ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್​ ಸೈಕಲ್ ಹೀಗೆ ಇಟ್ಟುಕೊಳ್ಳಿ!

ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಗೆ ಸಂಬಂಧಿಸಿ ಕೆಲವು ನಿಯಮಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆರ್ ಬಿಐ ಬದಲಾಯಿಸಿದೆ. ಈ ಬದಲಾವಣೆಗಳು ನಿಮ್ಮ ಕಾರ್ಡ್ ಬಿಲ್ಲಿಂಗ್ ಸೈಕಲ್ ಮೇಲೆ ಪಾಸಿಟಿವ್ ಪರಿಣಾಮ ಬೀರಬಹುದು. ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದ್ದರೆ ಇದೊಂದು ಗುಡ್ ನ್ಯೂಸ್. ಹಾಗಿದ್ದರೆ ನಿಮಗೆ ಈ ನಿಯಮಗಳಲ್ಲಿ ಆಗಿರುವ ಬದಲಾವಣೆಗಳು ಯಾವ ರೀತಿ ಲಾಭದಾಯಕವಾಗಿವೆ? ಎನ್ನುವುದನ್ನು ನೋಡೋಣ.

ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್​ ಸೈಕಲ್ ಹೀಗೆ ಇಟ್ಟುಕೊಳ್ಳಿ!

ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಗೆ ಸಂಬಂಧಿಸಿ ಕೆಲವು ನಿಯಮಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆರ್ ಬಿಐ ಬದಲಾಯಿಸಿದೆ. ಈ ಬದಲಾವಣೆಗಳು ನಿಮ್ಮ ಕಾರ್ಡ್ ಬಿಲ್ಲಿಂಗ್ ಸೈಕಲ್ ಮೇಲೆ ಪಾಸಿಟಿವ್ ಪರಿಣಾಮ ಬೀರಬಹುದು. ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದ್ದರೆ ಇದೊಂದು ಗುಡ್ ನ್ಯೂಸ್. ಹಾಗಿದ್ದರೆ ನಿಮಗೆ ಈ ನಿಯಮಗಳಲ್ಲಿ ಆಗಿರುವ ಬದಲಾವಣೆಗಳು ಯಾವ ರೀತಿ ಲಾಭದಾಯಕವಾಗಿವೆ? ಎನ್ನುವುದನ್ನು ನೋಡೋಣ.

ಕಳೆದ 2022 ರ ಏಪ್ರಿಲ್ ನಲ್ಲಿಯೇ RBI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಪರಿಚಯಿಸಿತ್ತು. ಪ್ಲಾಸ್ಟಿಕ್ ಮನಿ ಅಂದ್ರೆ ಕ್ರೆಡಿಟ್ ಕಾರ್ಡ್ ನಂತಹ ಬಳಕೆ ಮೇಲೆ ನಿಯಂತ್ರಣ ಇಡುವುದು ಇದರ ಉದ್ದೇಶವಾಗಿತ್ತು. ಈ ನಿಯಮಗಳು ಜುಲೈ 2022 ರಲ್ಲಿ ಜಾರಿಗೆ ಬಂದವು. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚನೆ ನೀಡಿತ್ತು. 2022 ರಲ್ಲಿ ಆರ್ ಬಿಐ ಹೊರಡಿಸಿದ್ದ ನಿಯಮದ ಪ್ರಕಾರ ಕ್ರೆಡಿಟ್ ಕಾರ್ಡ್ ಬಳಕೆದಾರು ಒಮ್ಮೆ ಮಾತ್ರ ತಮ್ಮ ಬಿಲ್ಲಿಂಗ್ ಸೈಕಲ್ ಬದಲಾಯಿಸಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ ಈಗ ಹೊಸ ನಿಯಮಾವಳಿಗಳನ್ನು RBI ಬಿಡುಗಡೆ ಮಾಡಿದ್ದ ಮಾರ್ಚ್ 7 ರಿಂದಲೇ ಜಾರಿಗೆ ಬಂದಿದೆ. ಇದರ ಪ್ರಕಾರ ಈಗ ಒಂದಕ್ಕಿಂತ ಹೆಚ್ಚಿನ ಸಾರಿ ಬಿಲ್ಲಿಂಗ್ ಸೈಕಲ್ ಬದಲಾಯಿಸುವ ಅವಕಾಶವನ್ನು ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಅಂದ್ರೆ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಒದಗಿಸಬೇಕಾಗಿದೆ. ಹಾಗಿದ್ದರೆ ಈ ಬದಲಾದ ನಿಯಮ ನಿಮ್ಮ ಆರ್ಥಿಕ ಆರೋಗ್ಯದ ಮೇಲೆ ಯಾವ ರೀತಿ ಪಾಸಿಟಿವ್ ಪರಿಣಾಮ ಬೀರುತ್ತದೆ ಅನ್ನೋದನ್ನು ನೋಡಿಕೊಂಡು ಬರೋಣ.

