ಸುರಕ್ಷಿತ ಹೂಡಿಕೆ ಎಂಬ ವಿಷಯ ಪ್ರಸ್ತಾಪಕ್ಕೆ ಬಂದಾಗೆಲ್ಲ ಎಲ್ಲರೂ ಮನಸ್ಸಿಗೆ ಬರುವ ಏಕೈಕ ಸಂಗತಿ ಅಂದರೆ ಅದು ಫಿಕ್ಸೆಡ್ ಡೆಪಾಸಿಟ್. ಎಫ್ ಡಿ ಯಲ್ಲಿ ರಿಟರ್ನ್ ಗ್ಯಾರಂಟಿ ಇರುತ್ತದೆ. ನೀವು ಫಿಕ್ಸೆಟ್ ಅವಧಿಗೆ ಅಂದರೆ ಒಂದು ಎರಡು ಅಥವಾ ಐದು ವರ್ಷಗಳಿಗೆ ಇನ್ವೆಸ್ಟ್ ಮಾಡುತ್ತೀರಿ. ಬಹುತೇಕ ಎಲ್ಲರಿಗೂ ಟರ್ಮ್ ಡೆಪಾಸಿಟ್ ಬಗ್ಗೆ ತಿಳಿದಿರುತ್ತದೆ. ಆದರೆ ನಿಮಗೆ ಗ್ರೀನ್ ಟರ್ಮ್ ಡೆಪಾಸಿಟ್ ಅಥವಾ ಗ್ರೀನ್ ಎಫ್ ಡಿ ಬಗ್ಗೆ ಗೊತ್ತಿದೆಯೇ? ಹಾಗೆಂದರೆ ಏನು? ರೆಗ್ಯುಲರ್ ಎಫ್ ಡಿ ಗೂ ಇದಕ್ಕೂ ಏನು ವ್ಯತ್ಯಾಸ? ಗ್ರೀನ್ ಮತ್ತು ನಾರ್ಮಲ್ ಎಫ್ ಡಿ ಗೂ ಬಡ್ಡಿ ದರದಲ್ಲಿ ವ್ಯತ್ಯಾಸ ಇದೆಯೇ? ಈ ಎಲ್ಲ ವಿಚಾರಗಳನ್ನು ತಿಳಿದುಕೊಳ್ಳೋಣ.
ಗ್ರೀನ್ ಎಫ್ ಡಿಯನ್ನು ಪರಿಸರ ಸ್ನೇಹಿ ಫಿಕ್ಸೆಡ್ ಡೆಪಾಸಿಟ್ ಎಂದೂ ಕರೆಯಲಾಗುತ್ತದೆ. ಇದರಿಂದ ಸಂಗ್ರಹವಾದ ಹಣವನ್ನು ಪರಿಸರಕ್ಕೆ ಅನುಕೂಲಕರವಾದ ಪ್ರಾಜೆ ಕ್ಟ್ ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಉದಾಹರಣೆಗೆ ಸೋಲಾರ್ ಪವರ್, ವಿಂಡ್ ಫಾರ್ಮ್, ತ್ಯಾಜ್ಯ ನಿರ್ವಹಣೆ ಮತ್ತು ಇಂಧನ ರಕ್ಷಾ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಈಗ ಗ್ರೀನ್ ಎಫ್ ಡಿ ಎಂಬುದು ರೆಗ್ಯುಲರ್ ಎಫ್ ಡಿ ಗಿಂತ ಹೇಗೆ ಭಿನ್ನ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಒಂದು ಸಾಮಾನ್ಯ ಬ್ಯಾಂಕ್ ಎಫ್ಡಿ ರೀತಿಯಲ್ಲೇ, ಗ್ರಾಹಕರು ಗ್ರೀನ್ ಫಿಕ್ಸೆಡ್ ಡೆಪಾಸಿಟ್ ನಲ್ಲೂ ಕೂಡ ಫಿಕ್ಸೆಡ್ ಟೈಮಿಗೆ ಹೂಡಿಕೆ ಮಾಡಬಹುದು. ಆದರೆ ಇದರಲ್ಲಿರುವ ವ್ಯತ್ಯಾಸ ಏನೆಂದರೆ ಫಂಡ್ ಅಲೊಕೇಶನ್. ಗ್ರೀನ್ ಎಫ್ ಡಿ ಯಲ್ಲಿ ಸಂಗ್ರಹವಾದ ಹಣವನ್ನು ಎಕೋ ಫ್ರೆಂಡ್ಲಿ ಪ್ರಾಜೆಕ್ಟ್ ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಆದರೆ ಸಾಮಾನ್ಯ ಡಿಪೋಸಿಟ್ ಗಳಲ್ಲಿ ಯಾವುದೇ ನಿರ್ದಿಷ್ಟ ಪ್ರಾಜೆಕ್ಟ್ ಗಳಿಗೆ ಹಣ ಹಾಕಲಾಗುವುದಿಲ್ಲ. ಇದು ಒಂದು ಸಾಮಾನ್ಯ ಹೂಡಿಕೆ ನಿಧಿಗೆ ಹೋಗುತ್ತದೆ. ಈ ನಿಧಿಯನ್ನು ವ್ಯಾಪಾರ, ಮನೆ, ವಾಹನ ಮತ್ತು ವೈಯಕ್ತಿಕ ಸಾಲಗಳಿಗೆ ಬಳಸಲಾಗುತ್ತದೆ.
