ಮತ್ತಷ್ಟು ಜನಕ್ಕೆ ಗುಡ್ಬೈ ಹೇಳಲು ಮುಂದಾದ ಬೈಜೂಸ್! php // echo get_authors();
?>
ಸುಮಾರು ಒಂದು ವಾರದ ಹಿಂದೆ ಬೈಜುಸ್ ಜವಾಬ್ದಾರಿ ವಹಿಸಿಕೊಂಡ ಅರ್ಜುನ್ ಮೋಹನ್, ಕಂಪನಿ ಪರಿಸ್ಥಿತಿ ಸುಧಾರಿಸೋದಕ್ಕೆ ಯೋಜನೆ ಸಿದ್ಧಪಡಿಸ್ತಾ ಇದ್ದಾರೆ. ಇದರಲ್ಲಿ 4500ಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಒಂದು ಮಾಹಿತಿ ಪ್ರಕಾರ, ಹೊಸ ಸಿಇಒ ಮೇಲ್ವಿಚಾರಣೆಯಲ್ಲೇ ಈ ಎಲ್ಲ ಕೆಲಸ ನಡೆಯುತ್ತಿದೆ ಎನ್ನಲಾಗಿದೆ.
ಸಾಲದ ಸುಳಿಗೆ ಸಿಕ್ಕ ಸಂಸ್ಥೆಗಳಿಗೆ ಒಂದಾದ ಮೇಲೆ ಒಂದು ಸಂಕಷ್ಟ ಎದುರಾಗುತ್ತಲೇ ಇದೆ. ಎಡ್ ಟೆಕ್ ಕಂಪನಿ ಬೈಜೂಸ್ ಗೆ 1.2 ಬಿಲಿಯನ್ ಡಾಲರ್ ಸಾಲವನ್ನು ಕೊಟ್ಟಿರುವ ಸಂಸ್ಥೆಗಳು ಯಾವ ಸಂಧಾನಕ್ಕೂ ಒಪ್ಪುತ್ತಿಲ್ಲ. ಸಾಲ ತೀರಿಸಲು ಹೆಚ್ಚು ಸಮಯ ಕೇಳಿದ ಬೈಜೂಸ್ನ ಮನವಿಯನ್ನು ಸಾಲಗಾರರು ತಿರಸ್ಕರಿಸಿದ್ದಾರೆ. ಈಗ ನಿಗದಿತ ದಿನದೊಳಗೆ ಅಂದರೆ ಜೂನ್ 5 ರಂದು ಬೈಜೂಸ್ ಬಡ್ಡಿ ಕಟ್ಟದಿದ್ದರೆ ಲೋನ್ ಡೀಫಾಲ್ಟ್ ಆಗಲಿದೆ. ಆಗ ಬೈಜೂಸ್ ಮತ್ತಷ್ಟು ತೊಂದರೆಗೆ ಸಿಕ್ಕಿಕೊಳ್ಳಬೇಕಾಗುತ್ತದೆ.
ಒಂದು ವೇಳೆ ಬೈಜೂಸ್ ಬಡ್ಡಿ ಕಟ್ಟಿಬಿಟ್ಟರೆ ಬೀಸೋ ದೊಣ್ಣೆಯಿಂದ ಸದ್ಯಕ್ಕೆ ಪಾರಾಗಬಹುದು. ಮತ್ತೆ ಒಂದಷ್ಟು ಅವಧಿ ಉಸಿರಾಡಲು ಸಮಯ ಸಿಗುತ್ತದೆ. ಅಷ್ಟರೊಳಗೆ ಎಲ್ಲಿಯಾದರೂ ಬೇರೆಡೆ ಸಾಲ ಹೊಂದಿಸಿ, ಆ ಸಾಲವನ್ನು ಹಳೆಯ ಸಾಲ ತೀರಿಸಲು ಬಳಸಬಹುದು. ಈ ಮೂಲಕ ಮಾರುಕಟ್ಟೆಯಲ್ಲಿ ಬೈಜೂಸ್ ಜೀವಂತವಾಗಿ ಉಳಿಯಲು ಸಾಧ್ಯವಾಗಬಹುದು.
