ಈ ಸ್ಥಿತಿಯಲ್ಲಿದ್ದವರು ಸೆಕ್ಟರಲ್ ಫಂಡ್ ಕಡೆ ಸುಳಿಯಬೇಡಿ!

ದೇಶದ ಮೂಲಸೌಕರ್ಯ ವಲಯದ ಅಭಿವೃದ್ಧಿ ಕ್ಷಿಪ್ರ ಪಥದಲ್ಲಿ ಸಾಗಿದೆ. ಸರ್ಕಾರದ ವಿಕಸಿತ ಭಾರತ ಅಭಿಯಾನವು ಈ ವಲಯಕ್ಕೆ ಇನ್ನಷ್ಟು ಇಂಬು ನೀಡಬಹುದು ಅನ್ನೋ ಆಶಯ ಇದೆ. ವಿಕಸಿತ ಭಾರತ ಅಭಿಯಾನಕ್ಕೆ ಚುರುಕು ನೀಡುವ ಗುರಿಯೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಅನೇಕ ಪ್ರಮುಖ ಕ್ರಾಂತಿಕಾರಕ ನೀತಿಗೆ ಈ ಬಾರಿಯ ಮಧ್ಯಂತರ ಬಜೆಟ್ ನಲ್ಲಿ ಘೋಷಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಮೂಲ ಸೌಕರ್ಯ ವಲಯಕ್ಕೆ 11.11 ಲಕ್ಷಕೋಟಿ ಹಂಚಿಕೆ ಮಾಡಲಾಗಿದೆ. ಇದು ಜಿಡಿಪಿಯ ಸುಮಾರು ಶೇಕಡ 3.4 ರಷ್ಟಿದೆ.

ಈ ಸ್ಥಿತಿಯಲ್ಲಿದ್ದವರು ಸೆಕ್ಟರಲ್ ಫಂಡ್ ಕಡೆ ಸುಳಿಯಬೇಡಿ!

ದೇಶದ ಮೂಲಸೌಕರ್ಯ ವಲಯದ ಅಭಿವೃದ್ಧಿ ಕ್ಷಿಪ್ರ ಪಥದಲ್ಲಿ ಸಾಗಿದೆ. ಸರ್ಕಾರದ ವಿಕಸಿತ ಭಾರತ ಅಭಿಯಾನವು ಈ ವಲಯಕ್ಕೆ ಇನ್ನಷ್ಟು ಇಂಬು ನೀಡಬಹುದು ಅನ್ನೋ ಆಶಯ ಇದೆ. ವಿಕಸಿತ ಭಾರತ ಅಭಿಯಾನಕ್ಕೆ ಚುರುಕು ನೀಡುವ ಗುರಿಯೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಅನೇಕ ಪ್ರಮುಖ ಕ್ರಾಂತಿಕಾರಕ ನೀತಿಗೆ ಈ ಬಾರಿಯ ಮಧ್ಯಂತರ ಬಜೆಟ್ ನಲ್ಲಿ ಘೋಷಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಮೂಲ ಸೌಕರ್ಯ ವಲಯಕ್ಕೆ 11.11 ಲಕ್ಷಕೋಟಿ ಹಂಚಿಕೆ ಮಾಡಲಾಗಿದೆ. ಇದು ಜಿಡಿಪಿಯ ಸುಮಾರು ಶೇಕಡ 3.4 ರಷ್ಟಿದೆ.

