ಭಾರತವು ಡಿಜಿಟಲ್ ಆರ್ಥಿಕತೆಯತ್ತ ಮುನ್ನಡೆಯುತ್ತಿದೆ, ಇಲ್ಲಿ ಟೆಕ್ ಪ್ಲಾಟ್ಫಾರ್ಮ್ಗಳ ಬಳಕೆ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಯುತ್ತದೆ. ಇ ಕಾಮರ್ಸ್ ವ್ಯಾಪಾರದಲ್ಲಿ ತೊಡಗಿಕೊಳ್ಳಲು ನಾವು ನಿಮಗೆ 7 ಹೊಸ ಐಡಿಯಾಗಳನ್ನು ನೀಡುತ್ತಿದ್ದೇವೆ.
ಹಾಗಾದರೆ ಇ ಕಾಮರ್ಸ್ ವಹಿವಾಟು ಆರಂಭಿಸಲು ಬಂಡವಾಳ ಎಲ್ಲಿ ಸಂಗ್ರಹಿಸಬಹುದು? ಏಳು ವಿಭಿನ್ನ ಆಯ್ಕೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಸದ್ಯದ ಮಾರುಕಟ್ಟೆಯನ್ನು ಗಮನಿಸಿದರೆ ಅತೀ ಹೆಚ್ಚು ವಹಿವಾಟುಗಳು ಡಿಜಿಟಲ್ ಫ್ಲ್ಯಾಟ್ ಫಾರ್ಮ್ ಮುಖಾಂತರವೇ ನಡೆಯುತ್ತಿವೆ. ಜನ ಈಗ ಆಫ್ ಲೈನ್ ಗಿಂತ ಆನ್ ಲೈನ್ ಮುಖಾಂತರವಾಗಿಯೇ ಅತೀ ಹೆಚ್ಚು ವ್ಯವಹಾರ ಮಾಡಲು ಇಷ್ಟಪಡುತ್ತಿದ್ದಾರೆ. ಇದರ ಅರ್ಥ ಡಿಜಿಟಲ್ ಫ್ಲ್ಯಾಟ್ ಫಾರ್ಮ್ ವ್ಯವಹಾರಗಳಿಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ಇದಕ್ಕೆ ಪೂರಕವಾಗಿ ಇ ಕಾಮರ್ಸ್ ಉದ್ಯಮಗಳು ಕೂಡ ತಮ್ಮ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಲು ನೋಡುತ್ತಿವೆ. ತಮ್ಮ ಕಾರ್ಯವ್ಯಾಪ್ತಿಯನ್ನ ಹೆಚ್ಚಿಸಿಕೊಳ್ಳಲು ಇ ಕಾಮರ್ಸ್ ಉದ್ಯಮಗಳಿಗೆ ಹೆಚ್ಚಿನ ಪ್ರಮಾಣದ ಬಂಡವಾಳದ ಅಗತ್ಯತೆಯಂತೂ ಇದ್ದೇ ಇದೆ.
ಇ-ಕಾಮರ್ಸ್ ಉದ್ಯಮಗಳಿಗಾಗಿಯೇ 7 ಸಾಲಗಳು 1. ವರ್ಕಿಂಗ್ ಕ್ಯಾಪಿಟಲ್ ಲೋನ್: ಇ ಕಾಮರ್ಸ್ ಉದ್ಯಮಗಳು ನಿಭಾಯಿಸಬಹುದಾದ ದಿನನಿತ್ಯದ ಖರ್ಚು ವೆಚ್ಚಗಳ ಪೂರೈಕೆಗಾಗಿ ನೀಡುವ ಸಾಲವೇ ವರ್ಕಿಂಗ್ ಕ್ಯಾಪಿಟಲ್ ಲೋನ್. ಕಚೇರಿ ಬಾಡಿಗೆ ಮತ್ತು ನಿರ್ವಹಣೆ ಖರ್ಚು, ಉದ್ಯೋಗಿಗಳ ಸಂಬಳ ಮತ್ತಿತರೆ ವೆಚ್ಚಗಳ ಪೂರೈಕೆಗಾಗಿ, ವರ್ಕಿಂಗ್ ಕ್ಯಾಪಿಟಲ್ ಲೋನ್ ಕೊಡಲಾಗುತ್ತದೆ.