ಬೈಜೂಸ್ ಸಂಸ್ಥೆ 2022-23ರ ಹಣಕಾಸು ವರ್ಷದಲ್ಲಿ ನಿಗದಿತ ಅವಧಿಯೊಳಗೆ ಆಡಿಟ್ ಮಾಡಿದ ಸ್ಟೇಟ್ಮೆಂಟ್ ಫೈಲ್ ಮಾಡಲು ವಿಫಲವಾಗಿತ್ತು. ಇದು ಸಾಲಗಾರರಿಗೆ ಬೈಜೂಸ್ ಮೇಲಿದ್ದ ನಂಬಿಕೆ ನಶಿಸುವಂತೆ ಮಾಡಿತು ಎಂದು ಹೇಳಲಾಗುತ್ತದೆ. ಇದರ ಜೊತೆಗೆ ಫೆಮಾ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಭಾರತದ ಐಟಿ ಇಲಾಖೆ ಬೈಜೂಸ್ನ ಕಚೇರಿ ಮತ್ತಿತರ ಸ್ಥಳಗಳ ಮೇಲೆ ರೇಡ್ ಮಾಡಿದ ಘಟನೆಯೂ ಆಗಿತ್ತು.
ಬೈಜೂಸ್ ಮಾತ್ರವಲ್ಲದೇ ಸ್ಪೈಸ್ ಜೆಟ್, ಗೋ ಫಸ್ಟ್, ರಿಲಯನ್ಸ್ ಕ್ಯಾಪಿಟಲ್ ಸೇರಿದಂತೆ ಅನೇಕ ಕಂಪನಿಗಳು ಸಾಲ ಮತ್ತು ದಿವಾಳಿತನದ ಪರಿಸ್ಥಿತಿ ಎದುರಿಸುತ್ತಿವೆ. ಸ್ಟಾರ್ಟ್ ಅಪ್ ಕಡೆ ಹರಿದು ಬರುತ್ತಿರುವ ಫಂಡಿಂಗ್ ಕೂಡ ಕಡಿಮೆಯಾಗಿದೆ. ಕೊರೋನಾ ಮತ್ತು ಆರ್ಥಿಕ ಹಿಂಜರಿತ ಸ್ಟಾರ್ಟ್ ಅಪ್ ಗಳಿಗೆ ತೀವ್ರ ಹೊಡೆತ ನೀಡಿದೆ. ಅನೇಕ ಕಂಪನಿಗಳು ಕಾಸ್ಟ್ ಕಟಿಂಗ್ ಹೆಸರಿನಲ್ಲಿ ಉದ್ಯೋಗಿಗಳನ್ನು ಕೈಬಿಡುತ್ತಿವೆ.
ಸುಮಾರು ಒಂದು ವಾರದ ಹಿಂದೆ ಬೈಜುಸ್ ಜವಾಬ್ದಾರಿ ವಹಿಸಿಕೊಂಡ ಅರ್ಜುನ್ ಮೋಹನ್, ಕಂಪನಿ ಪರಿಸ್ಥಿತಿ ಸುಧಾರಿಸೋದಕ್ಕೆ ಯೋಜನೆ ಸಿದ್ಧಪಡಿಸ್ತಾ ಇದ್ದಾರೆ. ಇದರಲ್ಲಿ 4500ಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಒಂದು ಮಾಹಿತಿ ಪ್ರಕಾರ, ಹೊಸ ಸಿಇಒ ಮೇಲ್ವಿಚಾರಣೆಯಲ್ಲೇ ಈ ಎಲ್ಲ ಕೆಲಸ ನಡೆಯುತ್ತಿದೆ ಎನ್ನಲಾಗಿದೆ. ಇದರಿಂದ ಕಂಪನಿ ಆರ್ಥಿಕ ಹೊರೆ ಕಡಿಮೆಯಾಗಲಿದ್ದು, ಕ್ಯಾಶ್ ಇನ್ಫ್ಲೋ ಹೆಚ್ಚಳವಾಗಲಿದೆ. ಉದ್ಯೋಗ ಕಡಿತದಿಂದ ಬೈಜುಸ್ನ ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ನ ಭಾರತೀಯ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಬೈಜೂಸ್ನ ಆಕಾಶ್ ಸಂಸ್ಥೆಯ ಮೇಲೂ ಇದು ಪರಿಣಾಮ ಬೀರಲಿದೆ.
Published: September 27, 2023, 13:51 IST
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