ಹಣಕಾಸು ವರ್ಷ 2023-24 ರಲ್ಲಿ, ಪ್ರಾಥಮಿಕ ಮಾರುಕಟ್ಟೆಯು ಮಹತ್ವದ ಕ್ರಮಕ್ಕೆ ಸಾಕ್ಷಿಯಾಗಿದೆ. ಇದು ಸರಿಸುಮಾರು ಸೆಕಂಡರಿ ಸ್ಟಾಕ್ ಮಾರ್ಕೆಟ್ ನಲ್ಲಿ ಏನಾಗಿತ್ತೋ ಅದೇ ರೀತಿ ಇತ್ತು. ಹಣಕಾಸು ವರ್ಷ 24 ರಲ್ಲಿ, ಸುಮಾರು 76 ಕಂಪೆನಿಗಳು ಐಪಿಒ ಮಾರ್ಕೆಟ್ ಮೂಲಕ ಸುಮಾರು 63 ಸಾವಿರ ಕೋಟಿ ರೂಪಾಯಿಗಳನ್ನ ಸಂಗ್ರಹಿಸಿವೆ. ಇದು ಕಳೆದ ಹಣಕಾಸು ವರ್ಷ 23 ಕ್ಕೆ ಹೋಲಿಸಿದರೆ ಶೇಕಡ 21 ರಷ್ಟು ಹೆಚ್ಚಿದೆ. ಆದರೆ ಹಣಕಾಸು ವರ್ಷ 25 ರಲ್ಲಿ ಐಪಿಒ ಮಾರುಕಟ್ಟೆ ಸ್ಥಿತಿಗತಿ ಹೇಗಿರಲಿದೆ? ಈ ಹಣಕಾಸು ವರ್ಷದಲ್ಲಿ ಎಷ್ಟು ಕಂಪೆನಿಗಳು ಐಪಿಒಗಳಿಂದ ಸಮರ್ಥವಾಗಿ ಮೇಲೆ ಬರೋಕೆ ಸಾಧ್ಯ ಇದೆ? ಈ ಎಲ್ಲ ವಿಚಾರಗಳನ್ನು ನಾವು ತಿಳಿದುಕೊಳ್ಳೋಣ.
ಐಪಿಒ ಮೂಲಕ ಎಷ್ಟು ಹಣ ಸಂಗ್ರಹಿಸುವುದಕ್ಕೆ ಕಂಪೆನಿಗಳು ಎದುರು ನೋಡುತ್ತಿವೆ. ಪ್ರೈಮರಿ ಮಾರ್ಕೆಟ್ ನಲ್ಲಿ ನಿಮ್ಮ ಸ್ಟ್ರ್ಯಾಟೆಜಿ ಹೇಗಿರಬೇಕು? ಎನ್ನುವುದುನ್ನು ನಾವು ನೋಡೋಣ. ಭಾರತದ ಆರ್ಥಿಕತೆ ಶೇಕಡ 7 ಕ್ಕಿಂತ ಹೆಚ್ಚಿನ ದರದಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಕಾರ್ಪೊರೇಟ್ ಭಾರತಕ್ಕೆ ಪ್ರತಿ ವರ್ಷ ಸುಮಾರು 2.5 ಲಕ್ಷ ಕೋಟಿ ರೂಪಾಯಿ ಈಕ್ವಿಟಿ ಕ್ಯಾಪಿಟಲ್ ಬೇಕಾಗುತ್ತದೆ.. ಇವೆರಡು ಅಂಶ ಮನಸ್ಸಿನಲ್ಲಿಟ್ಕೊಂಡು, ಕಾರ್ಪೊರೇಟ್ ಇಂಡಿಯಾ ಐಪಿಒ ವಿಧಾನದಲ್ಲಿ ಹಣಕಾಸು ವರ್ಷ 25 ರಲ್ಲಿ ಒಂದು ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಹಣ ಸಂಗ್ರಹಿಸಬಹುದು. ಕಂಪೆನಿಗಳು ಪ್ರಾಥಮಿಕ ಮಾರುಕಟ್ಟೆಯಿಂದ ಹಣ ಸಂಗ್ರಹಿಸುವುದಕ್ಕೆ ಕಾತರದಿಂದ ಕಾಯುತ್ತಿವೆ ಎನ್ನುವುದು ಫಂಡ್ ರೈಸಿಂಗ್ ಓಡುತ್ತಿರುವ ವೇಗ ಸೂಚಿಸತ್ತದೆ ಎಂದು ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಒಟ್ಟು 56 ಕಂಪೆನಿಗಳು ಸುಮಾರು 70 ಸಾವಿರ ಕೋಟಿ ರೂಪಾಯಿ ಸಂಗ್ರಸುವುದಕ್ಕೆ ಮಾರುಕಟ್ಟೆ ನಿಯಂತ್ರಕ ಸೆಬಿಗೆ ಅರ್ಜಿ ಸಲ್ಲಿಸಿವೆ. ಈ ಪೈಕಿ, 19 ಕಂಪೆನಿಗಳಿಗೆ 25 ಸಾವಿರ ಕೋಟಿ ರೂಪಾಯಿ ಸಂಗ್ರಹಿಸಲು ಸೆಬಿಯಿಂದ ಈಗಾಗಲೇ ಅನುಮತಿ ಸಿಕ್ಕಿದೆ. ಈ ಮಧ್ಯೆ, 37 ಹೆಚ್ಚುವರಿ ಕಂಪೆನಿಗಳು ಕೂಡ, 45 ಸಾವಿರ ಕೋಟಿ ರೂಪಾಯಿ ಸಂಗ್ರಹಕ್ಕೆ ಸೆಬಿಯ ಅನುಮೋದನೆಗೆ ಕಾಯುತ್ತಿವೆ. ಈ 56 ಕಂಪೆನಿಗಳ ಪೈಕಿ, 9 ಕಂಪೆನಿಗಳು ತಂತ್ರಜ್ಞಾನ ಆಧಾರಿತ ಸಂಸ್ಥೆಗಳಾಗಿದ್ದು, ಒಟ್ಟಾರೆಯಾಗಿ 21 ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿವೆ.
ಈ ಕಂಪೆನಿಗಳ ಪೈಕಿ ಚಿರಪರಿಚಿತ ಸಂಸ್ಥೆಗಳಾದ ಸ್ವಿಗ್ಗಿ, ಓಲಾ ಎಲೆಕ್ಟ್ರಿಕ್, ಟಾಟಾ ಪ್ಲೇ ಮತ್ತು ಗೋ ಡಿಜಿಟ್ ಜನರಲ್ ಇನ್ಷುರೆನ್ಸ್ ಸೇರಿವೆ.. ಹಣಕಾಸು ವರ್ಷ 24 ರಲ್ಲಿ ಒಟ್ಟು 76 ಐಪಿಒಗಳ ಪೈಕಿ, ಶೇಕಡ 70 ಕ್ಕಿಂತ ಹೆಚ್ಚು ಅಂದರೆ ಸುಮಾರು 55 ಕಂಪೆನಿಗಳ ಷೇರುಗಳು ಸೆಕಂಡರಿ ಮಾರ್ಕೆಟ್ ನಲ್ಲಿ ಅಂದರೆ ಷೇರು ಮಾರುಕಟ್ಟೆಯಲ್ಲಿ ತಮ್ಮ ತಮ್ಮ ಇಷ್ಯೂ ಪ್ರೈಸ್ ಗಿಂತ ಹೆಚ್ಚಿನ ದರದಲ್ಲಿ ವಹಿವಾಟು ನಡೆಸಿವೆ. ಈ ಪೈಕಿ, 13 ಕಂಪೆನಿಗಳಲ್ಲಿ ಹೂಡಿಕೆ ಮಾಡಿ, ಹೂಡಿಕೆದಾರರು ತಮ್ಮ ಹಣವನ್ನ ದ್ವಿಗುಣಗೊಳಿಸಿಕೊಂಡಿದ್ದಾರೆ. ಐಪಿಒಗಳ ಉತ್ತಮ ಪರ್ಫಾರ್ಮೆನ್ಸ್ ನ ಹಿಂದೆ ಹಲವಾರು ಕಾರಣಗಳಿವೆ.