ಇದನ್ನು ಹೊರತುಪಡಿಸಿ ಉಳಿದ ಎಲ್ಲ ವಿಷಯಗಳಲ್ಲೂ ಎರಡು ಎಫ್ ಡಿಗಳು ಒಂದೇ ರೀತಿಯಾಗಿರುತ್ತದೆ. ಮೆಚುರಿಟಿಯಾದಾಗ ಹಣ ವಿತ್ ಡ್ರಾ ಮಾಡುವುದು, ರಿನಿವಲ್ ಮಾಡುವ ಸೌಲಭ್ಯ ಇರುತ್ತದೆ. ಓವರ್ ಡ್ರಾಪ್ ಸೌಲಭ್ಯ ಕೂಡ ಗ್ರೀನ್ ಎಫ್ ಡಿ ಯಲ್ಲಿ ಇರುತ್ತದೆ. ಬಡ್ಡಿ ಪಾವತಿ ಮಾಸಿಕ, ತ್ರೈಮಾಸಿಕ, ವಾರ್ಷಿಕ ಅಥವಾ ಮೆಚುರಿಟಿಯಲ್ಲಿ ಮಾಡಬಹುದು. ಇದನ್ನು ಯಾವುದೇ ರೂಪದಲ್ಲಿ ಕೂಡ ಖರೀದಿ ಮಾಡಬಹುದು. ಗ್ರೀನ್ ಫಿಕ್ಸೆಡ್ ಡೆಪಾಸಿಟ್ ಅನ್ನು ಜನಸಾಮಾನ್ಯರು, ನಿವಾಸಿ ಭಾರತೀಯರು, ಹಿರಿಯ ನಾಗರಿಕರು, ಅನಿವಾಸಿ ಭಾರತೀಯರು ಅಥವಾ ಎನ್ ಆರ್ ಐ ಗಳು ಹಾಗೂ ಅಧಿಕ ಸಂಪತ್ತು ಇರುವ ವ್ಯಕ್ತಿಗಳು ಕೂಡ ತೆರೆಯಬಹುದು. ಈಗ ರೆಗ್ಯುಲರ್ ಮತ್ತು ಗ್ರೀನ್ ಎಫ್ ಡಿ ಗಳ ಬಡ್ಡಿ ದರದಲ್ಲಿರುವ ವ್ಯತ್ಯಾಸವನ್ನು ತಿಳಿದುಕೊಳ್ಳೋಣ. ಗ್ರೀನ್ ಫಿಕ್ಸೆಡ್ ಡೆಪಾಸಿಟ್ ಗಳ ಬಡ್ಡಿ ದರ ಸಾಮಾನ್ಯ ಫಿಕ್ಸೆಡ್ ಡೆಪಾಸಿಟ್ ಗಳಿಗೆ ಹೋಲಿಸಿದರೆ ಹೆಚ್ಚು ಅಥವಾ ಕಡಿಮೆ ಇರಬಹುದು. ಏಕೆಂದರೆ ಇದು ಬ್ಯಾಂಕ್ ನಿಗದಿ ಮಾಡಿದ ನೀತಿಗಳನ್ನು ಆಧರಿಸಿರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಎಚ್ ಡಿ ಎಫ್ ಸಿ ಬ್ಯಾಂಕ್, ಎ ಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಇತ್ಯಾದಿ ಸಂಸ್ಥೆಗಳು ಗ್ರೀನ್ ಎಫ್ ಡಿ ಗಳನ್ನು ವಿತರಿಸುತ್ತವೆ. ಬಡ್ಡಿ ದರಗಳಲ್ಲಿ ಎಷ್ಟು ವ್ಯತ್ಯಾಸ ಇರುತ್ತದೆ ಎಂಬುದನ್ನು ನೋಡಲು ರೆಗುಲರ್ ಎಫ್ಡಿಗಳಲ್ಲಿ ಒದಗಿಸಿರುವ ಬಡ್ಡಿ ದರಗಳನ್ನು ನೋಡಬೇಕು.
