ವಾಣಿಯವರ ಎರಡೂ ಕಿಡ್ನಿಗಳು ಕೆಲಸ ಮಾಡುವುದನ್ನು ನಿಲ್ಲಿಸಿವೆ. ಆಕೆ ಬದುಕುಳಿಯುವುದಕ್ಕೆ ಇರುವ ಒಂದೇ ಮಾರ್ಗವೆಂದರೆ, ತುರ್ತಾಗಿ ಕಿಡ್ನಿ ಕಸಿ ಮಾಡಿಸುವುದು. ಆಕೆಯ ಪುತ್ರಿ ಅನನ್ಯಾ ದಾನಿಯಾಗಿ ಹೊಂದಿಕೆಯಾಗುತ್ತಾಳೆ. ಆದರೆ, ಅಂಗ ಕಸಿಗೆ ಸಂಬಂಧಿಸಿದ ಎಲ್ಲ ವೆಚ್ಚಗಳೂ ವಾಣಿ ಮತ್ತು ಅನನ್ಯಾಳ ಇಂಡಿವಿಜುವಲ್ ಹೆಲ್ತ್ ಇನ್ಶುರೆನ್ಸ್ ಪಾಲಿಸಿಯಲ್ಲಿ ಸೇರಿಸಿಲ್ಲ. ಹೀಗಾಗಿ, ಅವರ ಬಳಿ ಯಾವುದೇ ಆಪ್ಷನ್ ಇಲ್ಲ. ಈ ದುಬಾರಿ ವೆಚ್ಚವನ್ನು ವಾಣಿ ತನ್ನ ಜೇಬಿನಿಂದಲೇ ಖರ್ಚು ಮಾಡಬೇಕಾಗಿದೆ.
10 ಲಕ್ಷ ಜನರಲ್ಲಿ 0.86 ಇರುವ ಭಾರತದ ಅಂಗ ದಾನ ದರ ಇಡೀ ವಿಶ್ವದಲ್ಲೇ ಅತಿ ಕಡಿಮೆ ಇದೆ. ಡೇಟಾ ಹೇಳುವಂತೆ, 2023 ರ ವೇಳೆಗೆ ಅಂಗ ಸ್ವೀಕೃತಿದಾರರ ಕಾಯುವಿಕೆ ಪಟ್ಟಿ 5 ಲಕ್ಷಕ್ಕೂ ಮೀರಿ ಬೆಳೆದಿದೆ. ಸೂಕ್ತ ದಾನಿಯನ್ನು ಹುಡುಕಲು ಆಗದೇ ಪ್ರತಿ ದಿನ 20 ಭಾರತೀಯರು ಸಾವನ್ನಪ್ಪುತ್ತಿದ್ದಾರೆ.
ಈ ಇಡೀ ಪ್ರಕ್ರಿಯೆಯು ಆರ್ಥಿಕವಾಗಿ ದುಬಾರಿಯಾಗಿರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಸರಾಸರಿಯಾಗಿ, ಕಿಡ್ನಿ ಕಸಿಗೆ ಖಾಸಗಿ ಆಸ್ಪತ್ರೆಯಲ್ಲಿ ಸುಮಾರು 15 ಲಕ್ಷ ರೂ. ಬೇಕಾಗುತ್ತದೆ. ಇನ್ನು ಹೃದಯ ಕಸಿಗೆ 40 ಲಕ್ಷ ರೂ. ಬೇಕಾಗುತ್ತದೆ. ಲಿವರ್ ಕಸಿಗೆ ಸುಮಾರು 25 ಲಕ್ಷ ರೂ. ಬೇಕಾಗುತ್ತದೆ.
