ ನೀಡಿದರು. ಅದಕ್ಕೆ ಅವರು ವಿಲ್ ಮಾಡಿದ್ದರು. ಆದರೆ, ಸಾಕ್ಷಿ ಸಹಿ ಹಾಕಿಸಿರಲಿಲ್ಲ. ಒಂದು ಕಾಗದದ ಮೇಲೆ ತನ್ನ ನಿರ್ಧಾರವನ್ನು ಬರೆದಿಟ್ಟರೆ ಸಾಕು ಎಂದು ಅವರು ಭಾವಿಸಿದ್ದರು. ಆದರೆ, ಅವರ ಕುಟುಂಬದವರು ಈಗ ಸಮಸ್ಯೆ ಎದುರಿಸುತ್ತಿದ್ದಾರೆ. ಅವರು ಮಾಡಿದ ಒಂದು ತಪ್ಪಿನಿಂದ ಆಸ್ತಿ ವಿಷಯದಲ್ಲಿ ಅವರ ಕುಟುಂಬದಲ್ಲಿ ವಿವಾದ ಉಂಟಾಗಿದೆ. ಈ ವಿವಾದವನ್ನು ಕುಟುಂಬದ ಸದಸ್ಯರು ಕೋರ್ಟ್ಗೆ ತೆಗೆದುಕೊಂಡು ಹೋಗಿದ್ದಾರೆ. ದಯಾಳ್ ಬಾಬು ಅವರಂತೆಯೇ, ತನ್ನ ಕುಟುಂಬದ ವಿಲ್ಗಳನ್ನು ಬರೆದಿಡುವಲ್ಲಿ ಹಲವರು ತಪ್ಪು ಮಾಡಿದ್ದಾರೆ. ಹೀಗಾಗಿ, ನೀವು ಕೂಡ ಮುಂದೊಂದು ನಿಮ್ಮ ಕುಟುಂಬದ ವಿಲ್ ಬರೆಯುವಾಗ ಮಾಡಬಾರದ ತಪ್ಪುಗಳ ಬಗ್ಗೆ ನಾವು ಇಲ್ಲಿ ಚರ್ಚೆ ಮಾಡೋಣ.
ವಿಲ್ ಎಂಬುದು ಒಂದು ಕಾಗದಪತ್ರ. ಇದು ವ್ಯಕ್ತಿಯ ಮರಣದ ನಂತರ ಅವನ ಅಸೆಟ್ಗಳನ್ನು ಹೇಗೆ ಬಟವಾಡೆ ಮಾಡಲಾಗುತ್ತದೆ ಎಂಬುದನ್ನು ತಿಳಿಸುತ್ತದೆ. ವಿಲ್ ಬರೆಸುವವನನ್ನು ಅಥವಾ ವಿಲ್ ಮಾಡುವವನನ್ನು ಟೆಸ್ಟೇಟರ್ ಎಂದು ಕರೆಯಲಾಗುತ್ತದೆ. ವಿಲ್ನಲ್ಲಿ ನಮೂದಿಸಿರುವ ವ್ಯಕ್ತಿ ಅಂದರೆ ಪ್ರಾಪರ್ಟಿಯನ್ನು ಪಡೆಯುವ ವ್ಯಕ್ತಿಯು ಕುಟುಂಬದ ಅಸೆಟ್ಗಳನ್ನು ಪಡೆಯುತ್ತಾನೆ. ಒಂದು ವಿಲ್ ಅನ್ನು ಖಾಲಿ ಕಾಗದದ ಮೇಲೆ ಬರೆಯಬಹುದು. ಆದರೆ, ಇದರಲ್ಲಿ ಟೆಸ್ಟೇಟರ್ ಸಹಿ ಇರಬೇಕು. ಹಲವು ಸಾಕ್ಷಿಯ ಸಮ್ಮುಖದಲ್ಲಿ ಸಹಿ ಮಾಡುವುದಿಲ್ಲ. ಅವರು ಸಾಕ್ಷಿಯ ಸಹಿಯನ್ನೂ ಪಡೆಯುವುದಿಲ್ಲ. ನಂತರ, ಯಾವಾಗಲೋ ವಿಲ್ ಮೇಲೆ ಅವರು ಸಹಿ ಮಾಡುತ್ತಾರೆ. ಇಂತಹ ತಪ್ಪುಗಳು ಮುಂದೊಂದು ದಿನ ಸಮಸ್ಯೆಯನ್ನು ತಂದೊಡ್ಡುತ್ತವೆ. ಸಾಕ್ಷಿಯ ಸಮ್ಮುಖದಲ್ಲಿ ಟೆಸ್ಟೇಟಸರ್ ಸಹಿ ಮಾಡಬೇಕು. ತಕ್ಷಣ, ಟೆಸ್ಟೇಟರ್ ಸಹಿ ಮಾಡಿದ ನಂತರ, ಕನಿಷ್ಠ ಎರಡು ಸಾಕ್ಷಿದಾರರು ವಿಲ್ ಮೇಲೆ ಸಹಿ ಮಾಡಬೇಕು.
