ಚಿಕಿತ್ಸೆಗೆ 1 ಲಕ್ಷ ರೂ. ವರೆಗೆ ಭಾಗಶಃ ಪಿಎಫ್ ವಿತ್‌ಡ್ರಾಗೆ ಅವಕಾಶ

EPFO ಸದಸ್ಯರಿಗೆ ಒಂದು ಮಹತ್ವ ಅನುಕೂಲ ಸಿಕ್ಕಿದೆ. ಇಪಿಎಫ್‌ಒ ಸದಸ್ಯರು ಈಗ ತಮ್ಮ ಅಥವಾ ತಮ್ಮ ಕುಟುಂಬದ ಯಾವುದೇ ಸದಸ್ಯರ ಚಿಕಿತ್ಸೆಗೆ ಅಂತ ಪಿಎಫ್ ಖಾತೆಯಿಂದ 1 ಲಕ್ಷ ರೂ. ಹಣ ತೆಗೆಯಬಹುದು.

alternate

EPFO ಸದಸ್ಯರಿಗೆ ಒಂದು ಮಹತ್ವ ಅನುಕೂಲ ಸಿಕ್ಕಿದೆ. ಇಪಿಎಫ್‌ಒ ಸದಸ್ಯರು ಈಗ ತಮ್ಮ ಅಥವಾ ತಮ್ಮ ಕುಟುಂಬದ ಯಾವುದೇ ಸದಸ್ಯರ ಚಿಕಿತ್ಸೆಗೆ ಅಂತ ಪಿಎಫ್ ಖಾತೆಯಿಂದ 1 ಲಕ್ಷ ರೂ. ಹಣ ತೆಗೆಯಬಹುದು. ಈ ಮೊದಲು ಈ ಮಿತಿ 50 ಸಾವಿರ ಇತ್ತು. ಇದನ್ನು ಈಗ 1 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಇಪಿಎಫ್‌ಒ ಪ್ರಕಟಣೆ ತಿಳಿಸಿದೆ. ಇಪಿಎಫ್‌ಒ ಪ್ರಕಾರ, ಒಬ್ಬ ಸದಸ್ಯರು ಅಥವಾ ಅವರ ಅವಲಂಬಿತರು ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಆಸ್ಪತ್ರೆಗೆ ದಾಖಲಾಗಿಲ್ಲಿದ್ದರೆ, ಆಸ್ಪತ್ರೆಯಲ್ಲಿ ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆಗೆ ಒಳಗಾದಾಗ ಅಥವಾ ಟಿಬಿ, ಪಾರ್ಶ್ವವಾಯು, ಕ್ಯಾನ್ಸರ್, ಮಾನಸಿಕ ಅಸ್ವಸ್ಥತೆ ಅಥವಾ ಹೃದ್ರೋಗದಿಂದ ಬಳಲುತ್ತಿದ್ದರೆ, ಅವರು ಮುಂಗಡವಾಗಿ ಹಣ ಪಡೆಯಲು ಅರ್ಜಿ ಸಲ್ಲಿಸಬಹುದು. ಆದರೆ, ಉದ್ಯೋಗಿ ಅಥವಾ ಅವನ ಕುಟುಂಬದ ಸದಸ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಬೇಕಿರುತ್ತದೆ. ನೀವು ರೋಗಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೆ, ತಪಾಸಣೆ ಮಾಡಿದ ನಂತರವೇ ನಿಮಗೆ ಕ್ಲೈಮ್ ಸಿಗುತ್ತದೆ.

