ಹಣಕಾಸು ವರ್ಷ 2024ರ ಮೂರನೇ ತ್ರೈಮಾಸಿಕ ಸ್ಥಿರವಾಗಿತ್ತು ಎಂದೇ ಹೇಳಬಹುದು. ತಜ್ಞರ ಪ್ರಕಾರ, ಕಂಪೆನಿಗಳ ಲಾಭದ ಪ್ರಗತಿ ಶೇಕಡ 10 ಕ್ಕಿಂತ ಜಾಸ್ತಿ ಇತ್ತು. ಆದರೆ ಗಳಿಕೆಯ ಪ್ರಮಾಣ ಶೇಕಡ 10 ಕ್ಕಿಂತ ಕಡಿಮೆಯಷ್ಟು ಹೆಚ್ಚಳ ಕಂಡಿತ್ತು. ನಿಫ್ಟಿ ಹೇಗೆ ಪರ್ಫಾರ್ಮ್ ಮಾಡಿತು. ಯಾವೆಲ್ಲ ವಲಯದಲ್ಲಿ ಮಹತ್ವದ ಬದಲಾವಣೆಗಳಾದವು ಎನ್ನುವುದನ್ನು ನೋಡೋಣ.
ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಪ್ರಕಾರ, ನಿಫ್ಟಿ ಕಂಪೆನಿಗಳ ಡಿಸೆಂಬರ್ ತ್ರೈಮಾಸಿಕದ ಲಾಭ ವರ್ಷದಿಂದ ವರ್ಷದ ಹೋಲಿಕೆಯಲ್ಲಿ ಶೇಕಡ 17 ರಷ್ಟು ಬೆಳವಣಿಗೆ ಸಾಧಿಸಿವೆ. ಆದರೆ ನಿರೀಕ್ಷೆ ಪ್ರಮಾಣ ಕೇವಲ ಶೇಕಡ 11 ರಷ್ಟಿತ್ತು. ಒಟ್ಟು ಪ್ರಗತಿಯ ಶೇಕಡ 56 ರಷ್ಟು ಏರಿಕೆಗೆ ಕೇವಲ ಐದು ಕಂಪೆನಿಗಳು ಕೊಡುಗೆ ನೀಡಿವೆ. ಹಾಗಾದರೆ ಆ ಕಂಪೆನಿಗಳು ಯಾವುವು? ಟಾಟಾ ಮೋಟಾರ್ಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್ ಮತ್ತು ಜೆಎಸ್ಡಬ್ಲ್ಯು ಸ್ಟೀಲ್ – ಇವೇ ಆ ಐದು ಕಂಪೆನಿಗಳು. ಹಣಕಾಸು ವರ್ಷ 24 ರ ಮೊದಲ 9 ತಿಂಗಳಲ್ಲಿ ಅಂದರೆ ಏಪ್ರಿಲ್ ನಿಂದ ಡಿಸೆಂಬರ್ ವರೆಗಿನ ಅವಧಿಯಲ್ಲಿ ನಿಫ್ಟಿ 50 ಕಂಪೆನಿಗಳ ಲಾಭ ಶೇಕಡ 26 ರಷ್ಟು ಹೆಚ್ಚಳವಾಗಿದೆ.
ಹಾಗಾದ್ರೆ, ಈ ತ್ರೈಮಾಸಿಕ ಫಲಿತಾಂಶದ ಬಳಿಕ ಬ್ರೋಕಿಂಗ್ ಸಂಸ್ಥೆಗಳು ಏನನ್ನಾದ್ರೂ ಅಪ್ ಗ್ರೇಡ್ ಅಥವಾ ಡೌನ್ ಗ್ರೇಡ್ ಮಾಡಿವೆಯಾ? ಹೌದು, ಮೋತಿಲಾಲ್ ಆಸ್ವಾಲ್ ಸಂಸ್ಥೆ, ಡಿಸೆಂಬರ್ ತ್ರೈಮಾಸಿಕದ ಪರ್ಫಾರ್ಮೆನ್ಸ್ ಆಧರಿಸಿ, ಹಣಕಾಸು ವರ್ಷ 25ರಲ್ಲಿ ಟಾಟಾ ಮೋಟಾರ್ಸ್, ಕೋಲ್ ಇಂಡಿಯಾ, ಹೀರೋ ಮೋಟೋ ಕಾರ್ಪ್, ಸಿಪ್ಲಾ ಮತ್ತು ಭಾರ್ತಿ ಏರ್ಟೆಲ್ ಕಂಪೆನಿಗಳ ಲಾಭದ ಅಂದಾಜನ್ನ ಹೆಚ್ಚು ಮಾಡಿದೆ. ಮತ್ತೊಂದೆಡೆ, ನಿರಾಶಾದಾಯಕ ಫಲಿತಾಂಶದ ಕಾರಣ, ಯುಪಿಎಲ್, ಎಲ್ ಟಿ ಐ ಮೈಂಡ್ ಟ್ರೀ, ಐಟಿಸಿ, ದಿವಿಸ್ ಲ್ಯಾಬ್ ಮತ್ತು ಎಚ್ ಯು ಎಲ್ ಗಳ ಲಾಭದ ಅಂದಾಜನ್ನು ಮೋತಿಲಾಲ್ ಓಸ್ವಾಲ್ ಸಂಸ್ಥೆ ಕಡಿಮೆ ಮಾಡಿದೆ.
