Google Pay ಮತ್ತು Phone Payಗೆ ಠಕ್ಕರ್..!

ONDC ನೆರವಿನೊಂದಿಗೆ ಭೀಮ್ ಆಪ್ ಈಗ Google Pay ಮತ್ತು Phone Pay ಗೆ ಪೈಪೋಟಿ ನೀಡಲು ತಯಾರಿ ನಡೆಸುತ್ತಿದೆ... ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ONDC ಮೂಲಕ ಇ-ಕಾಮರ್ಸ್ ವಲಯಕ್ಕೆ ಭೀಮ್ ಕಾಲಿಡಲಿದೆ.

alternate

ದೇಶೀಯ ಮಾರುಕಟ್ಟೆ ಮತ್ತು ರಫ್ತು ಮಾರುಕಟ್ಟೆಯಲ್ಲಿ ಎಥಿಲೀನ್ ಆಕ್ಸೈಡ್ ಬಗ್ಗೆ ಸರ್ಕಾರದ ನಿಗಾ
ದೇಶೀಯ ಮಾರುಕಟ್ಟೆ ಹಾಗೂ ರಫ್ತು ಮಾರುಕಟ್ಟೆಯಲ್ಲಿನ ಮಸಾಲೆಗಳಲ್ಲಿ ಎಥಿಲೀನ್ ಆಕ್ಸೈಡ್ ಬಳಕೆಯಾಗುತ್ತಿರುವ ಬಗ್ಗೆ ಸರ್ಕಾರ ಕಣ್ಗಾವಲು ಹೆಚ್ಚಿಸಲು ಯೋಜಿಸುತ್ತಿದೆ. ಎಥಿಲೀನ್ ಆಕ್ಸೈಡ್ ಒಂದು ರೀತಿಯ ಕೀಟನಾಶಕವಾಗಿದ್ದು, ನಿಗದಿತ ಮಿತಿಯನ್ನು ಮೀರಿ ಬಳಸಿದರೆ ಕ್ಯಾನ್ಸರ್ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಪ್ರಸ್ತುತ, ದೇಶೀಯ ಬಳಕೆಗಾಗಿ ಮಸಾಲೆಗಳಿಗೆ ಎಥಿಲೀನ್ ಆಕ್ಸೈಡ್ ಅನ್ನು ಬಳಸಲು ಯಾವುದೇ ಅನುಮತಿ ಇಲ್ಲ. ಆದರೆ ಇದನ್ನು ರಫ್ತು ಮಾಡಲು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿಗದಿತ ಮಿತಿಯಲ್ಲಿ ಬಳಸಬಹುದು. ವರದಿಯ ಪ್ರಕಾರ ಎಥಿಲೀನ್ ಆಕ್ಸೈಡ್ ಬಳಕೆ ಭಾರತ ಮಾಡುವುದಕ್ಕೆ ಅವಕಾಶವಿಲ್ಲ. ರಫ್ತಿನ ವಿಷಯದಲ್ಲೂ ಇದೇ ನಿಯಮ ಅನ್ವಯವಾಗಬೇಕು. ಇದನ್ನು ಉದ್ಯಮವು ಕ್ರಿಮಿನಾಶಕ ಏಜೆಂಟ್ ಆಗಿ ಬಳಸಬಾರದು. ಹಾಗೆಯೇ ಇದನ್ನು ಬೆಳೆಗಳಲ್ಲಿಯೂ ಬಳಸಬಾರದು.