ಒಂದು ತಿಂಗಳಲ್ಲಿ ಮೂರನೇ ಬಾರಿಗೆ FD ಬಡ್ಡಿ ಹೆಚ್ಚಿಸಿದ ICICI ಬ್ಯಾಂಕ್
ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ICICI ಬ್ಯಾಂಕ್ ತನ್ನ ಎಫ್‌ಡಿ ಬಡ್ಡಿದರ ಹೆಚ್ಚಿಸಲು ನಿರ್ಧರಿಸಿದೆ. ICICI ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, 2 ರಿಂದ 5 ಕೋಟಿ ರೂಪಾಯಿ FD ಬಡ್ಡಿದರ ಹೆಚ್ಚಳಕ್ಕೆ ಬ್ಯಾಂಕ್ ನಿರ್ಧರಿಸಿದೆ. ಈ ಹೆಚ್ಚಳದ ನಂತರ, ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗಿನ ಬಲ್ಕ್ ಎಫ್‌ಡಿ ಯೋಜನೆಯಲ್ಲಿ ಸಾಮಾನ್ಯ ನಾಗರಿಕರಿಗೆ ಶೇಕಡಾ 4.75 ರಿಂದ 7 ರಷ್ಟು ಬಡ್ಡಿ ದರವನ್ನು ನೀಡುತ್ತಿದೆ. 1 ವರ್ಷದಿಂದ 389 ದಿನಗಳ ಎಫ್‌ಡಿಗಳ ಮೇಲೆ ಅತಿ ಹೆಚ್ಚಿನ ಬಡ್ಡಿ ದರ ಸಿಗುತ್ತದೆ. ಇದರಲ್ಲಿ, ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 7.25 ಬಡ್ಡಿಯನ್ನು ನೀಡುತ್ತಿದೆ, ಈ ಹಿಂದೆ ಬ್ಯಾಂಕ್ ತನ್ನ ಬಡ್ಡಿದರಗಳನ್ನು ಏಪ್ರಿಲ್ 1 ಮತ್ತು 9 ರಂದು ಹೆಚ್ಚಿಸಿತ್ತು.

ಕಳೆದ ಹಣಕಾಸು ವರ್ಷದಲ್ಲಿ ಮ್ಯೂಚುವಲ್ ಫಂಡ್‌ಗಳದ್ದೇ ದರ್ಬಾರು – 35 ಪರ್ಸೆಂಟ್ ಅಸೆಟ್ ಏರಿಕೆ
2024 ರ ಹಣಕಾಸು ವರ್ಷದಲ್ಲಿ ದೇಶೀಯ ಮ್ಯೂಚುವಲ್ ಫಂಡ್ ಉದ್ಯಮ ಅತ್ಯಂತ ಸಮೃದ್ಧವಾಗಿ ಬೆಳೆದಿದೆ. AMFI ಅಂದರೆ ಅಸೋಸಿಯೇಷನ್ ​​ಆಫ್ ಮ್ಯೂಚುಯಲ್ ಫಂಡ್ಸ್ ಇನ್ ಇಂಡಿಯಾದ ಇತ್ತೀಚಿನ ವರದಿಯ ಪ್ರಕಾರ, ಮಾರ್ಚ್ 2024 ರ ವೇಳೆಗೆ AUM ಅಂದರೆ ನಿರ್ವಹಣೆ ಅಸೆಟ್‌ ದಾಖಲೆಯ ಗರಿಷ್ಠ 53.40 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿದೆ. ಕಳೆದ ಮಾರ್ಚ್ 2023 ರಲ್ಲಿ ಇದು 39.42 ಲಕ್ಷ ಕೋಟಿ ರೂ. ಆಗಿತ್ತು. ಅಂದರೆ, ಒಂದು ವರ್ಷದಲ್ಲಿ 14 ಸಾವಿರ ಕೋಟಿ ರೂ.ಗೂ ಅಧಿಕ ಏರಿಕೆ ದಾಖಲಾಗಿದೆ. ಮ್ಯೂಚುವಲ್ ಫಂಡ್ ಉದ್ಯಮವು FY21 ರಲ್ಲಿ 41% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇದರ ನಂತರ, ಈಗ FY24 ರಲ್ಲಿ ಸುಮಾರು 35% ರಷ್ಟು ಬೆಳೆದಿದೆ.