ಸರಿಯಾದ ವಿಮೆ ಕವರೇಜ್ ಇಲ್ಲದಿದ್ದರೆ ಈ ಇಡೀ ಪ್ರಕ್ರಿಯೆಯ ವೆಚ್ಚ ಭರಿಸುವುದು ನಿಜಕ್ಕೂ ಕಷ್ಟದ ಸಂಗತಿ. ಆದರೆ, ಮಾರ್ಕೆಟ್ನಲ್ಲಿ ಈಗ ಇರುವ ಇನ್ಶೂರೆನ್ಸ್ ಪಾಲಿಸಿಗಳು ದಾನಿ ಮತ್ತು ಸ್ವೀಕರಿಸುವವರಿಗೆ ಬೇಕಾದ ಅಗತ್ಯ ರಕ್ಷಣೆಯಲ್ಲಿ ಸ್ವಲ್ಪ ಮಾತ್ರ ಒದಗಿಸುತ್ತವೆ. ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ವಾಣಿ ಉದಾಹರಣೆಯನ್ನೇ ತೆಗೆದುಕೊಳ್ಳೋಣ.
ವಾಣಿ ಹೆಲ್ತ್ ಇನ್ಶುರೆನ್ಸ್ ಪಾಲಿಸಿಯಲ್ಲಿ ಅವಳ ಶಸ್ತ್ರಚಿಕಿತ್ಸೆ, ಡಯಾಗ್ನಾಸ್ಟಿಕ್ ಟೆಸ್ಟ್ಗಳು ಮತ್ತು ಇತರ ಪ್ರೊಸೀಜರ್ಗಳು ಮಾತ್ರ ಕವರ್ ಆಗುತ್ತವೆ. ಅದೂ ಕೂಡಾ ಪಾಲಿಸಿ ವಿಮೆ ಮೊತ್ತದವರೆಗೆ ಮಾತ್ರ ಅನ್ವಯವಾಗುತ್ತದೆ. ಆದರೆ, ದಾನ ಮಾಡುತ್ತಿರುವ ವ್ಯಕ್ತಿಗೆ ಸಂಬಂಧಿಸಿದ ಎಲ್ಲ ಖರ್ಚುಗಳನ್ನೂ ಅದು ಸೇರಿಸುವುದಿಲ್ಲ. ಅಂದರೆ, ಅನನ್ಯಾ ಅವರಿಂದ ಅಂಗ ತೆಗೆಯುವ ಖರ್ಚುಗಳು ಇದರಲ್ಲಿ ಸೇರಿರುವುದಿಲ್ಲ. ಹೀಗಾಗಿ ಅನನ್ಯಾ ಅವರ ಆಸ್ಪತ್ರೆ ಖರ್ಚು ಮತ್ತು ಚೇತರಿಸಿಕೊಳ್ಳುವ ಖರ್ಚುಗಳನ್ನೆಲ್ಲ ವಾಣಿಯವರೇ ಭರಿಸಬೇಕಾಗುತ್ತದೆ.
ಇನ್ನು ಅನನ್ಯಾ ಅವರ ಇನ್ಶುರೆನ್ಸ್ ಪಾಲಿಸಿ ಕೂಡಾ, ಅಂಗ ದಾನ ಮಾಡುವಾಗ ಆಗುವ ಖರ್ಚುಗಳನ್ನು ಭರಿಸುವುದಿಲ್ಲ. ಹೀಗಾಗಿ, ಈ ಕಿಡ್ನಿ ಕಸಿ ವಿಷಯದಲ್ಲಿ ಅನನ್ಯಾ ರೋಗಿಯಾದರೆ ಅಥವಾ ಅಥವಾ ಆಸ್ಪತ್ರೆಗೆ ದಾಖಲಾದರೆ, ಅವಳ ಪಾಲಿಸಿ ಅವಳ ಯಾವ ಕ್ಲೇಮ್ ಅನ್ನೂ ಒಪ್ಪುವುದಿಲ್ಲ. ಒಟ್ಟಾರೆಯಾಗಿ, ದಾನಕ್ಕೆ ಸಂಬಂಧಿಸಿದ ಎಲ್ಲ ಹಣಕಾಸಿನ ವೆಚ್ಚವನ್ನೂ ಕಿಡ್ನಿ ತೆಗೆದುಕೊಳ್ಳುವವವರೇ ಭರಿಸಬೇಕಾಗುತ್ತದೆ.
