ನಿಮ್ಮ ಟ್ಯಾಕ್ಸ್ ಡಿಮ್ಯಾಂಡ್ ಚೆಕ್ ಮಾಡುವುದು ಹೇಗೆ?

ಸರ್ಕಾರ ಸಣ್ಣ ಸಣ್ಣ ಟ್ಯಾಕ್ಸ್ ಡಿಮ್ಯಾಂಡ್‌ಗಳನ್ನು ವಿತ್‌ಡ್ರಾ ಮಾಡಲು ಆರಂಭಿಸಿದೆ. 2024 ಫೆಬ್ರವರಿ 1 ರಂದು ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಸಣ್ಣ ತೆರಿಗೆದಾರರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ವಲ್ಪ ನಿರಾಳ ಯೋಜನೆಯನ್ನು ಘೋಷಿಸಿದ್ದಾರೆ. ದೀರ್ಘಕಾಲದಿಂದ ಬಾಕಿ ಇರುವ ಟ್ಯಾಕ್ಸ್ ಡಿಮ್ಯಾಂಡ್‌ಗಳನ್ನು ವಿತ್‌ಡ್ರಾ ಮಾಡುವುದಾಗಿ ಅವರು ಘೋಷಿಸಿದ್ದಾರೆ. ವಿನಾಯಿತಿ ನೀಡಲಾಗುತ್ತಿರುವ ಟ್ಯಾಕ್ಸ್ ಡಿಮ್ಯಾಂಡ್‌ನ ಮೊತ್ತದ ಬಗ್ಗೆ ಯಾವ ವಿವರಗಳನ್ನು ಘೋಷಿಸಿದ್ದಾರೆ ಎಂದು ನೋಡೋಣ ಬನ್ನಿ. ಆನ್‌ಲೈನ್ ಚೆಕಿಂಗ್ ಪ್ರಕ್ರಿಯೆಯ ಬಗ್ಗೆಯೂ ನಾವು ಇಲ್ಲಿ ವಿವರಿಸುತ್ತೇವೆ. ಘೋಷಣೆ ಮಾಡಿದ್ದರಲ್ಲಿ ಏನಿದೆ ಎಂದು ನೋಡೋಣ ಬನ್ನಿ.

ನಿಮ್ಮ ಟ್ಯಾಕ್ಸ್ ಡಿಮ್ಯಾಂಡ್ ಚೆಕ್ ಮಾಡುವುದು ಹೇಗೆ?

ಸರ್ಕಾರ ಸಣ್ಣ ಸಣ್ಣ ಟ್ಯಾಕ್ಸ್ ಡಿಮ್ಯಾಂಡ್‌ಗಳನ್ನು ವಿತ್‌ಡ್ರಾ ಮಾಡಲು ಆರಂಭಿಸಿದೆ. 2024 ಫೆಬ್ರವರಿ 1 ರಂದು ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಸಣ್ಣ ತೆರಿಗೆದಾರರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ವಲ್ಪ ನಿರಾಳ ಯೋಜನೆಯನ್ನು ಘೋಷಿಸಿದ್ದಾರೆ. ದೀರ್ಘಕಾಲದಿಂದ ಬಾಕಿ ಇರುವ ಟ್ಯಾಕ್ಸ್ ಡಿಮ್ಯಾಂಡ್‌ಗಳನ್ನು ವಿತ್‌ಡ್ರಾ ಮಾಡುವುದಾಗಿ ಅವರು ಘೋಷಿಸಿದ್ದಾರೆ. ವಿನಾಯಿತಿ ನೀಡಲಾಗುತ್ತಿರುವ ಟ್ಯಾಕ್ಸ್ ಡಿಮ್ಯಾಂಡ್‌ನ ಮೊತ್ತದ ಬಗ್ಗೆ ಯಾವ ವಿವರಗಳನ್ನು ಘೋಷಿಸಿದ್ದಾರೆ ಎಂದು ನೋಡೋಣ ಬನ್ನಿ. ಆನ್‌ಲೈನ್ ಚೆಕಿಂಗ್ ಪ್ರಕ್ರಿಯೆಯ ಬಗ್ಗೆಯೂ ನಾವು ಇಲ್ಲಿ ವಿವರಿಸುತ್ತೇವೆ. ಘೋಷಣೆ ಮಾಡಿದ್ದರಲ್ಲಿ ಏನಿದೆ ಎಂದು ನೋಡೋಣ ಬನ್ನಿ.
