ಇಂಥ ಹೆಲ್ತ್ ಪಾಲಿಸಿ ಯಾರು ತೆಗೆದುಕೊಳ್ಳಲೇಬೇಕು?

ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ ಆರೋಗ್ಯ ವಿಮೆ ನಿಮ್ಮ ಚಿಕಿತ್ಸಾ ವೆಚ್ಚ ಭರಿಸಲು ನಿಮ್ಮ ನೆರವಿಗೆ ಬರುತ್ತದೆ. ಕೆಲವೊಮ್ಮೆ ಗಂಭೀರ ಕಾಯಿಲೆಗಳಿಂದಾಗಿ, ನೀವು ಆಸ್ಪತ್ರೆಯಲ್ಲಿ ಹೆಚ್ಚು ದಿನ ಇರಬೇಕಾಗಿ ಬಂದರೆ ಆಗ ಚಿಕಿತ್ಸಾ ವೆಚ್ಚ ನಿಮ್ಮ ಉಳಿತಾಯವನ್ನೆಲ್ಲಾ ನುಂಗಿ‌ ಹಾಕಬಹುದು. ಕೆಲವೊಂದು ಸಲ ನೀವು ಕೆಲಸ ಮತ್ತು ಆದಾಯ ಎರಡನ್ನು ಕಳೆದುಕೊಳ್ಳುವ ಸಂದರ್ಭ ಬರಬಹುದು. ಇದರಿಂದಾಗಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನಿಮ್ಮ ವೈದ್ಯಕೀಯ ಅಗತ್ಯಗಳಿಗೆ ಹಾಗೇ ಕೌಟುಂಬಿಕ ಅಗತ್ಯಗಳಿಗೆ ಹಣ ಹೊಂದಿಸೋದು ಕಷ್ಟವಾಗುತ್ತದೆ.

ಇಂಥ ಹೆಲ್ತ್ ಪಾಲಿಸಿ ಯಾರು ತೆಗೆದುಕೊಳ್ಳಲೇಬೇಕು?

ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ ಆರೋಗ್ಯ ವಿಮೆ ನಿಮ್ಮ ಚಿಕಿತ್ಸಾ ವೆಚ್ಚ ಭರಿಸಲು ನಿಮ್ಮ ನೆರವಿಗೆ ಬರುತ್ತದೆ. ಕೆಲವೊಮ್ಮೆ ಗಂಭೀರ ಕಾಯಿಲೆಗಳಿಂದಾಗಿ, ನೀವು ಆಸ್ಪತ್ರೆಯಲ್ಲಿ ಹೆಚ್ಚು ದಿನ ಇರಬೇಕಾಗಿ ಬಂದರೆ ಆಗ ಚಿಕಿತ್ಸಾ ವೆಚ್ಚ ನಿಮ್ಮ ಉಳಿತಾಯವನ್ನೆಲ್ಲಾ ನುಂಗಿ‌ ಹಾಕಬಹುದು. ಕೆಲವೊಂದು ಸಲ ನೀವು ಕೆಲಸ ಮತ್ತು ಆದಾಯ ಎರಡನ್ನು ಕಳೆದುಕೊಳ್ಳುವ ಸಂದರ್ಭ ಬರಬಹುದು. ಇದರಿಂದಾಗಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನಿಮ್ಮ ವೈದ್ಯಕೀಯ ಅಗತ್ಯಗಳಿಗೆ ಹಾಗೇ ಕೌಟುಂಬಿಕ ಅಗತ್ಯಗಳಿಗೆ ಹಣ ಹೊಂದಿಸೋದು ಕಷ್ಟವಾಗುತ್ತದೆ.