ಎಸ್ ಬಿ ಐ ರೆಗುಲರ್ ಎಫ್ ಡಿಗಳಲ್ಲಿ 3 ರಿಂದ ಏಳು ಪರ್ಸೆಂಟ್ ಬಡ್ಡಿದರ ನೀಡುತ್ತದೆ. ಏಳು ದಿನಗಳಿಂದ 10 ವರ್ಷಗಳ ಅವಧಿಯ ಎಫ್ ಡಿ ಗಳ ಮೇಲೆ ಜನಸಾಮಾನ್ಯರಿಗೆ ಈ ದರ ಇರುತ್ತದೆ. 400 ದಿನಗಳ ವಿಶೇಷ ಡಿಪೋಸಿಟ್ ಮೇಲೆ 7.10% ಬಡ್ಡಿ ಇದೆ. ಇನ್ನು ಗ್ರೀನ್ ಡೆಪಾಸಿಟ್ ಬಗ್ಗೆ ಮಾತನಾಡುವುದಾದರೆ 1,111 ರಿಂದ 1,777 ದಿನಗಳ ಎಫ್ ಡಿ ಗಳಿಗೆ 6.65% ಬಡ್ಡಿ ದರ ಇದೆ. ಇನ್ನು 2,222 ದಿನದ ಗ್ರೀನ್ ಎಫ್ ಡಿ ಮೇಲೆ 6.40% ಬಡ್ಡಿ ಸಿಗುತ್ತದೆ.
ಬಡ್ಡಿ ದರಗಳನ್ನು ಇನ್ನಷ್ಟು ಆಳವಾಗಿ ನೋಡೋಣ. 1,111 ದಿನದ ಗ್ರೀನ್ ಎಫ್ ಡಿ ವಿಷಯದಲ್ಲಿ ವಾರ್ಷಿಕ ಆಧಾರದಲ್ಲಿ ನಾವು ನೋಡಿದಾಗ ಮೂರು ವರ್ಷದ ಗ್ರೀನ್ ಎಫ್ ಡಿ ಗೆ 6.65% ಬಡ್ಡಿ ದರ ಸಿಗುತ್ತದೆ. ಇನ್ನು ಐದು ವರ್ಷದೊಳಗಿನ ಸಾಮಾನ್ಯ ಎಫ್ ಡಿ ಗೆ 6.50% ಬಡ್ಡಿ ದರ ಇದೆ. ಇಲ್ಲಿ ಗ್ರೀನ್ ಎಫ್ ಡಿ ಬಡ್ಡಿದರ ಹೆಚ್ಚಿದೆ. ಆದರೆ 2,222 ದಿನದ, ಅಂದರೆ ಆರು ವರ್ಷದ ಬಡ್ಡಿ ದರದ ವಿಷಯದಲ್ಲಿ, ಗ್ರೀನ್ ಡೆಪೋಸಿಟ್ ಬಡ್ಡಿದರ 6.40% ಇದೆ. ಆದರೆ ಸಾಮಾನ್ಯ ಟರ್ಮ್ ಡೆಪಾಸಿಟ್ ಐದರಿಂದ 10 ವರ್ಷಗಳ ಅವಧಿಗೆ 6.50% ಬಡ್ಡಿ ಕೊಡುತ್ತದೆ. ಈ ವಿಭಾಗದಲ್ಲಿ ಗ್ರೀನ್ ಎಫ್ಡಿಗಳು ಆಕರ್ಷಕವಾಗಿಲ್ಲ.