2014-15 ರಿಂದ ತೆರಿಗೆ ಬಾಧ್ಯತೆಗಳನ್ನು ಬಾಕಿ ಉಳಿಸಿಕೊಂಡಿರುವ ತೆರಿಗೆದಾರರಿಗೆ ವಿನಾಯಿತಿಯನ್ನು ಮಧ್ಯಂತರ ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಘೋಷಿಸಿದ್ದಾರೆ. ಸಣ್ಣ ಸಣ್ಣ ವಿವಾದಿತ ಟ್ಯಾಕ್ಸ್ ಡಿಮ್ಯಾಂಡ್‌ಗಳು ದೊಡ್ಡ ಸಂಖ್ಯೆಯಲ್ಲಿವೆ. ಈ ಪೈಕಿ ಬಹುತೇಕ ಟ್ಯಾಕ್ಸ್ ಬಾಧ್ಯತೆಗಳು 1962 ಕ್ಕೂ ಮೊದಲಿನವು ಎಂದು ಸೀತಾರಾಮನ್ ಹೇಳಿದ್ದಾರೆ. ಇದರಿಂದ, ಪ್ರಾಮಾಣಿಕ ತೆರಿಗೆದಾರರಿಗೆ ಅನಾನುಕೂಲವಾಗುತ್ತಿದೆ. ಈ ತೆರಿಗೆ ಡಿಮ್ಯಾಂಡ್ ಬಾಕಿಯಿಂದಾಗಿ ನಂತರದ ವರ್ಷಗಳಲ್ಲಿ ರೀಫಂಡ್‌ಗಳಲ್ಲೂ ಸಮಸ್ಯೆಯಾಗುತ್ತಿದೆ. ಈ ನಡೆಯಿಂದ ಸುಮಾರು 1 ಕೋಟಿ ತೆರಿಗೆದಾರರಿಗೆ ಅನುಕೂಲವಾಗುತ್ತದೆ ಎಂದು ಅವರು ನಿರೀಕ್ಷಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, 2010 ಕ್ಕೆ 25 ಸಾವಿರ ರೂ. ಮತ್ತು 2011 ರಿಂದ 2015 ಕ್ಕೆ 10 ಸಾವಿರ ರೂ.ವರೆಗೆ ಬಾಕಿ ಡೈರೆಕ್ಟ್ ಟ್ಯಾಕ್ಸ್ ಡಿಮ್ಯಾಂಡ್‌ಗಳನ್ನು ಹಿಂಪಡೆಯುವುದಾಗಿ ಅವರು ಘೋಷಿಸಿದ್ದಾರೆ. ಅಂದರೆ, ಸರಳವಾಗಿ ಹೇಳುವುದಾದರೆ, ಈ ಅವಧಿಯಲ್ಲಿ ನಿರ್ದಿಷ್ಟ ಮೊತ್ತದ ಟ್ಯಾಕ್ಸ್ ಡಿಮ್ಯಾಂಡ್‌ಗಳನ್ನು ವೇವ್ ಆಫ್ ಮಾಡಲಾಗಿದೆ, ಅಂದರೆ ಮನ್ನಾ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್‌ ಅಂದರೆ ಸಿಬಿಡಿಟಿ ಆದೇಶವನ್ನೂ ಹೊರಡಿಸಿದೆ.
