ಮದುವೆಗೆ ಸಿದ್ಧರಾಗುವ ಮುನ್ನ ಈ ವಿಮೆ ಗೊತ್ತಿರಬೇಕು!

ಮೈಸೂರಿನ ಅಮರ್‌ ತನ್ನ ಮಗಳ ವಿವಾಹಕ್ಕೆ ಸಿದ್ಧವಾಗುತ್ತಿದ್ದಾರೆ. ಮದುವೆಗೆ ಬೇಕಾಗಿರುವ ಹೋಟೆಲ್‌ಗಳು, ಸಂಗೀತಗಾರರು, ಬ್ಯೂಟಿಶಿಯನ್‌ಗಳು ಸೇರಿದಂತೆ ಎಲ್ಲರನ್ನೂ ಅವರು ಬುಕ್ ಮಾಡಿದ್ದಾರೆ. ವಿವಾಹಕ್ಕೆ ಇನ್ನು ಬರಿ 15 ದಿನಗಳು ಬಾಕಿ ಇವೆ. ದುರಾದೃಷ್ಟವಶಾತ್ ಅವರ ಅಳಿಯನಾಗುವವ ಅಪಘಾತಕ್ಕೀಡಾದ. ಇದರಿಂದ ವಿವಾಹವನ್ನು ಮುಂದೂಡುವುದು ಅನಿವಾರ್ಯವಾಯಿತು. ಇದರಿಂದ ಅಮರ್‌ಗೆ ಲಕ್ಷಾಂತರ ರೂಪಾಯಿ ನಷ್ಟವಾಯಿತು. ಮಗಳ ಮದುವೆಗೆ ಅಮರ್ ಇನ್ಶುರೆನ್ಸ್ ತೆಗೆದುಕೊಂಡಿದ್ದರೆ, ಇಷ್ಟು ನಷ್ಟವನ್ನು ಅವರು ಎದುರಿಸಬೇಕಿಲಿಲ್ಲ.

ಮದುವೆಗೆ ಸಿದ್ಧರಾಗುವ ಮುನ್ನ ಈ ವಿಮೆ ಗೊತ್ತಿರಬೇಕು!

ಮೈಸೂರಿನ ಅಮರ್‌ ತನ್ನ ಮಗಳ ವಿವಾಹಕ್ಕೆ ಸಿದ್ಧವಾಗುತ್ತಿದ್ದಾರೆ. ಮದುವೆಗೆ ಬೇಕಾಗಿರುವ ಹೋಟೆಲ್‌ಗಳು, ಸಂಗೀತಗಾರರು, ಬ್ಯೂಟಿಶಿಯನ್‌ಗಳು ಸೇರಿದಂತೆ ಎಲ್ಲರನ್ನೂ ಅವರು ಬುಕ್ ಮಾಡಿದ್ದಾರೆ. ವಿವಾಹಕ್ಕೆ ಇನ್ನು ಬರಿ 15 ದಿನಗಳು ಬಾಕಿ ಇವೆ. ದುರಾದೃಷ್ಟವಶಾತ್ ಅವರ ಅಳಿಯನಾಗುವವ ಅಪಘಾತಕ್ಕೀಡಾದ. ಇದರಿಂದ ವಿವಾಹವನ್ನು ಮುಂದೂಡುವುದು ಅನಿವಾರ್ಯವಾಯಿತು. ಇದರಿಂದ ಅಮರ್‌ಗೆ ಲಕ್ಷಾಂತರ ರೂಪಾಯಿ ನಷ್ಟವಾಯಿತು.
ಮಗಳ ಮದುವೆಗೆ ಅಮರ್ ಇನ್ಶುರೆನ್ಸ್ ತೆಗೆದುಕೊಂಡಿದ್ದರೆ, ಇಷ್ಟು ನಷ್ಟವನ್ನು ಅವರು ಎದುರಿಸಬೇಕಿಲಿಲ್ಲ.

