ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ ಇತ್ತೀಚಿನ ದಿನಗಳಲ್ಲಿ ತುಂಬಾ ಮುಖ್ಯ. ನಿಮಗೆ ವೈಯಕ್ತಿಕ ಸಾಲ ಅಥವಾ ವಾಹನ ಸಾಲ ಅಥವಾ ಗೃಹ ಸಾಲ ಹೀಗೆ ಯಾವುದೇ ಸಾಲ ಬೇಕಿದ್ದರೂ ನಿಮಗೆ ಈ ಕ್ರೆಡಿಟ್ ರಿಪೋರ್ಟ್ ಬೇಕು. ಈ ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ ಆಧರಿಸಿ ಬ್ಯಾಂಕ್ ನವರು ನಿಮಗೆ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಕೊಡಬೇಕಾ ಅಥವಾ ಬೇಡವಾ ಎನ್ನುವುದನ್ನು ನಿರ್ಧರಿಸುತ್ತಾರೆ. ಕ್ರೆಡಿಟ್ ರಿಪೋರ್ಟ್ ನಲ್ಲಿ ನೆಗಟಿವ್ ವರದಿ ಇದ್ದರೆ ಆಗ ನಿಮಗೆ ಸಾಲ ಸಿಗುವುದು ಕಷ್ಟವಾಗುತ್ತದೆ. ಈ ನೆಗಟಿವ್ ರಿಪೋರ್ಟ್ ನಿಮ್ಮ ಕ್ರೆಡಿಟ್ ರಿಪೋರ್ಟ್ ನಲ್ಲಿದ್ದರೆ ಅದು ಎಷ್ಟು ದಿನಗಳವರೆಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ನೋಡೋಣ.
ಮೊದಲಿಗೆ, ಕ್ರೆಡಿಟ್ ಸ್ಕೋರ್ ಎಂದರೇನು? ಕ್ರೆಡಿಟ್ ರಿಪೋರ್ಟ್ ಎಂದರೇನು? ಎನ್ನುವುದನ್ನು ತಿಳಿದುಕೊಳ್ಳೋಣ. ಕ್ರೆಡಿಟ್ ಸ್ಕೋರ್ ಎನ್ನುವುದು ನಿಮ್ಮ ಕ್ರೆಡಿಟ್ ವರ್ತಿನೆಸ್ ತೋರಿಸುವ ಮೂರು ಅಂಕಿಗಳ ಸಂಖ್ಯೆ. ಕ್ರೆಡಿಟ್ ವರ್ತಿನೆಸ್ ಅಂದರೆ ಸಾಲ ಮರುಪಾವತಿ ಮಾಡುವ ನಿಮ್ಮ ಸಾಮರ್ಥ್ಯ. ಮತ್ತೊಂದು ಕಡೆ ಕ್ರೆಡಿಟ್ ರಿಪೋರ್ಟ್ ಎನ್ನುವುದು ನಿಮ್ಮ ಹಣಕಾಸಿನ ಅಂಕಿಅಂಶಗಳ ವಿಸ್ತೃತ ಸಾರಾಂಶ. ಇದು ನಿಮ್ಮ ಕ್ರೆಡಿಟ್ ಹಿಸ್ಟರಿ, ಬಾಕಿ ಇರುವ ಸಾಲ, ಕ್ರೆಡಿಟ್ ಕಾರ್ಡ್ ಬಳಕೆ ಮತ್ತು ಸಾಲ ಮರುಪಾವತಿಯ ಟ್ರ್ಯಾಕ್ ರೆಕಾರ್ಡ್ ಮೊದಲಾವುಗಳ ಬಗ್ಗೆ ತಿಳಿಸುತ್ತದೆ. ನಿಮ್ಮ ಕ್ರೆಡಿಟ್ ರಿಪೋರ್ಟ್ ಆಧರಿಸಿ ಕ್ರೆಡಿಟ್ ಬ್ಯೂರೋಗಳು ನಿಮ್ಮ ಕ್ರೆಡಿಟ್ ಸ್ಕೋರ್ ಜನರೇಟ್ ಮಾಡುತ್ತದೆ.