ಈ ಆರ್ಡರ್‌ನ ಪ್ರಕಾರ, ತೆರಿಗೆ ವಿನಾಯಿತಿಗೆ ಗರಿಷ್ಠ 1 ಲಕ್ಷ ರೂ. ಮಿತಿ ಹಾಕಲಾಗಿದೆ. 2024 ಜನವರಿ 31 ರ ವರೆಗೆ ಬಾಕಿ ಇರುವ 1 ಲಕ್ಷ ರೂ. ಒಳಗಿನ ಮೊತ್ತಕ್ಕೆ ಇದು ಅನ್ವಯವಾಗುತ್ತದೆ. ಇದರಲ್ಲಿ ಆದಾಯ ತೆರಿಗೆ, ಸಂಪತ್ತು ತೆರಿಗೆ ಮತ್ತು ಉಡುಗೊರೆ ತೆರಿಗೆ ಬೇಡಿಕೆಗಳೂ ಒಳಗೊಂಡಿರುತ್ತದೆ. 1 ಲಕ್ಷ ರೂ. ಮಿತಿಯಲ್ಲಿ ಟ್ಯಾಕ್ಸ್ ಡಿಮ್ಯಾಂಡ್, ಬಡ್ಡಿ, ತಂಡ, ಫೀಗಳು, ಸೆಸ್ ಮತ್ತು ಸರ್‌ಚಾರ್ಜ್ ಕೂಡಾ ಸೇರಿರುತ್ತದೆ.
ಈ ಆರ್ಡರ್‌ನಲ್ಲಿ ಕೆಲವು ಪಾಯಿಂಟ್‌ಗಳನ್ನು ಸಿಬಿಡಿಟಿ ಸ್ಪಷ್ಟಪಡಿಸಿದೆ: TDS ಅಥವಾ TCS ಡಿಮ್ಯಾಂಡ್‌ಗಳಿಗೆ ಈ ವಿನಾಯಿತಿ ಅನ್ವಯವಾಗುವುದಿಲ್ಲ.
ಯಾವುದೇ ಕ್ರೆಡಿಟ್ ಅಥವಾ ರೀಫಂಡ್‌ ಕ್ಲೇಮ್ ಮಾಡಲು ತೆರಿಗೆದಾರರಿಗೆ ಅರ್ಹತೆ ಇರುವುದಿಲ್ಲ. ತೆರಿಗೆದಾರರ ವಿರುದ್ಧ ಈಗಾಗಲೇ ಚಾಲ್ತಿಯಲ್ಲಿರುವ, ಆರಂಭಿಸಿರುವ ಅಥವಾ ಮುಂದೆ ಹಾಕಬಹುದಾದ ಕ್ರಿಮಿನಲ್ ಕಾನೂನು ದಾವೆಗೆ ಇದು ಯಾವುದೇ ಸಂಬಂಧ ಹೊಂದಿರುವುದಿಲ್ಲ. ತೆರಿಗೆ ಇಲಾಖೆ ಕಾನೂನು ಪ್ರಕಾರ ತೆಗೆದುಕೊಳ್ಳುವ ಯಾವುದೇ ಕ್ರಮಕ್ಕೆ ಇದರ ಅಡಿಯಲ್ಲಿ ವಿನಾಯಿತಿ ಇರುವುದಿಲ್ಲ. ಸಿಬಿಡಿಟಿ ಆರ್ಡರ್‌ ನಂತರ, ಅರ್ಹತೆ ಮಾನದಂಡವನ್ನು ಪೂರೈಸುವ ಹಳೆಯ ತೆರಿಗೆ ಡಿಮ್ಯಾಂಡ್‌ಗಳಿಗೆ ವಿನಾಯಿತಿ ನೀಡಲಾಗುತ್ತದೆ ಮತ್ತು ರದ್ದು ಮಾಡಲಾಗುತ್ತದೆ. ಇನ್‌ಕಮ್ ಟ್ಯಾಕ್ಸ್‌ ಇ-ಫೈಲಿಂಗ್ ವೆಬ್‌ಸೈಟ್‌ www.incometax.gov.in ನಲ್ಲಿ ಸ್ಟೇಟಸ್ ಅನ್ನು ತೆರಿಗೆದಾರರು ಚೆಕ್ ಮಾಡಿಕೊಳ್ಳಬಹುದು.