ಅಂಗ ದಾನ ಪಡೆಯುವವರು ಮತ್ತು ಕೊಡುವವರಿಬ್ಬರೂ ಯಾವುದೇ ವಿಮೆ ಕವರೇಜ್ ಹೊಂದಿಲ್ಲದಿದ್ದರೆ, ಕಸಿ ಮಾಡಿದ ನಂತರವೂ ಅವರಿಗೆ ಅಂತಹ ವಿಮೆ ಸಿಗುವುದಿಲ್ಲ. ಯಾಕೆಂದರೆ, ಸರ್ಜರಿ ನಂತರ ಇಬ್ಬರೂ ಪದೇ ಪದೇ ಕ್ಲೇಮ್ ಮಾಡುತ್ತಾರೆ ಎಂದು ಇನ್ಶುರೆನ್ಸ್ ಕಂಪನಿಗಳು ಊಹಿಸುತ್ತವೆ. ಹೀಗಾಗಿ, ಅಂತಹವರಿಗೆ ಕವರೇಜ್ ಕೊಡುವುದೇ ಇಲ್ಲ. ಕೆಲವು ವಿಮೆಗಳಲ್ಲಿ ಕವರೇಜ್ ಕೊಟ್ಟಿದ್ದರೂ, ಅದರಲ್ಲಿ ಹಲವು ಷರತ್ತುಗಳಿರುತ್ತವೆ. ದಾನ ಮಾಡಿದ ಅಥವಾ ಪಡೆದ ಅಂಗಕ್ಕೆ ಸಂಬಂಧಿಸಿದ ಎಲ್ಲ ಕ್ಲೇಮ್ಗಳನ್ನು ಹೊರಗಿಡುವುದು ಅಥವಾ ಸಾಮಾನ್ಯ ಪ್ರೀಮಿಯಂಗಳು ಅಥವಾ ಕಾಯುವಿಕ ಸಮಯಕ್ಕಿಂತ ಹೆಚ್ಚು ಮೊತ್ತ ಅಥವಾ ಅವಧಿಗೆ ಶುಲ್ಕ ವಿಧಿಸುವಂತಹ ಟ್ರಿಕ್ಗಳನ್ನು ಮಾಡಬಹುದು.
ಗೋ ಡಿಜಿಟಲ್ ಜನರಲ್ ಇನ್ಶುರೆನ್ಸ್ ಪ್ರಾಡಕ್ಟ್ ಹೆಡ್ ಅನ್ಶುಲ್ ಬೋಹಾರಾ ಹೇಳುವಂತೆ ಹೆಲ್ತ್ ಇನ್ಶುರೆನ್ಸ್ ಪ್ಲಾನ್ ಅನ್ನು ಆಯ್ಕೆ ಮಾಡುವುದಕ್ಕೂ ಮೊದಲೇ ನಿಮ್ಮ ಇನ್ಶೂರರ್ ಬಳಿ ಈ ಅಂಶಗಳನ್ನು ಎರಡು ಬಾರಿ ಚೆಕ್ ಮಾಡಿಕೊಳ್ಳಿ. ಜೀವನದಲ್ಲಿ ಒಮ್ಮೆ ಮಾತ್ರ ಅಂಗ ಕಸಿ ನಡೆಯುವುದಾದರೂ, ಅದರಿಂದ ಆಗುವ ಹಣಕಾಸಿನ ಹೊರೆ ತುಂಬಾ ದೊಡ್ಡದು. ಹೀಗಾಗಿ, ಅಂಗ ದಾನ ಕವರೇಜ್ ಪಾಲಿಸಿಯ ಭಾಗವಾಗಿಲ್ಲದೇ ಇರಬಹುದು. ಆಗ, ನಾವು ಅದನ್ನು ಹೆಚ್ಚುವರಿ ಕವರೇಜ್ ಆಗಿ ತೆಗೆದುಕೊಳ್ಳಬಹುದು. ಇದರಲ್ಲಿ ಒಂದಷ್ಟು ವೇಯ್ಟಿಂಗ್ ಪೀರಿಯೆಡ್ ಇರುತ್ತದೆ, ಸಬ್ ಲಿಮಿಟ್ಗಳೂ ಇರಬಹುದು. ಕೋ ಪೇಮೆಂಟ್ ಅಥವಾ ಕೆಲವು ವಿಧದ ಮಿತಿಯನ್ನೂ ವಿಧಿಸಬಹುದು. ಅಂಗ ಕಸಿಗೆ ಸಂಬಂಧಿಸಿದ ಷರತ್ತುಗಳ ಬಗ್ಗೆ ಇನ್ಶೂರರ್ ಇಂದ ತಿಳಿದುಕೊಳ್ಳಿ ಮತ್ತು ಪ್ಲಾನ್ ಖರೀದಿ ಮಾಡುವುದಕ್ಕೂ ಮೊದಲೇ ಸರಿಯಾಗಿ ಅರ್ಥ ಮಾಡಿಕೊಳ್ಳಿ ಎಂದು ಅವರು ಹೇಳುತ್ತಾರೆ.
