ದೇಶದ ಪ್ರಮುಖ ಮ್ಯೂಚುವಲ್ ಫಂಡ್ ಹೌಸ್ ಎಂದೇ ಗುರುತಿಸಿಕೊಂಡಿರುವ ಐಸಿಐಸಿಐ ಮ್ಯೂಚುಯಲ್ ಫಂಡ್ನಿಂದ ಮಲ್ಟಿ ಅಸೆಟ್ ಅಲೊಕೇಶನ್ ಫಂಡ್ ಮೂಲಕವೂ ಚಿರಪರಿಚಿತ. ಈ ಮಲ್ಟಿ ಅಸೆಟ್ ಅಲೊಕೇಶನ್ ಫಂಡ್ ಆರಂಭಿಸಿ 21 ವರ್ಷಗಳಾಗಿವೆ. 21 ವರ್ಷಗಳ ಹಿಂದೆ ಈ ಯೋಜನೆಯಲ್ಲಿ ರೂ.10 ಲಕ್ಷ ಹೂಡಿಕೆ ಮಾಡಿದವರು ಮತ್ತು ಇನ್ನೂ ಹೂಡಿಕೆ ಮಾಡುತ್ತಿರುವವರು ಈ ವರ್ಷದ ಸೆಪ್ಟೆಂಬರ್ ಅಂತ್ಯದ ವೇಳೆಗೆ ಬರೋಬ್ಬರಿ 5.49 ಕೋಟಿ ಗಳಿಸಿದ್ದಾರೆ. ಈ ಮಾಹಿತಿಯನ್ನು ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುವಲ್ ಫಂಡ್ ಹೆಮ್ಮೆಯಿಂದ ಹಂಚಿಕೊಂಡಿದೆ. ಅಂದರೆ ಕಂಪೌಂಡ್ ಆನುವಲ್ ಗ್ರೌತ್ ಬರೋಬ್ಬರಿ 21 ಪರ್ಸೆಂಟ್ ಇದೆ.
ಭಾರತದ ಅತಿದೊಡ್ಡ ಮಲ್ಟಿ ಅಸೆಟ್ ಅಲೋಕೇಶನ್ ಫಂಡ್ ಎಂದು ಕರೆಸಿಕೊಂಡಿರುವ ICICI ಪ್ರುಡೆನ್ಶಿಯಲ್ ಮಲ್ಟಿ ಅಸೆಟ್ ಫಂಡ್ ನ AUM ಅಂದರೆ ಅಸೆಟ್ ಅಂಡರ್ ಮ್ಯಾನೇಜ್ಮೆಂಟ್ ಮೊತ್ತ 24,060.99 ಕೋಟಿ ಇದೆ. ದೇಶದ ಒಟ್ಟು ಅಸೆಟ್ ಅಲೊಕೇಶನ್ ವಲಯದ ಶೇ. 57 ರಷ್ಟು ಪಾಲು ಐಸಿಐಸಿಐ ಬಳಿಯೇ ಇದೆ. ಹೂಡಿಕೆದಾರರು ಐಸಿಐಸಿಐ ಫಂಡ್ ತಮ್ಮ ನೆಚ್ಚಿನ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಈ ಮಾಹಿತಿ ದೊಡ್ಡ ಸಾಕ್ಷಿ ಒದಗಿಸುತ್ತದೆ ಎಂದು ವ್ಯಾಲ್ಯೂ ರಿಸರ್ಚ್ನ ವರದಿ ಹೇಳುತ್ತದೆ.
ಹಾಗಿದ್ದರೆ SIP ಮೂಲಕ ಹೂಡಿಕೆ ಮಾಡಿದ್ದರೆ ಪರಿಣಾಮ ಏನಾಗಿದೆ ಎನ್ನುವುದನ್ನು ತಿಳಿಕೊದುಳ್ಳಬೇಕು. ಪ್ರಾರಂಭದಿಂದಲೂ SIP ಮೂಲಕ ರೂ 10,000 ರೂ. ಗಳನ್ನು ಪ್ರತಿ ತಿಂಗಳು ಹೂಡಿಕೆ ಮಾಡಿದ್ದರೆ ಈಗ ಅದರ ಮೊತ್ತ 25.2 ಲಕ್ಷ ರೂ. ಆಗಿರುತ್ತದೆ. ಅಂದರೆ 25.2 ಲಕ್ಷ ಹೂಡಿಕೆಗೆ ಈಗ 2.1 ಕೋಟಿ ರೂ. ಸಿಗುತ್ತಿದೆ. ಇಲ್ಲಿ 17.5% CAGR ಇದೆ. ಉಳಿದ ಯೋಜನೆಯ ಬೆಂಚ್ ಮಾರ್ಕ್ ಇದೇ ಸ್ಕೀಮ್ ನಲ್ಲಿ ಶೇ. 13.7 ರಷ್ಟಿದೆ. ಅಂದರೆ ಇಲ್ಲಿ ಶೇ. 4 ರಷ್ಟು ಅಧಿಕ ರಿಟರ್ನ್ಸ್ ಸಿಕ್ಕಿದೆ.
