ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ನ ಷೇರು ಬೆಲೆ 2008ರ ಜನವರಿ ತಿಂಗಳಲ್ಲಿ 2,514 ರೂಗಳ ಗರಿಷ್ಠ ಮಟ್ಟದಲ್ಲಿತ್ತು. ಈಗ ಅದು 227.60 ರೂಗೆ ಕುಸಿದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಷೇರುಬೆಲೆ ಸ್ಥಿರವಾಗಿ ಏರತೊಡಗಿತ್ತು. ಈಗ ಸುಪ್ರೀಂಕೋರ್ಟ್ ತೀರ್ಪು ರಿಲಾಯನ್ಸ್ ಇನ್ಫ್ರಾ ಷೇರಿಗೆ ಇನ್ನಷ್ಟು ಹಿನ್ನಡೆ ತರುವ ಸಾಧ್ಯತೆ ಇದೆ.
ನವದೆಹಲಿ ( ಏ 10) ಅನಿಲ್ ಅಂಬಾನಿಯ ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ಗೆ (Reliance Infrastructure) ಶಾಕ್ ಮೇಲೆ ಶಾಕ್ ಸಿಗುತ್ತಿದೆ. ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ಉಪಸಂಸ್ಥೆಗೆ ದೆಹಲಿ ಮೆಟ್ರೋ ರೈಲ್ ಕಾರ್ಪೊರೇಶನ್ ನೀಡಿದ್ದ 8,000 ಕೋಟಿ ರೂ ಹಣವನ್ನು ಮರಳಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಡಿಎಂಆರ್ಸಿ ಸಲ್ಲಿಸಿದ್ದ ಕ್ಯುರೇಟಿವ್ ಪೆಟಿಶನ್ ಅಥವಾ ಮರುಪರಿಶೀಲನಾ ಮನವಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಪುರಸ್ಕರಿಸಿದೆ. ಈ ಮೂಲಕ ವಿಭಾಗೀಯ ಪೀಠ ನೀಡಿದ್ದ ಆದೇಶ ರದ್ದಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ಷೇರು ಶೇ. 20ರಷ್ಟು ಕುಸಿತ ಕಂಡಿದೆ.
ಈ ಪ್ರಕರಣ 2008ರಿಂದ ನಡೆದುಕೊಂಡು ಬಂದಿದೆ. 2008ರಲ್ಲಿ ಡೆಲ್ಲಿ ಏರ್ಪೋರ್ಟ್ ಎಕ್ಸ್ಪ್ರೆಸ್ ನಿರ್ಮಿಸುವ ಯೋಜನೆಗೆ ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ಮತ್ತು ಡಿಎಂಆರ್ಸಿ ಮಧ್ಯೆ ಒಪ್ಪಂದವಾಗಿತ್ತು. ಆದರೆ, 2012ರಲ್ಲಿ ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ಈ ಒಪ್ಪಂದಿಂದ ಹೊರಬಂದಿತು. ಆಗ ಡೆಲ್ಲಿ ಮೆಟ್ರೋ ರೈಲ್ ಕಾರ್ಪೊರೇಶನ್ ಸಂಸ್ಥೆ ರಿಲಾಯನ್ಸ್ ಇನ್ಫ್ರಾ ವಿರುದ್ಧ ಕಾನೂನು ಕ್ರಮ ಮೊರೆ ಹೋಯಿತು. 2017ರಲ್ಲಿ ನ್ಯಾಯಮಂಡಳಿಯು ಡಿಎಂಆರ್ಸಿ ವಿರುದ್ಧವೇ ತೀರ್ಪು ನೀಡಿತು. ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ನ ಅಂಗ ಸಂಸ್ಥೆಯಾದ ಡಿಎಎಂಇಪಿಎಲ್ಗೆ 2,800 ಕೋಟಿ ರೂಪಾಯಿಗೆ ಬಡ್ಡಿ ಸೇರಿಸಿ ಕೊಡುವಂತೆ ಆದೇಶಿಸಿತು
ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ನ ಷೇರು ಬೆಲೆ 2008ರ ಜನವರಿ ತಿಂಗಳಲ್ಲಿ 2,514 ರೂಗಳ ಗರಿಷ್ಠ ಮಟ್ಟದಲ್ಲಿತ್ತು. ಈಗ ಅದು 227.60 ರೂಗೆ ಕುಸಿದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಷೇರುಬೆಲೆ ಸ್ಥಿರವಾಗಿ ಏರತೊಡಗಿತ್ತು. ಈಗ ಸುಪ್ರೀಂಕೋರ್ಟ್ ತೀರ್ಪು ರಿಲಾಯನ್ಸ್ ಇನ್ಫ್ರಾ ಷೇರಿಗೆ ಇನ್ನಷ್ಟು ಹಿನ್ನಡೆ ತರುವ ಸಾಧ್ಯತೆ ಇದೆ.
ಅನಿಲ್ ಅಂಬಾನಿ ಒಡೆತನದ ಕಂಪನಿಗಳು ದಿವಾಳಿ ಪ್ರಕ್ರಿಯೆಗೂ ಸಿಲುಕಿದ್ದವು. ಅಂಬಾನಿ ಪುತ್ರರು ಕಂಪನಿಯ ಸಾಲ ತೀರಿಸುವತ್ತ ಹೆಜ್ಜೆ ಇಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈಗ ಮತ್ತೆ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ.
Published: April 10, 2024, 14:42 IST
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