2. ಸಣ್ಣ ವ್ಯಾಪಾರ ಸಾಲಗಳು: SME ಸಾಲಗಳು ಎಂದೂ ಕರೆಯಲ್ಪಡುವ ಈ ನಿಧಿಯ ಆಯ್ಕೆಯು ಇ-ಕಾಮರ್ಸ್ ಸ್ಟಾರ್ಟ್ ಅಪ್ ಗಳಿಗಾಗಿಯೇ ಮೀಸಲಿರುವ ಸಾಲ. ಈ ಸಾಲ ಹೆಚ್ಚಿನ ಬಂಡವಾಳ ಹೂಡಿಕೆ ಅಥವಾ ಮಾಸಿಕ ವಹಿವಾಟು ಇಲ್ಲದೆ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಗತ್ಯ ಪೂರೈಸಲು ನೆರವಾಗುತ್ತವೆ.
3. ಅಲ್ಪಾವಧಿಯ ಬಿಸಿನಸ್ ಲೋನ್: ಉದ್ಯಮಿಗಳಿಗೆ ಬೇಕಾದ ತುರ್ತು ಅಗತ್ಯತೆಗಳ ಪೂರೈಕೆಗಾಗಿ ನೀಡುವ ಸಾಲವೆ ಈ ಅಲ್ಪಾವಧಿ ಸಾಲ. ಅವಧಿ ಅಲ್ಪಕಾಲವಾದ್ದರಿಂದ ಬಡ್ಡಿ ದರ ಕೊಂಚ ಜಾಸ್ತಿಯೇ ಇರುತ್ತದೆ.
4. ದೀರ್ಘಾವಧಿ ಉದ್ಯಮ ಸಾಲ: ಈ ಕಾಮರ್ಸ್ ಉದ್ಯಮಿಗಳು ತಮ್ಮ ಕಾರ್ಯಸಾಧನೆಯ ವ್ಯಾಪ್ತಿ ಹೆಚ್ಚಿಸಿಕೊಳ್ಳಲು, ಮಾಡಿಕೊಳ್ಳಬೇಕಾದ ಮಾರ್ಕೇಟಿಂಗ್ ವ್ಯವಸ್ಥೆ, ಮತ್ತು ಮತ್ತಿತರೆ ನಿರಂತರ ಖರ್ಚು ವೆಚ್ಚ ಪೂರೈಸಲು, ದೀರ್ಘಾವಧಿ ಉದ್ಯಮ ಸಾಲ ನೆರವಿಗೆ ಬರುತ್ತದೆ. ಈ ಬಗೆಯ ಸಾಲಕ್ಕೆ ಕಡಿಮೆ ಪ್ರಮಾಣದ ಬಡ್ಡಿ ಹಾಕಲಾಗುತ್ತೆ. ಮತ್ತು ಮಾಸಿಕ ಕಂತುಗಳ ರೂಪದಲ್ಲಿಯೂ ಈ ಸಾಲ ಮರುಪಾವತಿ ಮಾಡಲು ಅವಕಾಶ ಇರುತ್ತದೆ.
5. ವಾಣಿಜ್ಯ ವ್ಯವಹಾರ ಸಾಲಗಳು: ಇ-ಕಾಮರ್ಸ್ ವ್ಯವಹಾರಕ್ಕಾಗಿ ಈ ಸಾಲಗಳು 3-5 ವರ್ಷಗಳ ಮರುಪಾವತಿ ಅವಧಿಯೊಂದಿಗೆ ರೂ 50 ಲಕ್ಷದವರೆಗೆ ತಕ್ಷಣದ ಬಂಡವಾಳವನ್ನು ನೀಡುತ್ತವೆ. ಕಮರ್ಷಿಯಲ್ ಬಿಸಿನಸ್ ಲೋನ್ ಸಹ ಅತ್ಯುತ್ತಮ ಆಯ್ಕೆಗಳ್ಲೊಂದು. ಸಾಲವು ಒಂದು ವರ್ಷದವರೆಗೆ ನಡೆಯುವ ವ್ಯವಹಾರಗಳಿಗೆ ಸೂಕ್ತವಾಗಿದೆ ಮತ್ತು ಲಾಭದಾಯಕವಾಗಿದೆ. ಇದು ಬಹು ಮರುಪಾವತಿ ಆಯ್ಕೆಗಳನ್ನು ಹೊಂದಿದೆ.
6. ಸೆಕ್ಯುರಿಟಿಗಳ ಮೇಲಿನ ಸಾಲ: ಸ್ಟಾರ್ಟ್ ಅಪ್ ಹೂಡಿಕೆದಾರರ ಬಂಡವಾಳದ ಮೇಲೆ ಸಾಲ ಸಿಗುತ್ತದೆ. ಸೆಕ್ಯೂರೀಟಿಸ್ ಆಧಾರದಲ್ಲಿ ಶೇ. 75ರವರೆಗೆ ಸಾಲ ದೊರೆಯುತ್ತದೆ. ಮೇಲಾಧಾರವಾಗಿ ಆಸ್ತಿಗಳನ್ನು ಒತ್ತೆ ಇಡುವ ಅಗತ್ಯವಿಲ್ಲ. ಈ ಸಾಲ ಪಡೆದುಕೊಳ್ಳಲು ಕನಿಷ್ಠ ಅರ್ಹತೆ ಮಾನದಂಡ ಸಾಕಾಗುತ್ತದೆ.
7. ಸ್ಟಾರ್ಟಪ್ ಲೋನ್: ಸ್ಟಾರ್ಟ್ ಅಪ್ ಲೋನ್ ಗಳನ್ನು ಪಡೆದುಕೊಳ್ಳುವ ವಿಧಾನ ಸಹ ಅತಿ ಸುಲುಭವಾಗಿದೆ. ನಿರ್ದಿಷ್ಟ ಪಡಿಸಿದ ಸ್ವರೂಪದಲ್ಲಿರುವ ಸ್ಟಾರ್ಟ್ ಅಪ್ ಗಳಿಗೆ ಸಾಲ ದೊರೆಯುತ್ತದೆ. ಅತಿ ಹೆಚ್ಚಿನ ಮೊತ್ತದ ಸಾಲದ ಅಗತ್ಯವಿದ್ದರೂ ಇಲ್ಲಿ ಸಿಗಬಹುದು. ಆದರೆ ಸ್ಟಾರ್ಟ್ ಅಪ್ ಐಡಿಯಾ ಸಾಲದಾತ ಸಂಸ್ಥೆಗೆ ಹಿಡಿಸುವಂತೆ ಇರಬೇಕು. ಈ ಬಗೆಯ ಸಾಲ ನೀವು ಅರ್ಜಿ ಸಲ್ಲಿಸಿದ ಅರ್ಧ ಗಂಟೆಯಲ್ಲಿ ಮಂಜೂರಾಗಿ ಎರಡು ದಿನದಲ್ಲಿ ಕೈಸೇರುತ್ತದೆ.
ಸುಲಭಕ್ಕೆ ಇ ಕಾಮರ್ಸ್ ಸಾಲ ಒದಗಿಸುವ IIFL
IIFL ಫೈನಾಶಿಯಲ್ ಸರ್ವೀಸ್ ಈ ಬಗೆಯ ಸಾಲ ನೀಡುವಲ್ಲಿ ಜನಪ್ರಿಯವಾಗಿದೆ. 30 ಲಕ್ಷ ರೂಪಾಯಿಗಳವರೆಗೆ ಸಾಲ ದೊರೆಯುತ್ತದೆ. ಸಾಲದ ಬಡ್ಡಿ ದರವೂ ಆಕರ್ಷಕವಾಗಿದ್ದು ಮರುಪಾವತಿ ಹೊಣೆಗಾರಿಕೆ ಕಡಿಮೆ ಇರುತ್ತದೆ. ಇ ಕಾಮರ್ಸ್ ಗೆ ಸಂಬಂಧಿಸಿದ ಸಾಲಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ https://www.iifl.com ಇಲ್ಲಿ ಕ್ಲಿಕ್ ಮಾಡಿ.