ಈ ವರ್ಷ ಸತತ ನಾಲ್ಕನೇ ಬಾರಿಗೆ ಮೂಲಸೌಕರ್ಯ ವಲಯಕ್ಕೆ ಬಜೆಟ್ ನಲ್ಲಿ ಹೆಚ್ಚಿನ ಹಂಚಿಕೆ ಮಾಡಲಾಗಿದೆ. ಇದರ ದೂರದೃಷ್ಟಿಯ ಪರಿಣಾಮವನ್ನ ಹೂಡಿಕೆ ಆಯ್ಕೆಗಳಲ್ಲಿ ಗಮನಿಸಬಹುದು. ಉದಾಹರಣೆಗೆ, ಮೂಲಸೌಕರ್ಯ ವಲಯದ ಮ್ಯೂಚುಯಲ್‌ ಫಂಡ್‌ ಗಳು ಒಂದು ವರ್ಷದಲ್ಲಿ ಸರಾಸರಿ ಶೇಕಡ 60 ರಷ್ಟು ರಿಟರ್ನ್ಸ್ ಕೊಟ್ಟಿವೆ. ಆದಾಗ್ಯೂ, ಈ ಫಂಡ್ ಗಳು ಎಲ್ಲರಿಗೂ ಸರಿ ಹೊಂದೋದಿಲ್ಲ. ಹೂಡಿಕೆದಾರರು ತರಾತುರಿಯಲ್ಲಿ ಈ ಫಂಡ್ ಗಳಲ್ಲಿ ಹೂಡಿಕೆ ಮಾಡಬಾರದು. ಹೂಡಿಕೆಗೂ ಮೊದಲು ಆ ಪ್ರಾಡಕ್ಟ್ ಅರ್ಥ ಮಾಡಿಕೊಳ್ಳುವುದು ತುಂಬಾನೇ ಮುಖ್ಯ. ಈಗ ಮೂಲಸೌಕರ್ಯ ವಲಯದ ಮ್ಯೂಚುಯಲ್‌ ಫಂಡ್‌ ಗಳು ಎಂದರೇನು? ಅವುಗಳಲ್ಲಿ ನೀವು ಹೂಡಿಕೆ ಮಾಡಬಹುದಾ? ಈ ವಿಚಾರವನ್ನು ಸಹ ತಿಳಿದುಕೊಳ್ಳಬೇಕು.

ನಿರ್ದಿಷ್ಟ ವಲಯದಲ್ಲಿ ಅಂದರೆ ಬ್ಯಾಂಕಿಂಗ್, ಔಷಧ ಮತ್ತು ತಂತ್ರಜ್ಞಾನ ಸೇರಿದಂತೆ ಯಾವುದೇ ಒಂದು ವಲಯದ ಷೇರುಗಳಲ್ಲಿ ಶೇಕಡ 80 ರಷ್ಟು ಹೂಡಿಕೆ ಮಾಡೋ ಈಕ್ವಿಟಿ ಮ್ಯೂಚುಯಲ್‌ ಫಂಡ್‌ ಗಳೇ ಈ ಸೆಕ್ಟರಲ್ ಫಂಡ್ ಗಳು. ಮೂಲಸೌಕರ್ಯ ವಲಯದ ಕಂಪೆನಿಗಳ ಷೇರುಗಳಲ್ಲಿ ಹೂಡಿಕೆ ಮಾಡೋ ಸ್ಕೀಂಗಳೇ ಸೆಕ್ಟರಲ್ ಇನ್ಫ್ರಾ ಸ್ಟ್ರಕ್ಚರ್ ಫಂಡ್. ವಿದ್ಯುತ್, ರೈಲ್ವೆ ಮತ್ತು ಬಂದರು ವಲಯದ ಕಂಪೆನಿಗಳೂ ಇದರಡಿ ಸೇರಿವೆ. ಮೂಲಸೌಕರ್ಯ ವಲಯಕ್ಕೆ ಸರ್ಕಾರ ಸಾಕಷ್ಟು ಬೆಂಬಲ ಕೊಡುತ್ತಿದ್ದರೆ ಮಾರುಕಟ್ಟೆ ಪರಿಸ್ಥಿತಿ ಅನುಕೂಲಕರವಾಗಿದ್ದರೆ, ಸೆಕ್ಟರಲ್ ಫಂಡ್ ಗಳು ಅತ್ಯುತ್ತಮ ಫಲಿತಾಂಶ ಗಳನ್ನ ಕೊಡುತ್ತವೆ. ಮೂಲಸೌಕರ್ಯ ಫಂಡ್‌ ಗಳಲ್ಲಿ ಇದನ್ನ ಗಮನಿಸಲು ಸಾಧ್ಯವಿದೆ.