ಹೀಗಾಗಿ ಇಂತಹ ಸನ್ನಿವೇಶಗಳಲ್ಲಿ, ಗಂಭೀರ ಕಾಯಿಲೆಗಳಿಗೆ ತುತ್ತಾದರೆ ಆಗ ಕ್ರಿಟಿಕಲ್ ಇಲ್ನೆಸ್ ಪ್ಲಾನ್ ಸಹಾಯಕ್ಕೆ ಬರುತ್ತದೆ. ರೆಗ್ಯುಲರ್ ಹೆಲ್ತ್ ಪ್ಲಾನ್ ನಲ್ಲಿ, ವಿಮಾದಾತರು ನಿರ್ದಿಷ್ಟ ಮಿತಿಯೊಳಗೆ ಅಂದರೆ ಕವರೇಜ್ ಲಿಮಿಟ್ ಒಳಗಿನ ಚಿಕಿತ್ಸಾ ವೆಚ್ಚಗಳನ್ನ ಮಾತ್ರ‌ ಭರಿಸುತ್ತಾರೆ ಎನ್ನುವುದು ನಿಮಗೆ ಗೊತ್ತಿದೆ. ಅದೇ ಕ್ರಿಟಿಕಲ್ ಇಲ್ನೆಸ್ ಪ್ಲಾನ್ ಆದರೆ ವಿಮಾ ಕಂಪನಿಯು ರೋಗ ಪತ್ತೆಯಾದ ಇಂತಿಷ್ಟು ಅವಧಿಯ ಬಳಿಕ, ಲಂಪ್ ಸಮ್ ಹಣ ಕೊಡುತ್ತದೆ. ಈ ಹಣವನ್ನ ಯಾವುದೇ ಉದ್ದೇಶಗಳಿಗೆ ಬಳಸಿಕೊಳ್ಳಬಹುದು.

ಕ್ಯಾನ್ಸರ್, ಮೂತ್ರಪಿಂಡ ವೈಫಲ್ಯ, ಹೃದಯಾಘಾತ, ಅಂಧತ್ವ, ಹೃದಯ ಶಸ್ತ್ರಚಿಕಿತ್ಸೆ ಈ ಗಂಭೀರ ಕಾಯಿಲೆ ಅಥವಾ ಕ್ರಿಟಿಕಲ್ ಇಲ್ನೆಸ್ ಪಟ್ಟಿಗೆ ಸೇರುತ್ತದೆ. ಉದಾಹರಣೆಗೆ, 50 ಲಕ್ಷ ರೂಪಾಯಿಗೆ ಯಾರಾದರು ಕ್ರಿಟಿಕಲ್ ಇಲ್ನೆಸ್ ಪ್ಲಾನ್ ತೆಗೆದುಕೊಂಡಿದ್ದರೆ ಸ್ವಲ್ಪ ಸಮಯದ ಬಳಿಕ‌ ಅವರು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗೆ ತುತ್ತಾದರೆ ಆಗ ನಿರ್ದಿಷ್ಟ ಅವಧಿಯ ಬಳಿಕ ವಿಮಾ ಕಂಪೆನಿ ಐವತ್ತು ಲಕ್ಷ ರೂಪಾಯಿ ನೀಡುತ್ತದೆ. ಇದಾದ ಬಳಿಕ ಪಾಲಿಸಿ ಕ್ಲೋಸ್ ಆಗುತ್ತದೆ. ಆದರೆ, ಇದಕ್ಕೆ ಕ್ಲೇಮ್ ಸಲ್ಲಿಸೋದು ಸುಲಭ ಏನಲ್ಲ. ನಿಮಗೆ ರೋಗ ಇದೆ ಎನ್ನುವುದು ಪತ್ತೆಯಾದ ಮೇಲೆ ಕ್ಲೇಮ್ ಸಲ್ಲಿಸಬಹುದು. ಅದೂ ನಿರ್ದಿಷ್ಟ ಅವಧಿಯ ನಂತರ ಮಾತ್ರ‌ ಕ್ಲೇಮ್ ಸಲ್ಲಿಸಬಹುದು. ಅದೂ ನೀವು ಬದುಕಿದ್ದರೆ ಅಂದರೆ ಯಾರ ಹೆಸರಿನಲ್ಲಿ ವಿಮೆ ಇರುತ್ತದೆಯೋ ಅವರು ಬದುಕಿದ್ದರೆ ಮಾತ್ರ ಕ್ಲೇಮ್ ಸಲ್ಲಿಸಬಹುದು. ಆರೋಗ್ಯ ವಿಮೆಯ ಪರಿಭಾಷೆಯಲ್ಲಿ ಇದನ್ನ ‘ಸರ್ವೈವಲ್ ಪೀರಿಯಡ್’ ಅಂತಾ ಹೇಳುತ್ತಾರೆ. ಕ್ರಿಟಿಕಲ್ ಇಲ್ನೆಸ್ ಪ್ಲಾನ್ ನಲ್ಲಿ ಈ ಸರ್ವೈವಲ್‌ ಪೀರಿಯಡ್ ಅನ್ನೋದು ಪ್ರಮುಖ ಅಂಶ.