ವಿವಾಹ ಹಠಾತ್ ರದ್ದಾಗುವುದು, ಅಮೂಲ್ಯ ಸಾಮಗ್ರಿಗಳ ಕಳ್ಳತನ, ಅಪಘಾತ ಮತ್ತು ನೈಸರ್ಗಿಕ ವಿಕೋಪದಂತಹ ಅಪಾಯಗಳನ್ನು ಕವರ್ ಮಾಡಲು ಮದುವೆ ವಿಮೆ ಒಂದು ಉತ್ತಮ ಆಯ್ಕೆಯಾಗಿದೆ. ವಿವಾಹ ಎಂಬುದು ಜೀವನದ ಒಂದು ಘಟನೆ. ಇದರಲ್ಲಿ ವೆಚ್ಚಕ್ಕೆ ಯಾವುದೇ ಮಿತಿ ಇಲ್ಲ. ಈ ಶುಭ ಸಂದರ್ಭದಲ್ಲಿ, ಎಲ್ಲರೂ ತಮ್ಮ ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಾರೆ. ಹಲವು ಕುಟುಂಬಗಳು ಮದುವೆಗೆ ಅಂತ ಒಂದು ಅಥವಾ ಎರಡು ವರ್ಷಗಳಷ್ಟು ಮೊದಲಿನಿಂದಲೇ ಶಾಪಿಂಗ್ ಮಾಡುತ್ತಾರೆ. ಅಮರ್‌ ಮಾಡಿದ ಹಾಗೆಯೇ ಜನರು ಹೋಟೆಲ್, ಕೇಟರಿಂಗ್‌ ಮತ್ತು ಬ್ಯೂಟಿಶಿಯನ್‌ಗಳನ್ನು ತಿಂಗಳುಗಳ ಮೊದಲೇ ಬುಕ್ ಮಾಡುತ್ತಾರೆ.

ಅಖಿಲ ಭಾರತ ವ್ಯಾಪಾರಿಗಳ ಸಂಘಟನೆ ಸಿಎಐಟಿ ಪ್ರಕಾರ, ನವೆಂಬರ್ 23 ರಿಂದ ಡಿಸೆಂಬರ್ 15 ರ ವರೆಗೆ ದೇಶದಲ್ಲಿ 38 ಲಕ್ಷ ಮದುವೆಗಳು ನಡೆದಿವೆ. ಈ ಮದುವೆಗಳ ಒಟ್ಟು ವೆಚ್ಚ ಸುಮಾರು ಐದು ಲಕ್ಷ ಕೋಟಿ ರೂ.ಗಳು. Matrimony.com ಪ್ರಕಾರ, ಪ್ರತಿ ವರ್ಷವೂ 1.1 ರಿಂದ 1.3 ಕೋಟಿ ಮದುವೆಗಳು ನಡೆಯುತ್ತವೆ. ಕನ್ಸಲ್ಟನ್ಸಿ ಸಂಸ್ಥೆ ಕೆಪಿಎಂಜಿ ವರದಿ ಪ್ರಕಾರ, ಭಾರತದ ಮದುವೆ ಉದ್ಯಮ 3.71 ಲಕ್ಷ ಕೋಟಿ ರೂ.ಗಳದ್ದಾಗಿದೆ. ಇದು ವಾರ್ಷಿಕ 25 ರಿಂದ 30 ಪರ್ಸೆಂಟ್ ದರದಲ್ಲಿ ಏರುತ್ತಿದೆ. ವಿವಾಹದ ತಯಾರಿಯಲ್ಲಿ ಕಳ್ಳತನ, ದರೋಡೆ, ಅಗ್ನಿ ಆಕಸ್ಮಿಕ ಅಥವಾ ಅಪಘಾತ ಘಟಿಸಿದರೆ, ಕುಟುಂಬಗಳು ದೊಡ್ಡ ವಿಪತ್ತನ್ನು ಎದುರಿಸಬೇಕಾಗುತ್ತದೆ.