ಇನ್ನು ಗಳಿಕೆ ವಿಚಾರವಾಗಿ ನೋಡೋದಾದ್ರೆ, ಫೆಬ್ರವರಿ 28ರ ವೇಳೆಗೆ ಸೆಕ್ಟರಲ್‌ ಇನ್ಫ್ರಾ ಸ್ಟ್ರಕ್ಚರ್‌ ಫಂಡ್‌ ಗಳು ಕಳೆದ ವರ್ಷ ಸರಾಸರಿ ಶೇಕಡ 62 ರಷ್ಟು ರಿಟರ್ನ್ಸ್‌ ಕೊಟ್ಟಿವೆ. ಮೂರು ವರ್ಷಗಳಲ್ಲಿ ಶೇಕಡ 31 ರಷ್ಟು ಹಾಗೂ ಐದು ವರ್ಷಗಳಲ್ಲಿ ಶೇಕಡ 25 ರಷ್ಟು ರಿಟರ್ನ್ಸ್‌ ಕೊಟ್ಟಿವೆ. ಅದೇ ಅವಧಿಯಲ್ಲಿ ಎಸ್‌ & ಪಿ, ಬಿಎಸ್‌ಇ ಇಂಡಿಯಾ ಇನ್ಫ್ರಾಸ್ಟ್ರಕ್ಚರ್‌ ನ ಒಟ್ಟು ಗಳಿಕೆ ಸೂಚ್ಯಂಕ ಶೇಕಡ 112, 40 ಮತ್ತು 29 ರ ಷ್ಟು ರಿಟರ್ನ್ಸ್‌ ಕೊಟ್ಟಿವೆ. ಈ ಟ್ರೆಂಡ್ ಮೂಲಸೌಕರ್ಯ ವಲಯ ಪ್ರಗತಿಯ ಕಡೆ ಸಾಗುತ್ತಿದೆ ಎನ್ನುವ ಸೂಚನೆ ಸಿಗುತ್ತಿದೆ. ಇವು ವಲಯಾಧಾರಿತವಾಗಿ ಮೂಲಸೌಕರ್ಯ ವಲಯದಲ್ಲಿ ಹೂಡಿಕೆ ಮಾಡೋಕೆ ಬಯಸೋರಿಗೆ ಆಶಾದಾಯಕ ಸಂಕೇತ ಎಂದೇ ಹೇಳಬಹುದು.

ನೀವೂ ಕೂಡ ಇನ್ಫ್ರಾ ಸ್ಟ್ರಕ್ಚರ್‌ ಸೆಕ್ಟರಲ್‌ ಫಂಡ್‌ ಗಳಲ್ಲಿ ಹೂಡಿಕೆ ಮಾಡಬೇಕಾ? ಸೆಕ್ಟರಲ್‌ ಫಂಡ್‌ ಗಳು ಸ್ವಲ್ಪ ರಿಸ್ಕಿ ಅನ್ನೋದು ಗೊತ್ತಿರಲಿ. ಯಾಕೆ ಅಂದ್ರೆ ಎಲ್ಲಾ ಹಣ ಒಂದೇ ವಲಯದಲ್ಲಿ ಕೆಲವು ಕಂಪೆನಿಗಳಿಗೆ ಆದ್ಯತೆ ನೀಡಿ ಹೂಡಿಕೆ ಮಾಡಲಾಗಿರತ್ತದೆ. ಹೀಗಾಗಿ ಇದು ರಿಸ್ಕಿ. ಸ್ಟಾಕ್‌ ಮಾರ್ಕೆಟ್‌ ಪರ್ಫಾರ್ಮೆನ್ಸ್‌ ಚೆನ್ನಾಗಿದ್ದರೆ ಒಳ್ಳೇ ರಿಸಲ್ಟ್ಸ್‌ ಸಿಗುತ್ತದೆ. ಆದರೆ, ಮಾರುಕಟ್ಟೆ ಇಳಿಕೆಯ ಹಾದಿಯಲ್ಲಿದ್ದರೆ ಅದು ಅಪಾಯಕಾರಿಯಾಗಬಹುದು. ಇದರಿಂದ ನೀವು ಗಣನೀಯ ನಷ್ಟ ಅನುಭವಿಸಬೇಕಾಗಬಹುದು.