ಕ್ರಿಟಿಕಲ್ ಇಲ್ನೆಸ್ ಕವರೇಜ್ ನಲ್ಲಿ ಎರಡು ಪ್ರಕಾರಗಳಿವೆ. ಜೀವ ವಿಮಾ ಕಂಪೆನಿಗಳು ರೈಡರ್ ರೂಪದಲ್ಲಿ ಇದರ ಕವರೇಜ್ ಕೊಡೋದು ಒಂದು ವಿಧ. ನೀವು ಟರ್ಮ್‌ ಇನ್ಷುರೆನ್ಸ್ ಜೊತೆಗೆ ಈ ಕವರೇಜ್ ತೆಗೆದುಕೊಳ್ಳಬಹುದು. ಆರೋಗ್ಯ ವಿಮಾದಾತರಯ ಈ ಕ್ರಿಟಿಕಲ್ ಇಲ್ನೆಸ್ ಪ್ಲಾನ್ ಅನ್ನ ಪ್ರತ್ಯೇಕವಾಗಿ ಅಥವಾ ರೈಡರ್ ಆಗಿ ಕೊಡುತ್ತಾರೆ. ವಿಮಾ ಕಂಪೆನಿಗಳು ಸುಮಾರು 64 ಬಗೆಯ ಕ್ರಿಟಿಕಲ್ ಇಲ್ನೆಸ್ ಗಳಿಗೆ ಕವರೇಜ್ ಕೊಡುತ್ತಿವೆ. ಇವುಗಳಲ್ಲಿ ಸರ್ವೈವಲ್ ಪೀರಿಯಡ್ ಅಂದರೆ ಜೀವಿತಾವಧಿಯು 15 ರಿಂದ 30 ದಿನಗಳು. ಎಚ್ ಡಿ ಎಫ್ ಸಿ ಎರ್ಗೋ ಕ್ರಿಟಿಕಲ್ ಪ್ಲಾಟಿನಂ ಪ್ಲಾನ್ ನಲ್ಲಿ ಸರ್ವೈವಲ್ ಪೀರಿಯಡ್ 30 ದಿನಗಳು. ಆದಿತ್ಯಾ ಬಿರ್ಲಾ ಆ್ಯಕ್ಟಿವ್ ಸೆಕ್ಯೂರ್‌ನಲ್ಲಿ ಈ ಅವಧಿ 15 ದಿನಗಳು.