ಇನ್ನಷ್ಟು ಸರಳವಾಗಿ ತಿಳಿದುಕೊಳ್ಳೋಣ
1: IIFL ಫೈನಾನ್ಸ್ನಿಂದ ಇ-ಕಾಮರ್ಸ್ಗಾಗಿ ಸಾಲವನ್ನು ತೆಗೆದುಕೊಳ್ಳಲು ಅರ್ಹತೆಯ ಮಾನದಂಡಗಳು ಯಾವುವು? ಉತ್ತರ: ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ: 1. ಆರು ತಿಂಗಳಿಗಿಂತ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತ ಬಂದಿರುವ ಕಂಪನಿ ಅರ್ಜಿ ಹಾಕಬಹುದು. 2. ಅರ್ಜಿ ಸಲ್ಲಿಸಿದ ಸಮಯಕ್ಕಿಂತ ಮೊದಲಿನ ಮೂರು ತಿಂಗಳಲ್ಲಿ 90,000 ರೂ.ಗಳ ಕನಿಷ್ಠ ವಹಿವಾಟು ಆಗಿರಬೇಕು. 3. ಸಾಲಕ್ಕೆ ಅರ್ಜಿ ಸಲ್ಲಿಸುವ ಕಂಪನಿ ಬ್ಲಾಕ್ ಲಿಸ್ಟ್ ಆಗಿರಬಾರದು. 4. ಕಚೇರಿ ಅಥವಾ ವ್ಯಾಪಾರ ಸ್ಥಳವು ಸಂಬಂಧಿಸಿದ ಆಡಳಿತದ ನೆಗೆಟಿವ್ ಲಿಸ್ಟ್ ನಲ್ಲಿ ಇರಬಾರದು. 5. ಚಾರಿಟಬಲ್ ಸಂಸ್ಥೆಗಳು, ಎನ್ಜಿಒಗಳು ಮತ್ತು ಟ್ರಸ್ಟ್ಗಳು ವ್ಯಾಪಾರ ಸಾಲಕ್ಕೆ ಅರ್ಹವಾಗಿರುವುದಿಲ್ಲ.
2: IIFL ಫೈನಾನ್ಸ್ನಿಂದ ವ್ಯಾಪಾರ ಸಾಲವನ್ನು ಪಡೆಯಲು ಉದ್ಯಮಿಗಳಿಗೆ ಕೋಲಾಟರಲ್ ಅಗತ್ಯವಿದೆಯೇ? ಉತ್ತರ: ಇಲ್ಲ, IIFL ಫೈನಾನ್ಸ್ನ ಬಿಸಿನೆಸ್ ಲೋನಿಗೆ ಬಿಸಿನೆಸ್ ಲೋನ್ ತೆಗೆದುಕೊಳ್ಳಲು ಯಾವುದೇ ಆಸ್ತಿಯನ್ನು ಮೇಲಾಧಾರವಾಗಿ ಒತ್ತೆ ಇಡುವ ಅಗತ್ಯವಿಲ್ಲ.
Q.3: ನಾನು ಸ್ಟಾರ್ಟ್ಅಪ್ ಬಿಸಿನೆಸ್ ಲೋನ್ ಆಗಿ ಪಡೆದುಕೊಳ್ಳಬಹುದಾದ ಗರಿಷ್ಠ ಮೊತ್ತ ಎಷ್ಟು? ಉತ್ತರ: IIFL ಫೈನಾನ್ಸ್ನ ಇ-ಕಾಮರ್ಸ್ ಸ್ಟಾರ್ಟಪ್ ಲೋನ್ನೊಂದಿಗೆ ಗರಿಷ್ಠ 30 ಲಕ್ಷ ರೂ.ಗಳ ಸಾಲ ಪಡೆಯಬಹುದು.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