ಹೂಡಿಕೆ ಮಾಡಿ ಮರೆತುಬಿಟ್ಟರೆ ಅದಕ್ಕಿಂತ ನಷ್ಟ ಇನ್ನೊಂದಿಲ್ಲ!

ಮ್ಯೂಚುವಲ್ ಫಂಡ್‌ಗಳ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ಇದೇ ಕಾರಣಕ್ಕೆ ದೇಶದಲ್ಲಿ ಎಲ್ಲ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಗಳು ನಿರ್ವಹಣೆ ಮಾಡುತ್ತಿರುವ ಒಟ್ಟು ಅಸೆಟ್‌ಗಳು ಅಥವಾ AUM 47 ಲಕ್ಷ ಕೋಟಿ ರೂ.ಗೆ ತಲುಪಿದೆ. ಜನರು ಮ್ಯೂಚುವಲ್ ಫಂಡ್‌ಗಳಲ್ಲಿ ತುಂಬಾ ನಂಬಿಕೆ ಇಟ್ಟುಕೊಂಡಿದ್ದಾರೆ. ಇದೇ ಕಾರಣಕ್ಕೆ ಹಲವರು ಹೂಡಿಕೆ ಮಾಡಿ, ಆಮೇಲೆ ಮರೆತೇ ಬಿಡುತ್ತಾರೆ. ಆದರೆ, ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದಕ್ಕೆ ಇದು ಸರಿಯಾದ ವಿಧಾನವಲ್ಲ. ಫಂಡ್ ಹೌಸ್ ಅಥವಾ ಸ್ಕೀಮ್ ಯಾವುದೇ ಆಗಿರಲಿ, ಫಂಡ್‌ಗಳನ್ನು ಆಗಾಗ ರಿವ್ಯೂ ಮಾಡುತ್ತಿರಬೇಕು. ಹಾಗಿದ್ದರೆ ಮ್ಯೂಚುವಲ್ ಫಂಡ್‌ಗಳನ್ನು ರಿವ್ಯೂ ಮಾಡುವುದು ಅಥವಾ ವಿಶ್ಲೇಷಣೆ ಮಾಡುವುದು ಹೇಗೆ?

ಹೂಡಿಕೆ ಮಾಡಿ ಮರೆತುಬಿಟ್ಟರೆ ಅದಕ್ಕಿಂತ ನಷ್ಟ ಇನ್ನೊಂದಿಲ್ಲ!

ಮ್ಯೂಚುವಲ್ ಫಂಡ್‌ಗಳ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ಇದೇ ಕಾರಣಕ್ಕೆ ದೇಶದಲ್ಲಿ ಎಲ್ಲ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಗಳು ನಿರ್ವಹಣೆ ಮಾಡುತ್ತಿರುವ ಒಟ್ಟು ಅಸೆಟ್‌ಗಳು ಅಥವಾ AUM 47 ಲಕ್ಷ ಕೋಟಿ ರೂ.ಗೆ ತಲುಪಿದೆ. ಜನರು ಮ್ಯೂಚುವಲ್ ಫಂಡ್‌ಗಳಲ್ಲಿ ತುಂಬಾ ನಂಬಿಕೆ ಇಟ್ಟುಕೊಂಡಿದ್ದಾರೆ. ಇದೇ ಕಾರಣಕ್ಕೆ ಹಲವರು ಹೂಡಿಕೆ ಮಾಡಿ, ಆಮೇಲೆ ಮರೆತೇ ಬಿಡುತ್ತಾರೆ. ಆದರೆ, ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದಕ್ಕೆ ಇದು ಸರಿಯಾದ ವಿಧಾನವಲ್ಲ. ಫಂಡ್ ಹೌಸ್ ಅಥವಾ ಸ್ಕೀಮ್ ಯಾವುದೇ ಆಗಿರಲಿ, ಫಂಡ್‌ಗಳನ್ನು ಆಗಾಗ ರಿವ್ಯೂ ಮಾಡುತ್ತಿರಬೇಕು. ಹಾಗಿದ್ದರೆ ಮ್ಯೂಚುವಲ್ ಫಂಡ್‌ಗಳನ್ನು ರಿವ್ಯೂ ಮಾಡುವುದು ಅಥವಾ ವಿಶ್ಲೇಷಣೆ ಮಾಡುವುದು ಹೇಗೆ?