ಇದು ನಿಫ್ಟಿ 50 ಕಂಪೆನಿಗಳ ತ್ರೈಮಾಸಿಕ ಫಲಿತಾಂಶ ಆಧರಿಸಿದೆ. ಆದರೆ, ಆಯ್ದ ವಲಯಗಳ ಪರ್ಫಾರ್ಮೆನ್ಸ್ ಅರ್ಥ ಮಾಡಿಕೊಳ್ಳುವುದು ತುಂಬಾನೇ ಮುಖ್ಯ. ಆಯ್ದ 3 ಸಾವಿರದ 381 ಕಂಪೆನಿಗಳ ವರ್ಷಾನು ವರ್ಷ (ಇಯರ್ ಆನ್ ಇಯರ್) ರೆವೆನ್ಯೂ ಗ್ರೋತ್ ಶೇಕಡ 8.2 ರಷ್ಟು ಹೆಚ್ಚಾಗಿದ್ದು, ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಈ ಕಂಪೆನಿಗಳ ರೆವೆನ್ಯೂ ಗ್ರೋತ್ ಶೇಕಡ 17.3 ರಷ್ಟಿತ್ತು. ಅಂದರೆ ಈಗಿನ ಪ್ರಮಾಣಕ್ಕಿಂತ ದುಪ್ಪಟ್ಟಿತ್ತು. ಹಣಕಾಸು ವರ್ಷ 24ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಕಂಪೆನಿಗಳ ರೆವೆನ್ಯೂ ಗ್ರೋತ್ ಕ್ರಮವಾಗಿ ಶೇಕಡ 5.3, 5.9 ಮತ್ತು 8.2 ರಷ್ಟಿತ್ತು. ಆದಾಗ್ಯೂ, ಬ್ಯಾಂಕ್ ಮತ್ತು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳನ್ನು ಹೊರತುಪಡಿಸಿದಲ್ಲಿ, ಕಂಪೆನಿಗಳ ರೆವೆನ್ಯೂ ಗ್ರೋತ್ ಪ್ರಮಾಣ ಮೊದಲ ಮೂರು ತ್ರೈಮಾಸಿಕಗಳಲ್ಲಿ ಕ್ರಮವಾಗಿ ಕೇವಲ ಶೇಕಡ 0.9, 1.6 ಮತ್ತು 4.5 ರಷ್ಟಿತ್ತು.
ಆದಾಯಕ್ಕೆ ವ್ಯತಿರಿಕ್ತವಾಗಿ, ಲಾಭದ ಪ್ರಗತಿಯು ಸ್ವಲ್ಪ ಸದೃಢವಾಗಿತ್ತು. ಅಂದರೆ ಮೂರನೇ ತ್ರೈಮಾಸಿಕದಲ್ಲಿ ಈ ಕಂಪೆನಿಗಳ ಪ್ರಾಫಿಟ್ ಗ್ರೋತ್ ಶೇಕಡ 25 ರಷ್ಟಿತ್ತು. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಈ ಪ್ರಮಾಣ ಕೇವಲ ಶೇಕಡ 2.2 ರಷ್ಟಿತ್ತು. ಆದಾಗ್ಯೂ ಭಾವನಾತ್ಮಕ ದೃಷ್ಟಿಯಲ್ಲಿ, ಹಣಕಾಸು ವರ್ಷ 24ರ ಎಲ್ಲಾ ಮೂರು ತ್ರೈಮಾಸಿಕಗಳಲ್ಲಿ ಕಂಪೆನಿಗಳ ಪ್ರಾಫಿಟ್ ಗ್ರೋತ್ ಶೇಕಡ 10 ಕ್ಕಿಂತ ಹೆಚ್ಚಿತ್ತು.