ಟ್ರಾನ್ಸ್ ಯೂನಿಯನ್ ಸಿಬಿಲ್, ಈಕ್ವಿಫ್ಯಾಕ್ಸ್, ಎಕ್ಸ್ಪಿರಿಯನ್ ಮೊದಲಾದ ವಿವಿಧ ಕ್ರೆಡಿಟ್ ಬ್ಯೂರೋಗಳು ತಮ್ಮ ಕ್ರೆಡಿಟ್ ಸ್ಕೋರ್ ಗಳನ್ನ ನೀಡುತ್ತದೆ. ಟ್ರಾನ್ಸ್ ಯೂನಿಯಲ್ ಸಿಬಿಲ್ ಕೊಡೋ ಕ್ರೆಡಿಟ್ ಸ್ಕೋರ್ ಗೆ ವ್ಯಾಪಕ ಮನ್ನಣೆ ಇದೆ. ಸಿಬಿಲ್ ಸ್ಕೋರ್ 300 ರಿಂದ 900 ರವರೆಗೆ ಇರಲಿದೆ. ಈಕ್ವಿಫ್ಯಾಕ್ಸ್ ಮತ್ತು ಎಕ್ಸ್ಪೆರಿಯನ್ ನಲ್ಲಿ ಕ್ರೆಡಿಟ್ ಸ್ಕೋರ್ 300 ರಿಂದ 850ರ ನಡುವೆ ಇರಲಿದೆ. 700 ಕ್ಕಿಂತ ಹೆಚ್ಚಿರುವ ಸಿಬಿಲ್ ಸ್ಕೋರ್ ಸಾಮಾನ್ಯವಾಗಿ ಉತ್ತಮ ಅಂತಾ ಪರಿಗಣಿಸಲ್ಪಡತ್ತದೆ. ಕೆಲವು ಬ್ಯಾಂಕ್ ಗಳು 750 ಕ್ಕಿಂತ ಹೆಚ್ಚಿದ್ದರೆ, ಆ ಸಿಬಿಲ್ ಸ್ಕೋರ್ ಅನ್ನ ಉತ್ತಮ ಅಂತಾ ಪರಿಗಣಿಸುವುದು ಇದೆ.
ನೀವು ಬ್ಯಾಂಕ್ ನಲ್ಲಿ ಸಾಲಕ್ಕೆ ಅಥವಾ ಕ್ರೆಡಿಟ್ ಕಾರ್ಡ್ ಗೆ ಅಪ್ಲೈ ಮಾಡಬೇಕಾದರೆ, ಕ್ರೆಡಿಟ್ ಬ್ಯೂರೋಗಳು ಕೊಡುವ ಕ್ರೆಡಿಟ್ ರಿಪೋರ್ಟ್ ಮತ್ತು ಕ್ರೆಡಿಟ್ ಸ್ಕೋರ್ ಗಳನ್ನ ಬ್ಯಾಂಕ್ ಗಳಲ್ಲಿ ಕೇಳುತ್ತಾರೆ. ನೀವು ಎಷ್ಟು ಸಾಲ ಪಡೆದಿದ್ದೀರಾ ಅಥವಾ ನಿಮ್ಮ ಬಳಿ ಎಷ್ಟು ಕ್ರೆಡಿಟ್ ಕಾರ್ಡ್ ಇದೆ, ನೀವು ಸಮಯಕ್ಕೆ ಸರಿಯಾಗಿ ಪಾವತಿಗಳನ್ನು ಮಾಡಿದ್ದೀರಾ ಅಥವಾ ಇಲ್ಲವಾ ಎನ್ನುವುದನ್ನು ಬ್ಯಾಂಕ್ ಗಳು ನಿಮ್ಮ ಕ್ರೆಡಿಟ್ ರಿಪೋರ್ಟ್ನಿಂದ ತಿಳಿದುಕೊಳ್ಳುತ್ತದೆ. ಒಂದು ವೇಳೆ, ಹಳೆ ಸಾಲದ ಕಂತುಗಳ ಪಾವತಿಯಲ್ಲಿ ಯಾವುದೇ ವಿಳಂಬ ಆಗಿದ್ದರೆ ಅಥವಾ ಬಾಕಿ ಮೊತ್ತ ಸೆಟಲ್ ಆಗಿದ್ದರೆ ಈ ಲೋಪಗಳನ್ನೆಲ್ಲಾ ನಿಮ್ಮ ರಿಪೋರ್ಟ್ ನಲ್ಲಿ ದೀರ್ಘಾವಧಿಯಲ್ಲಿ ರೆಕಾರ್ಡ್ ಆಗಿರುತ್ತದೆ. ಈ ವರದಿಗಳು ಅಂದರೆ ಈ ಲೋಪಗಳ ಬಗೆಗಿನ ವಿವರಗಳನ್ನು ನಿಮ್ಮ ರಿಪೋರ್ಟ್ ನಿಂದ ತೆಗೆದು ಹಾಕುವುದಕ್ಕೆ ಎಷ್ಟು ದಿನ ಬೇಕಾಗಬಹುದು? ಇದರ ಬಗ್ಗೆ ಈಗ ನೋಡೋಣ.