ಸಾಕ್ಷಿಯ ಸಮ್ಮುಖದಲ್ಲಿ ವ್ಯಕ್ತಿ ಸಹಿ ಮಾಡಿದ್ದಾನೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಸಾಕ್ಷಿಗಳು ಇದನ್ನು ದೃಢೀಕರಿಸುತ್ತಾರೆ ಮತ್ತು ಅವರು ಕೂಡ ವಿಲ್ನಲ್ಲಿ ಸಹಿ ಮಾಡುತ್ತಾರೆ. ಅದೇ ರೀತಿ, ಇಬ್ಬರು ಸಾಕ್ಷಿಗಳ ಪೈಕಿ ಒಬ್ಬರು ವೈದ್ಯರಾಗಿರಬೇಕು. ಇದರಿಂದ ಮುಂದೆ ವಿವಾದವನ್ನು ತಪ್ಪಿಸಲು ಸಹಾಯವಾಗುತ್ತದೆ. ವಿಲ್ ಮಾಡಿದಾಗ, ಟೆಸ್ಟೇಟರ್ ಮಾನಸಿಕವಾಗಿ ಅನಾರೋಗ್ಯವನ್ನು ಹೊಂದಿರಲಿಲ್ಲ ಎಂಬುದನ್ನು ಇದು ತಿಳಿಸುತ್ತದೆ.
ವಿಲ್ನ ನೋಂದಣಿ ಕಡ್ಡಾಯವಲ್ಲ. ಆದರೆ, ವಿಲ್ನ ದೃಢೀಕರಣಕ್ಕೆ ವಿಲ್ ನೋಂದಣಿ ಮಾಡುವುದು ಅಗತ್ಯವಾಗಿರುತ್ತದೆ. ಹಲವು ವಿಲ್ ಅನ್ನು ನೋಟರಿ ಮಾಡಿಸುತ್ತಾರೆ. ಆದರೆ ಅಷ್ಟೇ ಸಾಲದು. ವಿಲ್ ನೋಂದಣಿ ಮಾಡಿಸಿದರೆ ಮುಂದೆ ತೊಂದರೆ ಬರುವುದಿಲ್ಲ. ವಿಲ್ ರಿಜಿಸ್ಟರ್ ಮಾಡಿಸಲು, ರಿಜಿಸ್ಟ್ರಾರ್ ಕಚೇರಿಗೆ ಟೆಸ್ಟೇಟರ್ ಹೋಗಬೇಕು ಮತ್ತು ಸಹಿ ಮಾಡಬೇಕು. ಇದರಿಂದ ವಿಲ್ ನಕಲಿ ಅಲ್ಲ ಎಂದು ಕನ್ಫರ್ಮ್ ಆಗುತ್ತದೆ. ಎಕ್ಸೆಕ್ಯೂಟರ್ ಅನ್ನು ಆಯ್ಕೆ ಮಾಡುವುದು ವಿಲ್ ಜಾರಿ ಮಾಡಲು ಅತ್ಯಂತ ಅಗತ್ಯದ್ದಾಗಿರುತ್ತದೆ. ವ್ಯಕ್ತಿಯ ಬಯಕೆಗೆ ಅನುಗುಣವಾಗಿ ಅಸೆಟ್ಗಳನ್ನು ವಿತರಿಸಲು ಇದು ಅಗತ್ಯದ್ದಾಗಿದೆ. ಎಕ್ಸೆಕ್ಯೂಟರ್ ಆಗಿ ಸ್ನೇಹಿತರು ಅಥವಾ ಸಂಬಂಧಿಕರನ್ನು ನೇಮಿಸಿಕೊಳ್ಳಿ. ವಿಲ್ನಿಂದ ಏನನ್ನೂ ಪ್ರಯೋಜನ ಪಡೆಯದ ವ್ಯಕ್ತಿಯನ್ನು ಎಕ್ಸೆಕ್ಯೂಟರ್ ಆಗಿ ನೇಮಿಸಿಕೊಳ್ಳುವುದು ಅತ್ಯಂತ ಮುಖ್ಯ.