ಈ ರೀತಿಯಾಗಿ, ಕಂಪೆನಿಗಳ ಲಾಭದ ಪ್ರಗತಿಯು ವಿಶ್ಲೇಷಕರ ಅಂದಾಜಿಗಿಂತ ಉತ್ತಮವಾಗಿತ್ತು. ಆಟೋಮೊಬೈಲ್, ಫೈನ್ಯಾನ್ಸ್, ಕ್ಯಾಪಿಟಲ್ ಗೂಡ್ಸ್, ಆರೋಗ್ಯ ರಕ್ಷಣೆ – ಔಷಧ, ದೂರಸಂಪರ್ಕ, ಕಟ್ಟಡ ನಿರ್ಮಾಣ ಸಾಮಗ್ರಿ, ಲೋಹ, ತೈಲ ಮತ್ತು ಅನಿಲ ವಲಯಗಳ ಕಂಪೆನಿಗಳ ಫಲಿತಾಂಶಗಳು ಅಂದಾಜಿಗಿಂತ ಉತ್ತಮವಾಗಿವೆ. ಈ ಮಧ್ಯೆ, ಕ್ವಿಕ್ ಸರ್ವೀಸ್ ರೆಸ್ಟೊರೆಂಟ್ ಗಳು, ಚಿಲ್ಲರೆ ವಲಯ ಮತ್ತು ಗ್ರಾಹಕ ಬಳಕೆ ವಸ್ತುಗಳ ಕಂಪೆನಿಗಳು ಇಳಿಕೆಯಿಂದ ಬಾಧಿತವಾಗಿವೆ ಅಂತಾ ಬ್ರೋಕಿಂಗ್ ಸಂಸ್ಥೆ ಪ್ರಭುದಾಸ್ ಲಿಲಂಧರ್ ಹೇಳಿದೆ. ಅಲ್ಲದೇ 26 ತ್ರೈಮಾಸಿಕಗಳ ಬಳಿಕ, ಐಟಿ ವಲಯದ ಕಂಪೆನಿಗಳಲ್ಲಿ ಇದೇ ಮೊದಲ ಬಾರಿಗೆ ಆದಾಯದಲ್ಲಿ ಅಲ್ಪ ಇಳಿಕೆಯಾಗಿದೆ.
ಎಚ್ ಡಿ ಎಫ್ ಸಿ ಸೆಕ್ಯುರಿಟೀಸ್ ಪ್ರಕಾರ, ಹಿಂದಿನ ತ್ರೈಮಾಸಿಕದಲ್ಲಿ ಉತ್ತಮ ಪ್ರಗತಿ ತೋರಿದ್ದ ಅನೇಕ ಕಂಪೆನಿಗಳು ಈ ತ್ರೈಮಾಸಿಕದಲ್ಲಿ ನಿರಾಶಾದಾಯಕ ಫಲಿತಾಂಶ ನೀಡಿವೆ. ಆದಾಗ್ಯೂ, ಇತ್ತೀಚಿನ ತಿಂಗಳುಗಳಲ್ಲಿ ಇದೇ ಮೊದಲ ಬಾರಿಗೆ ಮಹತ್ವದ ಪ್ರಗತಿ ದಾಖಸಿದ ಅನೇಕ ಕಂಪೆನಿಗಳೂ ಇವೆ.
ಸ್ವಸ್ತಿಕಾ ಇನ್ವೆಸ್ಟ್ ಮಾರ್ಟ್ ನ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಸಂತೋಷ್ ಮೀನಾ ಈ ಬಗ್ಗೆ ಏನು ಹೇಳುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಸಾರ್ವಜನಿಕ ವಲಯ ಬ್ಯಾಂಕ್ ಗಳ ಫಲಿತಾಂಶ ಸದೃಢವಾಗಿದೆ.. ಅಲ್ಲದೇ ಆಟೊಮೊಬೈಲ್, ದಿನಬಳಕೆ ವಸ್ತುಗಳು, ಬಂಡವಾಳ ಸರಕುಗಳು, ಹೋಟೆಲ್ ಮತ್ತು ಔಷಧ ವಲಯದ ಪ್ರಗತಿ ಉತ್ತಮವಾಗಿದೆ.. ರಾಸಾಯನಿಕ ವಲಯದ ಕಂಪೆನಿಗಳ ಫಲಿತಾಂಶ ನಿರಾಶಾದಾಯಕವಾಗಿದೆ… ಐಟಿ ಕಂಪೆನಿಗಳ ಫಲಿತಾಂಶ ನಿರೀಕ್ಷೆಯಂತೆ ಇದ್ದು, ಯಾವುದೇ ಸಕಾರಾತ್ಮಕ ಆಶ್ಚರ್ಯಕರ ರಿಸಲ್ಟ್ ಕಂಡುಬಂದಿಲ್ಲದೇ ಇದ್ದರೂ ಈ ಷೇರುಗಳ ಬೆಲೆ ಮೇಲ್ಮುಖವಾಗಿದೆ. ಆಯ್ದ ಸರ್ಕಾರಿ ಬ್ಯಾಂಕ್ ಗಳಲ್ಲಿ ಉತ್ತಮ ಫಲಿತಾಂಶವಿದ್ದರೂ ಕೂಡ, ಅಷ್ಟೇನೂ ಲಾಭವಿಲ್ಲದಿರುವುದು ಕಂಡುಬಂದಿತ್ತು.