ಮೊದಲನೆಯದಾಗಿ, ಷೇರು ಮಾರುಕಟ್ಟೆಯಲ್ಲಿ ಆ ವೇಗ ಇತ್ತು. ಎರಡನೆಯದಾಗಿ, ಚಿಲ್ಲರೆ ಹೂಡಿಕೆದಾರರು ಐಪಿಒಗಳಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ. ಇನ್ನು ಮೂರನೆಯದಾಗಿ, ಸಾಂಸ್ಥಿಕ ಹೂಡಿಕೆದಾರರಿಂದ ದೃಢ ಖರೀದಿ ವ್ಯಕ್ತವಾಗಿದೆ. ಸದೃಢ ಆರ್ಥಿಕ ಪ್ರಗತಿಯ ಕಾರಣದಿಂದಾಗಿ, ಐಪಿಒ ಮಾರುಕಟ್ಟೆ ಕ್ರಿಯಾಶೀಲವಾಗಿದೆ ಅನ್ನೋದು ವಿಶ್ಲೇಷಕರ ಅಭಿಪ್ರಾಯವಾಗಿದೆ. ಇದಲ್ಲದೇ ಅನೇಕ ಹೊಸ ಕಂಪೆನಿಗಳು ಕೂಡ ಮಾರುಕಟ್ಟೆ ಪ್ರವೇಶಿಸಿ ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಿವೆ. ಹೀಗಾಗಿ, ಮಾರುಕಟ್ಟೆಗೆ ಹಣಕಾಸು ವರ್ಷ 25 ಉತ್ತಮ ವರ್ಷ ಆಗಬಹುದಾಗಿದೆ. ಪ್ರಾಥಮಿಕ ಮಾರುಕಟ್ಟೆಯಲ್ಲಿ ಸ್ಥಳೀಯ ಫಂಡ್ ಗಳ ಲಭ್ಯತೆ ಹೆಚ್ಚಳ, ಕಾರ್ಪೊರೇಟ್ ಗವರ್ನೆನ್ಸ್ ಸಂಬಂಧವಾಗಿ ತೆಗೆದುಕೊಂಡಿರುವ ಕ್ರಮಗಳು ಮತ್ತು ಸರ್ಕಾರದಿಂದ ಜಾರಿಯಾಗಿರೋ ಅನುಕೂಲಕರ ನೀತಿ ನಿರೂಪಣೆಗಳಿಂದ ಈ ಉತ್ತಮ ಪರ್ಫಾರ್ಮೆನ್ಸ್ ಸಾಧ್ಯವಾಗುತ್ತಿದೆ. ಇದಕ್ಕಿಂತ ಮಿಗಿಲಾಗಿ, ದೇಶದಲ್ಲಿ ಹಣಕಾಸು ಸಾಕ್ಷರತೆ ಹೆಚ್ಚಳ ಮತ್ತು ಸಾಂಸ್ಥಿಕ ಹೂಡಿಕೆದಾರರ ಬದ್ಧತೆಯಿಂದಾಗಿ ಸಕಾರಾತ್ಮಕ ವ್ಯತ್ಯಾಸವನ್ನ ಗಮನಿಸಬಹುದಾಗಿದೆ.
ವಿದೇಶಿ ಮಾರುಕಟ್ಟೆಯಿಂದ ಯಾವುದೇ ನೆಗೆಟಿವ್ ಸುದ್ದಿ ಇಲ್ಲ ಅಥವಾ ಭೌಗೋಳಿಕ-ರಾಜಕೀಯ ಸಂಘರ್ಷಗಳು ಹೆಚ್ಚಾಗಲಿಲ್ಲ ಅಂತಾದರೆ ಈ ವರ್ಷ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಸಂಗ್ರಹಿಸಬಹುದು. ಷೇರು ಮಾರುಕಟ್ಟೆ ತಜ್ಞ ಅರುಣ್ ಕೇಜ್ರಿವಾಲ್ ಅವರ ಮಾತು ಕೇಳೋಣ. ಹಣದ ಹರಿವು, ಮಾರುಕಟ್ಟೆ ಸೆಳೆತ ಮತ್ತು ಒಂದು ಐಪಿಒದಿಂದ ಇನ್ನೊಂದರ ನಡುವಿನ ಅಂತರ, ಇವುಗಳು, ಜನರು ಪ್ರಾಥಮಿಕ ಮಾರುಕಟ್ಟೆಯಿಂದ ಹಣ ಗಳಿಸೋಕೆ ನೆರವಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಪ್ರತಿಯೊಬ್ಬರ ಮನಸ್ಸಿನಲ್ಲಿರೋ ಮತ್ತೊಂದು ಪ್ರಮುಖ ಪ್ರಶ್ನೆ ಏನೆಂದರೆ ಹಣಕಾಸು ವರ್ಷ 25 ರಲ್ಲಿ ಹೂಡಿಕೆದಾರರು ಪ್ರಾಥಮಿಕ ಮಾರುಕಟ್ಟೆಯಲ್ಲಿ ಯಾವ ಸ್ಟ್ರ್ಯಾಟೆಜಿ ಅನುಸರಿಸಬೇಕು? ಹಣಕಾಸು ವರ್ಷ 24 ರ ಆರಂಭಿಕ ತಿಂಗಳುಗಳಲ್ಲಿ, ಜನರು ಐಪಿಒದಿಂದ ಹಣ ಗಳಿಸುವುದಕ್ಕೆ ಸಾಧ್ಯವಾಯಿತು. ಏಕೆಂದರೆ ವ್ಯಾಲ್ಯುಯೇಷನ್ ಉತ್ತಮವಾಗಿತ್ತು. ಆದರೆ ಕಳೆದ ಎರಡೂವರೆ ತಿಂಗಳಲ್ಲಿ, ದುಬಾರಿ, ಉತ್ತಮ ಪರ್ಫಾರ್ಮೆನ್ಸ್ ಇಲ್ಲ ಅನ್ನೋ ವಿಚಾರಗಳು ಮುನ್ನೆಲೆಗೆ ಬಂದಿವೆ ಅಂತಾ ಅರುಣ್ ಕೇಜ್ರಿವಾಲ್ ಹೇಳುತ್ತಾರೆ.
ಅದೇ ರೀತಿ, ಹಣಕಾಸು ವರ್ಷ 25 ರಲ್ಲೂ ವ್ಯಾಲ್ಯುಯೇಷನ್ ಉತ್ತಮವಾಗಿದ್ರೆ, ಐಪಿಒಗಳು ಚೆನ್ನಾಗಿ ಪರ್ಫಾರ್ಮ್ ಮಾಡುತ್ತವೆ. ಆಗ ಜನರು ಹಣ ಮಾಡಬಹುದು. ಓಲಾ ಎಲೆಕ್ಟ್ರಿಕ್, ಸ್ವಿಗ್ಗಿ ಮತ್ತು ಟಾಟಾ ಪ್ಲೇ ನಲ್ಲಿ ಹೂಡಿಕೆ ಆಸಕ್ತಿದಾಯಕವಾಗಿರುತ್ತದೆ. ಆದರೆ ಇವುಗಳ ವ್ಯಾಲ್ಯುಯೇಷನ್ ಚೆನ್ನಾಗಿರಬೇಕು ಅಷ್ಟೇ.. ಒಟ್ಟಾರೆಯಾಗಿ, ಹಣಕಾಸು ವರ್ಷ 25 ರಲ್ಲಿ ಪ್ರೈಮರಿ ಮಾರ್ಕೆಟ್ ನಲ್ಲಿ ಹಣಕಾಸು ವರ್ಷ 24 ರಂತೆ ಮಹತ್ವದ ಕ್ರಿಯೆಗಳು ನಡೆಯಬಹುದಾದ ಸಾಧ್ಯತೆ ಇದೆ.. ಇದು ಸ್ಟಾರ್ಟ್ ಅಪ್ ಕಂಪೆನಿಗಳಲ್ಲಿ ಹೂಡಿಕೆಗೆ ಹೊಸ ಅವಕಾಶವನ್ನೂ ಕೊಡಲಿದೆ.. ಆದರೆ, ಈ ಕಂಪೆನಿಗಳಲ್ಲಿನ ಹೂಡಿಕೆ ನಿರ್ಧಾರ, ವ್ಯಾಲ್ಯುಯೇಷನ್ ಮತ್ತು ಫಂಡಮೆಂಟಲ್ಸ್ ಅಂದ್ರೆ ಮೌಲ್ಯಮಾಪನ ಮತ್ತು ಮೂಲಭೂತ ತತ್ವಗಳನ್ನಾಧರಿಸಿರಬೇಕು.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