ವಿವಾಹ ವಿಮೆ ಇಂತಹ ನಷ್ಟಗಳನ್ನು ಭರಿಸುತ್ತದೆ. ವೈಯಕ್ತಿಕ ಹಣಕಾಸು ಪರಿಣಿತ ನಿಶಾ ಸಾಂಗ್ವಿ ಹೇಳುವಂತೆ ಭಾರತದಲ್ಲಿ ವಿವಾಹ ವಿಮೆ ಇನ್ನೂ ಅಷ್ಟು ಜನಪ್ರಿಯವಾಗಿಲ್ಲ. ಈ ವಿಮೆಯನ್ನು ಮಾಡಿಸಿದರೆ ವಿವಾಹದ ಸಮಯದಲ್ಲಿ ಉಂಟಾಗುವ ಯಾವುದೇ ದುರ್ಘಟನೆಯ ಅಪಾಯದಿಂದ ಬಚಾವಾಗಬಹುದು. ವಿವಾಹಕ್ಕೆ ಸಾಮಾನ್ಯವಾಗಿ ಹೆಚ್ಚೆಂದರೆ 20-30 ಲಕ್ಷ ರೂ. ಖರ್ಚು ಮಾಡಲಾಗುತ್ತದೆ. ಇದರ 1-1.5 ಪರ್ಸೆಂಟ್ ವೆಚ್ಚ ಮಾಡಿದರೆ, ಹಲವು ರೀತಿಯ ಚಿಂತೆಗಳನ್ನು ನೀವು ನಿವಾರಿಸಿಕೊಳ್ಳಬಹುದು. ಇದನ್ನು ನಾವು ಹಣದುಬ್ಬರದ ದೃಷ್ಟಿಕೋನದಿಂದ ನೋಡಿದರೆ, ಇದು ತುಂಬಾ ಅಗ್ಗದ ಆಯ್ಕೆ. ಹೀಗಾಗಿ, ಇನ್ಶುರೆನ್ಸ್ ಕವರ್ ತೆಗೆದುಕೊಳ್ಳುವುದು ಉತ್ತಮ.

ಹಾಗಾದರೆ, ವಿವಾಹ ವಿಮೆಯಲ್ಲಿ ಯಾವುದನ್ನೆಲ್ಲ ಕವರ್ ಮಾಡಲಾಗುತ್ತದೆ ಎನ್ನುವುದನ್ನು ತಿಳಿಯೋಣ. ವಿವಾಹದ ಇನ್ಶುರೆನ್ಸ್‌ನಲ್ಲಿ ರಿಸ್ಕ್ ಕವರೇಜ್‌ನ ವ್ಯಾಪ್ತಿ ಸಮಯ ಕಳೆದ ಹಾಗೆ ಹೆಚ್ಚುತ್ತಲೇ ಇದೆ. ಕಾನೂನು ಅಥವಾ ಅಪರಾಧದ ಘಟನೆಗಳಿಂದ ವಿವಾಹದ ಸ್ಥಳಕ್ಕೆ ಆಗುವ ಹಾನಿಯನ್ನು ಈಗ ವಿಮೆ ಕವರ್‌ನಲ್ಲಿ ಸೇರಿಸಲಾಗಿದೆ. ಆಭರಣ, ಬಟ್ಟೆಗಳು ಅಥವಾ ಇತರ ಅಮೂಲ್ಯ ಐಟಂಗಳು ಕಳ್ಳತನವಾದರೆ ಆ ನಷ್ಟಕ್ಕೆ ವಿಮೆ ಕಂಪನಿ ಮರುಪಾವತಿ ಮಾಡುತ್ತದೆ. ಮಳೆ, ಪ್ರವಾಹ ಅಥವಾ ಭೂಕಂಪದಿಂದಾಗಿ ಹಾನಿಯಾದರೆ, ಅದನ್ನೂ ಕವರ್ ಮಾಡಲಾಗಿದೆ. ವಿವಾಹ ವಿಮೆ ಪಾಲಿಸಿಗಳಲ್ಲಿ ವೈಯಕ್ತಿಕ ಅಪಘಾತ ಕವರ್ ಅನ್ನೂ ಈಗ ವಿಮೆ ಕಂಪನಿಗಳು ಕೊಡುತ್ತಿವೆ. ಈ ಪಾಲಿಸಿಯಲ್ಲಿ ಸೇರಿರುವ ಎಲ್ಲರಿಗೂ ಪರಿಹಾರ ಸಿಗುತ್ತದೆ. ಅವರಿಗೆ ಗಾಯವಾದರೆ, ಅಂಗವೈಕಲ್ಯವಾದರೆ ಮತ್ತು ಮರಣವನ್ನೂ ಕೂಡ ಕವರ್ ಮಾಡಲಾಗಿದೆ. ಆದರೆ, ವಿವಾಹ ವಿಮೆ ಪಾಲಿಸಿಗಳಲ್ಲಿ ಕೆಲವು ಷರತ್ತುಗಳೂ ಇವೆ. ಇಂತಹ ಷರತ್ತುಗಳನ್ನು ಮುಂದಿಟ್ಟು ನಿಮ್ಮ ಕ್ಲೇಮ್ ಅನ್ನು ವಿಮೆ ಕಂಪನಿಗಳು ತಿರಸ್ಕರಿಸಬಹುದು.