ಮೊದಲನೆಯದಾಗಿ, ಫಂಡ್‌ನ ಪರ್ಫಾರ್ಮೆನ್ಸ್‌ ನಿಮ್ಮ ಗುರಿಗಳಿಗೆ ಅನುಗುಣವಾಗಿದೆಯೇ ಎಂದು ನೋಡಿಕೊಳ್ಳಿ. ಒಂದು ನಿರ್ದಿಷ್ಟ ಉದ್ದೇಶವನ್ನು ಇಟ್ಟುಕೊಂಡು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬೇಕು. ಫಂಡ್ ಜನರೇಟ್ ಮಾಡುತ್ತಿರುವ ರಿಟರ್ನ್‌ನಿಂದ ನಿಮ್ಮ ಗುರಿ ಪೂರೈಕೆಯಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ನೋಡಬೇಕು. ಅಲ್ಲದೆ, ಇದರ ಜೊತೆಗೆ, ಇತರ ಕೆಲವು ಮೂಲಭೂತ ಅಂಶಗಳನ್ನೂ ನೀವು ನೋಡಿಕೊಳ್ಳಬೇಕು. ಈ ಪೈಕಿ ಮೊದಲನೆಯದು, ಪರ್ಫಾರ್ಮೆನ್ಸ್ ಇವ್ಯಾಲ್ಯುವೇಶನ್. ಇಲ್ಲಿ, ಕಳೆದ ಒಂದು, ಮೂರು ಮತ್ತು ಐದು ವರ್ಷಗಳಲ್ಲಿ ಫಂಡ್ ಜನರೇಟ್ ಮಾಡಿದ ರಿಟರ್ನ್ಸ್‌ ಅನ್ನು ನೋಡಿ. ರಿಟರ್ನ್ಸ್ ವಿಷಯದಲ್ಲಿ ಒಂದು ಫಂಡ್ ಕಡಿಮೆ ಪರ್ಫಾರ್ಮ್ ಮಾಡುತ್ತಿದ್ದರೆ, ಅದಕ್ಕೆ ಕಾರಣವನ್ನು ಹುಡುಕಿ. ಅಲ್ಪಾವಧಿಯಲ್ಲಿ ನಷ್ಟದಲ್ಲಿದೆ ಎಂಬ ಏಕೈಕ ಕಾರಣಕ್ಕೆ ಮ್ಯೂಚುವಲ್ ಫಂಡ್‌ನಿಂದ ನೀವು ಎಕ್ಸಿಟ್ ಆಗಬಾರದು.

ನೀವು ಹೂಡಿಕೆ ಮಾಡಿದ ಫಂಡ್‌ಗಳು ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ರಿಟರ್ನ್ಸ್ ಜನರೇಟ್ ಮಾಡುತ್ತಿಲ್ಲದಿದ್ದರೂ, ಗಡಿಬಿಡಿಯಲ್ಲಿ ಎಕ್ಸಿಟ್ ಆಗುವ ನಿರ್ಧಾರ ಮಾಡಬೇಡಿ. ಕನಿಷ್ಠ 1 ರಿಂದ 1.5 ವರ್ಷಗಳವರೆಗೆ ಫಂಡ್ ಮಾನಿಟರ್ ಮಾಡಿ. ನಿಮ್ಮ ಸ್ಕೀಮ್‌ಗೆ ಹೋಲಿಸಿದರೆ ಇತರ ಸ್ಕೀಮ್‌ಗಳು ಹೇಗೆ ಪರ್ಫಾರ್ಮ್ ಮಾಡುತ್ತಿವೆ ಎಂಬುದನ್ನು ವಿಶ್ಲೇಷಣೆ ಮಾಡಿ.