ನೀವು ಅಂಗ ಕಸಿ ಮಾಡಿಸಿಕೊಂಡಿದ್ದೀರಿ ಎಂಬ ಕಾರಣಕ್ಕೆ ನಿಮ್ಮ ಪ್ರಸ್ತುತ ಪಾಲಿಸಿ ರಿನ್ಯೂವಲ್ ರಿಕ್ವೆಸ್ಟ್ ಅನ್ನು ನಿರಾಕರಿಸುವಂತಿಲ್ಲ ಎಂದು ಆರ್ಡಿಎಐ ಮಾರ್ಗಸೂಚಿ ಹೇಳುತ್ತದೆ. ಹೊಸ ಪಾಲಿಸಿಗೆ ಸೈನಪ್ ಮಾಡುವಾಗ ನೀವು ಇಂತಹ ಪ್ರಮುಖ ಮಾಹಿತಿಯನ್ನು ಹೇಳಲೇಬೇಕಾಗುತ್ತದೆ. ಒಂದು ವೇಳೆ ಪಾಲಿಸಿ ತೆಗೆದುಕೊಳ್ಳುವಾಗ ಈ ಮಾಹಿತಿ ಬಹಿರಂಗಗೊಳಿಸದೇ ಇದ್ದು, ಆಮೇಲೆ ನಿಮ್ಮ ಇನ್ಶೂರರ್ಗೆ ಅದು ಗೊತ್ತಾದರೆ, ಪ್ರಮುಖ ವೈದ್ಯಕೀಯ ಮಾಹಿತಿಯನ್ನು ನೀವು ಮರೆ ಮಾಡಿದ್ದೀರಿ ಎಂಬ ಕಾರಣಕ್ಕೆ ನಿಮ್ಮ ಪಾಲಿಸಿಯನ್ನು ಅವರು ರದ್ದು ಮಾಡಬಹುದು.
ಇಂತಹ ಸಂದರ್ಭದಲ್ಲಿ ನಿಮ್ಮ ಫೈನಾನ್ಷಿಯಲ್ ಕವರೇಜ್ ಅನ್ನು ಗಟ್ಟಿ ಮಾಡಿಕೊಳ್ಳಲು, ನಿಮ್ಮ ಸ್ಟಾಂಡರ್ಡ್ ಇನ್ಶುರೆನ್ಸ್ ಪಾಲಿಸಿಯ ಜೊತೆಗೆ ಕ್ರಿಟಿಕಲ್ ಇಲ್ನೆಸ್ ರೈಡರ್ ಅನ್ನು ಪಡೆದುಕೊಳ್ಳಿ ಎಂದು ಪರಿಣಿತರು ಶಿಫಾರಸು ಮಾಡುತ್ತಾರೆ. ಹಲವು ರೋಗಗಳಿಗೆ ಕ್ರಿಟಿಕಲ್ ಇಲ್ನೆಸ್ ರೈಡರ್ ಸಮಗ್ರ ಕವರೇಜ್ ಅನ್ನು ಕೊಡುತ್ತವೆ. ಸಾಮಾನ್ಯವಾಗಿ ಇದರಲ್ಲಿ ಅಂಗ ಕಸಿಯೂ ಸೇರಿರುತ್ತದೆ.
