ಪರ್ಸನಲ್ ಲೋನ್ ಪಡೆದುಕೊಳ್ಳಲು ಕ್ರೆಡಿಟ್ ಸ್ಕೋರ್ ಮಾನದಂಡ ಅನ್ನೋದು ಎಲ್ಲರಿಗೂ ಗೊತ್ತಿದೆ. ಹಾಗಿದ್ದರೆ ಕೆಟ್ಟ ಅಥವಾ ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೂ ಪರ್ಸನಲ್ ಲೋನ್ ಪಡೆದುಕೊಳ್ಳಬಹುದೆ? ಪಡೆದುಕೊಳ್ಳಬಹುದು ಅಂದರೆ ಹೇಗೆ ಪಡೆದುಕೊಳ್ಳಬಹುದು? ನಾವು ನಿಮಗೆ ತಿಳಿಸಿ ಕೊಡುತ್ತೇವೆ.
ಕ್ರೆಡಿಟ್ ಸ್ಕೋರ್ ನಿಮ್ಮ ಹಣಕಾಸಿನ ವ್ಯವಹಾರಗಳ ಮೌಲ್ಯ,ಮಾಪನ ಮಾಡುತ್ತದೆ. ಸಾಮಾನ್ಯವಾಗಿ ಕ್ರೆಡಿಟ್ ಸ್ಕೋರ್ ರೇಂಜ್ 300 ರಿಂದ 900 ತನಕ ಇರುತ್ತದೆ. 750ಕ್ಕಿಂತ ಜಾಸ್ತಿ ಇದ್ದರೆ ಕ್ರಡಿಟ್ ಸ್ಕೋರ್ ಉತ್ತಮವಾಗಿದೆ ಎಂದು ಭಾವಿಸಬಹುದು. 550 ರಿಂದ 750 ನ್ನು ಡಿಸೆಂಟ್ ಸ್ಕೋರ್ ಎಂದು ಕರೆಯಬಹುದು. 550ಕ್ಕಿಂತ ಕಡಿಮೆ ಎಂದರೆ ಕಳಪೆ ಎಂದು ಲೆಕ್ಕಾಚಾರ ಹಾಕಲಾಗುತ್ತದೆ.
ಕ್ರೆಡಿಟ್ ಸ್ಕೋರ್ ಕಳಪೆಯಾಗಿದ್ದರೆ ನಿಮಗೆ ಪರ್ಸನಲ್ ಲೋನ್ ಸಿಗೋದಿಲ್ಲ ಎಂಬ ಮಾತನ್ನು ಹಲವಾರು ಸಾರಿ ಕೇಳಿರುತ್ತೇವೆ. ಆದರೆ ಇದನ್ನು ಸಂಪೂರ್ಣ ನಿಜ ಎಂದು ಭಾವಿಸಬೇಕಿಲ್ಲ. ಕಡಿಮೆ ಕ್ರೆಡಿಟ್ ಸ್ಕೋರ್ ಇದ್ದರೂ ಪರ್ಸನಲ್ ಲೋನ್ ಪಡೆದುಕೊಳ್ಳಲು ಹಲವಾರು ದಾರಿಗಳಿವೆ.
1.EMI ಪಾವತಿ ಸಾಮರ್ಥ್ಯ ಸಾಬೀತುಪಡಿಸಿ ಕ್ರೆಡಿಟ್ ಸ್ಕೋರ್ ನಂತರ, ಸಾಲಕ್ಕೆ ಅರ್ಜಿ ಸಲ್ಲಿಸುವ ವ್ಯಕ್ತಿಯ ಆದಾಯವನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಕೆಟ್ಟ ಕ್ರೆಡಿಟ್ ಸ್ಕೋರ್ ಹೊಂದಿದ್ದರೂ ನಿಮ್ಮ ಬಳಿ EMI ಪಾವತಿ ಮಾಡುವ ಸಾಮರ್ಥ್ಯ ಇದೆ ಅನ್ನೋದನ್ನು ಬ್ಯಾಂಕ್ ಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ. ನಿಮ್ಮ ಬಳಿ ಒಂದು ಶಾಶ್ವತ ಕೆಲಸ ಇದೆ. ತಿಂಗಳಿಗೆ ನಿರ್ದಿಷ್ಟ ಮೊತ್ತದ ವೇತನ ಪಡೆದುಕೊಳ್ಳುತ್ತಿರುವಿರಿ ಅನ್ನೋದನ್ನು ತಿಳಿಸಿಕೊಡಬೇಕಾಗುತ್ತದೆ. ಹೀಗೆ ಮಾಡಿದಾಗ ಪರ್ಸನಲ್ ಲೋನ್ ಸಿಗುವ ಸಾಧ್ಯತೆ ಹೆಚ್ಚಳವಾಗುತ್ತದೆ.