ಕ್ರೆಡಿಟ್ ಕಾರ್ಡ್‌ನ ಎರಡು ಸ್ಟೇಟ್‌ಮೆಂಟ್ ಡೇಟ್ ಗಳ ನಡುವಿನ ನಡುವಿನ ಅವಧಿಯನ್ನು ಬಿಲ್ಲಿಂಗ್ ಸೈಕಲ್ ಎಂದು ಕರೆಯಲಾಗುತ್ತದೆ. ಸ್ಟೇಟ್‌ಮೆಂಟ್ ಡೇಟ್ ಅನ್ನೋದು ಆ ತಿಂಗಳ ಬಿಲ್ ಜನರೇಟ್ ಮಾಡುವ ದಿನಾಂಕವಾಗಿದೆ. ಈ ಬಿಲ್ ನಿರ್ದಿಷ್ಟ ದಿನಾಂಕದಂದು ಜನರೇಟ್ ಆಗುತ್ತದೆ. ಬಿಲ್ ಜನರೇಟ್ ಆದ ಮೇಲೆ ಬಿಲ್ ಕಟ್ಟುವ ಡ್ಯೂ ಟೇಟ್ ಸಾಮಾನ್ಯವಾಗಿ 10 ರಿಂದ 15 ದಿನಗಳು ಇರುತ್ತದೆ. ಅಂದರೆ ಕಾರ್ಡ್ ಬಳಕೆದಾರರು 45 ದಿನಗಳವರೆಗೆ ಬಡ್ಡಿ ರಹಿತ ಅವಧಿ ಪಡೆದುಕೊಳ್ಳುತ್ತಾರೆ. ಈ 45 ದಿನಗಳಲ್ಲಿ, ಬಿಲ್ಲಿಂಗ್ ಸೈಕಲ್‌ನ 30 ದಿನಗಳು ಮತ್ತು 15 ರಿಂದ 20 ದಿನದ ಡ್ಯೂ ಡೇಟ್ ಅವಧಿ ಸೇರಿಕೊಳ್ಳುತ್ತದೆ. ನಿಗದಿತ ದಿನಾಂಕದೊಳಗೆ ಬಿಲ್ ಪಾವತಿಸದಿದ್ದರೆ ಬಡ್ಡಿ ವಿಧಿಸಲಾಗುತ್ತದೆ. ನಿಗದಿತ ದಿನಾಂಕದ ನಂತರ ಮಾಡಿದ ಯಾವುದೆ ಪಾವತಿಗೆ ವಿನಾಯಿತಿ ಇರೋದಿಲ್ಲ.

ಹಾಗಿದ್ದರೆ ಹೊಸ ನಿಯಮದಿಂದ ಏನಾಗುತ್ತದೆ ಅನ್ನೋದನ್ನು ನೋಡೋಣ. ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಬದಲಾಯಿಸಲು ಸಾಧ್ಯವಿರುವುದರಿಂದ ನಿಮ್ಮ ಕೈಯಲ್ಲಿ ಹಣ ಇರುವಂತಹ ಸಮಯದಲ್ಲಿಯೇ ಬಿಲ್ಲಿಂಗ್ ಡ್ಯೂ ಡೇಟ್ ಬರುವಂತೆ ನೋಡಿಕೊಳ್ಳಬಹುದು. ಅಲ್ಲದೇ ನಿಮ್ಮ ಖರ್ಚು ವೆಚ್ಚದ ದಿನಾಂಕಗಳನ್ನು ಅಂದಾಜು ಮಾಡಿಕೊಂಡು ಕ್ರೆಡಿಟ್ ಫ್ರೀ ಪಿರಿಯಡ್ ಅವಧಿಯನ್ನು ಹೆಚ್ಚು ಮಾಡಿಕೊಳ್ಳಬಹುದು. ಇದನ್ನು ಒಂದು ಉದಾಹರಣೆ ಮೂಲಕ ಅರ್ಥ ಮಾಡಿಕೊಳ್ಳೋಣ. ಕಾರ್ಡ್ ಬಳಕೆದಾರರು ತಿಂಗಳ 1 ರಿಂದ 10 ರ ನಡುವೆ ಹೆಚ್ಚು ಖರ್ಚು ಮಾಡುತ್ತಿದ್ದಾರೆ ಎಂದು ಭಾವಿಸಿದರೆ ತಿಂಗಳ 25 ರ ನಂತರ ಬಿಲ್ ಜನರೇಟ್ ದಿನಾಂಕ ಹೊಂದಿಸಿಕೊಂಡರೆ ಅವರ ಬಿಲ್ಲಿಂಗ್ ಡ್ಯೂ ಡೇಟ್ ಮುಂದಿನ 10 ಅಥವಾ 15 ತಾರೀಕಿನ ಸುಮಾರಿಗೆ ಬರುತ್ತದೆ. ಹಾಗಾಗಿ ಕ್ರೆಡಿಟ್ ಕಾರ್ಡ್ ಬಳಕೆದಾರ ಸುಮಾರು 45 ದಿನಗಳ ಬಡ್ಡಿ-ಮುಕ್ತ ಕ್ರೆಡಿಟ್ ಅವಧಿ ಪಡೆಯುತ್ತಾರೆ. ಅಂದರೆ ನೀವು ಖರ್ಚು ಮಾಡಿದ ಮೊತ್ತಕ್ಕೆ ಯಾವುದೇ ಬಡ್ಡಿ ಕಟ್ಟಬೇಕಾಗಿಲ್ಲ.