ಭಾರತದ ಈ ನಗರದಲ್ಲಿ ಕೋಟ್ಯಂತರ ಮೌಲ್ಯದ ಐಷಾರಾಮಿ ಮನೆಗಳ ಮಾರಾಟದಲ್ಲಿ ಹೆಚ್ಚಳ
ಕುಶ್‌ಮನ್ ಮತ್ತು ವೇಕ್‌ಫೀಲ್ಡ್ ವರದಿಯ ಪ್ರಕಾರ, ಐಷಾರಾಮಿ ಅಪಾರ್ಟ್‌ಮೆಂಟ್‌ಗಳ ಬೇಡಿಕೆಯಲ್ಲಿ ದೇಶದ ಎಲ್ಲ ಮಾರುಕಟ್ಟೆಗಳಿಗಿಂತ ದೆಹಲಿ-ಎನ್‌ಸಿಆರ್ ಮುಂದಿದೆ. ಮಾರ್ಚ್ ತ್ರೈಮಾಸಿಕದಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ಹೊಸ ಓಪನ್ ಆದ ಐಷಾರಾಮಿ ಅಪಾರ್ಟ್‌ಮೆಂಟ್‌ಗಳ ಪಾಲು ಶೇಕಡಾ 61 ರಷ್ಟಿತ್ತು… ಇದು ದೆಹಲಿ-ಎನ್‌ಸಿಆರ್ ಮಾರುಕಟ್ಟೆಯಲ್ಲಿ ಐಷಾರಾಮಿ ಮನೆಗಳಿಗೆ ಬೇಡಿಕೆ ಪ್ರಬಲವಾಗಿದೆ ಎಂಬುದನ್ನು ತೋರಿಸುತ್ತದೆ. ಅದೇ ಸಮಯದಲ್ಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್‌ಗಳ ಪಾಲು ಅನುಕ್ರಮವಾಗಿ ಶೇಕಡಾ 26 ಮತ್ತು 19 ರಷ್ಟಿದೆ… ಕುಶ್‌ಮನ್ ಮತ್ತು ವೇಕ್‌ಫೀಲ್ಡ್ ವರದಿಯಲ್ಲಿ, ಪ್ರತಿ ಚದರ ಅಡಿಗೆ ಬೆಲೆ ಕನಿಷ್ಠ ರೂ. 15 ಸಾವಿರ ಇದ್ದರೆ, ಅಂತಹ ಮನೆಗಳನ್ನು ಐಷಾರಾಮಿ ಎಂದು ಕರೆಯಲಾಗುತ್ತದೆ.

ಟಿವಿಗೂ ಬಂದಿದೆ ಎಐ – ಸ್ಯಾಮ್‌ಸಂಗ್‌ನಿಂದ ಎಐ ಇರುವ ಟಿವಿ ಬಿಡುಗಡೆ
ದಕ್ಷಿಣ ಕೊರಿಯಾದ ತಂತ್ರಜ್ಞಾನ ಕಂಪನಿ ಸ್ಯಾಮ್‌ಸಂಗ್ ಭಾರತದಲ್ಲಿ ಹೊಸ ಸಿರೀಸ್‌ ಟಿವಿಗಳನ್ನು ಬಿಡುಗಡೆ ಮಾಡಿದೆ. ಈ ಸಿರೀಸ್‌ನಲ್ಲಿ ನಿಯೋ QLED 8K, Neo QLED 4K ಮತ್ತು OLED ಟಿವಿ ಮಾಡೆಲ್‌ಗಳಿವೆ. ಬೆಂಗಳೂರಿನ ಸ್ಯಾಮ್‌ಸಂಗ್ ಒಪೇರಾ ಹೌಸ್‌ನಲ್ಲಿ ನಡೆದ ‘ಅನ್‌ಬಾಕ್ಸ್ ಆಂಡ್ ಡಿಸ್ಕವರ್’ ಕಾರ್ಯಕ್ರಮದಲ್ಲಿ ಈ ಟಿವಿಗಳನ್ನು ಅನಾವರಣ ಮಾಡಲಾಗಿದೆ. ಟಿವಿಗಳು 55 ಇಂಚುಗಳಿಂದ 98 ಇಂಚುಗಳವರೆಗಿನ ಗಾತ್ರದಲ್ಲಿ ಲಭ್ಯವಿದೆ. ಹೊಸ ಟಿವಿಗಳು ಅನೇಕ ಕೃತಕ ಬುದ್ಧಿಮತ್ತೆ (AI) ವೈಶಿಷ್ಟ್ಯಗಳನ್ನು ಹೊಂದಿವೆ ಎಂದು ಸ್ಯಾಮ್‌ಸಂಗ್ ಹೇಳಿದೆ. AI ದೃಶ್ಯ ಅನುಭವವನ್ನು ಹೆಚ್ಚಿಸುತ್ತದೆ. AI ಅನ್ನು ಧ್ವನಿಯಲ್ಲಿಯೂ ಬಳಸಲಾಗಿದೆ. ಇದು ಬ್ಯಾಕ್‌ಗ್ರೌಂಡ್ ನಾಯ್ಸ್ ಪತ್ತೆ ಮಾಡಿ ವಾಲ್ಯೂಮ್ ಅನ್ನು ಅಟೊಮ್ಯಾಟಿಕ್ ಆಗಿ ಅಡ್ಜಸ್ಟ್ ಮಾಡುತ್ತದೆ.