ಸಾಮಾನ್ಯವಾಗಿ, ಇಂತಹ ಲೋಪದೋಷಗಳು ನಿಮ್ಮ ಕ್ರೆಡಿಟ್ ರಿಪೋರ್ಟ್ ನಲ್ಲಿ ಏಳು ವರ್ಷಗಳವರೆಗೆ ಇರುತ್ತದೆ. ನೀವು ಎಷ್ಟು ದಿನ ವಿಳಂಬ ಮಾಡಿದೀರಾ ಅಥವಾ ಯಾವ ರೀತಿಯ ದೋಷ ಆಗಿದೆ ಎನ್ನುವುದನ್ನು ಆಧರಿಸಿ ಇದು ನಿಮ್ಮ ರಿಪೋರ್ಟ್ ಗಳಲ್ಲಿ ವರದಿಯಾಗುವ ಅವಧಿ ಹೆಷ್ಚೂ ಆಗಬಹುದು ಅಥವಾ ಕಡಿಮೆ ಕೂಡ ಆಗಬಹುದು.
ಉದಾಹರಣೆಗೆ, ನೀವು ಪಾವತಿಯನ್ನ ಮಧ್ಯರಾತ್ರಿ ಮಾಡಿದರೆ ನೀವು ನಿಗದಿತ ದಿನಾಂಕದೊಳಗೆ ಪಾವತಿ ಮಾಡದೇ ಹೋದರೆ ಆಗ ಆ ಮಾಹಿತಿ ಸಿಬಿಲ್ ಮತ್ತು ಇತರ ಕ್ರೆಡಿಟ್ ರಿಪೋರ್ಟ್ ಗಳಲ್ಲಿ 7 ವರ್ಷಗಳವರೆಗೆ ಇರುತ್ತದೆ. ಕ್ರೆಡಿಟ್ ಬ್ಯೂರೋ ಈಕ್ವಿಫ್ಯಾಕ್ಸ್ ಹೇಳುವ ಪ್ರಕಾರ, ಹಳೆ ಸಾಲ ತೀರಿಸಿದರೂ ಕೂಡ, ಈ ವಿಳಂಬ ಪಾವತಿ ವಿವರಗಳು ರಿಪೋರ್ಟ್ ನಲ್ಲಿ ಇನ್ನೂ ಇರುತ್ತದೆ.
ಅದೇ ರೀತಿ, ನೀವು ಸಾಲ ಅಥವಾ ಕ್ರೆಡಿಟ್ ಕಾರ್ಡ್ ಪಾವತಿ ತಪ್ಪಿಸಿದ್ರೆ ಅಂದರೆ ಪಾವತಿ ಮಾಡಿಲ್ಲದೇ ಹೋದರೆ ಕೂಡ, ನೀವು ಮೊದಲ ಸಲ ಪಾವತಿ ತಪ್ಪಿಸಿದಾಗಿನಿಂದ ಏಳು ವರ್ಷಗಳ ಕಾಲ ಅದರ ವಿವರಗಳು ನಿಮ್ಮ ಕ್ರೆಡಿಟ್ ರಿಪೋರ್ಟ್ ನಲ್ಲಿ ದಾಖಲಾಗುತ್ತವೆ. ಅದೇ ರೀತಿ, ಪೂರ್ತಿ ಬಾಕಿ ಮೊತ್ತವನ್ನ ಪಾವತಿ ಮಾಡದೆ ಲೋನ್ ಸೆಟಲ್ ಮಾಡಿದರೂ ಕೂಡ, ಅದು ರಿಪೋರ್ಟ್ ನಲ್ಲಿ 7 ವರ್ಷಗಳವರೆಗೆ ರೆಕಾರ್ಡ್ ಆಗಿರುತ್ತದೆ.