ಈ ಸಂದರ್ಭದಲ್ಲಿ ಮಾತನಾಡಿದ ICICI ಪ್ರುಡೆನ್ಶಿಯಲ್ AMCಯ MD ಮತ್ತು CEO ನಿಮೇಶ್ ಷಾ, ಐಸಿಐಸಿಐ ಪ್ರುಡೆನ್ಶಿಯಲ್ ಮಲ್ಟಿ ಅಸೆಟ್ ಫಂಡ್ ನ ವೆಲ್ತ್ ಕ್ರಿಯೇಶನ್ ದೀರ್ಘಾವಧಿ ಹೂಡಿಕೆದಾರರಿಗೆ ಹೊಸ ಹುಮ್ಮಸ್ಸು ನೀಡಿದೆ. ಹೂಡಿಕೆದಾರರಿಗೆ ನಿರೀಕ್ಷೆಗಿಂತ ಹೆಚ್ಚಿನ ರಿಟರ್ನ್ಸ್ ನೀಡಿರುವುದು ನಮಗೆ ದೊಡ್ಡ ಸಮತಸ ತಂದಿದೆ. ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುವಲ್ ಫಂಡ್ನಲ್ಲಿ ಸರಿಯಾಗಿ ಫಂಡ್ ಹಂಚಿಕೆ ಹೇಗೆ ಮಾಡಬೇಕು ಎನ್ನುವುದನ್ನು ತಂಡವೊಂದು ನಿರ್ಧರಿಸುತ್ತದೆ. ಈಕ್ವಿಟಿ ಡೆಟ್, ಮತ್ತು ಕಮಾಡಿಟಿ ಕ್ಲಾಸ್ ಫಂಡ್ ಮ್ಯಾನೇಜರ್ಗಳು ಈ ಫಂಡ್ ನಿರ್ವಹಿಸುತ್ತಾರೆ. ಅವರ ಅನುಭವ ಮತ್ತು ವಿಶೇಷ ಆಸಕ್ತಿಯ ಪರಿಣಾಮ ಉತ್ತಮ ರಿಟರ್ನ್ಸ್ ಹೂಡಿಕೆದಾರರಿಗೆ ಸಿಗುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಐಸಿಐಸಿಐ ಪ್ರುಡೆನ್ಶಿಯಲ್ ಎಎಮ್ಸಿ, ಇಡಿ ಮತ್ತು ಸಿಐಒ ಎಸ್ ನರೇನ್, ಕಳೆದ ಒಂದು ದಶಕದಲ್ಲಿ ಬೇರೆ ಬೇರೆ ಅಸೆಟ್ ಫಂಡ್ಗಳ ಫಂಡ್ ಮತ್ತು ಟಾಪ್ ಫರ್ಮಾರ್ಮಿಂಗ್ ಅಸೆಟ್ ಕ್ಲಾಸ್ ಗಳು ಪ್ರತಿ ವರ್ಷ ಬದಲಾಗುತ್ತಲೇ ಬಂದಿವೆ. ಹಾಗಾಗಿ ಪೋರ್ಟ್ ಫೋಲಿಯೋದ ಸರಿಯಾದ ನಿರ್ವಹಣೆ ಒಂದು ಮಟ್ಟದ ಸವಾಲೇ ಆಗಿದೆ. ಆದರೆ ICICI ಪ್ರುಡೆನ್ಶಿಯಲ್ ಮಲ್ಟಿ-ಅಸೆಟ್ ಫಂಡ್ ಈ ಸವಾಲುಗಳನ್ನು ಸರಿಯಾಗಿ ನಿರ್ವಹಣೆ ಮಾಡಿಕೊಂಡು ಬಂದಿದೆ ಎಂದು ತಿಳಿಸಿದರು.
ಏನಿದು ICICI ಪ್ರುಡೆನ್ಶಿಯಲ್ ಮಲ್ಟಿ-ಅಸೆಟ್ ಫಂಡ್? ICICI ಪ್ರುಡೆನ್ಶಿಯಲ್ ಮಲ್ಟಿ-ಅಸೆಟ್ ಫಂಡ್ ಒಂದು ಓಪನ್ ಎಂಡೆಟ್ ಫಂಡ್, ಇಕ್ವಿಟಿ, ಡೆಟ್ ಮತ್ತು ಕಮಾಡಿಟಿ, ಡಿರೈವೇಟಿವ್ಸ್, ಗೋಲ್ಡ್ ಇಟಿಎಫ್, REIT ಯೂನಿಟ್, ಪ್ರಿಫರನ್ಸ್ ಸ್ಟಾಕ್ ಗಳ ಮೇಲೆ ಹೂಡಿಕೆ ಮಾಡುತ್ತದೆ. ದೀರ್ಘಕಾಲದ ಲಾಭ ಮತ್ತು ರಿಟರ್ನ್ಸ್ ಗುರಿ ಇಟ್ಟುಕೊಂಡು ಹೂಡಿಕೆ ಮಾಡಲಾಗುತ್ತದೆ. ಕನಿಷ್ಠ ಶೇ. 10 ರಷ್ಟನ್ನು ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಸೆಟ್ ಕ್ಲಾಸ್ ನಲ್ಲಿ ಹೂಡಿಕೆ ಮಾಡುತ್ತದೆ. ದೀರ್ಘಕಾಲದ ಹೂಡಿಕಗೆ ಇದೊಂದು ಉತ್ತಮ ಫಂಡ್ ಎಂದೆ ಗುರುತಿಸಿಕೊಂಡಿದೆ.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