ಈ ಯೋಜನೆ ಮೂಲಕ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯ ಮಹಿಳೆಯರ ಕೌಶಲ ಸುಧಾರಣೆ
ಜನರ ಕೌಶಲಗಳನ್ನು ಸುಧಾರಿಸಲು ಆರಂಭಿಸಲಾದ ಸರ್ಕಾರದ ಯೋಜನೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಮಹಿಳೆಯರು ಪಡೆಯುತ್ತಿದ್ದಾರೆ. ಅಂಕಿಅಂಶಗಳ ಪ್ರಕಾರ, ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ skill training ಪಡೆಯುತ್ತಿದ್ದಾರೆ… ಸರ್ಕಾರದ ಅಂಕಿಅಂಶಗಳ ಪ್ರಕಾರ, ಈ ಯೋಜನೆಯಡಿಯಲ್ಲಿ ಇದುವರೆಗೆ 3.5 ಲಕ್ಷ ಜನರು skill training ಪಡೆದಿದ್ದಾರೆ. ಇವರಲ್ಲಿ ಮಹಿಳೆಯರ ಸಂಖ್ಯೆ 2.4 ಲಕ್ಷ ಇದೆ. ಅಂದರೆ, ಈವರೆಗೆ ಸರ್ಕಾರದ ಈ ಯೋಜನೆಯ ಲಾಭ ಪಡೆದವರಲ್ಲಿ ಶೇ.68.76ರಷ್ಟು ಮಹಿಳೆಯರು. ಪುರುಷರ ಸಂಖ್ಯೆ 1.1 ಲಕ್ಷ, ಅಂದರೆ ಸುಮಾರು 31.3 ಪರ್ಸೆಂಟ್. ಯೋಜನೆಯಡಿಯಲ್ಲಿ ತರಬೇತಿ ಪಡೆಯುತ್ತಿರುವ ಹೆಚ್ಚಿನ ಮಹಿಳೆಯರು ಟೈಲರಿಂಗ್ ಅನ್ನು ಇಷ್ಟಪಡುತ್ತಾರೆ. 2.4 ಲಕ್ಷದ ಪೈಕಿ 2.3 ಲಕ್ಷ ಮಂದಿ ಮಹಿಳೆಯರು ಟೇಲರಿಂಗ್‌ ಟ್ರೇನಿಂಗ್‌ ಪಡೆದಿದ್ದಾರೆ. ಅದೇ ರೀತಿ ಪುರುಷರು ಮೇಸ್ತ್ರಿಗಳ ಕೆಲಸಕ್ಕೆ ಆದ್ಯತೆ ನೀಡುತ್ತಿದ್ದಾರೆ. 33,104 ಪುರುಷರು ಮೇಸ್ತ್ರಿ ಕೆಲಸದ ತರಬೇತಿ ಪಡೆದಿದ್ದಾರೆ.

ONDC ಸಹಾಯದಿಂದ Google Pay ಮತ್ತು Phone Pay ಗೆ ಸ್ಪರ್ಧಿಸಲು ಭೀಮ್ ತಯಾರಿ
ONDC ನೆರವಿನೊಂದಿಗೆ ಭೀಮ್ ಆಪ್ ಈಗ Google Pay ಮತ್ತು Phone Pay ಗೆ ಪೈಪೋಟಿ ನೀಡಲು ತಯಾರಿ ನಡೆಸುತ್ತಿದೆ… ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ONDC ಮೂಲಕ ಇ-ಕಾಮರ್ಸ್ ವಲಯಕ್ಕೆ ಭೀಮ್ ಕಾಲಿಡಲಿದೆ. ಈ ಪೇಮೆಂಟ್ ಅಪ್ಲಿಕೇಶನ್ ಈಗ ಅನೇಕ ರೀತಿಯ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡಲಿದೆ. ಫುಡ್, ಬೆವರೇಜ್, ಗ್ರಾಸರಿ, ಫ್ಯಾಷನ್ ಹಾಗೂ ಅಪಾರೆಲ್‌ನಂತಹ ಪ್ರಾಡಕ್ಟ್‌ಗಳು ಇದರಲ್ಲಿರುತ್ತವೆ. ONDC ಗೆಂದೇ BHIM ಪ್ರತ್ಯೇಕ ವಿಭಾಗವನ್ನು ಸಿದ್ಧಪಡಿಸುತ್ತಿದೆ. ಈ ವಿಭಾಗವು ಇಕಾಮರ್ಸ್ ವಲಯಕ್ಕೆ ವಿವಿಧ ರೀತಿಯ ಆಫರ್ ನೀಡುವ ವಿಷಯದಲ್ಲಿ ಕೆಲಸ ಮಾಡಲಿದೆ… Google Pay ಮತ್ತು PhonePe ಎರಡೂ ಡಿಜಿಟಲ್ ಪೇಮೆಂಟ್ ಸ್ಪೇಸ್‌ನಲ್ಲಿ 85% ಪಾಲನ್ನು ಹೊಂದಿವೆ. ಹೊಸ partnerships ಮೂಲಕ, BHIM ಬಳಕೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ತಜ್ಞರು ನಂಬಿದ್ದಾರೆ.