ಯಾವುದೇ ವಿವಾದ ಅಥವಾ ವಾಗ್ವಾದದ ಕಾರಣಕ್ಕೆ ವಿವಾಹ ಕಾರ್ಯಕ್ರಮ ರದ್ದಾದರೆ, ಆಗ ಉಂಟಾದ ನಷ್ಟವನ್ನು ವಿಮೆ ಕಂಪನಿ ಮರುಪಾವತಿ ಮಾಡುವುದಿಲ್ಲ. ವಿವಾಹದ ಸಮಯದಲ್ಲಿ ಯಾವುದೇ ನಿರ್ಲಕ್ಷ್ಯ ಅಥವಾ ಉದ್ದೇಶಪೂರ್ವಕ ಹಾನಿ ಮಾಡಿದ್ದರೂ ಕೂಡ ಪರಿಹಾರ ಸಿಗುವುದಿಲ್ಲ. ಆತ್ಮಹತ್ಯೆ ಅಥವಾ ಆತ್ಮಹತ್ಯೆ ಯತ್ನ, ಸ್ವಯಂ ಹಾನಿ ಇತ್ಯಾದಿಯೂ ಈ ವಿಮೆ ಪಾಲಿಸಿ ಅಡಿಯಲ್ಲಿ ಕವರ್ ಆಗಿರುವುದಿಲ್ಲ.