ಟ್ಯಾಕ್ಸ್ ಡಿಮ್ಯಾಂಡ್‌ನ ಸ್ಟೇಟಸ್ ಅನ್ನು ಚೆಕ್ ಮಾಡಲು, ಇನ್‌ಕಮ್ ಟ್ಯಾಕ್ಸ್ ಇಫೈಲಿಂಗ್ ವೆಬ್‌ಸೈಟ್‌ಗೆ ತಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಟ್ಯಾಕ್ಸ್‌ಪೇಯರ್‌ಗಳು ಲಾಗಿನ್ ಮಾಡಬೇಕು. “Pending Action” ಅಡಿಯಲ್ಲಿ “ರೆಸ್ಪಾನ್ಸ್ ಟು “Response to Outstanding Demand” ಆಪ್ಷನ್‌ಗೆ ಹೋದರೆ, ಅಲ್ಲಿ ಟ್ಯಾಕ್ಸ್ ಡಿಮ್ಯಾಂಡ್ ಸ್ಟೇಟಸ್ ಕಾಣಿಸುತ್ತದೆ.
ರೆವಿನ್ಯೂ ಸೆಕ್ರೆಟರಿ ಸಂಜಯ್ ಮಲ್ಹೋತ್ರಾ ಒದಗಿಸಿದ ಮಾಹಿತಿಯ ಪ್ರಕಾರ, 35 ಲಕ್ಷ ಕೋಟಿ ರೂ. ಮೌಲ್ಯದ 2.68 ಕೋಟಿ ಟ್ಯಾಕ್ಸ್ ಡಿಮ್ಯಾಂಡ್‌ಗಳು ಬೇರೆ ಬೇರೆ ಪ್ಲಾಟ್‌ಫಾರಂಗಳಲ್ಲಿ ಡಿಸ್‌ಪ್ಯೂಟ್‌ನಲ್ಲಿವೆ. ಈ ಪೈಕಿ, 2.1 ಕೋಟಿ ಡಿಮ್ಯಾಂಡ್‌ಗಳ ಮೊತ್ತ 25 ಸಾವಿರಕ್ಕಿಂತ ಕಡಿಮೆ. 2.1 ಕೋಟಿ ಪ್ರಕರಣಗಳ ಪೈಕಿ 58 ಲಕ್ಷ ಕೇಸ್‌ಗಳು 2009-10 ರಿಂದ ಇವೆ. ಉಳಿದ 53 ಲಕ್ಷ ಕೇಸ್‌ಗಳು 2011 ರಿಂದ 2015 ರವರೆಗಿನದ್ದು.
ಮಲ್ಹೋತ್ರಾ ಅವರು ಹೇಳುವ ಹಾಗೆ, 25 ಸಾವಿರ ಮತ್ತು 10 ಸಾವಿರ ಮೊತ್ತದ 1.1 ಕೋಟಿ ಟ್ಯಾಕ್ಸ್ ಡಿಮ್ಯಾಂಡ್ ಕೇಸ್‌ಗಳಿವೆ. ಇದರ ಮೌಲ್ಯ 3,500 ಕೋಟಿ ರೂ.ಗಿಂತ ಕಡಿಮೆ. ಸರ್ಕಾರದ ಈ ನಿರ್ಧಾರದಿಂದ ಸಣ್ಣ ತೆರಿಗೆದಾರರಿಗೆ ಭಾರಿ ಅನುಕೂಲವಾಗಲಿದೆ. ಸಣ್ಣ ತೆರಿಗೆ ಡಿಮ್ಯಾಂಡ್‌ಗಳನ್ನು ವಸೂಲು ಮಾಡುವುದಕ್ಕೆ ಐಟಿ ಇಲಾಖೆ ಮಾಡುವ ಖರ್ಚು ಮಾಡುವ ವೆಚ್ಚದಲ್ಲೂ ಭಾರಿ ಉಳಿತಾಯವಾಗುತ್ತದೆ.
ಟ್ಯಾಕ್ಸ್ ಡಿಮ್ಯಾಂಡ್‌ಗಳ ಬಗ್ಗೆ ನೀವು ಪ್ರಶ್ನೆಗಳು ಅಥವಾ ಕಳವಳಗಳನ್ನು ಹೊಂದಿದ್ದರೆ, ನೀವು 1800 309 0130 ಗೆ ಕರೆ ಮಾಡಬಹುದು ಅಥವಾ taxdemand@cpc.incometax.gov.in ಗೆ ಇಮೇಲ್ ಮಾಡಿ, ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

Published: April 24, 2024, 17:00 IST