ಎರಡನೇಯ ಅಂಶವೆಂದರೆ, ಬೆಂಚ್‌ಮಾರ್ಕ್‌ ಅನ್ನು ಗುರುತಿಸುವುದಕ್ಕೆ ಸಂಬಂಧಿಸಿದೆ. ಪ್ರತಿ ಫಂಡ್‌ಗೂ ಒಂದು ಬೆಂಚ್‌ಮಾರ್ಕ್‌ ಇರುತ್ತದೆ. ಇದನ್ನು ಫಂಡ್‌ನ ಪರ್ಫಾರ್ಮೆನ್ಸ್ ವಿಶ್ಲೇಷಣೆ ಮಾಡಲು ಬಳಕೆ ಮಾಡಲಾಗುತ್ತದೆ. ಉತ್ತಮ ಮ್ಯೂಚುವಲ್ ಫಂಡ್‌ ಬೆಂಚ್‌ಮಾರ್ಕ್ ಅನ್ನು ಮೀರುತ್ತದೆ ಅಥವಾ ಬೆಂಚ್‌ಮಾರ್ಕ್‌ಗಿಂತ ಹೆಚ್ಚು ರಿಟರ್ನ್ಸ್ ನೀಡುತ್ತದೆ. ಮ್ಯೂಚುವಲ್ ಫಂಡ್‌ಗಳಿಗೆ ಬೆಂಚ್‌ಮಾರ್ಕ್‌ ಎಂಬುದು ಒಂದು ಇಂಡೆಕ್ಸ್ ಇದ್ದ ಹಾಗೆ. ಇದರ ಅಡಿಯಲ್ಲಿ ಷೇರುಗಳು ಮತ್ತು ಇತರ ಸೆಕ್ಯುರಿಟಿಗಳು ಗ್ರೂಪ್ ಆಗುತ್ತವೆ. ಒಂದು ಸ್ಪೆಸಿಫಿಕ್ ಫಾರ್ಮುಲಾ ಆಧಾರದಲ್ಲಿ ಇಂಡೆಕ್ಸ್‌ನ ಮೌಲ್ಯವನ್ನು ನಿರ್ಧಾರ ಮಾಡಲಾಗುತ್ತದೆ. ಉದಾಹರಣೆಗೆ, ಬಿಎಸ್‌ಇ ಸೆನ್ಸೆಕ್ಸ್ ಒಂದು ಬೆಂಚ್‌ಮಾರ್ಕ್‌ ಆಗಿದ್ದು, ಇದರಲ್ಲಿ 30 ಷೇರುಗಳು ಇವೆ. ಸೆನ್ಸೆಕ್ಸ್‌ ಅನ್ನು ತನ್ನ ಬೆಂಚ್‌ಮಾರ್ಕ್‌ ಇಂಡೆಕ್ಸ್ ಆಗಿ ಇಟ್ಟುಕೊಂಡಿರುವ ಒಂದು ಸ್ಕೀಮ್‌, ಈ ಬೆಂಚ್‌ಮಾರ್ಕ್‌ಗಿಂತ ಉತ್ತಮ ರಿಟರ್ನ್ಸ್ ನೀಡುತ್ತಿದೆ ಎಂದಾದರೆ, ಅದು ಉತ್ತಮ ಸ್ಕೀಮ್ ಎಂದು ಪರಿಗಣಿಸಬಹುದು.

ಮೂರನೆಯದಾಗಿ, ನಿಮ್ಮ ಫಂಡ್ ಮ್ಯಾನೇಜರ್ ಮೇಲೆ ಒಂದು ಕಣ್ಣಿಡಬೇಕು. ಮ್ಯೂಚುವಲ್ ಫಂಡ್‌ನ ಆಡಳಿತ ಮಂಡಳಿಯಲ್ಲಿ ಪದೇ ಪದೇ ಬದಲಾವಣೆ ಆಗುತ್ತಿದೆ ಎಂದಾದರೆ, ಫಂಡ್ ಮ್ಯಾನೇಜ್‌ಮೆಂಟ್‌ನ ಅಸಾಮರ್ಥ್ಯವನ್ನು ಇದು ಸೂಚಿಸುತ್ತದೆ. ಫಂಡ್ ಮ್ಯಾನೇಜರ್‌ಗಳ ಬದಲಾವಣೆಗೆ ಸಂಬಂಧಿಸಿದ ಯಾವುದೇ ಸುದ್ದಿಗೆ ಹೆಚ್ಚಿನ ಗಮನ ನೀಡಿ. ಯಾಕೆಂದರೆ, ಹೊಸ ಫಂಡ್ ಮ್ಯಾನೇಜರ್ ಬಂದಾಗ, ಫಂಡ್‌ನ ಹೂಡಿಕೆ ಸ್ಟೈಲ್‌ನಲ್ಲಿ ಗಮನಾರ್ಹ ಬದಲಾವಣೆಯಾಗುತ್ತದೆ. ಫಂಡ್ ಮ್ಯಾನೇಜರ್ ಅವಧಿಯು ಕನಿಷ್ಠ 3 ವರ್ಷಗಳವರೆಗೆ ಇರಬೇಕು ಎಂಬುದನ್ನು ಗಮನಿಸಿ. ಹಾಗೆಯೇ, ಪೋರ್ಟ್‌ಫೋಲಿಯೋಗೆ ಯಾವ ರೀತಿಯ ಬದಲಾವಣೆಗಳನ್ನು ಫಂಡ್ ಮ್ಯಾನೇಜರ್ ಮಾಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ. ಫಂಡ್‌ನ ವೆಬ್‌ಸೈಟ್‌ನಲ್ಲಿ ಈ ಎಲ್ಲ ಮಾಹಿತಿಯೂ ಲಭ್ಯವಿರುತ್ತದೆ.