ಉದಾಹರಣೆಗೆ, ಮ್ಯಾಕ್ಸ್ ಲೈಫ್ ಕ್ರಿಟಿಕಲ್ ಇಲ್ನೆಸ್ ಮತ್ತು ಡಿಸೆಬಿಲಿಟಿ ರೈಡರ್ನಲ್ಲಿ 64 ಸಂಕೀರ್ಣ ಅನಾರೋಗ್ಯಗಳು ಕವರ್ ಆಗುತ್ತವೆ. ಇದರಲ್ಲಿ ಪ್ರಮುಖ ಅಂಗ ಕಸಿ/ಅಸ್ತಿಮಜ್ಜೆ ಕಸಿ ಕೂಡಾ ಇದೆ. ಕನಿಷ್ಠ ವಿಮೆ ಮೊತ್ತ 1 ಲಕ್ಷ ಮತ್ತು ಗರಿಷ್ಠ 1 ಕೋಟಿ ರೂ. ಇದೆ. ಎಚ್ಡಿಎಫ್ಸಿ ಲೈಫ್ ಕ್ರಿಟಿಕಲ್ ಇಲ್ನೆಸ್ ರೈಡರ್ನಲ್ಲಿ 19 ಕ್ರಿಟಿಕಲ್ ಅನಾರೋಗ್ಯಗಳು ಕವರ್ ಆಗುತ್ತವೆ. ಇದರ ಕನಿಷ್ಠ ಮೊತ್ತ 25,000 ರೂ. ಇದೆ. ಬೇಸ್ ಪಾಲಿಸಿಯ ವಿಮೆ ಮೊತ್ತಕ್ಕೆ ಸಮಾನವಾಗಿ ಗರಿಷ್ಠ ಕವರೇಜ್ ಇರುತ್ತದೆ. ಇದು ರೈಡರ್ ಆಗಿರುವುದರಿಂದ, ವಿಮೆ ಮೊತ್ತ, ಪಾಲಿಸಿ ಅವಧಿ, ವಯಸ್ಸು, ಆರೋಗ್ಯ ಸ್ಥಿತಿ, ಲಿಂಗ ಮತ್ತು ವಿಮೆದಾರರು ಸೇರಿದಂತೆ ವಿವಿಧ ಅಂಶಗಳನ್ನು ಅವಲಂಬಿಸಿ ಪ್ರೀಮಿಯಂ ನಿರ್ಧಾರವಾಗುತ್ತದೆ.
ಉದಾಹರಣೆಗೆ, ಮಣಿಪಾಲ್ ಸಿಗ್ನಾ ಲೈಫ್ಸ್ಟೈಲ್ ಪ್ರೊಟೆಕ್ಷನ್ ಕ್ರಿಟಿಕಲ್ ಕೇರ್ನ ಎನ್ಹ್ಯಾನ್ಸ್ಡ್ ಕವರ್ 30 ಕ್ರಿಟಿಕಲ್ ಅನಾರೋಗ್ಯಗಳನ್ನು ಕವರ್ ಮಾಡುತ್ತದೆ. 1 ಕೋಟಿ ರೂ. ವಿಮೆ ಮೊತ್ತವನ್ನು ಆಯ್ಕೆ ಮಾಡುವ 40 ವರ್ಷದ ಮಹಿಳೆ 69,000 ರೂ. ಪ್ರೀಮಿಯಂ ಕಟ್ಟಬೇಕಾಗುತ್ತದೆ. ಇದೇ ಸಮಯದಲ್ಲಿ, 40 ವರ್ಷದ ಪುರುಷನಿಗೆ ಇದೇ ಮಾನದಂಡದ ಅಡಿಯಲ್ಲಿ 62,700 ರೂ. ಪ್ರೀಮಿಯಂ ವಿಧಿಸಲಾಗುತ್ತದೆ. ಒಟ್ಟಾರೆಯಾಗಿ, ನಿಮ್ಮ ಬೇಸ್ ಪಾಲಿಸಿಗೆ ಕ್ರಿಟಿಕಲ್ ಇಲ್ನೆಸ್ ರೈಡರ್ ಸೇರಿಸಿಕೊಳ್ಳುವುದು ಉತ್ತಮ ಐಡಿಯಾ. ಇಲ್ಲದಿದ್ದರೆ, ನೀವು ಅನಿರೀಕ್ಷಿತ ವೆಚ್ಚಗಳಿಗೆ ಜೇಬು ಖಾಲಿ ಮಾಡಿಕೊಳ್ಳಬೇಕಾಗುತ್ತದೆ.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