ಹಾಗಾದ್ರೆ, ತ್ರೈಮಾಸಿಕ ಫಲಿತಾಂಶ ಆಧರಿಸಿ ಯಾವ ಕಂಪೆನಿಗಳ ಷೇರು ಖರೀದಿಸಬಹುದು? ಫಲಿತಾಂಶ ಆಧರಿಸಿ ಹೇಳುವುದಾದರೆ, ಎಸ್ ಬಿ ಐ, ಸಿಪ್ಲಾ, ಆರ್ಚಿಯನ್ ಕೆಮಿಕಲ್, ಸೊನಾಟಾ ಸಾಫ್ಟ್ ವೇರ್ ಮತ್ತು ಇಂಜಿನಿಯರ್ಸ್ ಇಂಡಿಯಾ ಕಂಪೆನಿಗಳ ಷೇರುಗಳನ್ನ ಖರೀದಿಸಬಹುದು. ಮುಂದಿನ 6 ರಿಂದ 12 ತಿಂಗಳ ಅವಧಿಯಲ್ಲಿ ಇವುಗಳ ಟಾರ್ಗೆಟ್ ಏನು ನೋಡೋಣ. ಎಸ್ ಬಿ ಐ ಟಾರ್ಗೆಟ್ ರೂಪಾಯಿ 880 ರಿಂದ 1 ಸಾವಿರ, ಸಿಪ್ಲಾ ಒಂದು ಸಾವಿರದ 700 ರೂಪಾಯಿ, ಸೊನಾಟಾ ಸಾಫ್ಟ್ ವೇರ್ 1 ಸಾವಿರದ ನೂರು ರೂಪಾಯಿ ಇದೆ.. ಈ ಮಧ್ಯೆ 12 ರಿಂದ 15 ತಿಂಗಳ ಮುನ್ನೋಟದೊಂದಿಗೆ, ಒಂದು ಸಾವಿರ ರೂಪಾಯಿ ಟಾರ್ಗೆಟ್ ನೊಂದಿಗೆ ಆರ್ಚಿಯನ್ ಕೆಮಿಕಲ್ಸ್ ಖರೀದಿ ಅಥವಾ 310 ರೂಪಾಯಿಗಳಿಗೆ ಇಂಜಿನಿಯರ್ಸ್ ಇಂಡಿಯಾ ಕಂಪೆನಿಯ ಷೇರುಗಳನ್ನ ಖರೀದಿಸಬಹುದು.
ಒಟ್ಟಾರೆಯಾಗಿ, ಮೂರನೇ ತ್ರೈಮಾಸಿಕದಲ್ಲಿ ಕಂಪೆನಿಗಳು ಸತತ ಮೂರನೇ ಬಾರಿಗೆ ಶೇಕಡ 10 ಕ್ಕಿಂತ ಹೆಚ್ಚಿನ ಪ್ರಗತಿ ದಾಖಲಿಸಿವೆ. ಆದಾಗ್ಯೂ, ಈ ತ್ರೈಮಾಸಿಕದಲ್ಲಿ ಚೆನ್ನಾಗಿ ಪರ್ಫಾರ್ಮ್ ಮಾಡಿದ ಕಂಪೆನಿಗಳ ಪಟ್ಟಿಯಲ್ಲಿ ಬದಲಾವಣೆ ಇದೆ. ಮುಂದಿನ 6 ರಿಂದ 15 ತಿಂಗಳ ಮುನ್ನೋಟದೊಂದಿಗೆ, ಫಲಿತಾಂಶ ಆಧರಿಸಿ ಆಯ್ದ ಕಂಪೆನಿಗಳೊಂದಿಗೆ ನಿಮ್ಮ ಹೂಡಿಕೆಯ ಪೋರ್ಟ್ ಪೋಲಿಯೋ ರೂಪಿಸಿಕೊಳ್ಳಬಹುದು.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