ಪ್ರಮಾಣಿತ ಫೈನಾನ್ಷಿಯಲ್ ಪ್ಲಾನರ್ ಜಿತೇಂದ್ರ ಸೋಳಂಕಿ ಹೇಳುವಂತೆ, ವ್ಯಕ್ತಿಯ ಹಣಕಾಸಿನ ಗುರಿಗಳನ್ನು ಆಧರಿಸಿ ಮ್ಯೂಚುವಲ್ ಫಂಡ್ ಅನ್ನು ರಿವ್ಯೂ ಮಾಡಬೇಕು. ಫಂಡ್‌ನ ರಿಟರ್ನ್‌ ನಿಮ್ಮ ಗುರಿಗಳಿಗೆ ಅನುಗುಣವಾಗಿಯೇ ಇದೆ ಎಂಬುದನ್ನು ನೀವು ನೋಡಬೇಕು. ಮಾರ್ಕೆಟ್ ಕುಸಿದಾಗ ಎಷ್ಟರ ಮಟ್ಟಿಗಿನ ರಕ್ಷಣೆಯನ್ನು ಫಂಡ್ ಹೊಂದಿದೆ ಎಂಬುದನ್ನೂ ಪರಿಶೀಲಿಸಿ. ನಿಮ್ಮ ಸ್ಕೀಮ್‌ಗೆ ಹೋಲಿಸಿದರೆ ಇದೇ ರೀತಿಯ ಫಂಡ್ ಹೇಗೆ ಪರ್ಫಾರ್ಮ್‌ ಮಾಡಿದೆ? ಹೂಡಿಕೆ ತಂಡದ ಹೂಡಿಕೆ ಸ್ಟ್ರಾಟಜಿ ಯಾವುದು ಮತ್ತು ಪೋರ್ಟ್‌ಫೋಲಿಯೋಗೆ ಯಾವ ಬದಲಾವಣೆಗಳನ್ನು ಅವರು ಮಾಡುತ್ತಿದ್ದಾರೆ ಎನ್ನುವುದನ್ನು ಪರಿಗಣಿಸಿದ ನಂತರವೇ ಹೂಡಿಕೆಯ ನಿರ್ಧಾರ ಮಾಡಿ.

ಡಿಜಿಟಲ್ ಮಾಹಿತಿ ಸುಲಭವಾಗಿ ಸಿಗುವ ಈ ಕಾಲದಲ್ಲಿ ಹಲವು ವೆಬ್‌ಸೈಟ್‌ಗಳು ಮತ್ತು ಆಪ್‌ಗಳ ಮೂಲಕ ವಿವಿಧ ಮ್ಯೂಚುವಲ್ ಫಂಡ್‌ಗಳ ಪರ್ಫಾರ್ಮೆನ್ಸ್ ಟ್ರ್ಯಾಕ್ ಮಾಡುವುದು ತುಂಬಾ ಸುಲಭವಾಗಿದೆ. ಟಿವಿ ಚಾನೆಲ್‌ಗಳು ಮತ್ತು ದಿನಪತ್ರಿಕೆಗಳು ಆಗಾಗ್ಗೆ ಮ್ಯೂಚುವಲ್ ಫಂಡ್‌ಗಳನ್ನು ವಿಶ್ಲೇಷಿಸುತ್ತಿರುತ್ತವೆ. ನಿಮ್ಮ ಹೂಡಿಕೆಯನ್ನು ಟ್ರ್ಯಾಕ್ ಮಾಡಲು ಫಂಡ್‌ನ ಫ್ಯಾಕ್ಟ್‌ಶೀಟ್ ಅನ್ನು ಕೂಡಾ ನೀವು ಬಳಸಬಹುದು. ಫ್ಯಾಕ್ಟ್‌ಶೀಟ್ ಎಂಬುದು ಬೇಸಿಕ್ ಆದ, ಒಂದು ಪುಟದ ದಾಖಲೆಯಾಗಿದ್ದು, ಇದರಲ್ಲಿ ಸ್ಕೀಮ್‌ನ ಪರ್ಫಾರ್ಮೆನ್ಸ್‌ ಮತ್ತು ಅದರ ಪೋರ್ಟ್‌ಫೋಲಿಯೋ ಮಾಹಿತಿ ಇರುತ್ತದೆ. ಇದನ್ನು ಮ್ಯೂಚುವಲ್ ಫಂಡ್‌ಗಳು ಪ್ರತಿ ತಿಂಗಳು ಪ್ರಕಟಿಸುತ್ತವೆ. ಇದರ ಜೊತೆಗೆ, AMFI ವೆಬ್‌ಸೈಟ್ ಮೂಲಕವೂ ಫಂಡ್‌ನ ಪರ್ಫಾರ್ಮೆನ್ಸ್‌ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

Published: April 24, 2024, 11:00 IST