ಫ್ಯೂಚರ್ ಜನರಾಲಿ, ಐಸಿಐಸಿಐ ಲಾಂಬಾರ್ಡ್‌, ಎಚ್‌ಡಿಎಫ್‌ಸಿ ಎರ್ಗೋ, ಬಜಾಜ್ ಅಲಾಯನ್ಸ್ ಜನರಲ್ ಇನ್ಶುರೆನ್ಸ್ ಕಂಪನಿಗಳು ವಿವಾಹ ವಿಮೆ ಮಾರಾಟ ಮಾಡುತ್ತವೆ. ವಿಮೆ ಕಂಪನಿಗಳು ತುಂಬಾ ಕಡಿಮೆ ಸಂಖ್ಯೆಯ ಕ್ಲೇಮ್‌ಗಳಿಗೆ ಪಾವತಿ ಮಾಡುತ್ತಿವೆ. ಈ ಪಾಲಿಸಿ ಅಡಿಯಲ್ಲಿ ನಿಮ್ಮ ಒಟ್ಟು ವಿವಾಹ ಬಜೆಟ್‌ನ 1 ರಿಂದ 1.5 ಪರ್ಸೆಂಟ್ ಮಾತ್ರ ನೀವು ವೆಚ್ಚ ಮಾಡಿದರೆ ಸಾಕು. ನಿಮ್ಮ ವಿವಾಹದ ಬಜೆಟ್ 20 ಲಕ್ಷ ರೂ. ಆಗಿದ್ದರೆ, ನೀವು 30 ಸಾವಿರ ರೂ. ವೆಚ್ಚ ಮಾಡಿದರೆ ಸಾಕು. ಹಣದುಬ್ಬರದ ಈ ಸಮಯದಲ್ಲಿ ಈ ಮೊತ್ತ ಅಷ್ಟೇನೂ ದೊಡ್ಡದಾಗುವುದಿಲ್ಲ. ವಿವಾಹದ ದಿನಕ್ಕೂ ಎರಡು ವರ್ಷಗಳ ಮೊದಲಿನಿಂದ ವಿಮೆ ಕವರ್ ಅನ್ನು ಕೊಡುತ್ತವೆ.

ಕೆಲವು ಪಾಲಿಸಿಗಳಲ್ಲಿ ರಿಸ್ಕ್ ಒಂದು ವರ್ಷದಿಂದ ಕವರ್ ಆಗುತ್ತದೆ. ಎರಡರಿಂದ ಮೂರು ವರ್ಷಗಳ ಮೊದಲೇ ಪಾಲಿಸಿ ಖರೀದಿ ಮಾಡುವುದು ಉತ್ತಮ. ಒಂದು ವಾರಕ್ಕೂ ಮೊದಲೂ ಕೂಡ ನೀವು ಈ ವಿಮೆ ಖರೀದಿ ಮಾಡಬಹುದು. ವಿವಾಹದ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಪಾಲಿಸಿ ಖರೀದಿ ಮಾಡುವುದು ಉತ್ತಮ. ನಿಮ್ಮ ಕುಟುಂಬ ವಿವಾಹಕ್ಕೆ ಸಿದ್ಧವಾಗುತ್ತಿದೆ ಎಂದಾದರೆ, ಈ ಶುಭ ಸಂದರ್ಭಕ್ಕೆ ಕವರ್ ಮಾಡಲು ಇನ್ಶುರೆನ್ಸ್ ತೆಗೆದುಕೊಳ್ಳುವುದು ಉತ್ತಮ. ಬೇರೆ ಬೇರೆ ಇನ್ಶುರೆನ್ಸ್ ಕಂಪನಿಗಳು ಬೇರೆ ಬೇರೆ ನಿಯಮ ಮತ್ತು ಷರತ್ತುಗಳನ್ನು ಹೊಂದಿರುತ್ತವೆ. ಹೀಗಾಗಿ, ಪಾಲಿಸಿ ಖರೀದಿ ಮಾಡುವುದಕ್ಕೂ ಮೊದಲೇ ಇದರ ಬಗ್ಗೆ ತಿಳಿದುಕೊಂಡಿರಿ. ಏನನ್ನು ಕವರ್ ಮಾಡಲಾಗುತ್ತದೆ, ಯಾವುದು ಕವರ್ ಆಗುವುದಿಲ್ಲ ಎಂಬುದು ಗೊತ್ತಿರಲಿ. ನಿಮ್ಮ ಖುಷಿಯನ್ನು ಹೆಚ್ಚಿಸಲು ನಿಮ್ಮ ಪಾಲಿಸಿಯಲ್ಲಿ ಸೂಕ್ತ ವಿಮೆ ಕವರ್ ಅನ್ನು ಸೇರಿಸಿಕೊಳ್ಳಿ!

Published: April 25, 2024, 12:00 IST