ಇನ್ವೆಸ್ಟೋಗ್ರಫಿ ಸಂಸ್ಥಾಪಕರಾದ ಶ್ವೇತಾ ಜೈನ್‌ ಈ ಬಗ್ಗೆ ಏನು ಹೇಳುತ್ತಾರೆ ಎಂದು ನೋಡಬೇಕು. ಹೊಸ ಹೂಡಿಕೆದಾರರು ಸೆಕ್ಟರಲ್‌ ಫಂಡ್‌ ಗಳಿಂದ ದೂರ ಇರುವುದು ಒಳ್ಳೆಯದು. ಇನ್ನು ಅನುಭವಿ ಹೂಡಿಕೆದಾರರು ತಮ್ಮ ಪೋರ್ಟ್‌ಫೋಲಿಯೋದ ಶೇಕಡ 5 ರಿಂದ 10 ರಷ್ಟನ್ನ ಮಾತ್ರ. ಈ ವಲಯಕ್ಕೆ ಮೀಸಲಿಡಬಹುದು. ನಿಮಗೆ ಆ ವಲಯದ ಬಗ್ಗೆ ಸಾಕಷ್ಟು ತಿಳಿವಳಿಕೆ ಇದ್ದರೆ ಮಾತ್ರ, ನೀವು ಸೆಕ್ಟರಲ್‌ ಫಂಡ್‌ ಗಳಲ್ಲಿ ಹೂಡಿಕೆ ಮಾಡುವುದನ್ನು ಮುಖ್ಯವಾಗಿ ಪರಿಗಣಿಸಬಹುದು. ಅದರ ಜೊತೆಗೆ ನೀವು ಹೆಚ್ಚಿನ ರಿಸ್ಕ್‌ ತೆಗೆದುಕೊಳ್ಳಲು ಸಿದ್ಧರಿರಬೇಕು. ಆರ್ಥಿಕ ಪ್ರೆಗತಿಯೊಂದಿಗೆ ಸೆಕ್ಟರಲ್‌ ಫಂಡ್‌ ಗಳ ಪರ್ಫಾರ್ಮೆನ್ಸ್‌ ನಿಕಟ ನಂಟು ಹೊಂದಿದೆ ಎನ್ನುವುದು ಹೂಡಿಕೆದಾರರಿಗೆ ಗೊತ್ತಿರಬೇಕು.

