ಮುಂಬೈ, ದೆಹಲಿಯಲ್ಲಿ ಶೋರೂಮ್ ಸ್ಥಾಪನೆಗೆ ಟೆಸ್ಲಾ ಸ್ಥಳ ಹುಡುಕಾಟ! php // echo get_authors();
?>
ಎಲೋನ್ ಮಸ್ಕ್ ಅವರು ಭಾನುವಾರದಿಂದ ಭಾರತಕ್ಕೆ ಎರಡು ದಿನಗಳ ಭೇಟಿ ನೀಡುವ ನಿರೀಕ್ಷೆ ಇದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಈ ವೇಳೆ ದೊಡ್ಡ ಮಟ್ಟದ ಹೂಡಿಕೆ ಒಡಂಬಡಿಕೆ ನಡೆಯುವ ನಿರೀಕ್ಷೆ ಇದೆ
ಎಲಾನ್ ಮಸ್ಕ್ ಟೆಸ್ಲಾ ಭಾರತೀಯ ಮಾರುಕಟ್ಟೆಗೆ ಅಧಿಕೃತ ಪ್ರವೇಶ ಮಾಡಲು ಮುಂದಾಗಿರುವ ಸಂಗತಿ ನಮಗೆಲ್ಲ ಗೊತ್ತೇ ಇದೆ. ಇದೇ ಕಾರಣಕ್ಕೆ ಟೆಸ್ಲಾ ಮುಂಬೈ ಮತ್ತು ನವದೆಹಲಿಯಲ್ಲಿ ಶೋರೂಮ್ ಸ್ಥಾಪನೆಗೆ ಸ್ಥಳ ಹುಡುಕುತ್ತಿದೆ. ಈ ವರ್ಷದ ಕೊನೆಯಲ್ಲಿ ಎಲ್ಲವೂ ನಿಗದಿಯಂತೆ ನಡೆದರೆ ಟೆಸ್ಲಾ ತನ್ನ ಮಾರಾಟ ಆರಂಭಿಸಲಿದೆ.
ಕಂಪನಿಯು 3000 ರಿಂದ 5000 ಚದರ ಅಡಿ ವಿಸ್ತೀರ್ಣದ ಶೋರೂಮ್ ಆರಂಭ ಮಾಡುವ ಗುರಿಯನ್ನು ಪ್ರಾಥಮಿಕವಾಗಿ ಇಟ್ಟುಕೊಂಡಿದೆ. ಇದರ ಜೊತೆಗೆ ಪ್ರತಿ ನಗರದಲ್ಲಿ ಸೇವಾ ಕೇಂದ್ರ ತೆರೆಯಲಿದೆ. ಟೆಸ್ಲಾ ತನ್ನ ಜರ್ಮನ್ ಸ್ಥಾವರದಿಂದ ಬದಿಗೆ ಸ್ಟೇಯಿರಿಂಗ್ ಇರುವ ಕಾರ್ ಗಳನ್ನು ಭಾರತಕ್ಕೆ ರಫ್ತು ಮಾಡಲಿದೆ ಎಂದು ಹೇಳಲಾಗಿದೆ.
ಕಳೆದ ತಿಂಗಳು ಭಾರತವು ಹೊಸ EV ನೀತಿಯನ್ನು ಪರಿಚಯಿಸಿತು. ಐದು ವರ್ಷಗಳವರೆಗೆ ಎಲೆಕ್ಟ್ರಿಕ್ ಕಾರುಗಳ ಮೇಲಿನ ಆಮದು ಸುಂಕವನ್ನು ಸಹ ಕಡಿಮೆ ಮಾಡಲಾಗಿದೆ. ಇವಿ ವಲಯಕ್ಕೆ ಸಂಬಂಧಿಸಿದ ಹೂಡಿಕೆಗಳು ಹೆಚ್ಚಳವಾಗುವ ಸಾಧ್ಯತೆ ಇದೆ. ಇದು ಈ ವಲಯದ ಸ್ಟಾಕ್ ಗಳ ಮೇಲೂ ಪಾಸಿಟಿವ್ ಪರಿಣಾಮ ಬೀರಬಹುದು.
ಎಲೋನ್ ಮಸ್ಕ್ ಅವರು ಭಾನುವಾರದಿಂದ ಭಾರತಕ್ಕೆ ಎರಡು ದಿನಗಳ ಭೇಟಿ ನೀಡುವ ನಿರೀಕ್ಷೆ ಇದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಈ ವೇಳೆ ದೊಡ್ಡ ಮಟ್ಟದ ಹೂಡಿಕೆ ಒಡಂಬಡಿಕೆ ನಡೆಯುವ ನಿರೀಕ್ಷೆ ಇದೆ
Published: April 16, 2024, 12:40 IST
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