ನಂತರ ಗೊಂದಲವನ್ನು ನಿವಾರಣೆ ಮಾಡಲು ಕಾನೂನು ಪ್ರಕಾರ ಉತ್ತರಾಧಿಕಾರಿಗಳಿಗೆ ಸ್ವತ್ತುಗಳನ್ನು ವಿತರಿಸಿದ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸಿ. ಇಂದು ನೀವು ವಿಲ್ ಮಾಡುತ್ತಿದ್ದೀರಿ ಎಂದಾದರೆ, ನಿಮ್ಮ ಜೀವಿತಾವಧಿಯಲ್ಲಿ ಹೇಗೆ ಮತ್ತು ಯಾರಿಗೆ ನಿಮ್ಮ ಆಸ್ತಿ ಹೋಗಬೇಕು ಎಂದು ಸ್ಪಷ್ಟವಾಗಿ ತಿಳಿಸಿ. ಅಲ್ಲದೆ, ಭವಿಷ್ಯದಲ್ಲಿ ಗಳಿಕೆಗಳ ನಿಬಂಧನೆಗಳನ್ನು ಸ್ಪಷ್ಟವಾಗಿ ತಿಳಿಸಿ ಮತ್ತು ಯಾರಿಗೆ ಏನು ಸಿಗಬೇಕು ಎಂಬುದನ್ನು ಸ್ಪಷ್ಟವಾಗಿ ವಿವರಿಸಿ. ದಯಾಳ್ ಬಾಬು ಮಾಡಿದಂತಹ ತಪ್ಪನ್ನು ಮಾಡಬೇಡಿ. ವಿಲ್ನ ಮೇಲೆ ಸಹಿಯಂತಹ ಸಣ್ಣ ಸಂಗತಿಗಳ ಬಗ್ಗೆಯೂ ಗಮನ ಇಟ್ಟುಕೊಳ್ಳಿ.
ನೀವು ಯಾವಾಗ ಬೇಕಾದರೂ ನಿಮ್ಮ ವಿಲ್ ಅನ್ನು ಅಪ್ಡೇಟ್ ಮಾಡಬಹುದು. ಟೆಸ್ಟೇಟರ್ ಕೊನೆಯದಾಗಿ ಅಪ್ಡೇಟ್ ಮಾಡಿದ ವಿಲ್ ಊರ್ಜಿತವಾಗಿರುತ್ತದೆ. ಅಗತ್ಯವಿದ್ದರೆ ಕಾನೂನು ಸಹಾಯ ಪಡೆಯಿರಿ. ಯಾಕೆಂದರೆ, ವಿಲ್ಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ವಿಲ್ ಮಾಡುವಾಗ ವೀಡಿಯೋ ರೆಕಾರ್ಡ್ ಮಾಡುವುದು ಕೂಡಾ ಸಮಸ್ಯೆಯನ್ನು ತಪ್ಪಿಸಬಹುದು. ಪ್ರಾಪರ್ಟಿಯಲ್ಲಿ ಪಾಲು ಪಡೆಯುವುದರಿಂದ ಯಾರನ್ನಾದರೂ ಸ್ಪಷ್ಟವಾಗಿ ಹೊರಗಿಟ್ಟಿದ್ದರೆ, ಅದನ್ನೂ ವಿಲ್ನಲ್ಲಿ ವಿವರಿಸಿ.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