ಏಪ್ರಿಲ್ 3ರಿಂದ 5ರವರೆಗೆ ನಡೆದ ಐಪಿಒ ಸಬ್ ಸ್ಕ್ರಿಪ್ಶನ್ ವೇಳೆ 570 ರೂ ಬೆಲೆಗೆ ಷೇರು ವಿತರಿಸಲಾಗಿತ್ತು. ಬಿಎಸ್ಇ ಮತ್ತು ಎನ್ಎಸ್ಇ ಎರಡರಲ್ಲೂ ಭಾರ್ತಿ ಹೆಕ್ಸಾಕಾಮ್ ಬರೋಬ್ಬರಿ 755 ರೂಗೆ ಲಿಸ್ಟ್ ಆಗಿದೆ.
ನವದೆಹಲಿ ( ಏ 12) ಭಾರ್ತಿ ಏರ್ಟೆಲ್ ಮಾಲಕತ್ವದ ಭಾರ್ತಿ ಹೆಕ್ಸಾಕಾಂ (Bharti Hexacom) ಷೇರು ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಪಡೆದಿದೆ. ಐಪಿಒದಲ್ಲಿದ್ದ ಬೆಲೆಗಿಂತ ಶೇ. 32.4ರಷ್ಟು ಹೆಚ್ಚಿನ ಬೆಲೆಗೆ ಷೇರು ಲಿಸ್ಟ್ ಆಗಿದೆ. ಶೇ. 12ರಿಂದ 15ರಷ್ಟು ಹೆಚ್ಚಿನ ಬೆಲೆಗೆ ಲಿಸ್ಟ್ ಆಗಬಹುದು ಎಂದು ನಿರೀಕ್ಷಿಸಿಲಾಗಿತ್ತು. ಅದನ್ನೂ ಮೀರಿಸಿ ಬೇಡಿಕೆ ಗಿಟ್ಟಿಸಿಕೊಂಡಿದೆ.
ಏಪ್ರಿಲ್ 3ರಿಂದ 5ರವರೆಗೆ ನಡೆದ ಐಪಿಒ ಸಬ್ ಸ್ಕ್ರಿಪ್ಶನ್ ವೇಳೆ 570 ರೂ ಬೆಲೆಗೆ ಷೇರು ವಿತರಿಸಲಾಗಿತ್ತು. ಬಿಎಸ್ಇ ಮತ್ತು ಎನ್ಎಸ್ಇ ಎರಡರಲ್ಲೂ ಭಾರ್ತಿ ಹೆಕ್ಸಾಕಾಮ್ ಬರೋಬ್ಬರಿ 755 ರೂಗೆ ಲಿಸ್ಟ್ ಆಗಿದೆ. ಇದು ಈ ಹಣಕಾಸು ವರ್ಷದ ಮೊದಲ ಐಪಿಒ ಆಗಿದ್ದು ಷೇರ್ ಮಾರ್ಕೆಟ್ಗೆ ಒಂದು ಒಳ್ಳೆ ಆರಂಭ ಸಿಕ್ಕಂತಾಗಿದೆ..
ಬ್ರಾಡ್ಬ್ಯಾಂಡ್ ಮತ್ತು ಫಿಕ್ಸೆಡ್ ಲೈನ್ ಫೋನ್ ಸರ್ವಿಸ್ ನೀಡುವ ಕಂಪನಿಯಾದ ಭಾರ್ತಿ ಹೆಕ್ಸಾಕಾಮ್ನಲ್ಲಿ ಭಾರ್ತಿ ಏರ್ಟೆಲ್ ಶೇ. 70ರಷ್ಟು ಷೇರು ಪಾಲು ಹೊಂದಿದೆ. ಶೇ. 30ರಷ್ಟು ಪಾಲು ಹೊಂದಿದ್ದ ಟೆಲಿಕಮ್ಯೂನಿಕೇಶನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ಈ ಪೈಕಿ ಶೇ. 15ರಷ್ಟನ್ನು ಆಫ್ಲೋಡ್ ಮಾಡಿದೆ. ಅಂದರೆ 7.5 ಕೋಟಿ ಸಂಖ್ಯೆಯಷ್ಟು ಈಕ್ವಿಟಿ ಷೇರುಗಳು ಐಪಿಒ ಮೂಲಕ ಬಿಕರಿಯಾಗಿದ್ದವು. ಈ ಷೇರು ಮಾರಾಟದಿಂದ 4,275 ಕೋಟಿ ರೂ ಬಂಡವಾಳ ಸಹ ಕಂಪನಿಗೆ ಒದಗಿ ಬಂದಿದೆ.
ಈ 7.5 ಕೋಟಿ ಷೇರುಗಳಲ್ಲಿ ಮುಕ್ಕಾಲು ಭಾಗದ ಷೇರುಗಳನ್ನು ಅರ್ಹ ಸಾಂಸ್ಥಿಕ ಖರೀದಿದಾರರಿಗೆ (ಕ್ಯುಐಬಿ) ಮೀಸಲಿರಿಸಲಾಗಿದೆ. ಸಾಂಸ್ಥಿಕವಲ್ಲದ ಹೂಡಿಕೆದಾರರಿಗೆ ಶೇ. 15 ಹಾಗೂ ಇನ್ನುಳಿದ ಷೇರುಗಳು ರೀಟೇಲ್ ಹೂಡಿಕೆದಾರರಿಗೆ ಆಫರ್ ಮಾಡಲಾಗಿತ್ತು. ಐಪಿಒದಲ್ಲಿ ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಜನರು ಷೇರು ಖರೀದಿಗೆ ಮುಗಿಬಿದ್ದಿದ್ದರು.
ಐಪಿಒದಲ್ಲಿ ನೀಡಲಾಗಿದ್ದ ಆಫರ್ಗೆ ನಿಗದಿಗಿಂತ 30 ಪಟ್ಟು ಹೆಚ್ಚು ಬಾರಿ ಸಬ್ಸ್ಕ್ರಿಪ್ಷನ್ ನಡೆದಿತ್ತು. ಕ್ವಾಲಿಫೈಡ್ ಇನ್ಸ್ಟಿಟ್ಯೂಶನಲ್ ಇನ್ವೆಸ್ಟರ್ಗಳಿಂದಂತೂ 48.57ಕ್ಕೂ ಹೆಚ್ಚು ಬಾರಿ ಸಬ್ಸ್ಕ್ರಿಪ್ಷನ್ ಆಗಿತ್ತು. ಎನ್ಐಐ ಅಥವಾ ಸಾಂಸ್ಥಿಕೇತರ ಹೂಡಿಕೆದಾರರಿಂದ 10.52 ರಷ್ಟು ಬಾರಿ ಸಬ್ಸ್ಕ್ರಿಪ್ಷನ್ ನಡೆದರೆ ರೀಟೇಲ್ ಹೂಡಿಕೆದಾರರಿಗೆ ನಿಗದಿ ಇದ್ದ ಷೇರುಗಳು 2.83 ಬಾರಿ ಸಬ್ಸ್ಕ್ರೈಬ್ ಆಗಿತ್ತು. ಒಟ್ಟಿನಲ್ಲಿ ಹೊಸ ಹಣಕಾಸು ವರ್ಷದ ಆರಂಭಕ್ಕೊಂದು ಸೂಪರ್ ಹಿಟ್ ಸ್ಟಾಕ್ ಸಿಕ್ಕಂತೆ ಆಗಿದೆ.
Published: April 12, 2024, 15:00 IST
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