ಆದರೆ ಇದಕ್ಕೆ ವಿರುದ್ಧವಾದ ರೀತಿ ಏನಾದರೂ ಬಿಲ್ಲಿಂಗ್ ಡೇಟ್ ಇದ್ದರೆ ಸಂಕಷ್ಟ ಪಡಬೇಕಾಗುತ್ತದೆ. ಬಿಲ್ ಜನರೇಟ್ ದಿನಾಂಕ 10 ನೇ ದಿನಾಂಕದ ಆಸುಪಾಸಿನಲ್ಲಿದ್ದು ಅತಿ ಹೆಚ್ಚು ಖರ್ಚು ಮಾಡುವ ಅವಧಿಯು 1-10 ನೇ ತಾರೀಕಿನ ನಡುವೆ ಇದ್ದರೆ ಕ್ರೆಡಿಟ್ ಕಾರ್ಡ್ ಬಳಕೆದಾರ ಕೇವಲ 25 ದಿನಗಳ ಕ್ರೆಡಿಟ್ ಫ್ರೀ ಪಿರಿಯಡ್ ಪಡೆದುಕೊಳ್ಳುತ್ತಾರೆ.

ಬಿಲ್ಲಿಂಗ್ ಸೈಕಲ್‌ನಲ್ಲಿ ಆಗಿರುವ ಈ ಬದಲಾವಣೆ ಒಂದಕ್ಕಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವವರಿಗೆ ದೊಡ್ಡ ಪ್ರಯೋಜನ ನೀಡುತ್ತದೆ. ಹೆಚ್ಚಿನ ಕ್ರಡಿಟ್ ಕಾರ್ಡ್ ಹೊಂದಿರುವವರಿಗೆ ಪ್ರತಿ ಕಾರರ್ಡ್ ಗೆ ವಿಭಿನ್ನ ಬಿಲ್ಲಿಂಗ್ ಸೈಕಲ್ ಮತ್ತು ಡ್ಯೂ ಡೇಟ್ ಇರುತ್ತದೆ. ಎಲ್ಲ ಬಿಲ್ ಗಳನ್ನು ಟ್ರ್ಯಾಕ್ ಮಾಡುವುದು ಕಷ್ಟಕರವಾಗುತ್ತದೆ. ಇಂಥ ಸಂದರ್ಭದಲ್ಲಿ ಕಾರ್ಡ್‌ದಾರರು ಎಲ್ಲಾ ಬಾಕಿ ದಿನಾಂಕವನ್ನು ಒಂದೇ ಡೇಟ್ ಗೆ ಸೆಟ್ ಮಾಡಿಕೊಳ್ಳುವಂತೆ ಬಿಲ್ಲಿಂಗ್ ಸೈಕಲ್ ಹೊಂದಿಸಿಕೊಳ್ಳಬಹುದು.

ಹಾಗಿದ್ದರೆ ಈ ಬಿಲ್ಲಿಂಗ್ ಸೈಕಲ್ ಬದಲಾಯಿಸಬಹುದು ಹೇಗೆ ಎನ್ನುವುದನ್ನು ಅರ್ಥಮಾಡಿಕೊಳ್ಳೋಣ. ಬಿಲ್ಲಿಂಗ್ ಸೈಕಲ್ ಬದಲಾಯಿಸಲು ನೀವು ಬ್ಯಾಂಕ್ ಅಥವಾ ಕಂಪನಿಯ ಕಸ್ಟಮರ್ ಕೇರ್ ಗೆ ಇಮೇಲ್ ಮಾಡಬಹುದು. ನೀವು ಸಹಾಯವಾಣಿಗೆ ಕರೆ ಮಾಡಿಯೂ ರಿಕ್ವೆಸ್ಟ್ ಸಲ್ಲಿಸಬಹುದು. ಆದರೆ ಅದಕ್ಕೂ ಮೊದಲು ನಿಮ್ಮ ಬಾಕಿ ಮೊತ್ತ ಮತ್ತು EMI ಬ್ಯಾಲೆನ್ಸ್‌ ಕ್ಲೀಯರ್ ಮಾಡಬೇಕಾಗುತ್ತದೆ. ಇದಾದ ಮೇಲೆ ಬಿಲ್ಲಿಂಗ್ ಸೈಕಲ್ ಬದಲಾಯಿಸಲು ನೀವು ರಿಕ್ವೆಸ್ಟ್ ಸಲ್ಲಿಸಬಹುದು.

Published: April 23, 2024, 17:00 IST