ಆರೋಗ್ಯ ವಿಮೆಯಲ್ಲಿ ವೇಟಿಂಗ್ ಪೀರಿಯಡ್ ಮತ್ತು ಸರ್ವೈವಲ್ ಪೀರಿಯಡ್ ಎರಡೂ ಒಂದೇ ಅಂತಾ ಕೆಲವರು ಭಾವಿಸುತ್ತಾರೆ. ಆದರೆ ಇವೆರಡರ ನಡುವೆ ಅಜಗಜಾಂತರ ವ್ಯತ್ಯಾಸ ಇದೆ. ಆರೋಗ್ಯ ವಿಮಾ ಪಾಲಿಸಿಯಲ್ಲಿ ವೇಟಿಂಗ್‌ ಪೀರಿಯಡ್ ಇರತ್ತೆ, ಆದರೆ ಸರ್ವೈವಲ್ ಪೀರಿಯಡ್ ಷರತ್ತು ಇರುವುದಿಲ್ಲ. ವಿಮೆ ಪಡೆದವರು ಎಷ್ಟು ದಿನಗಳಿಂದ ಯಾವ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನುವುದರ ಮೇಲೆ ಈ ವೇಟಿಂಗ್ ಪೀರಿಯಡ್ ನಿರ್ಧರಿಸಲ್ಪಡುತ್ತದೆ. ಇದು 30 ದಿನಗಳಿಂದ 6 ತಿಂಗಳವರೆಗೆ ‌ಇರುತ್ತದೆ. ಆದರೆ ಈ ಸರ್ವೈವಲ್ ಪೀರಿಯಡ್ ಎನ್ನುವುದು ಕ್ರಿಟಿಕಲ್ ಇಲ್ನೆಸ್ ಅಥವಾ ಗಂಭೀರ ಕಾಯಿಲೆಗೆ ಸಂಬಂಧಿಸಿದ್ದಾಗಿದೆ. ವೇಟಿಂಗ್‌ ಪೀರಿಯಡ್ ಸಾಮಾನ್ಯವಾಗಿ ಸರ್ವೈವಲ್ ಪೀರಿಯಡ್ ಗಿಂತ ಹೆಚ್ಚಿನ ಅವಧಿಗೆ ಇರುತ್ತದೆ. ಈ ವೇಟಿಂಗ್‌ ಪೀರಿಯಡ್ ಮುಗಿಯುವವರೆಗೂ ಕ್ಲೇಮು ಸಲ್ಲಿಸಲು ವಿಮೆ ಪಡೆದವರು ಕಾಯಬೇಕಾಗತ್ತದೆ. ಸರ್ವೈವಲ್ ಪೀರಿಯಡ್ ನಲ್ಲಾದರೆ ರೋಗ ಪತ್ತೆಯಾದ ತಕ್ಷಣ ನೀವು ಕ್ಲೇಮ್ ಸಲ್ಲಿಸಬಹುದು.‌ ಆದರೆ ನಿರ್ದಿಷ್ಟ ಸಮಯದ ನಂತರ ಮಾತ್ರ ನಿಮಗೆ ಪಾವತಿ ಆಗುತ್ತದೆ.

ಪ್ರೋ ಮೋರ್ ನ ಸಹ ಸಂಸ್ಥಾಪಕರು ಮತ್ತು ಸಿ ಎಫ್‌ ಪಿ ಆದ ನಿಶಾ ಸಾಂಘ್ವಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಾರೆ. ಆರೋಗ್ಯ ವಿಮಾ ಪಾಲಿಸಿಯು ಡೆತ್ ಬೆನಿಫಿಟ್ ಕವರೇಜ್ ಕೊಡಲ್ಲ. ಹೀಗಾಗಿ, ಕ್ರಿಟಿಕಲ್ ಹೆಲ್ತ್ ಪ್ಲಾನ್ ನಲ್ಲಿ ಸರ್ವೈವಲ್ ಪೀರಿಯಡ್ ಕ್ಲಾಸ್ ಸರಿಯಾಗಿ ಓದಬೇಕು. ಒಂದು ವೇಳೆ ಈ ಗಂಭೀರ ಕಾಯಿಲೆಯಿಂದಾಗಿ ವಿಮೆ ಪಡೆದವರು ಸಾವನ್ನಪ್ಪಿದರೆ, ವಿಮಾ ಕಂಪೆನಿಯು ಯಾವುದೇ ಹಣ ಕೊಡುವುದಿಲ್ಲ. ಜೊತೆಗೆ ಯಾವುದೇ ಡೆತ್ ಬೆನಿಫಿಟ್ ಕೂಡ ಸಿಗುವುದಿಲ್ಲ.