ಮತ್ತೆ ಅನೇಕ ಉದ್ಯೋಗಿಗಳನ್ನು ವಜಾ ಮಾಡಿದ ಗೂಗಲ್
2024 ರ ಮೊದಲ ಲೇ ಆಫ್ ಅನ್ನು ಟೆಕ್ ದೈತ್ಯ ಗೂಗಲ್ ಘೋಷಿಸಿದೆ. ಕಂಪನಿ ತನ್ನ ರಿಸ್ಟ್ರಕ್ಚರಿಂಗ್ ಯೋಜನೆಯಡಿಯಲ್ಲಿ ಈ ವಜಾ ಮಾಡಿದೆ. ಅಮೆರಿಕದ ಮಾಧ್ಯಮಗಳಲ್ಲಿ ಈ ಮಾಹಿತಿ ಪ್ರಕಟವಾಗಿದೆ. ಕಂಪನಿಯ ಸಿಎಫ್‌ಒ ರುತ್ ಪೊರಟ್ ಅವರು ವಜಾಗೊಳಿಸಿದ ಬಗ್ಗೆ ಮೆಮೊ ಮೂಲಕ ಮಾಹಿತಿ ನೀಡಿದ್ದಾರೆ ಮತ್ತು ಕಂಪನಿಯ ಹೊಸ ಯೋಜನೆ ಬಗ್ಗೆ ತಿಳಿಸಿದ್ದಾರೆ. ಕೆಲವು ಸಮಯದ ಹಿಂದೆ ಗೂಗಲ್ ಸಿಇಒ ಸುಂದರ್ ಪಿಚೈ ಕೂಡ ಲೇ ಆಫ್‌ ಬಗ್ಗೆ ಹೇಳಿಕೆ ನೀಡಿದ್ದರು. ಪ್ರಸ್ತುತ, ಎಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಈ ಬಾರಿ ಅಕೌಂಟ್ ವಿಭಾಗದವರಿಗೆ ನೌಕರಿ ಕಳೆದುಕೊಳ್ಳುವ ಭೀತಿ ಉಂಟಾಗಿದೆ ಎಂದು ವರದಿ ಹೇಳುತ್ತದೆ. ಏಷ್ಯಾ, ಯುರೋಪ್ ಮತ್ತು ಮಧ್ಯಪ್ರಾಚ್ಯದಲ್ಲಿರುವ Google ಉದ್ಯೋಗಿಗಳಿಗೂ ಇದರ ಬಿಸಿ ತಟ್ಟಲಿದೆ. ಕಂಪನಿಯು ಬೆಂಗಳೂರು, ಡಬ್ಲಿನ್, ಮೆಕ್ಸಿಕೋ ಸಿಟಿ, ಅಟ್ಲಾಂಟಾ ಮತ್ತು ಚಿಕಾಗೋದಲ್ಲಿ central hub ನಿರ್ಮಿಸಲಿದೆ ಎಂದು ವರದಿ ಹೇಳಿದೆ.

Published: April 18, 2024, 15:08 IST

ಚಿಕಿತ್ಸೆಗೆ 1 ಲಕ್ಷ ರೂ. ವರೆಗೆ ಭಾಗಶಃ ಪಿಎಫ್ ವಿತ್‌ಡ್ರಾಗೆ ಅವಕಾಶ