ಮಸಾಲೆಗಳಲ್ಲಿ ಕೀಟನಾಶಕ ಬಳಕೆಗೆ ಅನುಮತಿ ವಿಷಯದಲ್ಲಿ ಸುದ್ದಿಗಳು ಆಧಾರರಹಿತ ಎಂದ FSSAI
ಗಿಡಮೂಲಿಕೆ ಔಷಧಗಳು ಮತ್ತು ಮಸಾಲೆಗಳಲ್ಲಿ ನಿಗದಿತ ಮಾನದಂಡಕ್ಕಿಂತ 10 ಪಟ್ಟು ಹೆಚ್ಚು ಕೀಟನಾಶಕಗಳನ್ನು ಮಿಶ್ರಣ ಮಾಡಲು ಭಾರತೀಯ ಆಹಾರ ನಿಯಂತ್ರಕ FSSAI ಅನುಮತಿಸುತ್ತದೆ ಎಂದು ಹೇಳಲಾದ ಎಲ್ಲಾ ಮಾಧ್ಯಮ ವರದಿಗಳನ್ನು FSSAI ನಿರಾಕರಿಸಿದೆ. FSSAI ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ‘ಇಂತಹ ಎಲ್ಲಾ ಸುದ್ದಿಗಳು ಸುಳ್ಳು ಮತ್ತು ಆಧಾರರಹಿತವಾಗಿವೆ. ವಿಶ್ವದ ಕಟ್ಟುನಿಟ್ಟಾದ ಮಾನದಂಡಗಳಲ್ಲೇ ಭಾರತದ Maximum Residue Level (MRL) ಒಂದಾಗಿದೆ. ಕೀಟನಾಶಕಗಳ MRL ಗಳನ್ನು ಅವುಗಳ ಅಪಾಯದ ಮೌಲ್ಯಮಾಪನದ ಆಧಾರದ ಮೇಲೆ ವಿವಿಧ ಆಹಾರ ಸಾಮಗ್ರಿಗಳಿಗೆ ಪ್ರತ್ಯೇಕವಾಗಿ ನಿರ್ಧರಿಸಲಾಗುತ್ತದೆ ಎಂದು ಅದು ಹೇಳಿದೆ.