ಗಂಭೀರ ಕಾಯಿಲೆ ಪತ್ತೆ ಆದ ತಕ್ಷಣ ಪಾಲಿಸಿ ಪಡೆದವರಿಗೆ ದೊಡ್ಡ ಮೊತ್ತವನ್ನು ವಿಮಾ ಕಂಪೆನಿಗಳು ಪಾವತಿಸಬೇಕು ಎಂದಾದರೆ ಇದು ವಿಮಾ ಕಂಪೆನಿಗಳ ಮೇಲೆ ಬೃಹತ್ ಪ್ರಮಾಣದ ಹೊರೆಯಾಗುತ್ತದೆ. ಹೀಗಾಗಿ, ವಿಮಾ ಕಂಪೆನಿಗಳು, ಕಾಯಿಲೆ ಪತ್ತೆಯಾದ ಬಳಿಕ ಇಂತಿಷ್ಟು ದಿನ ಬದುಕಿದ್ದರೆ ಮಾತ್ರ ಹಣ ಕೊಡುತ್ತವೆ. ಒಂದು ವೇಳೆ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದೆ ಎಂದು ಪತ್ತೆಯಾದರೆ ಆಗ ಅವರು ಹೆಚ್ಚು ದಿನ ಬದುಕಿರುವ ಸಾಧ್ಯತೆಗಳು ತೀರಾ ಕಡಿಮೆ. ಹೀಗಾಗಿ, ವಿಮಾ ಕಂಪೆನಿಗಳು ಇಂತಹ ಕ್ಲೇಮ್ ಗಳನ್ನು ಪಾವತಿಸುವುದನ್ನು ತಪ್ಪಿಸಲು ನೋಡುತ್ತವೆ. ಇದಕ್ಕಾಗಿ ಕ್ರಿಟಿಕಲ್ ಇಲ್ನೆಸ್ ಪ್ಲಾನ್ ನಲ್ಲಿ ವಿಮಾ‌ ಕಂಪೆನಿಗಳು ಸರ್ವೈವಲ್ ಕ್ಲಾಸ್ ಸೇರ್ಪಡೆ ಮಾಡಿವೆ.

ನಿಮಗೆ ಜೆನಿಟಿಕ್ ಆಗಿ ಅಂದರೆ ಪೂರ್ವಜರಿಗಿರೋ ಕಾಯಿಲೆ ಬಳುವಳಿ ರೀತಿ ಬಂದಿದ್ದರೆ ನೀವು ನಿಮ್ಮ‌ ಕುಟುಂಬದ ಆದಾಯ ಗಳಿಸುವ ಏಕೈಕ ವ್ಯಕ್ತಿ ಆಗಿದ್ದರೆ ನೀವು ಖಂಡಿತವಾಗಿ ಕ್ರಿಟಿಕಲ್ ಇಲ್ನೆಸ್ ಪ್ಲಾನ್ ತೆಗೆದುಕೊಳ್ಳಬೇಕು. ರೈಡರ್ ಬದಲಾಗಿ ಪ್ರತ್ಯೇಕ ಪಾಲಿಸಿ ತೆಗೆದುಕೊಳ್ಳೋದು ಉತ್ತಮ ಆಯ್ಕೆ. ಅದೇ ರೀತಿ ನೀವು ಯಾವುದೇ ಕ್ರಿಟಿಕಲ್ ಇಲ್ನೆಸ್ ಪ್ಲಾನ್ ಆದರೂ ಅದರ ಸರ್ವೈವಲ್ ಪೀರಿಯಡ್ ಗಮನ ಕೊಡಿ. ಕನಿಷ್ಠ ಸರ್ವೈವಲ್ ಪೀರಿಯಡ್ ಇರೋ ಪಾಲಿಸಿ ಖರೀದಿ ಮಾಡಿ. ಇದು ನಿಮಗೆ ಕ್ಲೇಮ್ ಸುಲಭವಾಗಿ ಸಿಗುವುದಕ್ಕ ಸಹಕಾರಿಯಾಗುತ್ತದೆ. ಒಂದು ವೇಳೆ ಸರ್ವೈವಲ್ ಪೀರಿಯಡ್ ನಲ್ಲಿ ಪಾಲಿಸಿ‌ ಪಡೆದವರು ಮೃತಪಟ್ಟರೆ ಆಗ ವಿಮಾ ಕಂಪೆನಿಯು ಯಾವುದೇ ಕ್ಲೇಮ್ ಪಾವತಿಸುವುದಿಲ್ಲ.

Published: April 24, 2024, 16:00 IST