ಇದರ ಜೊತೆಗೆ ದಿವಾಳಿತನ ಮತ್ತು ನ್ಯಾಯಾಲಯದ ತೀರ್ಪುಗಳ ಬಗ್ಗೆ ಕೂಡ ನಿಮ್ಮ ಕ್ರೆಡಿಟ್ ರಿಪೋರ್ಟ್ ನಲ್ಲಿ ಏಳು ವರ್ಷಗಳವರೆಗ ದಾಖಲೆ ಇರರುತ್ತದೆ. ಯಾವ ಬಗೆಯ ದಿವಾಳಿತನ ಅಥವಾ Bankruptcy ಅನ್ನೋದನ್ನ ಆಧರಿಸಿ ಅದು ನಿಮ್ಮ ಕ್ರೆಡಿಟ್ ರಿಪೋರ್ಟ್ ನಲ್ಲಿ 7 ರಿಂದ 10 ವರ್ಷಗಳ ಕಾಲ ದಾಖಲಾಗಿರುತ್ತದೆ ಎಂದು ಈಕ್ವಿಫ್ಯಾಕ್ಸ್ ಕ್ರೆಡಿಟ್ ಬ್ಯೂರೋ ವೆಬ್ ಸೈಟ್ ತಿಳಿಸುತ್ತದೆ.
ನೀವು ಹೊಸ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ಬ್ಯಾಂಕ್ ಗಳು ಕ್ರೆಡಿಟ್ ಬ್ಯೂರೋಗಳಿಂದ ನಿಮ್ಮ ಕ್ರೆಡಿಟ್ ರಿಪೋರ್ಟ್ ಕೇಳುತ್ತವೆ. ಇದನ್ನು ಹಾರ್ಡ್ ಇನ್ ಕ್ವೈರಿ ಎಂದು ಪರಿಗಣಿಸಲಾಹಗುತ್ತದೆ. ಈ ಹಾರ್ಡ್ ಇನ್ಕೈರಿ ಕೂಡ ನಿಮ್ಮ ಕ್ರೆಡಿಟ್ ರಿಪೋರ್ಟ್ ನಲ್ಲಿ ಎರಡು ವರ್ಷಗಳವರೆಗೆ ಇರತ್ತೆ. ಆದಾಗ್ಯೂ, ಇದರ ನಕಾರಾತ್ಮಕ ಪರಿಣಾಮ, ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಒಂದು ವರ್ಷ ಮಾತ್ರ ಇರುತ್ತದೆ. ನೀವು ನಿಮ್ಮ ಸಾಲ ಮರುಪಾವತಿಯಲ್ಲಿ ಸಕಾರಾತ್ಮಕವಾಗಿದ್ದರೆ ಅಂದರೆ ಸಮಯಕ್ಕೆ ಸರಿಯಾಗಿ ಪಾವತಿ, ಪೂರ್ಣ ಮೊತ್ತದ ಪಾವತಿ, ಕ್ರೆಡಿಟ್ ಗಳನ್ನು ಜವಾಬ್ದಾರಿಯುತವಾಗಿ ಬಳಸಿದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಕ್ರಮೇಣ ಸುಧಾರಣೆಯಾಗುತ್ತದೆ. ಕಡಿಮೆ ಬಡ್ಡಿ ದರ ವಿಧಿಸಲ್ಪಡುವ ಗ್ರಾಹಕರಿಗೆ ಉತ್ತಮ ಕ್ರೆಡಿಟ್ ಸ್ಕೋರ್ ನಿಂದ ಅನುಕೂಲವಾಗುತ್ತದೆ. ಸಾಲ ಕೊಡೋದಕ್ಕೂ ಮೊದಲು, ಬ್ಯಾಂಕ್ ಗಳು ಅನೇಕ ಅಂಶಗಳನ್ನು ಪರಿಗಣಿಸುತ್ತವೆ. ಈ ಪೈಕಿ ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ ಅತಿ ಮುಖ್ಯ. ನೀವು ನಿಮ್ಮ ಸಿಬಿಲ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ ಅನ್ನ ಸಿಬಿಲ್ ವೆಬ್ಸೈಟ್ cibil.com ನಲ್ಲಿ ಉಚಿತವಾಗಿ ನೋಡಬಹುದು.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