ಏರ್ ಇಂಡಿಯಾ ಬ್ಯಾಗೇಜ್ ನೀತಿ ಬದಲಾವಣೆ
ಏರ್ ಇಂಡಿಯಾ ದೇಶೀಯ ವಿಮಾನಗಳಿಗೆ ತನ್ನ ಬ್ಯಾಗೇಜ್ ನೀತಿಯಲ್ಲಿ ಬದಲಾವಣೆ ಮಾಡಿದೆ. ಇಂಡಿಯನ್ ಏರ್‌ಲೈನ್ಸ್‌ನ ಹೊಸ ನೀತಿಯ ಪ್ರಕಾರ, ಈಗ ಒಬ್ಬ ಪ್ರಯಾಣಿಕ ಈ ಕಂಪನಿಯ ದೇಶೀಯ ವಿಮಾನಗಳಲ್ಲಿ ಕನಿಷ್ಠ ದರದ ವಿಭಾಗದಲ್ಲಿ ಕೇವಲ 15 ಕೆಜಿ ಲಗೇಜ್‌ ಅನ್ನು ಮಾತ್ರ ಉಚಿತವಾಗಿ ಸಾಗಿಸಬಹುದು. ಈ ಹಿಂದೆ ಕ್ಯಾಬಿನ್‌ನಲ್ಲಿ 20 ಕೆಜಿ ವರೆಗೆ ಲಗೇಜ್ ಸಾಗಿಸುವ ಅವಕಾಶ ಇತ್ತು. ಇದನ್ನು ಹೊರತುಪಡಿಸಿ ಇತರ ವಿಭಾಗಗಳಲ್ಲಿಯೂ ಬದಲಾವಣೆಗಳನ್ನು ಮಾಡಿದೆ. ಮೇ 2ರಿಂದ ಹೊಸ ನೀತಿ ಜಾರಿಗೆ ಬಂದಿದೆ. ಕಂಪನಿಯು ಕಳೆದ ವರ್ಷ ಆಗಸ್ಟ್‌ನಲ್ಲಿ ಮೆನು ಆಧಾರಿತ ಬೆಲೆ ಮಾದರಿಯನ್ನು ರಚಿಸಿತ್ತು. ಇದರಲ್ಲಿ ಕಂಫರ್ಟ್, ಕಂಫರ್ಟ್ ಪ್ಲಸ್ ಮತ್ತು ಫ್ಲೆಕ್ಸ್ ‘ಫೇರ್ ಫ್ಯಾಮಿಲಿ’ ಸೇರಿದಂತೆ ಮೂರು ವಿಭಾಗಗಳನ್ನು ರಚಿಸಲಾಗಿದೆ.

ಈರುಳ್ಳಿ ರಫ್ತಿಗೆ ನಿಷೇಧ ರದ್ದು: ₹45,800 ಕ್ಕಿಂತ ಕಡಿಮೆ ದರಕ್ಕೆ ಒಂದು ಮೆಟ್ರಿಕ್ ಟನ್ ಈರುಳ್ಳಿ ಮಾರುವಂತಿಲ್ಲ
ಈರುಳ್ಳಿ ರಫ್ತಿನ ಮೇಲಿನ ನಿಷೇಧವನ್ನು ಸರ್ಕಾರ ಶನಿವಾರ ಹಿಂತೆಗೆದುಕೊಂಡಿದೆ. ಆದರೆ, MEP ಅನ್ನು $550 ಗೆ ನಿಗದಿಪಡಿಸಲಾಗಿದೆ. ಅಂದರೆ ಪ್ರತಿ ಮೆಟ್ರಿಕ್ ಟನ್‌ಗೆ ಸುಮಾರು 45,800 ರೂ. ಆಗುತ್ತದೆ. ಅಂದರೆ ರಫ್ತು ಮಾಡುವ ಈರುಳ್ಳಿಯ ಕನಿಷ್ಠ ಬೆಲೆ ಮೆಟ್ರಿಕ್ ಟನ್‌ಗೆ 45,800 ರೂ. ಆಗಿರಬೇಕು. ಮುಂದಿನ ಆದೇಶದವರೆಗೆ ಈ ನಿಯಮ ಜಾರಿಯಲ್ಲಿರುತ್ತದೆ. ಅಲ್ಲದೆ ಈರುಳ್ಳಿ ರಫ್ತಿನ ಮೇಲೆ ಶೇ.40 ರಫ್ತು ಸುಂಕ ವಿಧಿಸಲು ಸರ್ಕಾರ ನಿರ್ಧರಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಈರುಳ್ಳಿ ಬೆಲೆ 70 ರಿಂದ 80 ರೂ.ಗೆ ತಲುಪಿದಾಗ ಸರಕಾರ ಈರುಳ್ಳಿ ರಫ್ತು ನಿಷೇಧಿಸಿತ್ತು.

Published: May 6, 2024, 20:02 IST

Google Pay ಮತ್ತು Phone Payಗೆ ಠಕ್ಕರ್..!