2. ಗ್ಯಾರಂಟಿದಾರನೊಂದಿಗೆ ಅರ್ಜಿ ಸಲ್ಲಿಸಿ ಕಳಪೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೂ ಖಾತೆದಾರ ಅಥವಾ ಗ್ಯಾರಂಟಿದಾರನೊಂದಿಗೆ ಅರ್ಜಿ ಸಲ್ಲಿಸಬೇಕು. ನೀವು ಪಡೆದುಕೊಳ್ಳುವ ಸಾಲಕ್ಕೆ ಈ ವ್ಯಕ್ತಿ ಜಾಮೀನುದಾರನಾಗಿರುತ್ತಾನೆ. ಈ ಸಂದರ್ಭದಲ್ಲಿ ಬ್ಯಾಂಕ್ ಅವರ ಕ್ರೆಡಿಟ್ ಸ್ಕೋರ್ ಅನ್ನು ಪರಿಗಣಿಸುವುದರ ಜತೆಗೆ ನೀವು ಸಲ್ಲಿಕೆ ಮಾಡಿರುವ ಗ್ಯಾರಂಟಿದಾರನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತದೆ. ಸಾಲ ನ್ನುವ ಡಿಫಾಲ್ಟ್ ಆಗುವುದಿಲ್ಲ ಎನ್ನುವ ವಿಶ್ವಾಸ ಮೂಡುತ್ತದೆ.
3. ಅಡಮಾನ ಕೆಟ್ಟ ಕ್ರೆಡಿಟ್ ಸ್ಕೋರ್ ಕಳಪೆಯಾಗಿದ್ದರೆ ನಿಮ್ಮ ಬಳಿ ಇರುವ ಆಸ್ತಿಯನ್ನು ಅಡಮಾನ ಇಟ್ಟು ವೈಯಕ್ತಿಕ ಸಾಲವನ್ನು ಸಹ ತೆಗೆದುಕೊಳ್ಳಬಹುದು. ಇದು ಗ್ಯಾರಂಟಿಯಂತೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ, ಜಾಮೀನುದಾರರ ಬದಲಿಗೆ, ನೀವು ಸಾಲಕ್ಕೆ ಲಗತ್ತಿಸಲಾದ ಆಸ್ತಿಯನ್ನು ಬ್ಯಾಂಕಿನಲ್ಲಿ ಒತ್ತೆ ಇಡಬೇಕು. ಸಾಲವನ್ನು ಮರುಪಾವತಿ ಮಾಡದಿದ್ದರೆ, ಬ್ಯಾಂಕ್ ಅಡಮಾನದ ಆಸ್ತಿಯನ್ನು ಮಾರಾಟ ಮಾಡಬಹುದು.
4. ಸಣ್ಣ ಮೊತ್ತದ ಸಾಲಕ್ಕಾಗಿ ಅರ್ಜಿ ಕೆಟ್ಟ ಕ್ರೆಡಿಟ್ ಸ್ಕೋರ್ ಹೊಂದಿರುವ ಯಾವುದೇ ರೀತಿಯ ಸಾಲ ಮಂಜೂರಾತಿ ಪಡೆಯಲು ಕಷ್ಟವಾಗುತ್ತದೆ. ಆದಾಗ್ಯೂ, ನೀವು ಸಣ್ಣ ಮೊತ್ತದ ವೈಯಕ್ತಿಕ ಸಾಲವನ್ನು ಕೇಳಿದರೆ ಸಿಗಬಹುದು. ಯಾಕೆಂದರೆ ಇಲ್ಲಿ ರಿಸ್ಕ್ ಕಡಿಮೆ ಇರುತ್ತದೆ.
5. ಕ್ರೆಡಿಟ್ ರಿಪೋರ್ಟ್ ನ ತಪ್ಪು ಸರಿ ಮಾಡಿ ಕೆಲವೊಮ್ಮೆ, ಕ್ರೆಡಿಟ್ ವರದಿಯಲ್ಲಿನ ದೋಷಗಳು ಮತ್ತು ಲೋಪಗಳು ಕೆಟ್ಟ ಕ್ರೆಡಿಟ್ ಸ್ಕೋರ್ಗೆ ಕಾರಣವಾಗಬಹುದು. ಇದು ಸಾಲವನ್ನು ಪಡೆಯುವ ನಿಮ್ಮ ಅವಕಾಶಗಳ ಮೇಲೆ ಪರಿಣಾಮ ಬೀರುತ್ತದೆ. ವರ್ಷಕ್ಕೊಮ್ಮೆಯಾದರೂ ನಿಮ್ಮ ಕ್ರೆಡಿಟ್ ರಿಪೋರ್ಟ್ ನ್ನು ಆನ್ಲೈನ್ನಲ್ಲಿ ಪರಿಶೀಲಿಸಿ. ಕ್ರೆಡಿಟ್ ವರದಿಯಲ್ಲಿ ಕಂಡುಬರುವ ಯಾವುದೇ ತಪ್ಪನ್ನು ತಕ್ಷಣವೇ ಸರಿಮಾಡಿಕೊಂಡರೆ ಸಾಲ ಪಡೆದುಕೊಳ್ಳಲು ಸುಲಭವಾಗುತ್ತದೆ. ಕ್ರೆಡಿಟ್ ಸ್ಕೋರ್ ಮತ್ತು ಪರ್ಸನಲ್ ಲೋನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು IIFL Finance ಕ್ಲಿಕ್ ಮಾಡಿ.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