ಇನ್ನು ಬ್ಯಾಂಕ್ ಆಫ್ ಬರೋಡ ಗ್ರೀನ್ ಡೆಪಾಸಿಟ್ ಗಳನ್ನು ನೋಡೋಣ. ಒಂದು ವರ್ಷದಿಂದ 1.5 ವರ್ಷಗಳ ಅವಧಿಯ ಗ್ರೀನ್ ಡೆಪಾಸಿಟ್ಗಳ ಬಡ್ಡಿ ದರ 6.75% ಇದೆ. 777 ದಿನಗಳಿಗಿಂತ ಹೆಚ್ಚಿನ ಡೆಪಾಸಿಟ್ಗಳಿಗೆ ಅಂದರೆ 2 ವರ್ಷಗಳಿಗಿಂತ ಹೆಚ್ಚಿನದಕ್ಕೆ, ಬಡ್ಡಿ ದರ 7.15% ಇದೆ. 1,111 ದಿನಗಳು, 1717 ದಿನಗಳು ಮತ್ತು 2201 ದಿನಗಳ ಡೆಪಾಸಿಟ್ಗೆ ಬಡ್ಡಿ 6.40% ಇದೆ. ಈ ಕೊನೆಯ ಡೆಪಾಸಿಟ್ 6 ವರ್ಷಗಳಿಗಿಂತ ಹೆಚ್ಚಿನ ಅವಧಿಯದ್ದು. ಬ್ಯಾಂಕ್ ಆಪ್ ಬರೋಡಾದ 1 ರಿಂದ 2 ವರ್ಷಗಳ ರೆಗ್ಯುಲರ್ ಟರ್ಮ್ ಡೆಪಾಸಿಟ್ಗಳ ಬಗ್ಗೆ ಮಾತನಾಡುವುದಾದರೆ, ಬಡ್ಡಿ ದರ 6.85% ಇದೆ. 2 ವರ್ಷಗಳಿಂದ 3 ವರ್ಷಗಳೊಳಗಿನ ಅವಧಿಗೆ 7.25% ಇದೆ. ಇನ್ನು 3 ವರ್ಷಗಳಿಂದ 10 ವರ್ಷಗಳ ಅವಧಿಯ ಎಫ್ಡಿಗಳಿಗೆ 6.50% ಬಡ್ಡಿ ದರ ಸಿಗುತ್ತದೆ.
ಬೇರೆ ಬೇರೆ ಬ್ಯಾಂಕ್ನ ಗ್ರೀನ್ ಮತ್ತು ರೆಗ್ಯುಲರ್ ಎಫ್ಡಿಗಳ ಬಡ್ಡಿ ದರದಲ್ಲಿ ಎಷ್ಟು ವ್ಯತ್ಯಾಸವಿದೆ ಎನ್ನುವುದನ್ನು ನೀವು ಬ್ಯಾಂಕ್ನ ವೆಬ್ಸೈಟ್ನಲ್ಲಿ ಚೆಕ್ ಮಾಡಬಹುದು. ನಿಮ್ಮ ಟೆನ್ಯೂರ್ ಆಧರಿಸಿ, ನಾರ್ಮಲ್ ಎಫ್ಡಿಗಿಂತ ಗ್ರೀನ್ ಎಫ್ಡಿಯಲ್ಲಿ ಹೆಚ್ಚಿ ಬಡ್ಡಿ ಸಿಗುತ್ತದೆ ಎಂದಾದರೆ ನೀವು ನಿಮಗೆ ಬೇಕಾದ್ದನ್ನು ಆರಿಸಿಕೊಳ್ಳಬಹುದು. ಸದ್ಯ, ಶಾರ್ಟ್ ಟರ್ಮ್ ರೆಗ್ಯುಲರ್ ಎಫ್ಡಿಗಳಿಗೆ ಅಂದರೆ 1 ರಿಂದ 3 ವರ್ಷಗಳ ಅವಧಿಯ ಎಫ್ಡಿಗಳಿಗೆ ಹೆಚ್ಚು ಬಡ್ಡಿ ಕೊಡುತ್ತಿವೆ. ಸಾಮಾನ್ಯ ಜನರಿಗೆ ಹೋಲಿಸಿದರೆ ಹಿರಿಯ ನಾಗರಿಕರಿಗೆ 0.50% ಹೆಚ್ಚು ಬಡ್ಡಿ ಸಿಗುತ್ತದೆ. ಶಾರ್ಟ್ ಟರ್ಮ್ನಲ್ಲಿ ಉತ್ತಮ ರಿಟರ್ನ್ಸ್ ಜೊತೆಗೆ ಕಡಿಮೆ ರಿಸ್ಕ್ ತೆಗೆದುಕೊಳ್ಳಬೇಕು ಎಂದಾದರೆ, ಎಫ್ಡಿಯಲ್ಲಿ ಹೂಡಿಕೆ ಮಾಡುವುದು ಉತ್ತಮ.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