ಹೂಡಿಕೆ ಬಗ್ಗೆ ತಿಳ್ಕೊಂಡಿದ್ದಾಯಿತು. ಈಗ ತೆರಿಗೆ ಬಗ್ಗೆ ತಿಳಿದುಕೊಳ್ಳುವ ಸಮಯ. ಸೆಕ್ಟರಲ್‌ ಫಂಡ್‌ ಗಳ ಗಳಿಕೆಯು ಹೇಗೆ ತೆರಿಗೆಗೆ ಒಳಪಡುತ್ತದೆ ಎನ್ನುವುದನ್ನು ನೋಡೋಣ. ಸೆಕ್ಟರಲ್‌ ಫಂಡ್‌ ಗಳು ಈಕ್ವಿಟಿ ಕ್ಯಾಟಗರಿಯಡಿ ಸೇರುತ್ತದೆ. ಈಕ್ವಿಟಿ ಫಂಡ್‌ ಗಳ ಯೂನಿಟ್‌ ಗಳನ್ನ ಒಂದು ವರ್ಷದೊಳಗೆ ಮಾರಾಟ ಮಾಡಿದರೆ ಆ ಗಳಿಕೆಯನ್ನು ಅಲ್ಪಾವಧಿ ಕ್ಯಾಪಿಟಲ್‌ ಗೇನ್‌ – ಎಸ್‌ ಟಿ ಸಿ ಜಿ ಅಂತಾ ಪರಿಗಣಿಸಲಾಗುತ್ತದೆ. ಇದರ ಮೇಲೆ ಶೇಕಡ 15 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಒಂದು ವೇಳೆ, ಈಕ್ವಿಟಿ ಫಂಡ್‌ ಯೂನಿಟ್‌ ಗಳನ್ನ ಖರೀದಿಸಿದ ಕನಿಷ್ಠ ಒಂದು ವರ್ಷದ ನಂತರ ಮಾರಾಟ ಮಾಡಿದ್ರೆ, ಆಗ ಅದು ದೀರ್ಘಾವಧಿ ಕ್ಯಾಪಿಟಲ್‌ ಗೇನ್‌ – ಎಲ್‌ ಟಿ ಸಿ ಜಿ. ಈಕ್ವಿಟಿ ಫಂಡ್‌ ಗಳ ಎಲ್‌ ಟಿ ಸಿ ಜಿ ಮೇಲೆ ಶೇಕಡ 10 ರಷ್ಟು ತೆರಿಗೆ ಅನ್ವಯವಾಗತ್ತದೆ. ಒಂದು ಹಣಕಾಸು ವರ್ಷದಲ್ಲಿ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ಕ್ಯಾಪಿಟಲ್‌ ಗೇನ್‌ ಇದ್ದರೆ ಮಾತ್ರ ಈ ತೆರಿಗೆ ಅನ್ವಯವಾಗುತ್ತದೆ. ಅಂದರೆ ಒಂದು ಲಕ್ಷ ರೂಪಾಯಿವರೆಗಿನ ದೀರ್ಘಾವಧಿ ಕ್ಯಾಪಿಟಲ್‌ ಗೇನ್‌ ಮೇಲೆ ಯಾವುದೇ ತೆರಿಗೆ ಹಾಕಲಾಗುವುದಿಲ್ಲ.

ಸೆಕ್ಟರಲ್‌ ಫಂಡ್‌ ಗಳು ಅತಿ ಹೆಚ್ಚಿನ ರಿಸ್ಕ್‌ ಇರೋ ಮ್ಯೂಚುಯಲ್‌ ಫಂಡ್‌ ಗಳು. ಏಕೆಂದರೆ ಅವು ಮೂಲತಃ ಒಂದೇ ಒಂದು ವಲಯದಲ್ಲಿ ಮಾತ್ರ ಹೂಡಿಕೆ ಮಾಡುತ್ತವೆ. ಇದರಿಂದ ಡೈವರ್ಸಿಫಿಕೇಷನ್‌ ಇರೋದಿಲ್ಲ. ಇದು ಪ್ರಮುಖ ರಿಸ್ಕ್‌ ಅಂಶ. ಇನ್ನು ಅನುಭವಿ ಮತ್ತು ನಿರ್ದಿಷ್ಟ ಕಾಲದಲ್ಲಿ ಹೂಡಿಕೆ ಮಾಡುವವರು ಮಾತ್ರ ಇಂತಹ ಫಂಡ್‌ ಗಳಲ್ಲಿ ಹೂಡಿಕೆಗೆ ಮನಸ್ಸು ಮಾಡಬಹುದು. ಜೊತೆಗೆ ಅವರು ತಮ್ಮ ಪೋರ್ಟ್‌ ಫೋಲಿಯೋದ ಶೇಕಡ 10 ಕ್ಕಿಂತ ಹೆಚ್ಚಿನ ಭಾಗವನ್ನ ಈ ವಲಯಕ್ಕೆ ಮೀಸಲಿಡೋದು ಒಳ್ಳೆಯದಲ್ಲ. ಇನ್ನು ಹೊಸ ಹೂಡಿಕೆದಾರರು ಈ ವಲಯದಿಂದ ದೂರ ಇರುವುದೇ ಉತ್ತಮ.

Published: April 24, 2024, 15:00 IST